NWKRTC: ಇಲ್ಲಿ ಡಕೋಟಾ, ಅಲ್ಲಿ ಗುಡ್ ಕಂಡೀಷನ್: ಜನರ ಜೀವದ ಜೊತೆ ಚೆಲ್ಲಾಟ ಆಡಲು ಹೊರಟಿತೇ ಸಾರಿಗೆ ಇಲಾಖೆ?

ಈ ವೇಳೆ 300ಕ್ಕೂ ಹೆಚ್ಚು ನೌಕರರು ಮೃತಪಟ್ಟಿದ್ದು, 1000ಕ್ಕೂ  ಅಧಿಕ ನೌಕರರು ನಿವೃತ್ತಿ ಹೊಂದಿದ್ದಾರೆ. ಇವರ ಸ್ಥಾನಕ್ಕೆ ಹೊಸಬರ ನೇಮಕಾತಿ ಕೈಬಿಟ್ಟಿರೋ ಕೆಎಸ್ಆರ್ ಟಿಸಿ ನಿವೃತ್ತ ನೌಕರರನ್ನ ಪುನಃ ಕೆಲಸಕ್ಕೆ ಆಹ್ವಾನಿಸಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಇಡೀ ದೇಶವೇ ಮೆಚ್ಚಿದ ಸಾರ್ವಜನಿಕ ಸಾರಿಗೆ ವ್ಯವಸ್ಥೆ (Karnataka Transport) ನಮ್ಮದು. ನೂರಾರು ಪ್ರಶಸ್ತಿಗರಿ ಹೊತ್ತ ಸಂಸ್ಥೆಯೂ ಹೌದು. ಐರಾವತದಿಂದ (Airavata) ಅಂಬಾರಿವರೆಗೂ (Ambari) ಸೇವೆ ನೀಡಿದ ಪ್ರತಿಷ್ಟಿತ ಸಂಸ್ಥೆ ಕರ್ನಾಟಕದ್ದು. ಆದರೆ ಸದ್ಯ ಸಾರಿಗೆ ನಿಗಮಗಳ ಪರಿಸ್ಥಿತಿ, ಗುಜರಿ ಬಸ್ ಖರೀದಿಸಿ ನಿವೃತ ಡ್ರೈವರ್ (Retired Drivers) ಕೈಲಿ ಬಸ್ (Bus) ಓಡಿಸೋ ಹಂತಕ್ಕೆ ಬಂದು ತಲುಪಿದೆ. ರಾಜ್ಯದ ನಾಲ್ಕು ಸಾರಿಗೆ ನಿಗಮಗಳು ಒಂದು ಕಾಲದಲ್ಲಿ ಪೈಪೋಟಿಗೆ ಬಿದ್ದು ಬಸ್ ರಸ್ತೆಗಿಳಿಸ್ತಿದ್ವು. ಒಂದು ನಿಗಮ ವೋಲ್ವೋ ಬಸ್ ಇಳಿಸಿದ್ರೆ, ಇನ್ನೊಂದು ನಿಗಮ ಮಲ್ಟಿ ಆ್ಯಕ್ಸಲ್ ಬಸ್ ಇಳಿಸ್ತಿತ್ತು. ಇನ್ನೊಮ್ಮೆ ಅಂಬಾರಿ, ಮತ್ತೊಮ್ಮೆ ಐರಾವತ. ಇಂಥ ವೈಭವ ಕಂಡಿದ್ದ ನಿಗಮಗಳ ಸ್ಥಿತಿ ಸದ್ಯ ಗುಜರಿ ಬಸ್ (Scrap Bus) ಖರೀದಿಸಿ ರಸ್ತೆಗಿಳಿಸೋ ಸ್ಥಿತಿಗೆ ಬಂದು ತಲುಪಿದೆ.

ಬೆಂಗಳೂರಲ್ಲಿ (Bengaluru) ಓಡಿ ಓಡಿ ಸುಸ್ತಾಗಿ ಗುಜರಿ ಅಂಗಡಿ ಸೇರೋಕೆ ಹೊರಟಿದ್ದ ಬಸ್ ಗಳನ್ನ ವಾಯುವ್ಯ ಸಾರಿಗೆ ಸಂಸ್ಥೆ ಈಗ ಖರೀದಿಗೆ ಮುಂದಾಗಿದೆ. ನಿಜ ಸದ್ಯ ಬೆಂಗಳೂರಲ್ಲಿ 9 ಲಕ್ಷ ಕಿಲೋಮೀಟರ್ ಓಡಿದ ಬಸ್ ಗಳನ್ನ ಸ್ಕ್ರಾಪ್ ಮಾಡಬೇಕೆಂಬ ನಿಯಮವಿದೆ. ಹೀಗಾಗಿ ಸದ್ಯ 200 ಬಸ್ ಗಳನ್ನ ಸ್ಕ್ರ್ಯಾಪ್ ಮಾಡೋಕೆ ಬಿಎಂಟಿಸಿ ಮುಂದಾಗಿತ್ತು.

ಗುಜರಿ ಬಸ್ ಖರೀದಿಗೆ ಮುಂದಾದ NWKRTC

ಆದರೆ ಗುಜರಿ ಬಸ್ ಗಳನ್ನ ಖರೀದಿಸಲು ವಾಯುವ್ಯ ಸಾರಿಗೆ ಮುಂದಾಗಿದ್ದು, ತಲಾ 50 ಸಾವಿರದಿಂದ 1 ಲಕ್ಷರೂಪಾಯಿ ಕೊಟ್ಟು 100 ಬಸ್ ಖರೀದಿಸೋಕೆ ನಿರ್ಧರಿಸಿದೆ. ಇವುಗಳನ್ನ ಗ್ರಾಮೀಣ ಭಾಗದಲ್ಲಿ ಬಳಸಿಕೊಳ್ಳೋಕೆ ಎನ್ ಡಬ್ಲ್ಯೂ ಕೆಆರ್ ಟಿಸಿ (NWKRTC)) ನಿರ್ಧರಿಸಿದೆ.

ಇದನ್ನೂ ಓದಿ:  Vandita Sharma: ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯಾಗಿ ವಂದಿತಾ ಶರ್ಮಾ ನೇಮಕ: ಅಧಿಕಾರ ಸ್ವೀಕರಿಸುತ್ತಿದ್ದಂತೆ ದಾಖಲೆ

ಇನ್ನೊಂದ್ಕಡೆ ಮೂರು ನಿಗಮಗಳಿಗೆ ಹಿರಿಯಣ್ಣನಂತಿರೋ ಕೆಎಸ್ಆರ್ ಟಿಸಿ (KSRTC)  ಕಥೆಯೂ ಭಿನ್ನವೇನಿಲ್ಲ. ಸದ್ಯ ಕೋವಿಡ್ ಬಳಿಕ ಕೆಎಸ್ಆರ್ ಟಿಸಿ ಆರ್ಥಿಕ ಸಂಕಷ್ಟಕ್ಕೆ ಗುರಿಯಾಗಿದೆ. ಹೀಗಾಗಿ ಕಳೆದ ಎರಡು ವರ್ಷಗಳಿಂದ ಯಾವುದೇ ಹೊಸ ನೌಕರರ ನೇಮಕಾತಿ ನಡೆದಿಲ್ಲ.

ಹೊಸ ನೇಮಕಾತಿ ಇಲ್ಲ

ಈ ವೇಳೆ 300ಕ್ಕೂ ಹೆಚ್ಚು ನೌಕರರು ಮೃತಪಟ್ಟಿದ್ದು, 1000ಕ್ಕೂ  ಅಧಿಕ ನೌಕರರು ನಿವೃತ್ತಿ ಹೊಂದಿದ್ದಾರೆ. ಇವರ ಸ್ಥಾನಕ್ಕೆ ಹೊಸಬರ ನೇಮಕಾತಿ ಕೈಬಿಟ್ಟಿರೋ ಕೆಎಸ್ಆರ್ ಟಿಸಿ ನಿವೃತ್ತ ನೌಕರರನ್ನ ಪುನಃ ಕೆಲಸಕ್ಕೆ ಆಹ್ವಾನಿಸಿದೆ.

63 ವರ್ಷದೊಳಗಿನ ಚಾಲಕರಿಗೆ ಗೌರವ ಧನ

63 ವರ್ಷದೊಳಗಿನ ನಿವೃತ್ತ ಚಾಲಕರು ಕೆಲಸಕ್ಕೆ ಹಾಜರಾದ್ರೆ ಗೌರವ ಧನ ನೀಡೋದಾಗಿ ಕೆಎಸ್ಆರ್ ಟಿಸಿ ಪ್ರಕಟನೆ ಹೊರಡಿಸಿದೆ. ನಿಗಮದ ಈ ತೀರ್ಮಾನ ಸಾರ್ವಜನಿಕ ವಲಯದಲ್ಲಿ ಭಾರೀ ಆಕ್ರೋಶಕ್ಕೆ ಎಡೆಮಾಡಿಕೊಟ್ಟಿದೆ.

ಸಾರಿಗೆ ಇಲಾಖೆ ನಿರ್ಧಾರಕ್ಕೆ ಸಾರ್ವಜನಿಕರಿಂದ ಆಕ್ರೋಶ

ನೌಕರರು ನಿಗದಿತ ವಯಸ್ಸಿನ ಬಳಿಕ ನಿವೃತರಾಗೋದೆ ಅವರ ಫಿಟ್ನೆಸ್ ಕಡಿಮೆ ಆಗಿರುತ್ತೆ ಅಂತ. ಹೀಗಾಗಿ ವಯಸ್ಸಾದ ನೌಕರರನ್ನ ಪುನಃ ಕರೆದು ಬಸ್ ಓಡಿಸೋಕೆ ಬಿಟ್ರೆ ಪ್ರಯಾಣಿಕರ ಕಥೆ ಏನು.? ಅನಾಹುತವಾದರೆ ಯಾರು ಜವಾಬ್ದಾರರು ಎಂಬ ಪ್ರಶ್ನೆ ಸದ್ಯದ್ದು.

ಇದನ್ನೂ ಓದಿ:  Siddaramaiah Letter: ದಾವೋಸ್ ಪ್ರವಾಸದಿಂದ ಬಂದ ಸಿಎಂ ಬೊಮ್ಮಾಯಿಗೆ ಪತ್ರ ಬರೆದು ಶಾಕ್​ ಕೊಟ್ಟ ಸಿದ್ದು

ಗುಜರಿ ಹಂತಕ್ಕೆ ತಲುಪಿತಾ ಸಾರಿಗೆ ಇಲಾಖೆ?

ಒಟ್ಟಿನಲ್ಲಿ ದೇಶಕ್ಕೆ ಮಾದರಿಯಾಗಿದ್ದ ರಾಜ್ಯದ ಸಾರಿಗೆ ನಿಗಮಗಳ ಸ್ಥಿತಿ ಗುಜರಿ ಹಂತಕ್ಕೆ ಬಂದು ತಲುಪಿದೆ. ಈ ಬಗ್ಗೆ ಗಮನಹರಿಸಬೇಕಾದ ಸಾರಿಗೆ ಸಚಿವರು ಮಾತ್ರ ಇಲಾಖೆಗೂ ನನಗೂ ಸಂಬಂಧವಿಲ್ವೇನೋ ಎಂಬಂತಿದ್ದಾರೆ. ಹೀಗಾಗಿ ಎಲ್ಲಾ ನಾಲ್ಕೂ ಸಾರಿಗೆ ನಿಗಮಗಳು ಶಾಶ್ವತವಾಗಿ ಬಾಗಿಲು ಮುಚ್ಚಿದ್ರೂ ಆಶ್ಚರ್ಯವೇನೂ ಇಲ್ಲ ಎಂಬ ಸ್ಥಿತಿಗೆ ಬಂದು ತಲುಪಿವೆ.
Published by:Mahmadrafik K
First published: