ನರ್ಸ್ ರೀತಿ ವೇಷ ಧರಿಸಿ ಆಸ್ಪತ್ರೆಗೆ ಬಂದು ರೋಗಿಗಳ ಮೈಮೇಲಿದ್ದ ಆಭರಣವನ್ನು ಕಳು ಮಾಡುತ್ತಿದ್ದ ಈ ಯುವತಿಯನ್ನು ಅಶೋಕನಗರ ಠಾಣೆ ಪೊಲೀಸರು (Police) ಬಂಧಿಸಿದ್ದಾರೆ. ಇವಳ ಹೆಸರು ಲಕ್ಷ್ಮೀ ಎಂದು ಇವಳನ್ನು ಬಂಧಿಸಿ ವಿಚಾರಣೆ ನಡೆಸಿದ ವೇಳೆ ಇನ್ನೂ ಹೆಚ್ಚಿನ ಮಾಹಿತಿ (Information) ತಿಳಿದು ಬಂದಿದೆ. ಈಕೆ ಕಳುವು ಮಾಡುತ್ತಿದ್ದ ಕುರಿತು ಸಂಪೂರ್ಣ ವಿವರ ಇಲ್ಲಿದೆ ನೋಡಿ. ಅಶೋಕನಗರ ಪೊಲೀಸ್ ಠಾಣೆ ವ್ಯಾಪ್ತಿಯ ಲೈಫ್ ಸ್ಟೈಲ್ (Lifestyle) ಬಳಿ ಇರುವ ಪ್ರತಿಷ್ಠಿತ ಸೇಂಟ್ ಫಿಲೋಮಿನಾ ಆಸ್ಪತ್ರೆಯಲ್ಲಿ (Hospital) ಕಳುವು ಮಾಡುತ್ತಿದ್ದಳು ಎಂಬುದು ತಿಳಿದು ಬಂದಿದೆ.
ಇತ್ತೀಚೆಗೆ ರಮೇಶ್ ಎಂಬುವರು ತನ್ನ ತಾಯಿಗೆ ಅನಾರೋಗ್ಯದ ಕಾರಣದಿಂದಾಗಿ ಆಸ್ಪತ್ರೆಗೆ ಸೇರಿಸಿದ್ದರು ಆ ವೇಳೆ ಈ ಯುವತಿ ಅಲ್ಲಿ ಸುಳಿದಾಡಿದ್ದಾಳೆ. ನಂತರ ಅವರ ತಾಯಿಗೆ ಚಿಕಿತ್ಸೆ ನೀಡುವುದಾಗಿ ತಿಳಿಸಿ ರಮೇಶ್ ಅವರನ್ನು ಹೊರಗೆ ಕಳಿಸಿದ್ದಾಳೆ. ಈ ಘಟನೆ ನಡೆದಿರುವುದು ಮಧ್ಯಾಹ್ನ ಮೂರು ಗಂಟೆ ಸುಮಾರಿಗೆ.
ಆಸ್ಪತ್ರೆಗೆ ನುಗ್ಗಿದ ಆರೋಪಿ ಲಕ್ಷ್ಮಿ ಎಂಬಾಕೆ ರಮೇಶ್ ಅವರು ಇಲ್ಲದ ಸಮಯವನ್ನೇ ಸದುಪಯೋಗ ಪಡೆಸಿಕೊಂಡು ಕಳುವು ಮಾಡಿದ್ದಾಳೆ. ಬಳಿಕ ಯಾವುದೇ ನೆನಪು ಬಾರದ ಅನ್ಸ್ತೇಶಿಯಾ ಇಂಜೆಕ್ಷನ್ ನೀಡಿ ಕೈಯಲ್ಲಿದ್ದ ಚಿನ್ನದ ಉಂಗುರ ಎಗರಿಸಿದ್ದಾಳೆ. ಕತ್ತಿನಲ್ಲಿದ್ದ ಸರ ಕದ್ದು ಎಸ್ಕೇಪ್ ಆಗಿದ್ದಾಳೆ.
ಇದನ್ನೂ ಓದಿ: Car Accident: ಮೊನ್ನೆ ಬೈಕ್, ಇಂದು ಕಾರು! ಬಾನೆಟ್ ಮೇಲೆ ಹತ್ತಿದ ಯುವಕನನ್ನು 1 ಕಿಮೀ ಎಳೆದೊಯ್ದ ಮಹಿಳೆ!
ಅಲ್ಲಿಂದ ತಪ್ಪಿಸಿಕೊಂಡು ಹೋಗುವ ಮೊದಲು ಅಸಲಿ ಸರ ಇದ್ದ ಜಾಗದಲ್ಲಿ ನಕಲಿ ಸರವನ್ನು ಹಾಕಿ ಪರಾರಿಯಾಗಿದ್ದಾಳೆ. ನಂತರ ರಮೇಶ್ ಬಂದು ನೋಡುವಾಗ ಸರ ಬದಲಾಗಿದ್ದನ್ನು ಗಮನಿಸಿದ್ದಾರೆ. ಈ ವಿಚಾರ ಬೆಳಕಿಗೆ ಬಂದ ನಂತರ ಈ ಹಿಂದೆ ಹಲವಾರು ರೋಗಿಗಳ ಆಭರಣ ಕಳುವಾಗಿರುವ ವಿಚಾರ ಬೆಳಕಿಗೆ ಬಂದಿದೆ. ಕೇವಲ ಹತ್ತೇ ನಿಮಿಷದಲ್ಲಿ ಅವಳು ಈ ಕೆಲಸ ಮಾಡಿ ಮುಗಿಸಿದ್ದಾಳೆ.
ಕಳುವು ಮಾಡುವುದರಲ್ಲಿ ಇವಳು ತುಂಬಾ ಚಾಲಾಕಿ ಎಂಬ ಅಂಶ ಇದರಿಂದಲೇ ತಿಳಿಯುತ್ತದೆ. ಹೊರ ಹೋಗುವ ಸಮಯದಲ್ಲಿ ನಿಮ್ಮ ತಾಯಿ ಮಲಗಿದ್ದಾರೆ ಅವರನ್ನು ಎಚ್ಚರಿಸಿ ತೊಂದರೆ ಕೊಡ ಬೇಡಿ ಎಂದು ರಮೇಶ್ ಅವರ ಬಳಿಯೇ ಹೇಳಿ ತೆರಳಿದ್ದಾಳೆ ಎಂದು ರಮೇಶ್ ತಿಳಿಸಿದ್ದಾರೆ. ಇದೇ ರೀತಿಯಾಗಿ ಕೋಮಲಾ ಎಂಬಾಕೆಗೂ ವಂಚಿಸಿರುವುದು ಬಯಲಾಗಿದೆ.
ಅವರ ಬಳಿಯಲ್ಲಿದ್ದ ಚಿನ್ನಾಭರಣ ಕೂಡ ಕಳ್ಳತನ ಮಾಡಿಕೊಂಡು ಹೋಗಿದ್ದಳು. ಆದರೆ ಈ ಸಲ ಆಸ್ಪತ್ರೆಯ ಸಿಸಿಟಿವಿ ದೃಶ್ಯಗಳಲ್ಲಿ ಪರಿಶೀಲಿಸಿದಾಗ ಅವರ ಬಳಿಯಲ್ಲಿದ್ದ ಚಿನ್ನಾಭರಣ ಕೂಡ ಕಳ್ಳತನ ಮಾಡಿಕೊಂಡು ಹೋಗಿದ್ದಳು. ಆದರೆ ಈ ಸಲ ಆಸ್ಪತ್ರೆಯ ಸಿಸಿಟಿವಿ ದೃಶ್ಯಗಳಲ್ಲಿ ಪರಿಶೀಲಿಸಿದಾಗ ಇವಳು ನಕಲಿ ನರ್ಸ್ ಎಂಬುದು ತಿಳಿದು ಬಂದಿದೆ. ನಂತರ ಪೊಲೀಸರಿಗೆ ಈ ಕುರಿತು ಮಾಹಿತಿ ನೀಡಲಾಗಿದೆ ಅವರು ಬಂಧಿಸಿ ವಿಚಾರಣೆ ನಡೆಸಿದ್ದಾರೆ.
ವಿಚಾರಣೆ ವೇಳೆ ತಿಳಿದು ಬಂದ ಸತ್ಯ
ವಿಚಾರಣೆ ವೇಳೆ 'ತಾನೊಬ್ಬಳು ನರ್ಸ್, ತನ್ನ ಬಳಿ ವ್ಯಕ್ತಿಯೋರ್ವ ಹಣಕ್ಕಾಗಿ ಡಿಮ್ಯಾಂಡ್ ಮಾಡಿದ್ದ. ಹಣ ನೀಡುವಂತೆ ಪೀಡಿಸುತ್ತಿದ್ದ ಹಾಗಾಗಿ ಬೇರೆ ದಾರಿ ಕಾಣದೆ ಕಳ್ಳತನಕ್ಕೆ ಇಳಿದಿದ್ದೆ ಅಂತಾ ಲಕ್ಷ್ಮಿ ಬಾಯ್ಬಿಟ್ಟಿದ್ದಾಳೆ. ಆದರೆ ಆಸ್ಪತ್ರೆಯವರ ನಿರ್ಲಕ್ಷ್ಯವೂ ಇದಕ್ಕೆ ಕಾರಣವಾಗಿದೆ. ಯಾರೋ ಒಬ್ಬ ಯುವತಿ ಇಷ್ಟು ಸಲೀಸಾಗಿ ಬಂದು ಇಂಜೆಕ್ಷನ್ ನೀಡುವ ಮಟ್ಟಿನ ಸ್ವಾತಂತ್ರ್ಯ ಅಲ್ಲಿ ಇದೆ ಎಂದರೆ ಇದು ಖಂಡಿತ ತಪ್ಪಾಗುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ