Bengaluru Helpline: ಎಷ್ಟೊತ್ತಾದ್ರೂ ವಿದ್ಯುತ್ ಸರಿಯಾಗಿಲ್ವಾ? ನೀರು ಬರ್ತಿಲ್ವಾ? ಬೆಂಗ್ಳೂರಲ್ಲಿ ಏನೇ ಸಮಸ್ಯೆಯಾದ್ರೂ ಈ ನಂಬರ್​ಗಳಿಗೆ ಕರೆ ಮಾಡಿ

Contact Number: ಒಂದಲ್ಲ ಎರೆಡಲ್ಲ ಸಾವಿರಾರು ಸಮಸ್ಯೆಗಳು ಎನ್ನಬಹುದು. ಆದರೆ ಹಲವಾರು ಜನರಿಗೆ ಈ ಸಮಸ್ಯೆಗಳಾದಾಗ ಯಾರನ್ನು ಸಂಪರ್ಕಿಸಬೇಕು ಎಂಬುದು ತಿಳಿದಿರುವುದಿಲ್ಲ. ಅದಕ್ಕೆ ಪರಿಹಾರ ಇಲ್ಲಿದೆ. ಸಮಸ್ಯೆಯಾದಾಗ ಯಾರನ್ನು ಸಂಪರ್ಕಿಸಬೇಕು ಎಂಬುದು ಇಲ್ಲಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಸಾಮಾನ್ಯವಾಗಿ ಬೆಂಗಳೂರಿನಲ್ಲಿ (Bengaluru) ಒಂದೆಲ್ಲ ಒಂದು ಸಮಸ್ಯೆ (Problem))  ಇರುತ್ತದೆ. ಸರಿಯಾದ ಸಮಯಕ್ಕೆ ನೀರು ಬರುವುದಿಲ್ಲ, ಕೆಲವೊಮ್ಮೆ ಪವರ್ ಕಟ್ (Power Cut) ಸಮಸ್ಯೆಯಾಗುತ್ತದೆ. ಇದೆಲ್ಲದರ ಜೊತೆಗೆ ಇಲ್ಲಿ ಯಾವಾಗ ಮಳೆ (Rain)  ಬರುತ್ತದೆ ಎಂಬುದನ್ನ ಹೇಳುವುದು ಸಾಧ್ಯವಿಲ್ಲ. ಮಳೆ ಬಂದರೆ ಮರಗಳು (Tree)  ಉರುಳಿ ಬೀಳುತ್ತದೆ. ಅವುಗಳನ್ನು ತೆರವುಗೊಳಿಸಲು ಯಾರಿಗಾದರೂ ಹೇಳಬೇಕು, ಹೀಗೆ ಒಂದಲ್ಲ ಎರೆಡಲ್ಲ ಸಾವಿರಾರು ಸಮಸ್ಯೆಗಳು ಎನ್ನಬಹುದು. ಆದರೆ ಹಲವಾರು ಜನರಿಗೆ ಈ ಸಮಸ್ಯೆಗಳಾದಾಗ ಯಾರನ್ನು ಸಂಪರ್ಕಿಸಬೇಕು ಎಂಬುದು ತಿಳಿದಿರುವುದಿಲ್ಲ. ಅದಕ್ಕೆ ಪರಿಹಾರ ಇಲ್ಲಿದೆ. ಸಮಸ್ಯೆಯಾದಾಗ ಯಾರನ್ನು ಸಂಪರ್ಕಿಸಬೇಕು ಎಂಬುದು ಇಲ್ಲಿದೆ.

ವಿದ್ಯುತ್ ಸಮಸ್ಯೆ

ಬೆಂಗಳೂರಿಗರಿಗೆ ಪವರ್ ಕಟ್ ಸಮಸ್ಯೆ ಹೊಸದಲ್ಲ. ಪ್ರತಿದಿನ ಒಂದಲ್ಲ ಒಂದು ಏರಿಯಾದಲ್ಲಿ ಈ ಸಮಸ್ಯೆ ಕಾಡುತ್ತದೆ. ಬೆಸ್ಕಾಂ ಮುಂಚಿತವಾಗಿ ಮಾಹಿತಿ ನೀಡುತ್ತದೆ, ಆದರೆ ಕೆಲವೊಮ್ಮೆ ಈ ಬಗ್ಗೆ ಮಾಹಿತಿ ಇರುವುದಿಲ್ಲ ಹಾಗೂ ಹಲವಾರು ಬಾರಿ ಯಾವುದ್ಯಾವುದೋ ಸಮಯದಲ್ಲಿ ವಿದ್ಯುತ್ ಸಮಸ್ಯೆ ಎದುರಾಗುತ್ತದೆ. ಇಂತಹ ಸಮಯದಲ್ಲಿ ನೀವು ಬೆಸ್ಕಾಂ ಅನ್ನು ಸಂಪರ್ಕಿಸಬೇಕು.

ಬೆಸ್ಕಾಂ ಸಹಾಯವಾಣಿ ನಂಬರ್: 1912 ಇದು 24 ಗಂಟೆ ಲಭ್ಯವಿರುತ್ತದೆ.

ನಿಮಗೆ ವಿದ್ಯುತ್ ಸಮಸ್ಯೆ ಎದುರಾದಾಗ ಬೆಸ್ಕಾಂಗೆ ಕರೆ ಮಾಡಿದರೆ ಸರಿಯಾದ ಮಾಹಿತಿ ನೀಡುತ್ತಾರೆ.

ನೀರಿನ ಸಮಸ್ಯೆಗೆ

ಬೆಂಗಳೂರಿನಲ್ಲಿ ಕರೆಂಟ್​ ಸಮಸ್ಯೆ ನಂತರ ಹೆಚ್ಚು ಜನರು ಪರದಾಡುವುದು ನೀರಿಗೆ. ನೀರು ಒಂದು ದಿನ ಬಂದರೆ ಇನ್ನೊಂದು ದಿನ ಬರುತ್ತದೆ, ಕೆಲವೊಮ್ಮೆ 2 ರಿಂದ 3 ದಿನ ಬರುವುದಿಲ್ಲ. ಒಂದು ದಿನಕ್ಕೆ ಎಂದರೆ ನೀರನ್ನು ಇಟ್ಟುಕೊಳ್ಳಲು ಪಾತ್ರೆಗಳಿರುತ್ತದೆ, ಆದರೆ  2 ದಿನ ಅಥವಾ ಅದಕ್ಕಿಂತ ಹೆಚ್ಚು ದಿನ ಆದರೆ ಜನರಿಗೆ ಮೊದಲೇ ತಿಳಿದಿರಬೇಕು ಇಲ್ಲದಿದ್ದಲ್ಲಿ ನೀರಿಗಾಗಿ ಪರದಾಡಬೇಕಾಗುತ್ತದೆ. ಇಂತಹ ಸಂದರ್ಭದಲ್ಲಿ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯನ್ನು ನೀವು ಸಂಪರ್ಕಿಸಬೇಕು.

ಇದನ್ನೂ ಓದಿ: ಈ ವರ್ಷ ಕೇಂದ್ರ ಸರ್ಕಾರ ಕಳಿಸಿದ ಗಣರಾಜ್ಯೋತ್ಸವ ಆಮಂತ್ರಣ ಪತ್ರಿಕೆಯಲ್ಲಿ ಗಿಡ ಹುಟ್ಟುತ್ತಂತೆ

24 ಗಂಟೆಗಳು ಲಭ್ಯವಿರುವ ನಂಬರ್: 1916

ನೀವು ಈ ನಂಬರ್​ಗೆ ಸಂಪರ್ಕಿಸಬಹುದಾದರೂ ಸಾಧ್ಯವಾದಷ್ಟು ಬೆಳಗ್ಗೆ 10 ರಿಂದ 5 ರವರೆಗೆ ಮಾಡಲು ಪ್ರಯತ್ನಿಸಿ. ಇಲ್ಲಿ ನಿಮಗೆ ಸರಿಯಾದ ಉತ್ತರ ಸಿಗುವುದು ಬಹಳ ಕಷ್ಟ.

ಮಳೆಯ ಅವಾಂತರಕ್ಕೆ

ಬೆಂಗಳೂರಿನಲ್ಲಿ ಮಳೆ ಬಂದರೆ ಸಾಕು ಅವಾಂತರಗಳು ಬಹಳಷ್ಟು ಆಗುತ್ತದೆ. ರಸ್ತೆಗಳಲ್ಲಿ ನೀರು ನಿಲ್ಲುತ್ತದೆ, ಮರಗಳು ಉರುಳಿ ಬೀಳುತ್ತವೆ. ಅಲ್ಲದೇ ಕೆಲ ಮನೆ ಒಳಗೆ ನೀರು ನುಗ್ಗಿ ಜನರು ಪರದಾಡುವ ಸಮಸ್ಯೆ ಉಂಟಾಗುತ್ತದೆ. ಈ ಸಮಯದಲ್ಲಿ ನೀವು 080-22221188  ಈ ನಂಬರ್​ಗೆ ಕರೆ ಮಾಡಿದರೆ ತಕ್ಷಣವೇ ಪರಿಹಾರ ಲಭಿಸುತ್ತದೆ.

ನಾಯಿ ಕಾಟ ಜಾಸ್ತಿ ಇದ್ದರೆ

ಬೆಂಗಳೂರಿನ ಜನ ಕೆಲವೊಂದು ಬೀದಿಗಳಲ್ಲಿ ರಾತ್ರಿ ಹೊತ್ತು ಹೋಗಲು ಭಯಪಡುತ್ತಾರೆ, ಅದಕ್ಕೆ ಕಾರಣ ಬೀದಿ ನಾಯಿಗಳ ಹಾವಳಿ. ನಿಮಗೆ ನೆನಪಿರಬಹುದು ಕೆಲ ವರ್ಷಗಳ ಹಿಂದೆ ಸ್ಯಾಂಡಲ್​ ವುಡ್​ ನಟಿ ಪಾರೂಲ್ ಯಾದವ್​ ಮೇಲೆ ಸಹ ಬೀದಿ ನಾಯಿಗಳು ದಾಳಿ ಮಾಡಿದ್ದವು. ನಾಯಿ ದಾಳಿ ನಿಜಕ್ಕೂ ಭಯಾನಕ. ಜೀವಕ್ಕೆ ಕುತ್ತು ಬರಬಹುದು. ಹಾಗಾಗಿ ನಿಮ್ಮ ಏರಿಯಾದಲ್ಲಿ ಸಹ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದರೆ ಕಾರ್ಪೋರೇಷನ್​ ಅವರನ್ನು ಸಂಪರ್ಕಿಸಬೇಕು.

ಸಂಪರ್ಕಿಸುವ ನಂಬರ್: 080-22221188 

ನೀವು ನಿಮ್ಮ ಏರಿಯಾ ವಿಳಾಸ ನೀಡಿದರೆ ಸಂಬಂಧಿಸಿದ ಕ್ರಮ ತೆಗೆದುಕೊಳ್ಳುತ್ತಾರೆ. ನಾಯಿಗಳನ್ನು ಕರೆದುಕೊಂಡು ಹೋಗುತ್ತಾರೆ.

ಮರ ಬಿದ್ದರೆ

ಮರ ಬೀಳುವುದು ಕೂಡ ಸಾಮಾನ್ಯ. ಬೆಂಗಳೂರಿನಲ್ಲಿ ಯಾವಾಗ ಏನಾಗುತ್ತದೆ ಎಂಬುದು ಹೇಳುವುದು ಕಷ್ಟ. ರಸ್ತೆಯ ಬದಿಗಳಲ್ಲಿ ಮರಗಳು ಬೀಳುತ್ತದೆ, ಒಂದು ಕೊಂಬೆ ಬಿದ್ದರೆ ನೀವು ಬಿಬಿಎಂಪಿ ಅಧಿಕಾರಿಗಳನ್ನು  ಸಂಪರ್ಕಿಸಬೇಕು.

ಸಂಪರ್ಕಿಸಬೇಕಾದ ನಂಬರ್​ : 080-22660000

ಇದನ್ನೂ ಓದಿ: ಟ್ಯಾಟೂ ಹಾಕಿಸಿಕೊಳ್ಳುವವರು ಕಡ್ಡಾಯವಾಗಿ ಈ ವಿಷಯಗಳನ್ನು ನೆನಪಿನಲ್ಲಿಡಿ

ಸೂಚನೆ: ಮೇಲೆ ನೀಡಿರುವ ನಂಬರ್​ಗಳು ಭಾನುವಾರ ಮತ್ತು ಸರ್ಕಾರಿ ರಜೆ ದಿನಗಳಂದು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದ ಬಗ್ಗೆ ನಮಗೂ ಸಹ ಮಾಹಿತಿ ಇಲ್ಲ.
Published by:Sandhya M
First published: