Namma Metro: ಇನ್ಮುಂದೆ ನಿಮ್ಮ ಮೊಬೈಲ್​ನಲ್ಲೇ ಮೆಟ್ರೋ ಟ್ರೈನ್ ಟ್ರ್ಯಾಕ್ ಮಾಡಿ; ಹೇಗೆ ಗೊತ್ತಾ?

ನಮ್ಮ ಮೊಬೈಲ್ ಫೋನ್‌ನಲ್ಲೇ ಮೆಟ್ರೋ ರೈಲಿನ ರಿಯಲ್ ಟೈಮ್ ಸಂಚಾರದ ಮಾಹಿತಿ ಪಡೆಯಬಹುದಾಗಿದೆ. ಗೂಗಲ್ ಮ್ಯಾಪ್ಸ್‌ನಲ್ಲಿ ಈ ಹೊಸ ಫೀಚರ್ ಲಭ್ಯವಿರಲಿದೆ.

ನಮ್ಮ ಮೆಟ್ರೋ

ನಮ್ಮ ಮೆಟ್ರೋ

  • Share this:
ಬೆಂಗಳೂರು (ಜೂ​ 23): ನಮ್ಮ ಮೆಟ್ರೋ (Namma Metro) ಪ್ರಯಾಣಿಕರಿಗೆ ಗುಡ್​ ನ್ಯೂಸ್​, ಒಲಾ, ಊಬರ್, ಸ್ವಿಗ್ಗಿ, ಜೊಮಾಟೊ ಇತ್ಯಾದಿ ಅಪ್ಲಿಕೇಶನ್‌ಗಳಲ್ಲಿ ನೀವು ರಿಯಲ್ ಟೈಮ್‌ನಲ್ಲಿ (Real Time) ವಾಹನಗಳನ್ನು ಟ್ರ್ಯಾಕ್ ಮಾಡುವ ರೀತಿಯಲ್ಲೇ ಮೆಟ್ರೋ ರೈಲುಗಳ (Train) ಓಡಾಟವನ್ನು ಮೊಬೈಲ್‌ನಲ್ಲಿ ನೋಡಬಹುದಾಗಿದೆ. ಬೆಂಗಳೂರಿನ ಟ್ರಾಫಿಕ್ (Traffic)​ ನಡುವೆ ನಿಗದಿತ ಸಮಯಕ್ಕೆ ಅಂದುಕೊಂಡ ಸ್ಥಳಕ್ಕೆ ತಲುಪೋದು ದೊಡ್ಡ ಹರಸಾಹಸವೇ ಸರಿ. ಟ್ರಾಫಿಕ್​ ಕಿರಿಕಿರಿ ತಪ್ಪಿಸಿರುವ ನಮ್ಮ ಮೆಟ್ರೋ ಇದೀಗ ಸಿಲಿಕಾನ್​ ಸಿಟಿ ಜನರ ಅಚ್ಚುಮೆಚ್ಚಾಗಿದೆ. ಇದೀಗ ಜನರು ಓಡಾಡಲು ಹೆಚ್ಚಾಗಿ ಮೆಟ್ರೋ ರೈಲುಗಳನ್ನೇ ಬಳಸುತ್ತಿದ್ದಾರೆ. ಕೆಲಸಕ್ಕೆ ಟೈಮ್​ ಆಗಿದೆ ಎಂದು ಓಡೋಡಿ ಮೆಟ್ರೋ ನಿಲ್ದಾಣ ತಲುಪುವವರಿಗೆ ಅದೆಷ್ಟೋ ಬಾರಿ ಸೆಕೆಂಡ್​ಗಳ ಅಂತರದಲ್ಲಿ ಟ್ರೈನ್ ಮಿಸ್​  ಆಗಿರುತ್ತೆ.  ಇನ್ಮುಂದೆ ಅಯ್ಯೋ ಟ್ರೈನ್​ ಮಿಸ್​ ಆಯ್ತು ಎಂದು ಬೇಸರ ಮಾಡಿಕೊಳ್ಳುವ ಅವಶ್ಯಕತೆ ಇಲ್ಲ. ಮೆಟ್ರೋ ರೈಲುಗಳ ಓಡಾಟವನ್ನು ಮೊಬೈಲ್‌ನಲ್ಲಿ ನೋಡಬಹುದಾಗಿದೆ. ಗೂಗಲ್ ಮ್ಯಾಪ್ಸ್‌ನಲ್ಲಿ ಈ ಹೊಸ ಫೀಚರ್ (New Feature) ಲಭ್ಯವಿರಲಿದೆ.

ಗೂಗಲ್ ಮ್ಯಾಪ್ಸ್‌ನಲ್ಲಿ ಹೊಸ ಫೀಚರ್

ಮೆಟ್ರೋ ರೈಲುಗಳಲ್ಲಿ ಓಡಾಡುವ ಬೆಂಗಳೂರಿಗರಿಗೆ ಖುಷಿಯ ಸುದ್ದಿ. ನಿಮ್ಮ ಮೊಬೈಲ್ ಫೋನ್‌ನಲ್ಲೇ ಮೆಟ್ರೋ ರೈಲಿನ ರಿಯಲ್ ಟೈಮ್ ಸಂಚಾರದ ಮಾಹಿತಿ ಪಡೆಯಬಹುದಾಗಿದೆ. ಗೂಗಲ್ ಮ್ಯಾಪ್ಸ್‌ನಲ್ಲಿ ಈ ಹೊಸ ಫೀಚರ್ ಲಭ್ಯವಿರಲಿದೆ. ಈ ಸಂಬಂಧ ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ BMRCL ನಿನ್ನೆ ಬುಧವಾರ ಗೂಗಲ್ ಸಂಸ್ಥೆಯೊಂದಿಗೆ ಈ ಒಪ್ಪಂದಕ್ಕೆ ಸಹಿ ಹಾಕಿದೆ.

ಗೂಗಲ್ ಮ್ಯಾಪ್ಸ್‌ನಲ್ಲಿ ರಿಯಲ್ ಟೈಮ್ ಮಾಹಿತಿ

ಮೆಟ್ರೋ ನಿಲ್ದಾಣಗಳಲ್ಲಿ ರೈಲುಗಳ ಸಂಚಾರದ ಎಲ್ಲಾ ಮಾಹಿತಿಯನ್ನೂ ನಾವು ಗೂಗಲ್‌ಗೆ ಒದಗಿಸುತ್ತೇವೆ. ಇದನ್ನು ಬಳಸಿಕೊಂಡು ಗೂಗಲ್ ಮ್ಯಾಪ್ಸ್‌ನಲ್ಲಿ ರಿಯಲ್-ಟೈಮ್ ಮಾಹಿತಿಯನ್ನು ನೀಡಬಹುದು. ನಿರ್ದಿಷ್ಟ ಮೆಟ್ರೋ ನಿಲ್ದಾಣದಲ್ಲಿ ಯಾವ ಟ್ರೈನ್​ ಯಾವ ಸಮಯಕ್ಕೆ ತಲುಪುತ್ತದೆ ಎಂಬುದನ್ನು ಜನರು ನೋಡಬಹುದು ಎಂದು ಬಿಎಂಆರ್‌ಸಿಎಲ್ ನಿರ್ವಾಹಕ ನಿರ್ದೇಶಕ ಅಂಜುಮ್ ಪರ್ವೇಜ್ ಹೇಳುತ್ತಾರೆ.

ಇದನ್ನೂ ಓದಿ: BMRCL: ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್​ ನ್ಯೂಸ್​, ಸೈಕಲ್​ ಕೊಂಡೊಯ್ಯಲು ಸಿಕ್ಕಿದೆ ಪರ್ಮಿಷನ್​

ಸೋಷಿಯಲ್ ಮೀಡಿಯಾದಲ್ಲಿ ಜನರ ಮೆಚ್ಚುಗೆ

ಸಾಮಾಜಿಕ ಜಾಲತಾಣದಲ್ಲಿ ಹೊಸ ಫೀಚರ್​ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. BMRCLಗೆ ಕೆಲ ಸಲಹೆಗಳನ್ನು ಸಹ ನೀಡುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಈ ಹೊಸ ಫೀಚರ್ ಅನ್ನು ಜನರು ಸ್ವಾಗತಿಸಿದ್ದಾರೆ. ಕೆಲವರು ಫೀಚರ್ ಉತ್ತಮಪಡಿಸಲು ಒಂದಷ್ಟು ಸಲಹೆಗಳನ್ನೂ ನೀಡಿದ್ದಾರೆ. ಪ್ರತಿಯೊಂದು ರೈಲ್ವೆ ನಿಲ್ದಾಣದಲ್ಲೂ ಮುಂದಿನ ಒಂದು ಗಂಟೆಯ ಅವಧಿಯಲ್ಲಿ ಯಾವ್ಯಾವ ಟ್ರೈನ್​ಗಳು ಹೊರಡುತ್ತವೆ ಎಂಬ ಮಾಹಿತಿ ಸೇರಿಸಿ ಎಂದು ಟ್ವಿಟ್ಟರ್‌ನಲ್ಲಿ ಒಬ್ಬರು ಸಲಹೆ ನೀಡಿದ್ದಾರೆ. ಗೂಗಲ್ ಮ್ಯಾಪ್ಸ್‌ನ ಅಧಿಕೃತ ಟ್ವಿಟ್ಟರ್ ಖಾತೆ ಈ ಟ್ವೀಟ್‌ಗೆ ಸ್ಪಂದಿಸಿ, ಆ ಸಲಹೆಯನ್ನು ಸ್ವೀಕರಿಸಿದೆ.

ಬಿಎಂಟಿಸಿ ಬಸ್ಸುಗಳಲ್ಲಿ ವ್ಯವಸ್ಥೆ ತನ್ನಿ

ಬೆಂಗಳೂರಿನಲ್ಲಿ ಮೆಟ್ರೋ ರೈಲುಗಳು 5 ನಿಮಿಷಕ್ಕೊಮ್ಮೆ ಬಂದು ಹೋಗುತ್ತವೆ. ಸ್ಟೇಷನ್‌ನಲ್ಲಿ ಯಾರೂ ಹೆಚ್ಚು ಹೊತ್ತು ಕಾಯಬೇಕಾಗುವುದಿಲ್ಲ. ಈ ರೈಲುಗಳ ಟೈಮಿಂಗ್ಸ್‌ನ ರಿಯಲ್ ಟೈಮ್ ಮಾಹಿತಿ ಹೆಚ್ಚು ಅವಶ್ಯಕತೆ ಇಲ್ಲ. ಬದಲಾಗಿ ಬಿಎಂಟಿಸಿ ಬಸ್ಸುಗಳ ರಿಯಲ್ ಟೈಮ್ ಡೇಟಾ ಒದಗಿಸಿ ಎಂದು ಸೋಷಿಯಲ್ ಮೀಡಿಯಾದಲ್ಲಿ ಸಲಹೆಗಳು ವ್ಯಕ್ತವಾಗಿವೆ.

ಇದನ್ನೂ ಓದಿ: Namma Metro: ಮೊದಲ ಬಾರಿಗೆ ಇನ್ಫೋಸಿಸ್ ಮೆಟ್ರೋ ನಿಲ್ದಾಣಕ್ಕೆ ಸಿಗಲಿದೆ ಗ್ರೀನ್ ಟ್ಯಾಗ್

ಬಿಎಂಟಿಸಿ ವೆಬ್‌ಸೈಟ್, ಆ್ಯಪ್‌ಗಳಲ್ಲಿ ಬಸ್ಸುಗಳ ಸಂಚಾರದ ಟೈಮಿಂಗ್ ಸಿಗುತ್ತದೆ. ಆದರೆ, ರಿಯಲ್ ಟೈಮ್ ಮಾಹಿತಿ ಲಭ್ಯ ಇಲ್ಲ. ವಾಯು, ವಜ್ರ ಇತ್ಯಾದಿ ಬಿಎಂಟಿಸಿ ಬಸ್ಸುಗಳ ವೇಳಾಪಟ್ಟಿಯನ್ನು ಗೂಗಲ್‌ಗೆ ಒದಗಿಸಲಾಗುತ್ತದೆ. ಗೂಗಲ್ ಮ್ಯಾಪ್ಸ್‌ನಲ್ಲಿ ಈ ಡಾಟಾ ಆಧಾರವಾಗಿ ಯಾವ್ಯಾವ ಬಸ್ಸುಗಳು ನಿರ್ದಿಷ್ಟ ಮಾರ್ಗದಲ್ಲಿ ಸಂಚರಿಸುತ್ತವೆ ಎಂಬುದನ್ನು ನೋಡಬಹುದು.
Published by:Pavana HS
First published: