Dating Coaches: ನಿಮಗೆ ಸೂಕ್ತವಾದ ಸಂಗಾತಿ ಹುಡುಕಾಡಲು ಕಷ್ಟವಾಗಿದ್ಯಾ? ಹಾಗಿದ್ರೆ ಇವರು ನಿಮ್ಮ ಸಹಾಯಕ್ಕಿದ್ದಾರೆ

ಹಿಂದೊಮ್ಮೆ ಪಿಂಚಣಿದಾರರ ಸ್ವರ್ಗ ಎಂದು ಕರೆಸಿಕೊಳ್ಳುತ್ತಿದ್ದ ಬೆಂಗಳೂರು ಈಗ ಆ ನಾಮಾವಳಿ ಜೊತೆ ಇನ್ನು ಹತ್ತು ಹಲವು ಇತರೆ ನಾಮಾವಳಿಗಳನ್ನೂ ಪಡೆದುಕೊಂಡಿದೆ. ದೇಶದ ಐಟಿ ಸಂಸ್ಕೃತಿಯ ಪ್ರತೀಕವಾಗಿರುವ ಬೆಂಗಳೂರು ತಂತ್ರಜ್ಞಾನದಲ್ಲಿ ಅಪಾರ ಪ್ರಗತಿ ಸಾಧಿಸಿದ್ದಲ್ಲದೆ ಡಿಜಿಟಲ್ ಯುಗದ ಯುವ ಸಮುದಾಯದವರ ಅತ್ಯಂತ ಫೆವರೆಟ್ ತಾಣವಾಗಿಯೂ ಹೊರಹೊಮ್ಮಿದೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಹಿಂದೊಮ್ಮೆ ಪಿಂಚಣಿದಾರರ ಸ್ವರ್ಗ ಎಂದು ಕರೆಸಿಕೊಳ್ಳುತ್ತಿದ್ದ ಬೆಂಗಳೂರು (Bengaluru) ಈಗ ಆ ನಾಮಾವಳಿ ಜೊತೆ ಇನ್ನು ಹತ್ತು ಹಲವು ಇತರೆ ನಾಮಾವಳಿಗಳನ್ನೂ ಪಡೆದುಕೊಂಡಿದೆ. ದೇಶದ ಐಟಿ ಸಂಸ್ಕೃತಿಯ ಪ್ರತೀಕವಾಗಿರುವ ಬೆಂಗಳೂರು ತಂತ್ರಜ್ಞಾನದಲ್ಲಿ (Technology) ಅಪಾರ ಪ್ರಗತಿ ಸಾಧಿಸಿದ್ದಲ್ಲದೆ ಡಿಜಿಟಲ್ ಯುಗದ ಯುವ ಸಮುದಾಯದವರ ಅತ್ಯಂತ ಫೆವರೆಟ್ ತಾಣವಾಗಿಯೂ ಹೊರಹೊಮ್ಮಿದೆ. ಅಂತೆಯೇ ಬೆಂಗಳೂರಿನಲ್ಲಿ ಆಧುನಿಕ ಜೀವನಶೈಲಿಯ ಸಂಸ್ಕೃತಿಯಿಂದ ಪ್ರಭಾವಿತರಾಗಿ ಜೀವನ ನಡೆಸುವ ಸಾವಿರಾರು ಯುವ ಸಮುದಾಯದವರನ್ನು ಇಲ್ಲಿ ಕಾಣಬಹುದು. ಆಧುನಿಕ ಸಂಸ್ಕೃತಿ (Modern Culture) ಎಂದರೆ ಸುಮ್ಮನಿರಲಾದಿತೆ. ಇಂದಿನ ಅನೇಕ ಯುವಕರು ಸ್ವಯಂ ಆಗಿಯೇ ತಮ್ಮ ಅಭಿರುಚಿ, ಯೋಚನಾ ಲಹರಿ, ಹವ್ಯಾಸಗಳಿಗೆ ತಕ್ಕಂತೆ ಅನುರೂಪವಾಗಿರುವ ಸಂಗಾತಿಗಳನ್ನೇ ಬಯಸುತ್ತಾರೆ. ಹಾಗಾಗಿ ಅಂತಹ ಯುವಜನತೆಯನ್ನೇ ಗುರಿಯಾಗಿರಿಸಿಕೊಂಡು ಇಂದು ಸಾಕಷ್ಟು ಡೇಟಿಂಗ್ ಆಪ್ ಗಳು ಲಭ್ಯವಿದೆ.

ಸೂಕ್ತವಾದ ಸಂಗಾತಿ ಹುಡುಕಾಡಲು ಡೇಟಿಂಗ್ ಆಪ್ ಗಳು
ಆದಾಗ್ಯೂ, ಬಹಳಷ್ಟು ಯುವಜನರು ಇಂತಹ ಆಪ್ ಗಳಿಂದ ಅಂತಹ ಉತ್ತಮ ಫಲಿತಾಂಶ ಪಡೆಯಲು ಶಕ್ತವಾಗಿಲ್ಲ ಎಂಬ ಅನಿಸಿಕೆ ಉಂಟಾಗಿರುವುದು ಸುಳ್ಳಲ್ಲ. ಬೆಂಗಳೂರಿನಲ್ಲಿ ನೆಲೆಸಿರುವ ರಾಧಿಕಾ ಮೊಹ್ತಾ ಎಂಬುವವರಿಗೆ ಈ ಬಗ್ಗೆ ನಿಧಾನವಾಗಿ ಅರಿವಾಯಿತಂತೆ. ತಮ್ಮ ಅನೇಕ ಸ್ನೇಹಿತರು ಸೂಕ್ತ ಸಂಗಾತಿಯ ಹುಡುಕಾಟದಲ್ಲಿ ಅನುಭಸುತ್ತಿರುವ ಗೋಳು ನೋಡಿ ಅವರಿಗೆ ತಾವೇ ಸ್ವತಃ ಈ ನಿಟ್ಟಿನಲ್ಲಿ ಏನಾದರೂ ಮಾಡಬೇಕೆಂದೆನಿಸಿ ಸದ್ಯ ಅವರು ಮ್ಯಾಚ್ ಮೇಕರ್ ಆಗಿ ಬದಲಾಗಿದ್ದಾರೆ.

ಆನ್ಲೈನ್ ಮೂಲಕ ತರಬೇತಿ ನೀಡುವ ಕಾರ್ಯಕ್ರಮ
ತಮ್ಮಲ್ಲಿ ಹುದುಗಿರುವ ಹೊಂದಾಣಿಕೆ ಮಾಡುವ ಕೌಶಲ್ಯದಿಂದಾಗಿ ರಾಧಿಕಾ ಅವರು ಕಳೆದ ಕೆಲ ತಿಂಗಳುಗಳಲ್ಲಿ 2000ಕ್ಕೂ ಹೆಚ್ಚು ಜನರು ತಮ್ಮ ಅಭಿರುಚಿಗೆ ತಕ್ಕ ಸಂಗಾತಿಯನ್ನು ಪಡೆಯಲು ನೆರವಾಗಿದ್ದಾರೆಂದು ಹೇಳುವ ಅವರು ಅದಕ್ಕಾಗಿ ಆನ್ಲೈನ್ ಮೂಲಕ ತರಬೇತಿ ನೀಡುವ ಕಾರ್ಯಕ್ರಮ ರೂಪಿಸಿದ್ದಾರೆ.

ಈ ಬಗ್ಗೆ  ರಾಧಿಕಾ ಮೊಹ್ತಾ ಏನು ಹೇಳುತ್ತಾರೆ?
ಈ ಸಂದರ್ಭದಲ್ಲಿ ಮಾತನಾಡುವ ಅವರು, "ನನ್ನ ಉದ್ದೇಶ ನನ್ನನ್ನು ನಂಬಿ ಬರುವ ಗ್ರಾಹಕರಿಗೆ ಅವರ ಆಸಕ್ತಿಗೆ ತಕ್ಕ ಹಾಗೆ ನೆರವು ನೀಡುವುದು. ಡೇಟಿಂಗ್ ಎಂಬ ಅನುಭವ ಅವರಿಗೆ ಮತ್ತಷ್ಟು ಅದ್ಭುತವಾಗಿರುವಂತೆ ಮಾಡುವುದು, ಏಕೆಂದರೆ, ನಿಮ್ಮ ಸಂಗಾತಿಯ ಹುಡುಕಾಟದಲ್ಲಿ ನೀವು ಡೇಟಿಂಗ್ ಮಾಡುತ್ತಿದ್ದಾಗ ನೀವು ನಿಮ್ಮ ನಿಜವಾದ ವ್ಯಕ್ತಿತ್ವದ ಬಗ್ಗೆ ಸ್ಪಷ್ಟವಾಗಿ ತಿಳಿಯುವಂತೆ ಮಾಡಬೇಕು.

ಕೇವಲ ಡೇಟಿಂಗ್ ಮಾಡುತ್ತಿರುವೆ ಎಂದು ತಾತ್ಕಾಲಿಕ ಮಟ್ಟದಲ್ಲಿ ನಮ್ಮನ್ನು ನಾವು ತೋರಿಸಿಕೊಳ್ಳುವುದು ಬಹು ಸಮಯದವರೆಗೆ ಉಳಿಯುವುದಿಲ್ಲ. ಹಾಗಾಗಿ ನಿಮ್ಮ ಜೀವನವನ್ನು ಮುಂದಿನ ನಾಲ್ಕೈದು ದಶಕಗಳ ಕಾಲ ಹಂಚಿಕೊಳ್ಳುವ ಸಂಗಾತಿಯ ಅಭಿರುಚಿಗೆ ತಕ್ಕಂತೆ ನಿಮ್ಮ ನೈಜ ವ್ಯಕ್ತಿತ್ವ ಇದ್ದಲ್ಲಿ ಅದು ಜೀವನಪೂರ್ತಿ ಮಧುರವಾಗಿರುತ್ತದೆ" ಎಂದು ಹೇಳುತ್ತಾರೆ.

ತರಬೇತಿಯಲ್ಲಿ ಏನೇನಿದೆ
ರಾಧಿಕಾ ಸದ್ಯ, ತಮ್ಮ ಈ ವಿನೂತನ ವೃತ್ತಿಯ ತರಬೇತಿಗೆ ಸಂಬಂಧಿಸಿದಂತೆ ನಾಲ್ಕು ದಿನಗಳ ಕೋರ್ಸ್ ನೀಡುತ್ತಾರೆ ಹಾಗೂ ಆ ಕೋರ್ಸ್ ಆನ್ಲೈನ್ ಸೆಷನ್, ಚಟುವಟಿಕೆಗಳು, ಸಂವಹನ, ಸಾಮಾಜಿಕವಾಗಿ ಬೆರೆಯುವಿಕೆ ಹಾಗೂ ಭಿನ್ನಾಭಿಪ್ರಾಯ ಹೊಂದಿರುವ ಸಮುದಾಯದವರಲ್ಲೂ ಸಹ ಪ್ರವೇಶಿಸಿ ಅನುಭವ ಪಡೆಯುವಂತಹ ಆಯಾಮಗಳನ್ನು ಹೊಂದಿದೆ.

ಇದನ್ನೂ ಓದಿ: Leave Letter: ಈ ಪತ್ರ ನೋಡಿದ್ರೆ ಗೊತ್ತಾಗುತ್ತೆ ಈ ಉದ್ಯೋಗಿ ಎಷ್ಟು ಪ್ರಾಮಾಣಿಕ ಅಂತ, ನೀವೂ ಒಮ್ಮೆ ನೋಡಿ

ತಮ್ಮ ತರಬೇತಿ ವೈಶಿಷ್ಠ್ಯದ ಬಗ್ಗೆ ಹೇಳುವ ರಾಧಿಕಾ, "ನಾನು ನನ್ನ ತರಬೇತಿಯನ್ನು ಸಮೂಹ ಆಧಾರಿತ ಚೌಕಟ್ಟಿನಲ್ಲಿ ನಡೆಸುತ್ತೇನೆ ಹಾಗೂ ಅದರಲ್ಲಿ ಸಾಮಾಜಿಕವಾಗಿ ಬೆರೆಯುವಿಕೆಯು ಒಂದು ಭಾಗವಾಗಿದೆ. ನಾನು ಇಬ್ಬರು ಜನರನ್ನು ಎದುರು-ಬದುರು ಬರುವಂತೆ ಮಾಡುವುದಿಲ್ಲ. ಬದಲಾಗಿ ಅವರೆಲ್ಲರೂ ಅಂದರೆ ಆ ಸಮೂಹವು ಆನ್ಲೈನ್ ಮೂಲಕ ಒಂದು ಕೋಣೆಯಲ್ಲಿ ಪರಸ್ಪರ ಸಂಪರ್ಕಿತರಾಗಿರುತ್ತಾರೆ. ಅಲ್ಲಿ ಸಂವಾದ, ಸಂವಹನಗಳು ಪರಸ್ಪರರ ಮಧ್ಯೆ ಏರ್ಪಡುತ್ತವೆ. ಇದನ್ನು ನಾನು ಕನೆಕ್ಷನ್ ರೂಮ್ ಎಂದು ಕರೆಯುತ್ತೇನೆ" ಎಂದು ಹೇಳುತ್ತಾರೆ.

ಅಭಿರುಚಿಗೆ ತಕ್ಕುದಾದ ಪಾರ್ಟ್ನರ್ ಹುಡುಕುವುದು ಹೇಗೆ
ಈ ಮೂಲಕ ಜನರು ತಮ್ಮ ನೈಜವಾದ ವ್ಯಕ್ತಿತ್ವದಡಿಯಲ್ಲಿ ಸಂವಹನ ನಡೆಸುತ್ತ ತಮ್ಮ ಅಭಿರುಚಿಗೆ ತಕ್ಕುದಾದ ಪಾರ್ಟ್ನರ್ ಅನ್ನು ಹುಡುಕಲು ಸಾಕಷ್ಟು ಕಷ್ಟಪಡಬೇಕಾಗಿಲ್ಲ. ರಾಧಿಕಾ ಅವರು ಈ ಮುಂಚೆ ಪತ್ರಿಕೋದ್ಯಮದಲ್ಲಿ ಕೆಲಸ ಮಾಡಿದ್ದು ಈ ರೀತಿಯ ಮ್ಯಾಚ್ ಮೇಕಿಂಗ್ ವೃತ್ತಿಯನ್ನು 2018 ರಿಂದ ಆರಂಭಿಸಿದ್ದಾರೆ.

20 ರಿಂದ ಹಿಡಿದು 40 ಹಾಗೂ 50 ವರ್ಷದವರೂ ಸಹ ಅವರಿಗೆ ಈಗ ಗ್ರಾಹಕರಿದ್ದಾರೆ. ಸಾಮಾನ್ಯವಾಗಿ ನಲವತ್ತು ಪ್ಲಸ್ ಆಗಿರುವ ಗ್ರಾಹಕರು ವಿವಿಧ ವೃತ್ತಿಪರ ಕಾರಣಗಳಿಂದಾಗಿ ತಮ್ಮನ್ನು ಆನ್ಲೈನ್ ನಲ್ಲಿ ಪ್ರದರ್ಶಿಸಿಕೊಳ್ಳಲು ಬಯಸದೆ ಇರುವುದರಿಂದ ಅವರಿಗಾಗಿ ವಿಶೇಷ ಕಾರ್ಯಕ್ರಮ ಇರುವುದಾಗಿ ರಾಧಿಕಾ ಹೇಳುತ್ತಾರೆ.

 ಇದರ  ಸದುಪಯೋಗ ಪಡೆದುಕೊಂಡ ಜನ ಹೇಳಿದ್ದು ಹೀಗೆ
ವರುಣ್ ಎಂಬ ಐಟಿ ಟೆಕ್ಕಿ ಈಗಾಗಲೇ ರಾಧಿಕಾ ಅವರ ಕೋರ್ಸ್ ಪಡೆದಿದ್ದು ಅದರಿಂದ ಅವರ ಜೀವನದಲ್ಲಿ ತುಂಬಾನೇ ಲಾಭವಾಯಿತು ಎಂದಿದ್ದಾರೆ. ಈ ಮೊದಲು ವರುಣ್ ಹಲವು ಆಪ್ ಹಾಗೂ ಮ್ಯಾಟ್ರಿಮೋನಿಯಲ್ ಸೈಟುಗಳಲ್ಲಿ ಬಾಳ ಸಂಗಾತಿಗಾಗಿ ಸಾಕಷ್ಟು ಪ್ರಯತ್ನಿಸಿದ್ದರು, ಅದರೆ, ಅವರಿಗೆ ಯಾವ ಲಾಭವೂ ಆಗಿರಲಿಲ್ಲ. ಆದರೆ, ರಾಧಿಕಾ ಅವರ ಕೋರ್ಸ್ ಪಡೆದು ತನ್ನ ವ್ಯಕ್ತಿತ್ವವನ್ನು ವಿಶೇಷ ಮಾಡಿಕೊಂಡಿರುವ ಅನುಭವ ವರುಣನಿಗೆ ಬಂದಿದ್ದಲ್ಲದೆ ಅಲ್ಲಿ ಭೇಟಿಯಾದ ಒಬ್ಬರೊಡನೆ ಈಗ ವರುಣ್ ಆತ್ಮವಿಶ್ವಾಸದಿಂದ ಸಂಭಾಷಣೆ ನಡೆಸುತ್ತಿದ್ದಾನಂತೆ.

ಇದನ್ನೂ ಓದಿ: Viral Video: ಭಾರತೀಯ ವಧುವಿಗಾಗಿ ಈ ವಿದೇಶಿ ವರ ಮಾಡಿದ್ದೇನು ನೋಡಿ

ಇನ್ನು ಶಾಲಿನಿ ಸಿಂಗ್ ಎಂಬುವವರು 2019 ರಲ್ಲಿ ಆಂಡ್ ವಿ ಮೆಟ್ (Andwemet) ಎಂಬ ವೇದಿಕೆಯನ್ನು ಆರಂಭಿಸಿದ್ದು 25ರ ಮೇಲಿನ ವಯೋಮಾನದವರಿಗಾಗಿ ಇದನ್ನು ಸಿದ್ಧಪಡಿಸಲಾಗಿದೆ ಎಂದು ಶಾಲಿನಿ ಹೇಳುತ್ತಾರೆ. ಅಸಲಿಗೆ ಶಾಲಿನಿಯವರಿಗೆ ಇತರೆ ಮದುವೆ ಪೋರ್ಟಲ್ ಗಳಲ್ಲಿ ಕಂಡುಬರುವಂತೆ ವಯಸ್ಸು, ಜಾತಿ, ಆದಾಯ ಸರಿ ಅನಿಸಲಿಲ್ಲವಂತೆ. ಅವರ ಪ್ರಕಾರ, ಇಂತಹವುಗಳಿಂದ ನಾವು ಕೇವಲ ರೂಪ, ಆದಾಯಗಳಷ್ಟರ ಬಗ್ಗೆ ತಿಳಿದುಕೊಳ್ಳುತ್ತೇವೆಯೇ ಹೊರತು ಆ ವ್ಯಕ್ತಿಯ ವ್ಯಕ್ತಿತ್ವ ಅಥವಾ ಅವನು/ಅವಳು ಹೇಗಿದ್ದಾರೆ ಎಂಬುದು ಗೊತ್ತಾಗುವುದಿಲ್ಲ. ಹಾಗಾಗಿ, ಆ ನಿಟ್ಟಿನಲ್ಲಿ ಜನರಿಗೆ ನೆರವಾಗಲೆಂದು ಶಾಲಿನಿ ಅವರು Andwemet ಆರಂಭಿಸಿರುವುದಾಗಿ ಹೇಳುತ್ತಾರೆ.
Published by:Ashwini Prabhu
First published: