Nupur Sharma: ಪ್ರವಾದಿ ಅವಹೇಳನ ಮಾಡಿದ್ದ ನೂಪುರ್ ಶರ್ಮಾ ಪ್ರತಿಕೃತಿಗೆ ಗಲ್ಲು! ಹಿಂದೂ ಸಂಘಟನೆ ಆಕ್ರೋಶ

ನೂಪುರ್ ಶರ್ಮಾ (Nupur Sharma) ವಿರುದ್ಧ ಪ್ರತಿಭಟನೆ (Protest) ಮುಂದುವರೆದಿದೆ. ಇದೀಗ ಪ್ರತಿಭಟನೆ ಒಂದು ಹೆಜ್ಜೆ ಮುಂದೆ ಹೋಗಿದ್ದು, ಬೆಳಗಾವಿಯಲ್ಲಿ (Belagavi) ನೂಪುರ್ ಶರ್ಮಾ ಪ್ರತಿಕೃತಿಗೆ (Replica) ಸಾರ್ವಜನಿಕ ಸ್ಥಳದಲ್ಲೇ (Public Place) ಕಿಡಿಗೇಡಿಗಳು ಗಲ್ಲು (Hang) ಹಾಕಿದ್ದಾರೆ.

ನೂಪುರ್ ಶರ್ಮಾ ಪ್ರತಿಕೃತಿಗೆ ಗಲ್ಲು

ನೂಪುರ್ ಶರ್ಮಾ ಪ್ರತಿಕೃತಿಗೆ ಗಲ್ಲು

  • Share this:
ಬೆಳಗಾವಿ: ಪ್ರವಾದಿ ಮಹಮ್ಮದ್ ಪೈಗಂಬರ್ (Prophet Mohamud Paigambar) ಅವರ ಬಗ್ಗೆ ವಿವಾದಾತ್ಮಕ ಹೇಳಿಕೆ (Controversial Statement) ನೀಡಿ ಮುಸ್ಲಿಂ ಸಮುದಾಯದ (Muslim Community) ಕೆಂಗಣ್ಣಿಗೆ ಗುರಿಯಾಗಿರುವ ನೂಪುರ್ ಶರ್ಮಾ (Nupur Sharma) ವಿರುದ್ಧ ಪ್ರತಿಭಟನೆ (Protest) ಮುಂದುವರೆದಿದೆ. ಇದೀಗ ಪ್ರತಿಭಟನೆ ಒಂದು ಹೆಜ್ಜೆ ಮುಂದೆ ಹೋಗಿದ್ದು, ಬೆಳಗಾವಿಯಲ್ಲಿ (Belagavi) ನೂಪುರ್ ಶರ್ಮಾ ಪ್ರತಿಕೃತಿಗೆ (Replica) ಸಾರ್ವಜನಿಕ ಸ್ಥಳದಲ್ಲೇ (Public Place) ಕಿಡಿಗೇಡಿಗಳು ಗಲ್ಲು (Hang) ಹಾಕಿದ್ದಾರೆ. ನಿನ್ನೆ ರಾತ್ರಿ ಕಿಡಿಗೇಡಿಗಳು ನೂಪುರ್ ಶರ್ಮಾ ಪ್ರತಿಕೃತಿಗೆ ಗಲ್ಲು ಹಾಕಿದ್ದು, ಬೆಳಗ್ಗೆ ಇದನ್ನು ಸಾರ್ವಜನಿಕರು ಗಮನಿಸಿದ್ದಾರೆ. ಇದೀಗ ಕಿಡಿಗೇಡಿಗಳ ಕೃತ್ಯಕ್ಕೆ ಹಿಂದೂ ಸಂಘಟನೆಗಳು (Hindu organizations) ತೀವ್ರ ಆಕ್ಷೇಪ ವ್ಯಕ್ತಪಡಿಸಿವೆ.

ಬೆಳಗಾವಿಯಲ್ಲಿ ನೂಪುರ್ ಶರ್ಮಾ ಪ್ರತಿಕೃತಿಗೆ ಗಲ್ಲು

ಬೆಳಗಾವಿಯ ಪೋರ್ಟ್ ರಸ್ತೆಯಲ್ಲಿ ಬಿಜೆಪಿ ಮಾಜಿ ವಕ್ತಾರೆ ನೂಪುರ್ ಶರ್ಮಾ ಅವರ ಪ್ರತಿಕೃತಿಯನ್ನು ಗಲ್ಲಿಗೆ ಏರಿಸಿದ್ದಾರೆ. ಸಾರ್ವಜನಿಕರು ಓಡಾಡುವ ನಡು ರಸ್ತೆಯಲ್ಲೇ ನಿನ್ನೆ ರಾತ್ರಿ ವೇಳೆಗೆ ಕಿಡಿಗೇಡಿಗಳು ನೂಪುರ್ ಶರ್ಮಾ ಪ್ರತಿಕೃತಿಯನ್ನು ಗಲ್ಲಿಗೇರಿಸಿದ್ದಾರೆ. ಮುಂಜಾನೆ ಸಾರ್ವಜನಿಕರು ಇದನ್ನು ಗಮನಿಸಿದ್ದಾರೆ. ಇದರಿಂದ ಕೆಲ ಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.

ಕಿಡಿಗೇಡಿಗಳ ಕೃತ್ಯಕ್ಕೆ ಹಿಂದೂ ಸಂಘಟನೆಗಳ ವಿರೋಧ

ನೂಪುರ್ ಶರ್ಮಾ ಅವರ ಭಾವಚಿತ್ರದ ಸಮೇತ ಅವರ ಪ್ರತಿಕೃತಿಗೆ ಹಗ್ಗ ಕಟ್ಟಿ ನಿನ್ನೆ ತಡರಾತ್ರಿ ನೇತುಹಾಕಿದ್ದರು. ಇಂದು ಬೆಳಗ್ಗೆ ಇದನ್ನು ಕಂಡು ಹಿಂದೂ ಜಾಗರಣ, ಶ್ರೀರಾಮ ಸೇನೆ ಕಾರ್ಯಕರ್ತರು, ಕೆಲ ಪಾಲಿಕೆ ಸದಸ್ಯರು ಸೇರಿದಂತೆ ವಿವಿಧ ಹಿಂದೂ ಸಂಘಟನೆಗಳ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು. ಸ್ಥಳದಲ್ಲಿ ಹೆಚ್ಚು ಜನ ಜಮಾಯಿಸಿದ್ದರಿಂದ ಕೆಲ ಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಪೊಲೀಸರು ಈ ಪ್ರತಿಕೃತಿಯನ್ನು ತಕ್ಷಣ ತೆರವುಗೊಳಿಸಬೇಕು,‌ ಇಲ್ಲದಿದ್ದರೆ ನಾವೇ ಅದನ್ನು ತೆರವು ಮಾಡಬೇಕಾಗುತ್ತದೆ. ಹೊಸ ವಿವಾದಕ್ಕೆ ಅವಕಾಶ ಕೊಡಬಾರದು ಎಂದು ಕೆಲ ಮುಖಂಡರು ಆಗ್ರಹಿಸಿದರು.

ಇದನ್ನೂ ಓದಿ: Explained: ಪ್ರವಾದಿ ಅವಹೇಳನ ಮಾಡಿದ ನೂಪುರ್ ಶರ್ಮಾ ಯಾರು? ಅವರು ಮಾಡಿರುವ ವಿವಾದವೇನು?

ಪ್ರತಿಕೃತಿ ತೆರವು ಮಾಡಿದ ಪೊಲೀಸರು

ವಿಷಯ ಗೊತ್ತಾಗುತ್ತಿದ್ದಂತೆ ಘಟನಾ ಸ್ಥಳಕ್ಕೆ ಬೆಳಗಾವಿ ಮಾರ್ಕೆಟ್ ಠಾಣೆ ಪೊಲಿಸರು ಭೇಟಿ ನೀಡಿ, ಪರಿಶೀಲಿಸಿದ್ರು. ಬಳಿಕ ಹಗ್ಗ ಕಟ್ಟಿ ನೇತು ಹಾಕಿದ್ದ ಪ್ರತಿಕೃತಿ ತೆರವು ಮಾಡಿದ್ರು. ಇನ್ನು ಮಾರ್ಕೆಟ್ ಠಾಣೆ ಪೊಲೀಸರು ಸುತ್ತಲಿನ ಪ್ರದೇಶದಲ್ಲಿರುವ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲನೆ ಮಾಡುತ್ತಿದ್ದಾರೆ.

ಪ್ರವಾದಿ ಬಗ್ಗೆ ನೂಪುರ್ ಶರ್ಮಾ ಹೇಳಿದ್ದೇನು?

ಕೆಲ ದಿನಗಳ ಹಿಂದಷ್ಟೇ ಪ್ರವಾದಿ ಮಹಮ್ಮದ್ ಬಗ್ಗೆ ಸುದ್ದಿ ವಾಹಿನಿಯಲ್ಲಿ ನಡೆದ ಚರ್ಚೆಯ ಸಂದರ್ಭದಲ್ಲಿ ನೂಪುರ್ ಶರ್ಮಾ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಇದು ಭಾರೀ ವಿವಾದಕ್ಕೆ ಕಾರಣವಾಗಿದೆ. ಅವರ ಹೇಳಿಕೆಯಿಂದ ಭಾರೀ ವಿವಾದವೇ ಉಂಟಾಯಿತು.

ವಿದೇಶಗಳಲ್ಲೂ ಭಾರೀ ವಿರೋಧ

ನೂಪುರ್ ಶರ್ಮಾ ಹೇಳಿಕೆ ವಿರುದ್ಧ ಮುಸ್ಲಿಂ ರಾಷ್ಟ್ರಗಳು ತಿರುಗಿ ಬಿದ್ದಿವೆ. ಸೌದಿ ಅರೇಬಿಯಾ, ಬಹರೈನ್‌, ಅರಬ್‌ ಸಂಯುಕ್ತ ಸಂಸ್ಥಾನ (ಯುಎಇ), ಇಂಡೊನೇಷ್ಯಾ, ಜೋರ್ಡನ್‌ ಮತ್ತು ಅಫ್ಗಾನಿಸ್ತಾನ ಸೇರಿದಂತೆ ಹಲವು ರಾಷ್ಟ್ರಗಳು ವಿರೋಧ ವ್ಯಕ್ತಪಡಿಸಿವೆ.

ಕ್ಷಮೆ ಕೇಳಿದ ನೂಪುರ್ ಶರ್ಮಾ

ಇಷ್ಟೆಲ್ಲಾ ವಿವಾದವಾಗುತ್ತಿದ್ದಂತೆ ನೂಪುರ್ ಶರ್ಮಾ ಕ್ಷಮೆ ಕೇಳಿದ್ದಾರೆ. ನಾನು ನನ್ನ ಹೇಳಿಕೆ ಬಗ್ಗೆ ಈಗಾಗಲೇ ಸ್ಪಷ್ಟೀಕರಣ ನೀಡಿದ್ದೇನೆ. ಆದರೆ ನನಗೆ ನಿರಂತರವಾಗಿ ಜೀವ ಬೆದರಿಕೆ ಕರೆಗಳು ಬರುತ್ತಿದ್ದು, ಸೂಕ್ತ ಭದ್ರತೆ ಒದಗಿಸಿ ಅಂತ ಮನವಿ ಮಾಡಿದ್ದಾರೆ.

ಇದನ್ನೂ ಓದಿ: Nupur Sharma: ಪ್ರವಾದಿ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ಕೇಸ್‌ನಲ್ಲಿ ನೂಪುರ್‌ಗೆ ಸಮನ್ಸ್ , ಅತ್ತ ಬಿಜೆಪಿ ಮಾಜಿ ವಕ್ತಾರೆಯಿಂದಲೂ ದೂರು

ನೂಪುರ್ ವಿರುದ್ಧ ದೂರು

ನೂಪುರ್ ಶರ್ಮಾ ಅವರ ವಿರುದ್ಧ ಮಹಾರಾಷ್ಟ್ರದ ಮುಂಬ್ರಾ ಪೊಲೀಸರು ಸಮನ್ಸ್ ಜಾರಿ ಮಾಡಿದ್ದಾರೆ. ಶರ್ಮಾ ವಿರುದ್ಧ ಎಫ್‌ಐಆರ್ ದಾಖಲಿಸಿದ ನಂತರ ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಮುಂಬ್ರಾ ಪೊಲೀಸರು ಶರ್ಮಾ ಅವರಿಗೆ ಸಮನ್ಸ್‌ ಜಾರಿ ಮಾಡಿದ್ದಾರೆ. ಈ ತಿಂಗಳ 22 ರಂದು ತಮ್ಮ ಮುಂದೆ ಹಾಜರಾಗುವಂತೆ ಸೂಚಿಸಲಾಗಿದೆ.
Published by:Annappa Achari
First published: