HOME » NEWS » State » NUDE VIDEO BANGALORE MAN HELD FOR FILMING WOMAN TAKING BATH IN BENGALURU RMD

ಸ್ನಾನ ಮಾಡುತ್ತಿದ್ದ ಪಕ್ಕದಮನೆ ಆಂಟಿಯ ನಗ್ನ ದೃಶ್ಯ ಸೆರೆ ಹಿಡಿದ ಬೆಂಗಳೂರಿನ ಕಾಮುಕನ ಬಂಧನ

ಸಂತ್ರಸ್ತೆ ಮುಂಜಾನೆ 10:30 ಸುಮಾರಿಗೆ ಸ್ನಾನ ಮಾಡುತ್ತಿದ್ದಳು. ಈ ವೇಳೆ ಬಾತ್​ ರೂಂ ಕಿಟಕಿಯಲ್ಲಿ ಮೊಬೈಲ್​ ಕಾಣಿಸಿತ್ತು. ಸರಿಯಾಗಿ ಗಮನಿಸಿದಾಗ ಅದು ರಾಜ್​ದೀಪ್​ ಅನ್ನುವ ವಿಚಾರ ಆಕೆಗೆ ಗೊತ್ತಾಗಿತ್ತು.

news18-kannada
Updated:September 25, 2020, 10:55 AM IST
ಸ್ನಾನ ಮಾಡುತ್ತಿದ್ದ ಪಕ್ಕದಮನೆ ಆಂಟಿಯ ನಗ್ನ ದೃಶ್ಯ ಸೆರೆ ಹಿಡಿದ ಬೆಂಗಳೂರಿನ ಕಾಮುಕನ ಬಂಧನ
ಸಾಂದರ್ಭಿಕ ಚಿತ್ರ
  • Share this:
ಪಕ್ಕದ ಮನೆಯ ಆಂಟಿ ಸ್ನಾನ ಮಾಡುತ್ತಿರುವ ದೃಶ್ಯವನ್ನು ಕದ್ದು ಶೂಟ್​ ಮಾಡಿದ ವ್ಯಕ್ತಿಯನ್ನು ಬೆಂಗಳೂರಿನಲ್ಲಿ ಬಂಧಿಸಲಾಗಿದೆ. ಎಲೆಕ್ಟ್ರಾನಿಕ್​ ಶೋರೂಂ ಒಂದರಲ್ಲಿ ಎಕ್ಸಿಕ್ಯುಟಿವ್​ ಆಗಿರುವ 34 ವರ್ಷದ ರಾಜ್​ದೀಪ್​ ಈಗ ಪೊಲೀಸರ ಅತಿಥಿ ಆಗಿದ್ದಾನೆ. ರಾಜ್​ದೀಪ್​ ಮೂಲತಃ ಬಿಹಾರದವನು. ಈತ ಕಳೆದ ಕೆಲ ವರ್ಷಗಳಿಂದ ಬೆಂಗಳೂರಿನಲ್ಲಿ ಉದ್ಯೋಗ ಮಾಡುತ್ತಿದ್ದ ಹಿನ್ನೆಲೆಯಲ್ಲಿ ನಗರದಲ್ಲೇ ಉಳಿದುಕೊಂಡಿದ್ದ. ಆಸ್ಟಿನ್​ ಟೌನ್​ನಲ್ಲಿ ಈತನ ಮನೆ ಇದ್ದು, ನೆರೆ ಮನೆಯ ಆಂಟಿ ಸ್ನಾನ ಮಾಡುವುದನ್ನು ಕದ್ದು ವಿಡಿಯೋ ಮಾಡಿದ್ದ. ಈ ವಿಚಾರ ಬಯಲಿಗೆ ಬರುತ್ತಿದ್ದಂತೆ ಅಶೋಕ್​ ನಗರ ಪೊಲೀಸರು ಈತನ್ನು ಬಂಧಿಸಿ ಕರೆದೊಯ್ದಿದ್ದಾರೆ.

ರಾಜ್​ದೀಪ್​ ಕಳೆದ ಐದು ವರ್ಷಗಳಿಂದ ಬೆಂಗಳೂರಿನಲ್ಲಿ ವಾಸವಾಗಿದ್ದಾನೆ. ಬಿಇ ಮಾಡುತ್ತಿದ್ದ ಈತ ಅದನ್ನು ಅರ್ಧಕ್ಕೆ ಬಿಟ್ಟು, ಎಲೆಕ್ಟ್ರಾನಿಕ್ ಗೆಜೆಟ್​ ಶೋರೂಂಗೆ ಜಾಯಿನ್​ ಆಗಿದ್ದ. ಸಂತ್ರಸ್ತೆ ಮುಂಜಾನೆ 10:30 ಸುಮಾರಿಗೆ ಸ್ನಾನ ಮಾಡುತ್ತಿದ್ದಳು. ಈ ವೇಳೆ ಬಾತ್​ ರೂಂ ಕಿಟಕಿಯಲ್ಲಿ ಮೊಬೈಲ್​ ಕಾಣಿಸಿತ್ತು. ಸರಿಯಾಗಿ ಗಮನಿಸಿದಾಗ ಅದು ರಾಜ್​ದೀಪ್​ ಅನ್ನುವ ವಿಚಾರ ಆಕೆಗೆ ಗೊತ್ತಾಗಿತ್ತು.


ನಂತರ ರಾಜ್​ದೀಪ್​ ಹಾಗೂ ಆತನ ಗೆಳೆಯರ ಫ್ಲಾಟ್​ಗೆ ತೆರಳಿ ಪ್ರಶ್ನೆ ಮಾಡಿದ್ದಾಳೆ. ಆದರೆ, ಇದನ್ನು ಆತ ಅಲ್ಲಗಳೆದಿದ್ದಾನೆ. ಅಷ್ಟೇ ಅಲ್ಲ, ಮೊಬೈಲ್​ ನೀಡಿ ಚೆಕ್​ ಮಾಡುವಂತೆ ಹೇಳಿದ್ದಾನೆ. ಈ ವೇಳೆ ರೀಸೈಕಲ್​ಬಿನ್​ ಅಲ್ಲಿ ಈ ವಿಡಿಯೋ ದೊರೆತಿದೆ.   ಮಹಿಳೆಯ ಗೆಳೆಯರು ಫ್ಲಾಟ್​ಗೆ ಬಂದಿದ್ದರು. ನಂತರ ರಾಜ್​ದೀಪ್​ನನ್ನು ಪೊಲೀಸ್​ ಠಾಣೆಗೆ ಕರೆದೊಯ್ಯಲಾಗಿದೆ. ಈತನ ವಿರುದ್ಧ ಲೈಂಗಿಕ ಕಿರುಕುಳದಡಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
Published by: Rajesh Duggumane
First published: September 24, 2020, 12:58 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories