ಸಿಎಂಗೆ ಕಗ್ಗಂಟಾದ ಸಂಪುಟ ವಿಸ್ತರಣೆ; ಬೆಳಗಾವಿಯ ಐವರು ಶಾಸಕರಿಗೆ ಸಚಿವ ಸ್ಥಾನ ನೀಡಬೇಕಾದ ಸಂಕಟದಲ್ಲಿ ಬಿಎಸ್​ವೈ

ಬಿಜೆಪಿ ಸರ್ಕಾರ ರಚನೆಗೆ ಕಾರಣರಾಗಿ, ಉಪಚುನಾವಣೆಯಲ್ಲಿ ಗೆದ್ದಿರುವ ಬೆಳಗಾವಿ ಭಾಗದ ರಮೇಶ್​ ಜಾರಕಿಹೊಳಿ, ಮಹೇಶ್ ಕುಮಟಳ್ಳಿ ಹಾಗೂ ಶ್ರೀಮಂತ ಪಾಟೀಲ್ ಇವರಿಗೆ ಸಚಿವ ಸ್ಥಾನ ನೀಡಲೇಬೇಕಿದೆ. ಇವರ ಜೊತೆಗೆ ಉಮೇಶ್ ಕತ್ತಿ ಹಾಗೂ ಬಾಲಚಂದ್ರ ಜಾರಕಿಹೊಳಿ ಅವರಿಗೂ ಸ್ಥಾನ ಕಲ್ಪಿಸಿಕೊಡಬೇಕಾದ ಅನಿವಾರ್ಯತೆ ಸಿಎಂಗೆ ಎದುರಾಗಿದೆ.

HR Ramesh | news18-kannada
Updated:December 11, 2019, 7:12 AM IST
ಸಿಎಂಗೆ ಕಗ್ಗಂಟಾದ ಸಂಪುಟ ವಿಸ್ತರಣೆ; ಬೆಳಗಾವಿಯ ಐವರು ಶಾಸಕರಿಗೆ ಸಚಿವ ಸ್ಥಾನ ನೀಡಬೇಕಾದ ಸಂಕಟದಲ್ಲಿ ಬಿಎಸ್​ವೈ
ಸಿಎಂ ಬಿಎಸ್​ ಯಡಿಯೂರಪ್ಪ
  • Share this:
ಬೆಂಗಳೂರು: ಉಪಚುನಾವಣೆ ಫಲಿತಾಂಶದ ಬಳಿಕ ಸಿಎಂ ಬಿ.ಎಸ್.ಯಡಿಯೂರಪ್ಪ ಅವರಿಗೆ ಸಂಪುಟ ವಿಸ್ತರಣೆ ಸಂಕಟ ಎದುರಾಗಿದೆ. ಅದರಲ್ಲೂ ಬೆಳಗಾವಿ ಭಾಗದ ಶಾಸಕರಿಗೆ ಸಚಿವ ಸ್ಥಾನ ಹಂಚಿಕೆಯೇ ಬಹುದೊಡ್ಡ ತಲೆನೋವಾಗಿ ಪರಿಣಮಿಸಿದೆ. 

ಬೆಳಗಾವಿ ಜಿಲ್ಲೆಯಲ್ಲಿ ಇದೀಗ ನೂತನವಾಗಿ ಗೆದ್ದಿರುವ ಮೂವರು ಶಾಸಕರ ಜೊತೆಗೆ ಮತ್ತಿಬ್ಬರು ಪಕ್ಷದ ಹಿರಿಯ ಮುಖಂಡರಿಗೆ ಸಚಿವ ಸ್ಥಾನ ನೀಡಲು ಒತ್ತಡ ಸಿಎಂ ಮೇಲೆ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಬೆಳಗಾವಿ ನಾಯಕರಾಗಿರುವ ಉಮೇಶ್ ಕತ್ತಿ ಮತ್ತು ಬಾಲಚಂದ್ರ ಜಾರಕಿಹೊಳಿ ನೆನ್ನೆ ಸಿಎಂ ಬಿಎಸ್​ವೈ ಭೇಟಿಯಾಗಿ, ಸಚಿವ ಸ್ಥಾನ ಹಂಚಿಕೆ ಸಂಬಂಧ ಮಹತ್ವದ ಮಾತುಕತೆ ನಡೆಸಿದ್ದಾರೆ. ಇದೇ ವೇಳೆ ಇಬ್ಬರು ನಾಯಕರಿಂದಲೂ ಸಿಎಂ ಬಿಎಸ್​ವೈ ಸಂಪುಟ ವಿಸ್ತರಣೆ ಬಗ್ಗೆ ಅಭಿಪ್ರಾಯ ಪಡೆದುಕೊಂಡಿದ್ದಾರೆ.

ಬಿಜೆಪಿ ಸರ್ಕಾರ ರಚನೆಯಾದ ಬೆನ್ನಲ್ಲೇ ಮೊದಲು ರಚನೆಯಾದ ಸಂಪುಟದಲ್ಲಿ ಸಚಿವ ಸ್ಥಾನ ಸಿಗದಿದ್ದಕ್ಕೆ ಉಮೇಶ್ ಕತ್ತಿ ಭಾರೀ ಅಸಮಾಧಾನಗೊಂಡಿದ್ದರು. ಇದೀಗ ವಿಸ್ತರಣೆಯಾಗುವ ಸಂಪುಟದಲ್ಲಿ ಸಚಿವ ಸ್ಥಾನ ನೀಡಲೇಬೇಕು ಎಂದು ಕತ್ತಿ ಪಟ್ಟು ಹಿಡಿದಿದ್ದಾರೆ. ಜೊತೆಗೆ ಆ ಭಾಗದ ಮತ್ತೊಬ್ಬ ಪ್ರಬಲ ನಾಯಕರಾಗಿರುವ ಬಾಲಚಂದ್ರ ಜಾರಕಿಹೊಳಿ ಕೂಡ ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದಾರೆ.

ಬಿಜೆಪಿ ಸರ್ಕಾರ ರಚನೆಗೆ ಕಾರಣರಾಗಿ, ಉಪಚುನಾವಣೆಯಲ್ಲಿ ಗೆದ್ದಿರುವ ಬೆಳಗಾವಿ ಭಾಗದ ರಮೇಶ್​ ಜಾರಕಿಹೊಳಿ, ಮಹೇಶ್ ಕುಮಟಳ್ಳಿ ಹಾಗೂ ಶ್ರೀಮಂತ ಪಾಟೀಲ್ ಇವರಿಗೆ ಸಚಿವ ಸ್ಥಾನ ನೀಡಲೇಬೇಕಿದೆ. ಇವರ ಜೊತೆಗೆ ಉಮೇಶ್ ಕತ್ತಿ ಹಾಗೂ ಬಾಲಚಂದ್ರ ಜಾರಕಿಹೊಳಿ ಅವರಿಗೂ ಸ್ಥಾನ ಕಲ್ಪಿಸಿಕೊಡಬೇಕಾದ ಅನಿವಾರ್ಯತೆ ಸಿಎಂಗೆ ಎದುರಾಗಿದೆ. ಈಗಾಗಲೇ ಇದೇ ಜಿಲ್ಲೆಯ ಅಥಣಿ ಕ್ಷೇತ್ರದಲ್ಲಿ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸೋತಿರುವ ಲಕ್ಷ್ಣಣ ಸವದಿ ಅವರಿಗೆ ಉಪಮುಖ್ಯಮಂತ್ರಿ ಜೊತೆಗೆ ಸಚಿವ ಸ್ಥಾನವನ್ನು ನೀಡಲಾಗಿದೆ. ಇದೀಗ ಮತ್ತೆ ಅದೇ ಭಾಗದ ಐವರು ಶಾಸಕರಿಗೆ ಸಚಿವ ಸ್ಥಾನ ನೀಡದರೆ, ಒಟ್ಟು ಆರು ಸ್ಥಾನಗಳು ಬೆಳಗಾವಿಗೆ ಸಿಂಹಪಾಲು ನೀಡಿದಂತಾಗುತ್ತದೆ. ಇದು ಪಕ್ಷದಲ್ಲಿ ಪ್ರಾದೇಶಿಕ ಅಸಮಾಧಾನಗೂ ಕಾರಣವಾಗಬಹುದು. ಹೀಗಾಗಿ ಸಿಎಂ ಬಿಎಸ್ ಯಡಿಯೂರಪ್ಪ ಅವರಿಗೆ ಸಂಪುಟ ವಿಸ್ತರಣೆಯಲ್ಲಿ ಬೆಳಗಾವಿಗೆ ಎಷ್ಟು‌ ಸಚಿವ ಸ್ಥಾನ ಕೊಡಬೇಕು ಎಂಬುದರ ಬಗ್ಗೆ ಚರ್ಚೆ ಆ ಭಾಗದ ಶಾಸಕರಿಂದ ಅಭಿಪ್ರಾಯ ಸಂಗ್ರಹಿಸಿದ್ದಾರೆ.

ಇದನ್ನು ಓದಿ: ಒಂದು ಕಣ್ಣು ತೆಗೆಯಲು ಹೋಗಿ ತಮ್ಮ ಎರಡೂ ಕಣ್ಣು ಕಳೆದುಕೊಂಡರು; ಹೀಗಂತ ಎಂಟಿಬಿ ಹೇಳಿದ್ದು ಯಾರಿಗೆ ಗೊತ್ತಾ?

ಕತ್ತಿ, ಬಾಲಚಂದ್ರ ಜಾರಕಿಹೊಳಿ ಸೇರಿದಂತೆ ಮೂವರು ನೂತನ ಶಾಸಕರು ಸೇರಿ ಒಟ್ಟು 5 ಸ್ಥಾನವನ್ನು ಸಿಎಂ ಕೊಡುತ್ತಾರಾ? ಇಲ್ಲವಾದಲ್ಲಿ ಪಕ್ಷದ ಹಿರಿಯ ನಾಯಕರ ಬಂಡಾಯ ಎದುರಿಸುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.
First published:December 11, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ