ನರೇಗಾ ಯೋಜನೆ ಮೂಲಕ ದೊಡ್ಡಬಳ್ಳಾಪುರದ ಸಾವಿರಾರು ಜನರಿಗೆ ಉದ್ಯೋಗ

NREGA Scheme Jobs: ನರೇಗಾ ಯೋಜನೆಯಲ್ಲಿ ಸಾಂಪ್ರದಾಯಿಕ ಜಲ ಮೂಲಗಳ ಸಂರಕ್ಷಣೆ ಹೆಚ್ಚು ಆದ್ಯತೆ  ನೀಡಲಾಗಿದೆ. ಸಣ್ಣ ಕೆರೆ, ಗೋ ಕಟ್ಟೆ, ಕೃಷಿ ಹೊಂಡ,  ಕಲ್ಯಾಣಿ ನಿರ್ಮಾಣ ಕಾಮಗಾರಿಗೆ ಹೆಚ್ಚು ಒತ್ತು ನೀಡಲಾಯಿತು. ಮುಂಗಾರು ಪೂರ್ವದಲ್ಲಿಯೇ ಕಾಮಗಾರಿ ಆರಂಭವಾದ್ದರಿಂದ ಉತ್ತಮ ಮಳೆಯಿಂದ ಕೆರೆ ಕುಂಟೆಗಳಿಗೆ ನೀರು ಬಂದಿದೆ.

news18-kannada
Updated:August 14, 2020, 11:22 AM IST
ನರೇಗಾ ಯೋಜನೆ ಮೂಲಕ ದೊಡ್ಡಬಳ್ಳಾಪುರದ ಸಾವಿರಾರು ಜನರಿಗೆ ಉದ್ಯೋಗ
NREGA Scheme Jobs: ನರೇಗಾ ಯೋಜನೆಯಲ್ಲಿ ಸಾಂಪ್ರದಾಯಿಕ ಜಲ ಮೂಲಗಳ ಸಂರಕ್ಷಣೆ ಹೆಚ್ಚು ಆದ್ಯತೆ  ನೀಡಲಾಗಿದೆ. ಸಣ್ಣ ಕೆರೆ, ಗೋ ಕಟ್ಟೆ, ಕೃಷಿ ಹೊಂಡ,  ಕಲ್ಯಾಣಿ ನಿರ್ಮಾಣ ಕಾಮಗಾರಿಗೆ ಹೆಚ್ಚು ಒತ್ತು ನೀಡಲಾಯಿತು. ಮುಂಗಾರು ಪೂರ್ವದಲ್ಲಿಯೇ ಕಾಮಗಾರಿ ಆರಂಭವಾದ್ದರಿಂದ ಉತ್ತಮ ಮಳೆಯಿಂದ ಕೆರೆ ಕುಂಟೆಗಳಿಗೆ ನೀರು ಬಂದಿದೆ.
  • Share this:
ದೊಡ್ಡಬಳ್ಳಾಪುರ: ಕೊರೋನಾ ಸಮಯದಲ್ಲಿ ಕೆಲಸವಿಲ್ಲದೆ ಕೈಕಟ್ಟಿ ಕುಳಿತಿದ್ದ ಜನರಿಗೆ ಕೈ ತುಂಬ ಕೆಲಸ ಕೊಟ್ಟಿದ್ದು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಯೋಜನೆ (ನರೇಗಾ). ಈ ಯೋಜನೆಯನ್ನು ಸಮರ್ಪಕವಾಗಿ  ಬಳಸಿಕೊಂಡು 8 ಲಕ್ಷ ಮಾನವ ದಿನಗಳ ಕೆಲಸವನ್ನು ಜಿಲ್ಲೆಯ ಜನರಿಗೆ ಕೊಟ್ಟಿದೆ ಎಂದು ಸಿ‌ಇಓ‌ ನಾಗರಾಜ್ ನ್ಯೂಸ್18 ಜೊತೆ ಸಂತಸ ಹಂಚಿಕೊಂಡಿದ್ದಾರೆ.

ಕೋವಿಡ್  ಹಿನ್ನೆಲೆ ಕೆಲಸ ಕಳೆದುಕೊಂಡ ಕಾರ್ಮಿಕರು ನಗರ ಪ್ರದೇಶದಿಂದ ಹಳ್ಳಿಗಳಿಗೆ  ವಲಸೆ ಬಂದಿದ್ದರು. ಗ್ರಾಮೀಣ  ಭಾಗದಲ್ಲೂ ಕೆಲಸವಿಲ್ಲದೆ ಇದ್ದವರಿಗೆ ನೆರವಾಗಿ ಕಂಡಿದ್ದು ನರೇಗಾ ಯೋಜನೆ. ಇದರಿಂದ ಗ್ರಾಮೀಣ ಭಾಗದಲ್ಲಿ ನರೇಗಾ ಯೋಜನೆಗೆ ಹೆಚ್ಚು ಬೇಡಿಕೆ ಬಂದಿದೆ. ಪ್ರಮುಖವಾಗಿ ನರೇಗಾ ಯೋಜನೆಯಲ್ಲಿ ಸಾಂಪ್ರದಾಯಿಕ ಜಲ ಮೂಲಗಳ ಸಂರಕ್ಷಣೆ ಹೆಚ್ಚು ಆದ್ಯತೆ  ನೀಡಲಾಗಿದೆ. ಸಣ್ಣ ಕೆರೆ, ಗೋ ಕಟ್ಟೆ, ಕೃಷಿ ಹೊಂಡ,  ಕಲ್ಯಾಣಿ ನಿರ್ಮಾಣ ಕಾಮಗಾರಿಗೆ ಹೆಚ್ಚು ಒತ್ತು ನೀಡಲಾಯಿತು. ಮುಂಗಾರು ಪೂರ್ವದಲ್ಲಿಯೇ ಕಾಮಗಾರಿ ಆರಂಭವಾದ್ದರಿಂದ ಈ ಉತ್ತಮ ಮಳೆಯಿಂದ ಕೆರೆ ಕುಂಟೆಗಳಿಗೆ ನೀರು ಬಂದಿದೆ. ಈ ಮೂಲಕ ಅಂತರ್ಜಾಲ  ಹೆಚ್ಚಾಗಿದೆ. ಇದಿಷ್ಟೇ ಅಲ್ಲ ಬಡವರಿಗೆ ಮನೆ ಕಟ್ಟಲು ವಸತಿ ಯೋಜನೆಗೆ  90 ಮಾನವ ದಿನಗಳ 24  ಸಾವಿರ ಹಣ ಸಹಾಯಧನ ನೀಡಲಾಗಿದೆ.

ಇದನ್ನೂ ಓದಿ: Karnataka Dam Water Level: ಕರಾವಳಿಯಲ್ಲಿ ಇಂದು ಮಳೆ ಸಾಧ್ಯತೆ; ಕರ್ನಾಟಕದ ಜಲಾಶಯಗಳ ಇಂದಿನ ನೀರಿನ ಮಟ್ಟ ಹೀಗಿದೆ

ಅಂಗನವಾಡಿ  ಕೇಂದ್ರ ನಿರ್ಮಾಣಕ್ಕೆ ಮಹಿಳಾ ಮತ್ತು ಮಕ್ಕಳ  ಕಲ್ಯಾಣ ಇಲಾಖೆಯಷ್ಟೇ  ಹಣವನ್ನು ನರೇಗಾ ಯೋಜನೆಯಲ್ಲಿ ಕೊಡುತ್ತಿದೆ. ಶಾಲಾ ಕಾಂಪೌಂಡ್ ನಿರ್ಮಾಣ,  ಮನರಂಜನೆ ಮತ್ತು ವಿಶ್ರಾಂತಿ ಪಡೆಯಲು ಗ್ರಾಮೀಣ ಉದ್ಯಾನವನ, ಕೃಷಿ  ಚಟುವಟಿಕೆಯಲ್ಲಿ ಕೃಷಿ ಹೊಂಡ, ಅರಣ್ಯೀಕರಣಕ್ಕೆ ಹಣ ಸಹಾಯ ಮಾಡುತ್ತಿದೆ. ಈ ವರ್ಷ ಬದು ನಿರ್ಮಾಣ ಮಾಸ ಆಚರಿಸಿದ್ದು, ಮಳೆಗಾಲಕ್ಕೂ ಪೂರ್ವದಲ್ಲಿ ರೈತರ ಹೊಲಗಳಲ್ಲಿ ಬದು ನಿರ್ಮಾಣ ಮಾಡಲು ಮತ್ತು ಬದುವಿನ ಮೇಲೆ ಗಿಡ ನೆಡಲು ಸಹ ಧನ ಸಹಾಯ ಮಾಡಿದೆ. ಈ ವರ್ಷ ಒಕ್ಕಣೆ ಕಣ ನಿರ್ಮಾಣ ಮಾಡುವ ಮೂಲಕ ರೈತರಿಗೆ ನೆರವಾಗಿದೆ. ಈ ಹಿಂದೆ ರಸ್ತೆಗಳ ಮೇಲೆ ಕಣ ಮಾಡುತ್ತಿದ್ದ ರೈತರು ಈ ವರ್ಷದಿಂದ ನರೇಗಾ ಯೋಜನೆಯಲ್ಲಿ ಸಿದ್ಧವಾದ ಒಕ್ಕಣೆ ಕಣ ಬಳಸಬಹುದಾಗಿದೆ.

ಇದನ್ನೂ ಓದಿ: Karnataka Rain: ಕರ್ನಾಟಕದಲ್ಲಿ ಇಂದು ಗುಡುಗು ಸಹಿತ ಭಾರೀ ಮಳೆ; ಹವಾಮಾನ ಇಲಾಖೆ ಮುನ್ಸೂಚನೆ

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಈ ವರ್ಷ 11 ಲಕ್ಷ ಮಾನವ ದಿನ ಗುರಿ ಇದ್ದು, ಈಗಾಗಲೇ  8 ಲಕ್ಷ  ಮಾನವ ದಿನಗಳ ಬಳಕೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ  ಮತ್ತಷ್ಟು ಮಾನವ ದಿನ ಪಡೆದು ಗ್ರಾಮೀಣ ಕುಟುಂಬ ಅಭಿವೃದ್ಧಿಗೆ ನೆರವಾಗಲಿದೆ.  ಜಿಲ್ಲೆಯಲ್ಲಿ ಒಟ್ಟು 1,83,709 ಕುಟುಂಬ ಇದ್ದು, ಇದರಲ್ಲಿ 36,370 ಪರಿಶಿಷ್ಟ ಜಾತಿ ಕುಟುಂಬ ಮತ್ತು 9,244 ಪರಿಶಿಷ್ಟ ಪಂಗಡ ಕುಟುಂಬ ಇದೆ. ನರೇಗಾ ಯೋಜನೆಯಲ್ಲಿ ಒಟ್ಟು 5,38,000 ಮಾನವ ದಿನಗಳ ಗುರಿ ಹೊಂದಿದ್ದು, 7,86,015 ಮಾನವ ದಿನಗಳ ಸಾಧನೆ ಮಾಡಲಾಗಿದೆ. ಈ ಮೂಲಕ ಶೇ. 146ರಷ್ಟು ನರೇಗಾ ಯೋಜನೆ ಬೆಂಗಳೂರು  ಗ್ರಾಮಾಂತರ ಜಿಲ್ಲೆಯ ಜನರು ಬಳಸಿಕೊಂಡಿದ್ದಾರೆ.  ಕೊರೊನಾ ಸಮಯದಲ್ಲಿ ನರೇಗಾ ಯೋಜನೆ ಜಿಲ್ಲೆಯ ಜನರ ಕೈ ಹಿಡಿದಿದೆ.
ದೊಡ್ಡಬಳ್ಳಾಪುರ ಜಿಲ್ಲೆಯಲ್ಲಿ ನರೇಗಾ ಯೋಜನೆಯಲ್ಲಿ ಒಟ್ಟು 5,536 ಕಾಮಗಾರಿ  ನಡೆದಿದ್ದು 1,446 ಬದು ನಿರ್ಮಾಣ, 419 ಕಿಚನ್ ಗಾರ್ಡನ್,  499 ಕೃಷಿ ಹೊಂಡ,  1,652 ಸೋಕ್ ಫಿಟ್, 67 ಮಳೆ ನೀರು ಕೊಯ್ಲು, 145 ಗೋಕಟ್ಟೆ, 26 ಕೆರೆ ಅಭಿವೃದ್ಧಿ, 85  ರಾಜ ಕಾಲುವೆ ಪುನಶ್ಚೇತನ, 9 ಉದ್ಯಾನವನ, 2 ಗೋದಾಮು, 2 ಸ್ತ್ರೀಶಕ್ತಿ ಭವನ, 28 ಸ್ಮಶಾನ  ಅಭಿವೃದ್ಧಿ, 8 ತೆರೆದ ಬಾವಿ, 111 ನೀರಿನ ತೊಟ್ಟಿ, 28 ಇಂಗು ಗುಂಡಿ, 32  ಶಾಲಾ ಕೌಂಪೌಂಡ್,  921 ದನದ ಕೊಟ್ಟಿಗೆ  ಹೀಗೆ ಹಲವು ಕಾಮಗಾರಿಗಳು ನರೇಗಾ ಯೋಜನೆಯಲ್ಲಿ ಪೂರ್ಣಗೊಂಡಿದೆ ಎಂದು ನ್ಯೂಸ್18 ಕನ್ನಡದ ಜೊತೆ ಅಭಿಪ್ರಾಯ ಹಂಚಿಕೊಂಡಿದ್ದಾರೆ.
Published by: Sushma Chakre
First published: August 14, 2020, 11:04 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading