• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • College Bandh Today: ಇಂದು ರಾಜ್ಯಾದ್ಯಂತ 3 ಸಾವಿರ ಕಾಲೇಜ್ ಬಂದ್​ಗೆ ಕರೆ; ವಿದ್ಯಾರ್ಥಿಗಳ ಬೇಡಿಕೆಗಳೇನು? 

College Bandh Today: ಇಂದು ರಾಜ್ಯಾದ್ಯಂತ 3 ಸಾವಿರ ಕಾಲೇಜ್ ಬಂದ್​ಗೆ ಕರೆ; ವಿದ್ಯಾರ್ಥಿಗಳ ಬೇಡಿಕೆಗಳೇನು? 

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಇನ್ನು ಬಂದ್ ಕರೆ ನಡುವೆಯೂ ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ಕಡೆ ಬೆಳಗ್ಗೆ ಕಾಲೇಜಿನಲ್ಲಿ ತರಗತಿಗಳು ಆರಂಭಗೊಂಡಿವೆ. ಹೀಗಾಗಿ ಎನ್​ಎಸ್​ಯುಐ ಕಾಲೇಜು ಒಳಗೆ ಪ್ರವೇಶಿಸಲು ಮುಂದಾಗಿದೆ.

  • Share this:

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಇಂದು ವಿದ್ಯಾರ್ಥಿಗಳು (Students Protest) ರಸ್ತೆಗೆ ಇಳಿಯಲಿದ್ದಾರೆ. ಈ ಹಿನ್ನೆಲೆ ಇಂದು ರಾಜ್ಯಾದ್ಯಂತ ಕಾಲೇಜುಗಳು ಬಂದ್ (Collage Bandh Today) ಆಗುವ ಸಾಧ್ಯತೆಗಳಿವೆ. ರಾಜ್ಯದ ಸರಕಾರಿ, ಅನುದಾನಿತ ಹಾಗೂ ಸಂಯೋಜಿತ ಕಾಲೇಜ್ ಬಂದ್ ಗೆ ಕರೆ ನೀಡಲಾಗಿದೆ. NSUI ವಿದ್ಯಾರ್ಥಿ ಸಂಘಟನೆ ಬಂದ್​ಗೆ ಕರೆ ನೀಡಿದೆ. ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ವಿವಿ, ಪದವಿ ಕಾಲೇಜುಗಳು ಬಂದ್ ಮಾಡಲು ಕಾಂಗ್ರೆಸ್‌ನ ವಿದ್ಯಾರ್ಥಿ ಘಟಕ ರಾಷ್ಟ್ರೀಯ ವಿದ್ಯಾರ್ಥಿ ಸಂಘ ಕರೆ ಕೊಟ್ಟಿದೆ. ರಾಜ್ಯದ ವಿದ್ಯಾರ್ಥಿಗಳು ಅನೇಕ ಸಮಸ್ಯೆಗಳನ್ನು (Students Problems) ಎದುರಿಸುತ್ತಿದ್ದಾರೆ. ಸಮಸ್ಯೆಗಳನ್ನು ಬಗೆಹರಿಸಲು ಸರ್ಕಾರ ನಿರಾಸಕ್ತಿ ತೋರುತ್ತಿದೆ ಎಂದು ಕಾಂಗ್ರೆಸ್‌ನ ವಿದ್ಯಾರ್ಥಿ ಘಟಕ ರಾಷ್ಟ್ರೀಯ ವಿದ್ಯಾರ್ಥಿ ಸಂಘ ಆರೋಪಿಸಿದೆ. ಸರ್ಕಾರದ ನಡೆ ಖಂಡಿಸಿ ಸರ್ಕಾರಿ ವಿವಿ ಹಾಗೂ ಪದವಿ ಕಾಲೇಜುಗಳು ಬಂದ್​ಗೆ ಕರೆ ನೀಡಲಾಗಿದೆ.


ಯಾವುದೇ ಕಾರಣಕ್ಕೂ ಕಾಲೇಜ್ ಆರಂಭಗೊಳ್ಳಲು ಬಿಡಲ್ಲ. ಇವತ್ತು ರಾಜ್ಯಾದ್ಯಂತ ಬಂದ್ ಗೆ ಕರೆ ಕೊಟ್ಟಿದ್ದೇವೆ. ಬಂದ್ ಗೆ ಸಹಕರಿಸಲು ಪ್ರಾಂಶುಪಾಲಾರ ಬಳಿ ಮನವಿ ಮಾಡಿಕೊಂಡಿದ್ದೇವೆ ಎಂದು NSUI ಹೇಳಿಕೊಂಡಿದೆ.


ಇನ್ನು ಬಂದ್ ಕರೆ ನಡುವೆಯೂ ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ಕಡೆ ಬೆಳಗ್ಗೆ ಕಾಲೇಜಿನಲ್ಲಿ ತರಗತಿಗಳು ಆರಂಭಗೊಂಡಿವೆ. ಹೀಗಾಗಿ ಎನ್​ಎಸ್​ಯುಐ ಕಾಲೇಜು ಒಳಗೆ ಪ್ರವೇಶಿಸಲು ಮುಂದಾಗಿದೆ.


ಬಂದ್ ಬಗ್ಗೆ ಸಿಗದ ಸ್ಪಷ್ಟ ಚಿತ್ರಣ


ಕಳೆದು ಎರಡ್ಮೂರು ದಿನಗಳಿಂದ ಎನ್ಎಸ್​ಯುಐ ಸಂಘಟನೆ ಬಂದ್ ಕುರಿತಾದ ಭಿತ್ತಿಪತ್ರಗಳನ್ನು ವಿತರಣೆ ಮಾಡುವ ಕೆಲಸ ಮಾಡಿದೆ. ಆದ್ರ ಬಂದ್ ಬಗ್ಗೆ ಸ್ಪಷ್ಟ ಚಿತ್ರಣ ಸಿಗದ ಹಿನ್ನೆಲೆ ಕೆಲವು ಕಡೆ ವಿದ್ಯಾರ್ಥಿಗಳು ಕಾಲೇಜಿನತ್ತ ಆಗಮಿಸುತ್ತಿದ್ದಾರೆ.


ವಿದ್ಯಾರ್ಥಿಗಳ ಸಮಸ್ಯೆ ಏನು?


- ವಿಶ್ವವಿದ್ಯಾಲಯಗಳಲ್ಲಿ ಪರೀಕ್ಷೆ ಫಲಿತಾಂಶ ವಿಳಂಬ


- ರಾಷ್ಟ್ರೀಯ ಶಿಕ್ಷಣ ನೀತಿಯ ಅಸಂಘಟಿತ ಮತ್ತು ಅವೈಜ್ಞಾನಿಕ ಅನುಷ್ಠಾನ


- ವಿದ್ಯಾರ್ಥಿ ವೇತನ ಮಂಜೂರು ವಿಳಂಬ ಧೋರಣೆ


- ಬಸ್ ಸಾರಿಗೆ ಸಮಸ್ಯೆ


- ಸರ್ಕಾರಿ ಕಾಲೇಜು ಶುಲ್ಕ ಹೆಚ್ಚಳ


ಇದನ್ನೂ ಓದಿ:  Farmer Success Story: ಕೃಷಿಯಲ್ಲಿ ನಷ್ಟ; ಕೈ ಕಟ್ಟಿ ಕೂರದೇ ಕೋಳಿ ಸಾಕಾಣಿಕೆಯಲ್ಲಿ ಯಶಸ್ಸು ಕಂಡ ರೈತ


ವಿದ್ಯಾರ್ಥಿಗಳ ಬೇಡಿಕೆಗಳೇನು?


- ಸರಿಯಾದ ಸಮಯಕ್ಕೆ ಫಲಿತಾಂಶ ನೀಡಬೇಕು


- ವಿದ್ಯಾರ್ಥಿ ವೇತನ ಕೂಡಲೇ ಬಿಡುಗಡೆ ಮಾಡಬೇಕು


- ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡಬೇಕು


- ಸರ್ಕಾರಿ ಕಾಲೇಜು ಶುಲ್ಕ ಕಡಿಮೆ ಮಾಡಬೇಕೆಂದು ಪಟ್ಟು


ಮೂರು ಸಾವಿರ ಕಾಲೇಜ್ ಬಂದ್​ಗೆ ಕರೆ


3 ಸಾವಿರ ಕಾಲೇಜಿಗೆ ಈಗಾಗಲೇ ಬಂದ್ ಗೆ ಕರೆ ಕೊಟ್ಟಿದ್ದೇವೆ. ಕೆಲವು ಕಾಲೇಜುಗಳು ಅವರೇ ರಜೆ ಕೊಟ್ಟಿದ್ದಾರೆ. ಒಂದು ವರ್ಷ ಆಗಿದೆ, ಸರಿಯಾಗಿ ರಿಸಲ್ಟ್ ಕೊಟ್ಟಿಲ್ಲ. ಸ್ಕಾಲರ್ ಶಿಪ್ ಬರ್ತಾಯಿಲ್ಲ, ಇದರಿಂದ ಬಹುತೇಕ ವಿದ್ಯಾರ್ಥಿಗಳು ಡ್ರಾಪ್ ಔಟ್ ಆಗ್ತಿದ್ದಾರೆ. ಖಾಸಗಿ ಕಾಲೇಜುಗಳಲ್ಲಿ ಫೀಸ್ ಕೂಡ ಜಾಸ್ತಿ ಮಾಡ್ತಿದ್ದಾರೆ. ಬೇರೆ ಕಡೆ ಗ್ರಾಮೀಣ ಭಾಗದಲ್ಲಿ ಬಸ್ ಸೌಲಭ್ಯ ಕೂಡ ವಿದ್ಯಾರ್ಥಿಗಳಿಗೆ ಸರಿ ಇಲ್ಲ, ಹೀಗಾದ್ರೆ ಬಡವರು ಹಿಂದುಳಿದ ಮಕ್ಕಳು ಓದೋದು ಹೇಗೆ ಅಂತ NSUI ಅಧ್ಯಕ್ಷ ಕೀರ್ತಿ ಗಣೇಶ್ (Keerti Ganesh, NSUI President) ಪ್ರಶ್ನೆ ಮಾಡಿದರು.


ಇದನ್ನೂ ಓದಿ: Mandous Cyclone Effect: ಮಕ್ಕಳಲ್ಲಿಯೂ ಉಸಿರಾಟದ ತೊಂದರೆ; ರೋಗಿಗಳ ಸಂಖ್ಯೆಯಲ್ಲಿ ದಿಢೀರ್ ಹೆಚ್ಚಳ


ಇವತ್ತು ನಮ್ಮ ಬೇಡಿಕೆಯ ಈಡೇರಿಕೆಗೆ ಪ್ರತಿಭಟನೆ ಮಾಡ್ತಿದ್ದೇವೆ.  ಸೋಮವಾರ ಗವರ್ನರ್ ಭೇಟಿ ಮಾಡಿ ಮೆಮೋರೆಂಡಂ ಸಲ್ಲಿಕೆ ಮಾಡ್ತೀವಿ ಎಂದು ಕೀರ್ತಿ ಗಣೇಶ್ ಹೇಳಿದರು.

First published: