• ಹೋಂ
 • »
 • ನ್ಯೂಸ್
 • »
 • ರಾಜ್ಯ
 • »
 • Bus Seize: ಅಪಘಾತದಲ್ಲಿ ಮೃತಪಟ್ಟವನ ಕುಟುಂಬಕ್ಕೆ ಪರಿಹಾರ ನೀಡದೇ ನಿರ್ಲಕ್ಷ್ಯ, NWKRTC ಐರಾವತ ಬಸ್ ಸೀಜ್!

Bus Seize: ಅಪಘಾತದಲ್ಲಿ ಮೃತಪಟ್ಟವನ ಕುಟುಂಬಕ್ಕೆ ಪರಿಹಾರ ನೀಡದೇ ನಿರ್ಲಕ್ಷ್ಯ, NWKRTC ಐರಾವತ ಬಸ್ ಸೀಜ್!

ಸೀಜ್ ಆದ ಬಸ್ಸು

ಸೀಜ್ ಆದ ಬಸ್ಸು

ಅಪಘಾತವೊಂದರಲ್ಲಿ ಮೃತಪಟ್ಟ ವ್ಯಕ್ತಿಗೆ ಪರಿಹಾರ ಕೊಡುವಲ್ಲಿ ವಿಫಲವಾದ ಕಾರಣಕ್ಕೆ ಹುಬ್ಬಳ್ಳಿ ನ್ಯಾಯಾಲಯದ ನಿರ್ದೇಶನದಂತೆ ಐರಾವತ ಬಸ್ ಸೀಜ್ ಮಾಡಲಾಗಿದೆ. ಬಸ್ ಅನ್ನು ತೆಗೆದುಕೊಂಡು ಹೋಗಿ ನ್ಯಾಯಾಲಯದ ಆವರಣದಲ್ಲಿ ಇಡಲಾಗಿದೆ.

 • News18 Kannada
 • 4-MIN READ
 • Last Updated :
 • Courtalam (Courtallam), India
 • Share this:

ಹುಬ್ಬಳ್ಳಿ: ಅಪಘಾತದಲ್ಲಿ (Accident) ಮೃತ ವ್ಯಕ್ತಿಗೆ (Dead Person) ಪರಿಹಾರ ನೀಡದ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ (NWKRTC) ಕೋರ್ಟ್ (Court) ಶಾಕ್ ನೀಡಿದೆ. ಹುಬ್ಬಳ್ಳಿಯ ಕೋರ್ಟ್ (Hubballi Court) ಆದೇಶದಂತೆ ಸಾರಿಗೆ ಬಸ್ ನ್ನು (Bus) ಜಪ್ತಿ ಮಾಡಲಾಗಿದೆ. ಸಾರಿಗೆ ಸಂಸ್ಥೆ ಬಸ್‌ನಲ್ಲಿ ಪ್ರಯಾಣ ಮಾಡುತ್ತಿದ್ದ ಪ್ರಯಾಣಿಕ ಅಪಘಾತದಲ್ಲಿ ಮೃತಪಟ್ಟರೂ ಪರಿಹಾರ (compensation) ನೀಡದೆ ಸಂಸ್ಥೆ ಸತಾಯಿಸುತ್ತಿತ್ತು. ಈ ಹಿನ್ನೆಲೆಯಲ್ಲಿ ಮೃತ ವ್ಯಕ್ತಿಯ ಕುಟುಂಬದವರು (Family), ನ್ಯಾಯಾಲಯದ ಮೊರೆ ಹೋಗಿದ್ದರು. ಈ ಹಿನ್ನೆಲೆಯಲ್ಲಿ ನ್ಯಾಯಾಲಯ ವಾರೆಂಟ್ (Warrant) ಜಾರಿ ಮಾಡಿತ್ತು. ಇದರ ಅನ್ವಯ ಕೋರ್ಟ್ ಸಿಬ್ಬಂದಿ ಹುಬ್ಬಳ್ಳಿ ಬಸ್ ನಿಲ್ದಾಣದಲ್ಲಿ (Bus Station) ಐರಾವತ ಬಸ್ (Airavat Bus) ಜಪ್ತಿ ಮಾಡಿದ್ದಾರೆ. ಸದ್ಯ ಬಸ್‌ ಅನ್ನು ಹುಬ್ಬಳ್ಳಿ ಕೋರ್ಟ್ ಎದುರು ತಂದು ನಿಲ್ಲಿಸಲಾಗಿದೆ.


2019ರಲ್ಲಿ ಅಪಘಾತದಲ್ಲಿ ಮೃತಪಟ್ಟಿದ್ದ ವ್ಯಕ್ತಿ


2019 ರಲ್ಲಿ ನವಲಗುಂದ ಸಮೀಪ ಸಂಭವಿಸಿದ ಅಪಘಾತದಲ್ಲಿ ದೇವಪ್ಪ ಕುಲಕರ್ಣಿ ಎಂಬವರು ಮೃತಪಟ್ಟಿದ್ದರು‌. ಮೃತನ ತಾಯಿ ಶಾಂತವ್ವ ಕರವೀರಪ್ಪ ಕುಲಕರ್ಣಿ ಎರಡನೇ ಹಿರಿಯ ನ್ಯಾಯಾಲಯದ ಮೆಟ್ಟಿಲೇರಿದ್ದರು. ನ್ಯಾಯಾಲಯ 28 ಲಕ್ಷ ಪರಿಹಾರ ಮತ್ತು ಅದಕ್ಕೆ ಶೇ. 6 ಬಡ್ಡಿ ಹಾಕಿ ನೀಡುವಂತೆ ಸೂಚಿಸಿತ್ತು. ಆದರೆ ಸಾರಿಗೆ ಸಂಸ್ಥೆಯವರಿಗೆ ವಾರೆಂಟ್ ನೀಡಿದರೂ ಪರಿಹಾರ ನೀಡಿರಲಿಲ್ಲ.


ಕೋರ್ಟ್ ಆವರಣದಲ್ಲಿರುವ ಬಸ್


ಈ ಹಿನ್ನೆಲೆಯಲ್ಲಿ ಕೋರ್ಟ್ ಸಿಬ್ಬಂದಿ ಐರಾವತ ಬಸ್ ಜಪ್ತಿ ಮಾಡಿದೆ. ವಾಯುವ್ಯ ಸಾರಿಗೆ ನಿಗಮದಿಂದ ಪರಿಹಾರ ಕೊಡಬೇಕಾಗಿದ್ದು, ಸದ್ಯ ದಾವಣಗೆರೆ ಡಿಪೋದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ ನ್ನು ಸೀಜ್ ಮಾಡಿಕೊಂಡು ನ್ಯಾಯಾಲಯದ ಆವರಣದಲ್ಲಿ ಇಡಲಾಗಿದೆ.


ಇದನ್ನೂ ಓದಿ: Eidgah Maidan: ಚಾಮರಾಜಪೇಟೆ ಈದ್ಗಾ ಮೈದಾನ ವಿವಾದಕ್ಕೆ ಶೀಘ್ರವೇ ಇತಿಶ್ರೀ, ಅಲರ್ಟ್ ಆದ ಬಿಬಿಎಂಪಿ


ಚಂದ್ರಶೇಖರ ಗುರೂಜಿ ಪುಣ್ಯತಿಥಿ


ಇದೇ ಜುಲೈ 5 ರಂದು ಬರ್ಬರ ಹತ್ಯೆಗೀಡಾಗಿದ್ದ ಚಂದ್ರಶೇಖರ ಗುರೂಜಿ ಪುಣ್ಯತಿಥಿ ಕಾರ್ಯಕ್ರಮ ನಡೆಯಿತು. ಧಾರವಾಡ ಎಸ್‌ಡಿಎಂ ಕಾಲೇಜಿನ ಕಲಾಕ್ಷೇತ್ರದಲ್ಲಿ ಪುಣ್ಯತಿಥಿ ಆಯೋಜಿಸಲಾಗಿತ್ತು. ಹುಬ್ಬಳ್ಳಿಯ ಹೋಟೆಲೊಂದರಲ್ಲಿ ಕೊಲೆಯಾದ ಗುರೂಜಿಯ ಅಂತ್ಯಕ್ರಿಯೆ ಹುಬ್ಬಳ್ಳಿಯ ಸುಳ್ಳ ರಸ್ತೆಯ ಅವರ ಹೊಲದಲ್ಲಿ ನೆರವೇರಿಸಲಾಗಿತ್ತು.


ಗುರೂಜಿ ಸಮಾಧಿ ಕಡೆ ಸುಳಿಯದ ಕುಟುಂಬಸ್ಥರು


ಪುಣ್ಯತಿಥಿಯ ದಿನವಾದ ಇಂದು ಚಂದ್ರಶೇಖರ್ ಗುರೂಜಿ ಸಮಾಧಿ ಬಳಿ ಯಾರೊಬ್ಬರೂ ಸುಳಿಯಲಿಲ್ಲ. ಪುಣ್ಯತಿಥಿ ವೇಳೆಯಲ್ಲಿ ಸಮಾಧಿಗೆ ಪೂಜೆ ಮಾಡೋ ವಾಡಿಕೆ ಇದೆ. ಆದರೆ ಪುಣ್ಯತಿಥಿ ಕಾರ್ಯಕ್ರಮ ಧಾರವಾಡಲ್ಲಿ ಆಯೋಜನೆ ಮಾಡಲಾಗಿದ್ದರಿಂದ ಕುಟುಂಬದ ಸದಸ್ಯರಿಂದ ಹಿಡಿದು, ಅಭಿಮಾನಿಗಳವರೆಗೆ ನರಪಿಳ್ಳೆಯೂ ಈ ಕಡೆ ಸುಳಿಯಲಿಲ್ಲ.


ಸ್ವಾಮೀಜಿಗಳ ನೇತೃತ್ವದಲ್ಲಿ ಕಾರ್ಯಕ್ರಮ


ಎಸ್.ಡಿ.ಎಂ. ಕಲಾ ಕ್ಷೇತ್ರದಲ್ಲಿ ನಡೆದ ಪುಣ್ಯತಿಥಿ ಕಾರ್ಯಕ್ರಮದ ಸಾನಿಧ್ಯವನ್ನು ಮೂರು ಸಾವಿರ ಮಠದ ಗುರುಸಿದ್ಧರಾಜಯೋಗೀಂದ್ರ ಸ್ವಾಮೀಜಿಗಳು ವಹಿಸಿಕೊಂಡಿದ್ದರು. ಗುರೂಜಿ ಪುತ್ರಿ ಸ್ವಾತಿ, ಎರಡನೆಯ ಪತ್ನಿ, ಗುರೂಜಿ ಅಣ್ಣ ಮತ್ತಿತರರ ಕುಟುಂಬದ ಸದಸ್ಯರು ಭಾಗಿಯಾಗಿದ್ದರು.


ಇದನ್ನೂ ಓದಿ: CM Bommai: ಚಾರ್ಲಿಗೆ ಕಣ್ಣೀರು ಹಾಕುವ ತಾವು ಜನರ ಕಷ್ಟಕ್ಯಾಕೆ ಮರುಗುವುದಿಲ್ಲ? ಸಿಎಂಗೆ ಕಾಂಗ್ರೆಸ್ ಟಾಂಗ್


ಹಾಡಿನ ಮೂಲಕ ಮಕ್ಕಳಿಂದ ಶ್ರದ್ಧಾಂಜಲಿ


ಗುರೂಜಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಗೌರವ ಸೂಚಿಸಲಾಯಿತು. ಗುರೂಜಿ ಶಾಲೆಯಲ್ಲಿ ಓದುತ್ತಿರೋ ವಿದ್ಯಾರ್ಥಿಗಳು ಹಾಡಿನ ಮೂಲಕ ನಮನ ಸಲ್ಲಿಸಿದರು.
ಚಂದ್ರಶೇಖರ ಗುರೂಜಿ ಮಾಜಿ ನೌಕರರು, ಅಭಿಮಾನಿಗಳು ಭಾಗಿಯಾಗಿದ್ದರು. ಆದರೆ ಎಲ್ಲರ ಗಮನ ಪುಣ್ಯತಿಥಿ ಕಾರ್ಯಕ್ರಮದ ಕಡೆಗೇ ಇತ್ತು. ಸಮಾಧಿಗೆ ಯಾರೊಬ್ಬರು ಭೇಟಿ ನೀಡೋ ಗೋಜಿಗೆ ಹೋಗಲೇ ಇಲ್ಲ. ಗುೂರಜಿ ಸಮಾಧಿ ಸ್ಥಳ ಬಿಕೋ ಅನ್ನುತ್ತಿತ್ತು.

First published: