Clarence Schoolಗೆ ನೋಟಿಸ್: ರಾಜ್ಯದ ಎಲ್ಲಾ ಕ್ರೈಸ್ತ ಶಿಕ್ಷಣ ಸಂಸ್ಥೆಗಳ ಪಠ್ಯ ಪರಿಶೀಲನೆಗೆ ಸೂಚನೆ; Minister BC Nagesh

ರಾಜ್ಯದ ಎಲ್ಲಾ ಕ್ರೈಸ್ತ ಶಿಕ್ಷಣ ಸಂಸ್ಥೆಗಳ ಮೇಲೆ ನಿಗಾ ಇರಿಸಲಾಗುತ್ತದೆ. ಎಲ್ಲಾ ಬಿಓಗಳಿಗೆ ಕ್ರೈಸ್ತ ಶಿಕ್ಷಣಗಳಿಗೆ ಹೋಗಿ ಪರಿಶೀಲನೆ ನಡೆಸಲು ಸೂಚನೆ ನೀಡಲಾಗಿದೆ. ರಾಜ್ಯದ ಎಲ್ಲಾ ಕ್ರೈಸ್ತ ಶಿಕ್ಷಣ ಸಂಸ್ಥೆಗಳ ಪಠ್ಯ ಪರಿಶೀಲನೆಗೆ ಸೂಚನೆ ನೀಡುತ್ತಿದ್ದೇವೆ.

ಶಿಕ್ಷಣ ಸಚಿವ ಬಿ.ಸಿ.ನಾಗೇಶ್

ಶಿಕ್ಷಣ ಸಚಿವ ಬಿ.ಸಿ.ನಾಗೇಶ್

  • Share this:
ಬೆಂಗಳೂರಿನ ಕ್ಲಾರೆನ್ಸ್ ಶಾಲೆಯಲ್ಲಿ (Bengaluru Clarence School) ಬಲವಂತವಾಗಿ ಬೈಬಲ್ (Bible) ಬೋಧನೆ ಮಾಡಲಾಗತ್ತಿದೆ ಎಂದು ಹಿಂದೂ ಸಂಘಟನೆಗಳು (Hindu Organization) ಆರೋಪಿಸಿದ್ದವು. ಈ ಹಿನ್ನೆಲೆ ಸೋಮವಾರ ಶಿಕ್ಷಣ ಇಲಾಖೆ ಅಧಿಕಾರಿಗಳು (Education Department) ಶಾಲೆಗೆ ಭೇಟಿ ನೀಡಿದ್ದರು. ಇತ್ತ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ (Education Minister BC Nagesh) ಸಹ ಸಂಜೆಯೊಳಗೆಯೇ ವರದಿ ಸಲ್ಲಿಸಲು ಡೆಡ್ ಲೈನ್ ನೀಡಿದ್ದರು. ಇಂದು ಬೆಳಗ್ಗೆ ತುರ್ತು ಸುದ್ದಿಗೋಷ್ಠಿ ಕರೆದ ಶಿಕ್ಷಣ ಸಚಿವರು, ಕ್ಲಾರೆನ್ಸ್ ಶಾಲೆಯಲ್ಲಿ ಬೈಬಲ್ ಬೋಧನೆಯ ಕುರಿತು ಮಾಹಿತಿ ನೀಡಿದರು. ದ್ವಿತೀಯ ಪಿಯು  ಪರೀಕ್ಷೆ (Second PU Exams) ಸುಸೂತ್ರವಾಗಿ ನಡೆಯುತ್ತಿವೆ. ಈ ಬಾರಿ ವಿದ್ಯಾರ್ಥಿಗಳ ಹಾಜರಾತಿ ಹೆಚ್ಚಿದೆ. SSLC ಮೌಲ್ಯಮಾಪನ ನಡೆಯುತ್ತಿದ್ದು, ಫಲಿತಾಂಶದ ದಿನಾಂಕವನ್ನು ಶೀಘ್ರದಲ್ಲಿ ತಿಳಿಸಲಾಗುತ್ತದೆ ಎಂದರು.

ಕ್ಲಾರೆನ್ಸ್ ಶಾಲೆಯಲ್ಲಿ ಬೈಬಲ್ ಕಡ್ಡಾಯ ವಿಚಾರದ ಕುರಿತು ಮಾತನಾಡಿದ ಬಿ.ಸಿ.ನಾಗೇಶ್, ಆ ನಿಯಮ ರಾಜ್ಯ ಶಿಕ್ಷಣ ಕಾಯಿದೆಗೆ ವಿರುದ್ಧವಾಗಿದೆ. ಯಾವುದೇ ಶಿಕ್ಷಣ ಸಂಸ್ಥೆಯಾಗಲಿ ಧಾರ್ಮಿಕ ಗ್ರಂಥಗಳ ಅಳವಡಿಕೆಗೆ ಅವಕಾಶ ಇಲ್ಲ. ಶಾಲೆಗೆ ಶಿಕ್ಷಣ ಇಲಾಖೆಯಿಂದ ನೊಟೀಸ್ ಕೊಡಲಾಗುತ್ತದೆ ಎಂದು ತಿಳಿಸಿದರು.

ವಿಪಕ್ಷಗಳ ವಿರುದ್ಧ ಬಿ.ಸಿ.ನಾಗೇಶ್ ಕಿಡಿ

ಪಠ್ಯದಲ್ಲಿ ಭಗವದ್ಗೀತೆ ಅಳವಡಿಕೆ ವೇಳೆ ಸುಡೋ ಸೆಕ್ಯೂಲರಿಸ್ಟ್ ಗಳು ಕಿರುಚಾಡಿದ್ರು. ಕಾಂಗ್ರೆಸ್, ಜೆಡಿಎಸ್ ಇದರ ಬಗ್ಗೆ ಮಾತನಾಡಿಲ್ಲ. ಭಗವದ್ಗೀತೆಗೆ ವಿರೋಧ ಮಾಡುವವರು ಬೈಬಲ್ ವಿಚಾರದಲ್ಲಿ ಸುಮ್ಮನಿದ್ದಾರೆ ಎಂದು ವಿಪಕ್ಷಗಳ ವಿರುದ್ಧ ಹರಿಹಾಯ್ದರು.

ಇದನ್ನೂ ಓದಿ:  Clarence School: ಬೈಬಲ್ ಹೇರಿಕೆಯ ಆರೋಪ; ಶಾಲೆಗೆ ಸ್ಥಳೀಯ ಪೊಲೀಸರಿಂದ ಭದ್ರತೆ

ಕ್ಲಾರೆನ್ಸ್ ಶಾಲೆಯಲ್ಲಿ ಎಲ್ಲಾ ಧರ್ಮದ ಮಕ್ಕಳೂ ಓದುತ್ತಿದ್ದಾರೆ. ಪ್ರಜಾಪ್ರಭುತ್ವದ ಅಡಿಯಲ್ಲಿ ಶಿಕ್ಷಣ ಇಲಾಖೆ ಕ್ರಮ ತೆಗೆದುಕೊಳ್ಳುತ್ತದೆ. ಅಡ್ಮಿಷನ್ ವೇಳೆ ಬೈಬಲ್ ಇದೆ ಒಪ್ಪಿಗೆ ಇದೆಯಾ ಅಂತ ಕೇಳ್ತಾರೆ. ಇಲ್ಲಾ ಅಂದ್ರೆ ಅಡ್ಮಿಷನ್ ಕೊಡಲ್ಲ ಇದು ತಪ್ಪು ಎಂದು ಖಂಡಿಸಿದರು.

ಪಠ್ಯ ಪರಿಶೀಲನೆಗೆ ಸೂಚನೆ

ರಾಜ್ಯದ ಎಲ್ಲಾ ಕ್ರೈಸ್ತ ಶಿಕ್ಷಣ ಸಂಸ್ಥೆಗಳ ಮೇಲೆ ನಿಗಾ ಇರಿಸಲಾಗುತ್ತದೆ. ಎಲ್ಲಾ ಬಿಓಗಳಿಗೆ ಕ್ರೈಸ್ತ ಶಿಕ್ಷಣಗಳಿಗೆ ಹೋಗಿ ಪರಿಶೀಲನೆ ನಡೆಸಲು ಸೂಚನೆ ನೀಡಲಾಗಿದೆ. ರಾಜ್ಯದ ಎಲ್ಲಾ ಕ್ರೈಸ್ತ ಶಿಕ್ಷಣ ಸಂಸ್ಥೆಗಳ ಪಠ್ಯ ಪರಿಶೀಲನೆಗೆ ಸೂಚನೆ ನೀಡುತ್ತಿದ್ದೇವೆ.

ಜೂನ್, ಜುಲೈ ನಲ್ಲಿ 4ನೇ ಅಲೆ ಅಂತ ಹೇಳಲಾಗ್ತಿದೆ. ಟಾಸ್ಕ್ ಪೋರ್ಸ್, ಆರೋಗ್ಯ ಇಲಾಖೆಯ ಸೂಚನೆಯನ್ನ ನಾವೂ ಫಾಲೋ ಮಾಡ್ತೀವಿ. ಶೈಕ್ಷಣಿಕ ವರ್ಷ ಮೇ 16ರಿಂದ ಆರಂಭವಾಗುತ್ತಿದೆ. ಇದರಲ್ಲಿ‌ ಯಾವುದೇ ಬದಲಾವಣೆ ಇಲ್ಲವೆಂದು ಸ್ಪಷ್ಟಪಡಿಸಿದರು.

ಕೊರೋನಾ ನಾಲ್ಕನೇ ಅಲೆ‌ ಆತಂಕ

ಮೇ 15 ರಿಂದ 2022-23 ನೇ ಸಾಲಿನ ಶೈಕ್ಷಣಿಕ ಚಟುವಟಿಕೆ ಪ್ರಾರಂಭ ಆಗಲಿವೆ. ಮೇ 15 ರಿಂದ 1 ರಿಂದ 9 ನೇ ತರಗತಿಗೆ ಕಲಿಕಾ ಚಟುವಟಿಕೆ ಶುರುವಾಗಲಿದೆ. ಈ ಬಾರಿ ಬೇಸಿಗೆ ರಜೆ ಕಡಿತ ಮಾಡಿ 15 ಮುಂಚಿತವಾಗಿ ಶಾಲೆ ಪ್ರಾರಂಭ ಮಾಡಲಾಗುತ್ತದೆ.

ಮೊದಲ 15 ದಿನಗಳ ಕಾಲ ಮಕ್ಕಳಿಗೆ ‌ಕಲಿಕಾ ಚಟುವಟಿಕೆ ನಡೆಸಲಾಗುತ್ತದೆ. ಕೊರೋನಾದಿಂದ‌ ಮಕ್ಕಳು ಸರಿಯಾಗಿ ಪಾಠ ಕಲಿತಿಲ್ಲ. ಮರೆತಿರುವ ವಿಷಯಗಳ ಕುರಿತು ಕಲಿಕಾ ಚಟುವಟಿಕೆಯಲ್ಲಿ ಪಾಠ ಹೇಳಿಕೊಡಲಾಗುತ್ತದೆ.

ಇದನ್ನೂ ಓದಿ:  PSI Recruitment Scam: ಅಕ್ರಮ ಎಸಗಿದವರನ್ನು ಕಾನೂನಿನ ಬಲೆಗೆ ತರಲು ಮುಂದಾಗಬೇಕು: Araga Jnanendra ಮನವಿ

ಶಾಲೆಯ ಪರವಾಗಿ ಪೋಷಕರು ಬ್ಯಾಟ್

ಬೆಳಗ್ಗೆ ಮಕ್ಕಳನ್ನು ಶಾಲೆಗೆ ಬಿಡಲು ಬಂದ ಕೆಲ ಕ್ರಿಶ್ಚಿಯನ್ ಪೋಷಕರು ಬೈಬಲ್ ಬ್ಯಾಗ್ ನಲ್ಲಿ ತರುವ ಕುರಿತ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ. 8 ರಿಂದ 10ನೇ ತರಗತಿಯ ಮಕ್ಕಳು ಇಲ್ಲಿ ವ್ಯಾಸಾಂಗ ಮಾಡ್ತಿದ್ದಾರೆ. 600ಕ್ಕೂ ಹೆಚ್ಚು ಮಕ್ಕಳ ಈ ಶಾಲೆಯಲ್ಲಿ ಓದುತ್ತಿದ್ದಾರೆ. ಒತ್ತಡ ಏನೂ ಹಾಕ್ತಿಲ್ಲ, ಈ ಬಗ್ಗೆ ಮೊದಲೇ ಹೇಳಿರ್ತಾರೆ ಎಂದು ಕೆಲ ಪೋಷಕರು ಶಾಲೆಯ ಪರ ಬ್ಯಾಟಿಂಗ್ ಬೀಸಿದ್ದಾರೆ.

ಬೆಂಕಿಗೆ ತುಪ್ಪ ಸುರೀತಿದ್ದಾರೆ ಅಷ್ಟೇ

ಶಾಲೆಯ ಪಠ್ಯದಲ್ಲಿ ಬೈಬಲ್ ಕೂಡ ಒಂದು ಭಾಗ ಆಗಿರುತ್ತೆ ಅಂತ ಹೇಳಲಾಗಿರುತ್ತದೆ. ಯಾರೋ ಬೇಕು ಅಂತಲೇ ಈ ರೀತಿ ವಿವಾದ ಮಾಡ್ತಿದ್ದಾರೆ. ಇಲ್ಲಿಯ ಯಾವ ಹಿಂದೂ ಮಕ್ಕಳು ವಿರೋಧ ಮಾಡ್ತಿಲ್ಲ . ಈಗ ನಡೆಯುತ್ತಿರುವ ಬೆಂಕಿಗೆ ಕೆಲವರು ತುಪ್ಪ ಸುರಿಯುತ್ತಿದ್ದಾರೆ ಅಷ್ಟೆ ಎಂದು ಪೋಷಕರು ಆಕ್ರೋಶ ಹೊರ ಹಾಕಿದ್ದಾರೆ.
Published by:Mahmadrafik K
First published: