Siddaramaiah: ಸಿದ್ದರಾಮಯ್ಯ ವಯಸ್ಸು 73, 74 ಅಥವಾ 75? ಸಾಮಾಜಿಕ ಮಾಧ್ಯಮಗಳಲ್ಲೀಗ ಹೊಸ ಚರ್ಚೆ!

ಸಿದ್ದರಾಮಯ್ಯ ಅವರ ನಿಜವಾದ ವಯಸ್ಸು ಎಷ್ಟು ಎನ್ನುವ ಬಗ್ಗೆ ಈಗ ರಾಜ್ಯದಲ್ಲಿ ಭಾರೀ ಚರ್ಚೆಯಾಗುತ್ತಿದೆ. ಅವರ ಅಭಿಮಾನಿಗಳು, ಬೆಂಬಲಿಗರು, ಕಾಂಗ್ರೆಸ್ ನಾಯಕರು, ಕಾರ್ಯಕರ್ತರೆಲ್ಲ ಅವರ ವಯಸ್ಸು 75 ಅಂತ ಅಮೃತ ಮಹೋತ್ಸವವನ್ನೂ ಆಚರಿಸಿದ್ದಾರೆ. ಆದರೆ ದಾಖಲೆಗಳು ಅವರ ವಯಸ್ಸು ಬೇರೆಯದ್ದೇ ಅಂತಿದೆ!

ಸಿದ್ದರಾಮಯ್ಯ ಸಂಗ್ರಹ ಚಿತ್ರ

ಸಿದ್ದರಾಮಯ್ಯ ಸಂಗ್ರಹ ಚಿತ್ರ

  • Share this:
ಬೆಂಗಳೂರು: ರಾಜ್ಯದ ಹಿರಿಯ ರಾಜಕಾರಣಿ (Senior Politician), ಮಾಜಿ ಸಿಎಂ (Ex CM), ಹಾಲಿ ವಿಪಕ್ಷ ನಾಯಕ (Opposition Party Leader) ಸಿದ್ದರಾಮಯ್ಯ (Siddaramaiah) ಅವರ 75ನೇ ವರ್ಷದ ಹುಟ್ಟುಹಬ್ಬ (Birthday) ಅದ್ಧೂರಿಯಾಗಿ ಮುಗಿದಿದೆ. ಸಿದ್ದರಾಮಯ್ಯ ಅಭಿಮಾನಿಗಳು, ಕಾಂಗ್ರೆಸ್ ನಾಯಕರು, ಕಾರ್ಯಕರ್ತರೆಲ್ಲ ಸೇರಿ ನ ಭೂತೋ ನ ಭವಿಷ್ಯತಿ ಎನ್ನುವಂತೆ ಸಿದ್ದರಾಮಯ್ಯ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ. ದಾವಣಗೆರೆಯಲ್ಲಿ ಸಿದ್ದರಾಮೋತ್ಸವ (Siddramotsava) ಹೆಸರಲ್ಲಿ ಹುಟ್ಟುಹಬ್ಬ ನಡೆದಿದ್ದು, ಇದು ಸಿದ್ದರಾಮಯ್ಯ ಶಕ್ತಿ ಪ್ರದರ್ಶನದ ವೇದಿಕೆ ಅಂತಾನೇ ವಿಶ್ಲೇಷಿಸಲಾಗಿದೆ. ಆದರೆ ಸಿದ್ದರಾಮಯ್ಯ ಅವರ ನಿಜವಾದ ವಯಸ್ಸು ಎಷ್ಟು ಎನ್ನುವ ಬಗ್ಗೆ ಈಗ ರಾಜ್ಯದಲ್ಲಿ ಭಾರೀ ಚರ್ಚೆಯಾಗುತ್ತಿದೆ. ಅವರ ಅಭಿಮಾನಿಗಳು, ಬೆಂಬಲಿಗರು, ಕಾಂಗ್ರೆಸ್ ನಾಯಕರು, ಕಾರ್ಯಕರ್ತರೆಲ್ಲ ಅವರ ವಯಸ್ಸು 75 ಅಂತ ಅಮೃತ ಮಹೋತ್ಸವವನ್ನೂ ಆಚರಿಸಿದ್ದಾರೆ. ಆದರೆ ದಾಖಲೆಗಳು ಅವರ ವಯಸ್ಸು ಬೇರೆಯದ್ದೇ ಅಂತಿದೆ. ಹೀಗಾಗಿ ರಾಜ್ಯ ರಾಜಕೀಯ ವಲಯ ಹಾಗೂ ಸಾರ್ವಜನಿಕ ವಲಯದಲ್ಲಿ ಬಿಸಿ ಬಿಸಿ ಚರ್ಚೆ ಆರಂಭವಾಗಿದೆ.

 ಚುನಾವಣಾ ಅಫಿಡವಿಟ್‌ ಪ್ರಕಾರ 73 ವರ್ಷ!

ಸಿದ್ದರಾಮಯ್ಯ ಅವರು ಕಳೆದ ಬಾರಿ ವಿಧಾನಸಭಾ ಚುನಾವಣೆಗೆ ಬಾಗಲಕೋಟೆ ಜಿಲ್ಲೆಯ ಬಾದಾಮಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ, ಜಯಗಳಿಸಿದ್ದರು. ಈ ವೇಳೆ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ನಿಯಮದಂತೆ ಅಫಿಡವಿಟ್ ಸಲ್ಲಿಬೇಕು. ಈ ಅಫಿಡವಿಟ್‌ನಲ್ಲಿ ಸಿದ್ದರಾಮಯ್ಯ ಅವರ ವಯಸ್ಸು 69 ಅಂತ ನಮೂದಿಸಲಾಗಿದೆ. ಅಂದರೆ 2018ರಲ್ಲಿ ಸಿದ್ದರಾಮಯ್ಯ ಅವರ ವಯಸ್ಸು 69 ಎನ್ನಲಾಗಿದೆ. ಹಾಗಾದರೆ ಅದೇ ಲೆಕ್ಕಾಚಾರದ ಪ್ರಕಾರ 2022ಕ್ಕೆ ಅವರ ವಯಸ್ಸು 73 ವರ್ಷಗಳು ಆಗುತ್ತವೆ.

ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಅಫಿಡವಿಟ್


ವಿಧಾನಸಭೆ ವೆಬ್‌ಸೈಟ್ ಮಾಹಿತಿ ಪ್ರಕಾರ 74

ಇನ್ನು ಕರ್ನಾಟಕ ವಿಧಾನಸಭೆ ವೆಬ್‌ಸೈಟ್‌ನಲ್ಲಿ ವಿಧಾನಸಭಾ ಸದಸ್ಯರು ಅಂದರೆ ಶಾಸಕರ ಪರಿಚಯವನ್ನು ಹಾಕಲಾಗಿದೆ. ಇದರ ಪ್ರಕಾರ ಸಿದ್ದರಾಮಯ್ಯ ಅವರ ಜನ್ಮ ದಿನಾಂಕ 12.08.1948, ಅಂದರೆ ಅದರ ಪ್ರಕಾರ 2022ಕ್ಕೆ ಸಿದ್ದರಾಮಯ್ಯ ಅವರ ವಯಸ್ಸು 74.

ಮಾಹಿತಿಗಾಗಿ: https://www.kla.kar.nic.in/assembly/profilecm.htm

 ಅಭಿಮಾನಿಗಳು, ಕಾರ್ಯಕರ್ತರ ಪ್ರಕಾರ 75

ಇನ್ನು ಸಿದ್ದರಾಮಯ್ಯ ಅವರ ಅಭಿಮಾನಿಗಳು, ಪಕ್ಷದ ಕಾರ್ಯಕರ್ತರು, ಅವರ ಆಪ್ತ ಬಣದ ಶಾಸಕರು ಸಿದ್ದರಾಮಯ್ಯ ಅವರ ವಯಸ್ಸು 75. ಈ ಹಿನ್ನೆಲೆಯಲ್ಲಿ ದಾವಣಗೆರೆಯಲ್ಲಿ ಸಿದ್ದರಾಮೋತ್ಸವ ಹೆಸರಲ್ಲಿ ಭರ್ಜರಿ ಹುಟ್ಟುಹಬ್ಬದ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಯೂತ್ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರು ಶುಭಕೋರಿದ್ದು


ಕರ್ನಾಟಕ ವಿಧಾನಸಭೆಗೆ ಅವರು ಮುಖ್ಯಮಂತ್ರಿ ಆಗಿದ್ದಾಗ ಕೊಟ್ಟಿರುವ ಮಾಹಿತಿಯ ಲಿಂಕ್: https://www.kla.kar.nic.in/assembly/profilecm.htm

 ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆ

ಇನ್ನು ಸಿದ್ದರಾಮಯ್ಯ ಅವರ ಹುಟ್ಟಿದ ದಿನಾಂಕದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆ ಶುರುವಾಗಿದೆ. 2018ರಲ್ಲಿ 69 ವರ್ಷ ಆಗಿತ್ತಂತೆ. ಕಳೆದ ವರ್ಷ ಆ.12ರಂದು ಹುಟ್ಟು ಹಬ್ಬ ಆಗಿತ್ತಂತೆ. ಮುಂದಿನ ವರ್ಷ ಚುನಾವಣೆ ಎಂದಾಕ್ಷಣ ಇದ್ದಕ್ಕಿದ್ದಂತೆ 2 ವರ್ಷ ಹೆಚ್ಚಾಗಿದೆ. ಜನರನ್ನು ಈ ರಾಜಕೀಯದವರು ಹೇಗೆಲ್ಲ ಯಾಮಾರಿಸ್ತಾರಪ್ಪಾ... ಅಂತ ಕೆಲವರು ವ್ಯಂಗ್ಯವಾಡಿದ್ದಾರೆ.  ಇದು ಚುನಾವಣೆ ಸಂದರ್ಭದಲ್ಲಿ ಮೈಲೇಜ್ ಹೆಚ್ಚಿಸಿಕೊಳ್ಳುವ ಯತ್ನ ಅಂತ ದೂರಿದ್ದಾರೆ. ಮತ್ತೊಂದೆಡೆ  ಹಿಂದಿನ ಕಾಲದಲ್ಲಿ ನಿಖರವಾಗಿ ಹುಟ್ಟಿದ ದಿನಾಂಕ ಯಾರಿಗೂ ಗೊತ್ತಿರುತ್ತಿರಲಿಲ್ಲ. ಹೀಗಾಗಿ ಸ್ವಲ್ಪ ವ್ಯತ್ಯಾಸ ಆಗಿರಬಹುದು ಅಂತ ಸಿದ್ದು ಬೆಂಬಲಿಗರು ವಾದಿಸುತ್ತಿದ್ದಾರೆ.

ಸಿದ್ದರಾಮೋತ್ಸವದ ವಿರುದ್ಧ ಕಾಂಗ್ರೆಸ್ ಹೈಕಮಾಂಡ್ಗೆ ದೂರು

ಸಿದ್ದರಾಮೋತ್ಸವ ಕಾರ್ಯಕ್ರಮದ ವಿರುದ್ಧ ಕಾಂಗ್ರೆಸ್ ನಾಯಕರೊಬ್ಬರು ದೂರು ನೀಡಿದ್ದಾರೆ ಎನ್ನಲಾಗಿದೆ. ಸಿದ್ದರಾಮೋತ್ಸವ ಸಮಿತಿ ವಿರುದ್ಧ ದೂರು ನೀಡಲಾಗಿದೆ. ಸಿದ್ದರಾಮೋತ್ಸವದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ, ಕಾಂಗ್ರೆಸ್ ಹೈಕಮಾಂಡ್‌ಗೆ ದೂರು ನೀಡಿದ್ದಾರೆ ಅಂತ ಟಿವಿ9 ವರದಿ ಮಾಡಿದೆ.

ಇದನ್ನೂ ಓದಿ: DK Shivakumar: ಸಿದ್ದರಾಮೋತ್ಸವಕ್ಕೆ ಸೆಡ್ಡು ಹೊಡೆಯಲು ಕಾಂಗ್ರೆಸ್‌ನಲ್ಲೇ ಪ್ಲಾನ್! ಶಕ್ತಿ ಪ್ರದರ್ಶನಕ್ಕೆ ಮುಂದಾದ್ರಾ ಡಿಕೆಶಿ?

ಬೃಹತ್ ರ್ಯಾಲಿ ನಡೆಸಲು ಡಿಕೆಶಿ ಪ್ಲಾನ್?

ಸಿದ್ದರಾಮೋತ್ಸವಕ್ಕೆ ಸೆಡ್ಡು ಹೊಡೆದು ಶಕ್ತಿ ಪ್ರದರ್ಶನ ಮಾಡಲು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಪ್ಲಾನ್ ಮಾಡಿದ್ದಾರೆ ಎನ್ನಲಾಗುತ್ತಿದೆ. ಇನ್ನು ಕೆಲವೇ ದಿನಗಳಲ್ಲಿ ರಾಜ್ಯ ರಾಜಧಾನಿ ಬೆಂಗಳೂರಲ್ಲಿ ಬೃಹತ್ ರ್ಯಾಲಿ ನಡೆಸಲು ಡಿಕೆ ಶಿವಕುಮಾರ್ ಯೋಜನೆ ರೂಪಿಸುತ್ತಿದ್ದಾರೆ ಅಂತ ಮೂಲಗಳು ತಿಳಿಸಿವೆ.
Published by:Annappa Achari
First published: