• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Nupur Sharma: ಮೈಸೂರಲ್ಲಿ ಗಣೇಶ ಮೆರವಣಿಗೆ ವೇಳೆ ನೂಪುರ್ ಶರ್ಮಾ ಫ್ಲೆಕ್ಸ್ ಹಾರಾಟ!

Nupur Sharma: ಮೈಸೂರಲ್ಲಿ ಗಣೇಶ ಮೆರವಣಿಗೆ ವೇಳೆ ನೂಪುರ್ ಶರ್ಮಾ ಫ್ಲೆಕ್ಸ್ ಹಾರಾಟ!

ಗಣೇಶ ಮೆರವಣಿಗೆ

ಗಣೇಶ ಮೆರವಣಿಗೆ

ಇಂದು ರಾಜ್ಯದ ಮೂಲೆ ಮೂಲೆಯಲ್ಲಿ ಗಣೇಶ ವಿಸರ್ಜನೆ ಅದ್ಧೂರಿಯಿಂದ ನಡೆಯುತ್ತಿದೆ. ಗಣೇಶನ ವಿಗ್ರಹದ ಜೊತೆಗೆ ಬೇರೆ ಬೇರೆ ಫ್ಲೆಕ್ಸ್ ಹಾಕಲಾಗಿದೆ. ಮೈಸೂರಲ್ಲಿ ನೂಪುರ್ ಶರ್ಮಾ ಅವರ ಫ್ಲೆಕ್ಸ್ ಕೂಡ ರಾರಾಜಿಸಿದೆ.

  • Share this:

ಇಂದು ರಾಜ್ಯದ ಮೂಲೆ ಮೂಲೆಯಲ್ಲಿ ಗಣೇಶ ವಿಸರ್ಜನೆ (Ganesha Mass Discharge) ಅದ್ಧೂರಿಯಿಂದ ನಡೆಯುತ್ತಿದೆ. ಗಣೇಶ (Ganesha Festival) ವಿಗ್ರಹವನ್ನು ಪ್ರತಿಷ್ಠಾಪಿಸಿ 5 ದಿನವಾದ ಹಿನ್ನೆಲೆ ಇಂದು ವಿಸರ್ಜನಾ ಸಮಾರಂಭ ಜರುಗುತ್ತಿದೆ. ಗಣೇಶನ ವಿಗ್ರಹದ ಜೊತೆಗೆ ಬೇರೆ ಬೇರೆ ಫ್ಲೆಕ್ಸ್ (Flex) ಹಾಕಲಾಗಿದೆ. ಈ ಬಾರಿ ವೀರ ಸಾವರ್ಕರ್ (Veer Savarkar) ಫೋಟೋ ಹಾಕಲು ಶ್ರೀರಾಮಸೇನೆ ಕರೆ ನೀಡಿತ್ತು. ಆದರೆ ಈಗ ಇದರ ಜೊತೆಗೆ ನೂಪುರ್ ಶರ್ಮಾ (Nupur Sharma) ಅವರ ಫ್ಲೆಕ್ಸ್ ಕೂಡ ರಾರಾಜಿಸಿದೆ. ಗಣಪತಿ ವಿಸರ್ಜನಾ ಮೆರವಣಿಗೆ ವಾಹನಗಳ ಮೇಲೆ ರಾಷ್ಟ್ರ ನಾಯಕರ (BJP Leaders)ಫ್ಲೆಕ್ಸ್​ಗಳ ಜೊತೆ ನೂಪುರ್ ಶರ್ಮಾ ಫ್ಲೆಕ್ಸ್ ಕಾಣಿಸಿಕೊಂಡಿದೆ.


ಇತ್ತೀಚಿಗೆ ವಿವಾದಾತ್ಮಕ ಹೇಳಿಕೆ ನೀಡಿ ನೂಪುರ್ ಶರ್ಮಾ ಭಾರಿ ಸುದ್ದಿಯಾಗಿದ್ದರು. ಎಲ್ಲೆಡೆ ಆಕ್ರೋಶ ಕೂಡ ವ್ಯಕ್ತವಾಗಿತ್ತು. ಈಗ ಮೈಸೂರಲ್ಲಿ ಗಣೇಶ ಮೆರವಣಿಗೆ ವೇಳೆ ನೂಪುರ್ ಶರ್ಮಾ ಅವರ ಫ್ಲೆಕ್ಸ್ ಹಾಕಲಾಗಿದೆ.


ಬಿಜೆಪಿ ಪ್ರಮುಖ ನಾಯಕರ ಫ್ಲೆಕ್ಸ್
ಮೆರವಣಿಗೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ,ನೂಪುರ್ ಶರ್ಮಾ, ಆರ್ ಎಸ್ ಎಸ್ ಸಂಸ್ಥಾಪಕ ಹೆಡ್ಗೆವಾರ್ ಸೇರಿ ಹಲವರ ಫ್ಲೆಕ್ಸ್​ಗಳನ್ನು ಹಾಕಲಾಗಿದೆ. ರಾಷ್ಟ್ರನಾಯಕರ ಫ್ಲೆಕ್ಸ್ ಜೊತೆಗೆ ಮೆರವಣಿಗೆಯಲ್ಲಿ ಹತ್ಯೆಯದ ಹಿಂದೂ ಕಾರ್ಯಕರ್ತರಾದ ಕ್ಯಾತಮಾರನಹಳ್ಳಿ ರಾಜು, ಶಿವಮೊಗ್ಗದ ಹರ್ಷ ಭಾವಚಿತ್ರದ ಫ್ಲೆಕ್ಸ್​ಗಳು ರಾರಾಜಿಸುತ್ತಿವೆ.
ಇದನ್ನೂ ಓದಿ: ವಿಘ್ನೇಶ್ವರನ ಮೂರ್ತಿಯನ್ನೇ ಭಗ್ನ ಮಾಡಿದ ಕಿಡಿಗೇಡಿಗಳು! 9 ಕಡೆ ಗಣಪನ ವಿಗ್ರಹಕ್ಕೆ ಧಕ್ಕೆ


ಅಪ್ಪು ವಿಗ್ರಹ ಕೂಡ ಪ್ರತಿಷ್ಠಾಪನೆ
ಮೈಸೂರಿನ ವಿವಿಧೆಡೆ ಗಣೇಶನ ಜೊತೆ ಪುನೀತ್ ರಾಜ್ ಕುಮಾರ್ ವಿಗ್ರಹ ಪ್ರತಿಷ್ಟಾಪನೆ ಮಾಡಲಾಗಿದೆ. ಇಂದು ಗಣಪತಿಯೊಂದಿಗೆ ಪುನೀತ್ ಅವರ ವಿಗ್ರಹ ಕೂಡ ವಿಸರ್ಜನೆ ಮಾಡಲಾಗ್ತಿದೆ.


101 ಗಣಪತಿ ದೇವಸ್ಥಾನದ ಬಳಿ ಪುನೀತ್ ವಿಗ್ರಹ
ನಟ ಪುನೀತ್ ರಾಜ್ ಕುಮಾರ್ ಅಭಿಮಾನಿಗಳಿಂದ ಮೈಸೂರಿನ ರಾಜೇಂದ್ರ ನಗರದ 101 ಗಣಪತಿ ದೇವಸ್ಥಾನದ ಬಳಿ ಪುನೀತ್ ವಿಗ್ರಹ ಕೂರಿಸಲಾಗಿತ್ತು. ರಾಜೇಂದ್ರ ನಗರದಿಂದ ನಗರದ ಕೋಟೆ ಆಂಜನೇಯ ದೇವಸ್ಥಾನದವರೆಗೂ ಮೆರವಣಿಗೆ ಮಾಡಲಾಗುತ್ತದೆ.


Nupur Sharma flex flight during Ganesha procession in Mysuru
ನೂಪುರ್ ಶರ್ಮಾ ಫ್ಲೆಕ್ಸ್


ಗಣಪತಿ ಮೆರವಣಿಗೆಯಲ್ಲಿ ಹಂದಿ ಬಾವುಟ ಪ್ರದರ್ಶನ
ಗಣಪತಿ ವಿಸರ್ಜನೆ ಮೆರವಣಿಗೆಯಲ್ಲಿ ಹಂದಿ ಬಾವುಟ ಪ್ರದರ್ಶನ ಮಾಡಲಾಗಿದೆ. ಕೇಸರಿ ಬಾವುಟದಲ್ಲಿ ಹಂದಿ ಚಿತ್ರ ಪ್ರದರ್ಶನ. ಮಾಡಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ.


ಸಾರ್ವಜನಿಕ ಗಣೇಶೋತ್ಸವದಲ್ಲಿ ಭಾವೈಕ್ಯತೆಯ ಸಂದೇಶ
ಇನ್ನು ಮೈಸೂರಿನಲ್ಲಿ ನಡೆದ ಸಾರ್ವಜನಿಕ ಗಣೇಶೋತ್ಸವದಲ್ಲಿ ಭಾವೈಕ್ಯತೆಯ ಸಂದೇಶ ಸಾರಲಾಗಿದೆ. ಮುಸ್ಲಿಂ ಬಾಂಧವರು ಹಿಂದೂ ಕಾರ್ಯಕರ್ತರಿಗೆ ಹಣ್ಣಿನ ಜ್ಯೂಸ್ ಮತ್ತು ಪಾನಕ ವಿತರಣೆ ಮಾಡಿದರು.


ಹುಬ್ಬಳ್ಳಿಯಲ್ಲಿ ಹಿಂದೂ - ಮುಸ್ಲಿಂ ಜೊತೆಗೂಡಿ ಹಬ್ಬ ಆಚರಣೆ
ಹುಬ್ಬಳ್ಳಿಯ ಕೊಟಗೊಂಡಿಹುಣಸಿ ಗ್ರಾಮದ ಗಣೇಶೋತ್ಸವ ಕೋಮು ಸೌಹಾರ್ದತೆಗೆ ಸಾಕ್ಷಿಯಾಯ್ತು. ಹಿಂದೂ - ಮುಸ್ಲಿಂ ಜೊತೆಗೂಡಿ ಹಬ್ಬ ಆಚರಣೆ ಮಾಡಿದರು. ಮುಸ್ಲಿಮರು ಗಣೇಶನಿಗೆ ನಮಾಜ್ ಸಲ್ಲಿಸಿದ್ರೆ, ಹಿಂದೂ ಬಾಂಧವರು ಪೂಜೆ ಮಾಡಿದರು.


ಇದನ್ನೂ ಓದಿ: ಗಣಪತಿ ವಿಸರ್ಜನೆಗಾಗಿ ಪಾಲಿಕೆಯಿಂದಲೇ ವಿಸರ್ಜನಾ ಕೇಂದ್ರ; ಇಲ್ಲಿದೆ ಮಾಹಿತಿ


ಗಣೇಶ ಹಬ್ಬದಲ್ಲಿ ತಳಿರು ತೋರಣ ಕಟ್ಟೋರು ಮುಸ್ಲಿಮರು!
ಇನ್ನು ಇಲ್ಲಿ ಗಣೇಶ ಹಬ್ಬದಂದು ಮುಸ್ಲಿಮರು ತಳಿರು ತೋರಣmyಕಟ್ಟುತ್ತಾರೆ. ಹಿಂದೂಗಳು ಇಫ್ತಾರ್ ಕೂಟಕ್ಕೆ ಊಟ ಬಡಿಸುತ್ತಾರೆ. ಈ ಸೌಹಾರ್ದತೆ ಕಳೆದ 25 ವರ್ಷಗಳಿಂದ ನಡೆದುಕೊಂಡು ಬಂದಿದೆ. ಅದರಲ್ಲೂ ಈ ಬಾರಿ 25 ವರ್ಷ ಪೂರೈಕೆ ಹಿನ್ನೆಲೆಯಲ್ಲಿ ಬೆಳ್ಳಿ ಮೂರ್ತಿ ಪ್ರತಿಷ್ಠಾಪಿಸಿ ರಜತ ಮಹೋತ್ಸವ ಆಚರಣೆ ಮಾಡಲಾಗಿದೆ.


ಚಾಮರಾಜಪೇಟೆಯಲ್ಲಿ ಮತ್ತೆ ತಾರಕಕ್ಕೇರಿದ ಗಣೇಶೋತ್ಸವ ಗದ್ದಲ
ಚಾಮರಾಜಪೇಟೆಯಲ್ಲಿ ಮತ್ತೆ ಗಣೇಶೋತ್ಸವ ಗದ್ದಲ ತಾರಕಕ್ಕೇರಿತ್ತು. ಕಳೆದ ರಾತ್ರಿಯೇ ಬೆಂಗಳೂರು ಮಹಾನಗರ ಗಣೇಶ ಉತ್ಸವ ಸಮಿತಿ ಚಾಮರಾಜಪೇಟೆ ಮೈದಾನದ ಬಳಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಿದೆ. ಈಗ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮತ್ತು ಶೋಭಯಾತ್ರೆ ವಿಚಾರವಾಗಿ ಪೊಲೀಸರು ಮತ್ತು ಸಮಿತಿ ನಡುವೆ ವಾಕ್ಸಮರ ನಡೆದಿದೆ.

Published by:Thara Kemmara
First published: