ಇನ್ಮುಂದೆ ಬೆಂಗಳೂರಿನಲ್ಲಿ ವಿಳಾಸ ಹುಡುಕುವುದು ಸುಲಭ: ಬಿಬಿಎಂಪಿ ಜನರಿಗಾಗಿ ತಂದಿದೆ ಡಿಜಿ-7 ಆ್ಯಪ್


Updated:March 16, 2018, 6:08 PM IST
ಇನ್ಮುಂದೆ ಬೆಂಗಳೂರಿನಲ್ಲಿ ವಿಳಾಸ ಹುಡುಕುವುದು ಸುಲಭ: ಬಿಬಿಎಂಪಿ ಜನರಿಗಾಗಿ ತಂದಿದೆ ಡಿಜಿ-7 ಆ್ಯಪ್

Updated: March 16, 2018, 6:08 PM IST
ಶ್ಯಾಮ್ ಎಸ್, ನ್ಯೂಸ್ 18 ಕನ್ನಡ

ಬೆಂಗಳೂರು(ಮಾ.16): ಬೆಂಗಳೂರಿನಲ್ಲಿ ಅಡ್ರಸ್ ಹುಡುಕಬೇಕಾದ್ರೆ ತುಂಬಾನೇ ಕಷ್ಟ. ಊರಿನಿಂದ ಬರುವ ಜನ ದಿನಿನಿತ್ಯ ಸಿಲಿಕಾನ್ ಸಿಟಿಯಲ್ಲಿ ಅಡ್ರಸ್ ಕೇಳ್ತಾನೆ ಇರ್ತಾರೆ. ಹೀಗಾಗಿ ಬಿಬಿಎಂಪಿ ಇದಕ್ಕೆ ಬ್ರೇಕ್ ಹಾಕಲು ಹೊಸ ಆ್ಯಪ್ ರಿಲೀಸ್ ಮಾಡಿದೆ.

ದೂರದ ಊರಿನಿಂದ ಬಂದವರಿಗೆ ಬೆಂಗಳೂರಿನಲ್ಲಿ ಜನ ಕಷ್ಟ ಪಡ್ತಾರೆ. ಹೀಗಾಗಿ ಬಿಬಿಎಂಪಿ ಮನೆ ಅಡ್ರಸ್ ಹುಡುಕಾಟ ನಡೆಸಲು ಡಿಜಿ-7 ಎಂಬ ಹೊಸ ಆ್ಯಪ್ ರಿಲೀಸ್ ಮಾಡಿದೆ. ಬೆಂಗಳೂರಿನ ನಗರ ಅಭಿವೃದ್ಧಿ ಸಚಿವ ಕೆ.ಜೆ ಜಾರ್ಜ್ ಹೊಸ ಆ್ಯಪ್‌ಗೆ ನಿನ್ನೆ ಚಾಲನೆ ನೀಡಿದ್ರು. ಇನ್ನು ಆ ಆ್ಯಪ್‌ನಲ್ಲಿ ನಗರದ 19 ಲಕ್ಷ ಆಸ್ತಿಗಳಿಗೆ ಒಂದೊಂದು ಡಿಜಿಟಲ್ ನಂಬರ್ ನೀಡಲಾಗ್ತಿದೆ. ಈ ನಂಬರ್ ಅನ್ನು ಜಿಪಿಎಸ್ ಮ್ಯಾಪ್‌ಗೆ ಲಿಂಕ್ ಮಾಡಲಾಗಿದ್ದು, ಈ ನಂಬರನ್ನ ಪಾಲಿಕೆಯೇ ನಗರದಲ್ಲಿ ಎಲ್ಲಾ ಆಸ್ತಿಗಳಿಗೆ ಅಳವಡಿಸಲಿದೆ. ಇದರ ಜೊತೆಯಲ್ಲಿ ಮನೆ ಮಾಲೀಕರು ಈ ಆ್ಯಪ್ ಡೌನ್ ಲೋಡ್ ಮಾಡಿಕೊಂಡು ಆಸ್ತಿಗಳಿಗೆ ನೀಡಿದ ಮೊಬೈಲ್ ನಂಬರ್ ನೀಡಿ ರಿಜಿಸ್ಟರ್ ಮಾಡಿಕೊಂಡ್ರೆ ಸಾಕು. ನಿಮ್ಮ ಮನೆ ಅಥವಾ ಆಸ್ತಿಯ ಡಿಜಿಟಲ್ ನಂಬರ್ ಆಪ್‌ನಲ್ಲಿ ಸಿಗಲಿದೆ. ಪಾಲಿಕೆ ಕಾಲ್ ಸೆಂಟರ್, ವೆಬ್ ಸೈಟ್ ಮೂಲಕವೂ ಮನೆ ಡಿಜಿಟಲ್ ನಂಬರ್ ದೊರೆಯಲಿದೆ.

ಒಟ್ನಲ್ಲಿ ಹೊಸ ಆ್ಯಪ್ ಎಷ್ಟರ ಮಟ್ಟಿಗೆ ಸಕ್ಸಸ್‌ ಆಗುತ್ತೆ, ಜನ ಹೇಗೆ ಬಳಸಿಕೊಳ್ಳುತ್ತಾರೆ ಕಾದುನೋಡಬೇಕು
First published:March 16, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...