ಕೆಲವೊಮ್ಮೆ ಅಧಿಕಾರಿಗಳು (Officer) ಎಷ್ಟು ದುರ್ವರ್ತನೆಯಿಂದ ತಮ್ಮ ಕೈಕೆಳಗಿನ ಅಧಿಕಾರಿಗಳನ್ನು ನಡೆಸಿಕೊಳ್ಳುತ್ತಾರೆ ಅಂದ್ರೆ ಅದನ್ನು ನೋಡಿದ ಎಂಥವರಿಗೂ ಸಹ ಪಿತ್ತ ನೆತ್ತಿಗೆ (Anger) ಏರುತ್ತದೆ.. ಅಧಿಕಾರದ (Power) ಮದದಲ್ಲಿ ಯಾವುದು ಸರಿ ಯಾವುದು ತಪ್ಪು ಎಂದು ಪರಾಮರ್ಶಿಸದೇ ನಮಗೆಲ್ಲಾ ತಿಳಿದಿದೆ ಎನ್ನುವ ರೀತಿ ವರ್ತನೆ ಮಾಡಿ ದರ್ಪ ಮೆರೆಯುತ್ತಾರೆ.. ಇದಕ್ಕೆ ಸಾಕ್ಷಿ (Example) ಎನ್ನುವಂತೆ ಹಲವಾರು ಘಟನೆಗಳು (Incident) ನಮ್ಮ ಮುಂದೆ ನಡೆದಿದೆ.. ಅದೇ ರೀತಿ ಈಗ ಅಧಿಕಾರದ ಮದದಲ್ಲಿ ಚಕಿಂಗ್ ಅಧಿಕಾರಿಗಳು ನಿಯಮ ಸರಿಯಾಗಿದ್ದರೂ ಅಮಾಯಕ ಕಂಡಕ್ಟರ್ (Conductor) ಒಬ್ಬನ ಮೇಲೆ ದೌರ್ಜನ್ಯ ಮೆರೆದಿದ್ದಾರೆ..
ಹಲಸಿನ ಹಣ್ಣು, ಗ್ಯಾಸ್ ಸ್ಟವ್ ಗೆ ಟಿಕೆಟ್ ನೀಡಿಲ್ಲ ಎಂದು ನೋಟಿಸ್
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ ನಲ್ಲಿ ಎರಡು ಪ್ರತ್ಯೇಕ ಸ್ಥಳದಲ್ಲಿ ವಿಚಿತ್ರ ಘಟನೆ ನಡೆದಿದೆ.. ಮೊದಲ ಪ್ರಕರಣದಲ್ಲಿ ಹಾಸನ ಜಿಲ್ಲೆಯ ಅರಸೀಕೆರೆ ತಾಲ್ಲೂಕಿನಲ್ಲಿ 1 ಕೆಜಿ ತೂಕ ತೂಗುವ ಹಲಸಿನ ಹಣ್ಣನ್ನು ಹೊತ್ತೊಯ್ಯುತ್ತಿದ್ದ ವಿಕಲಚೇತನ ಪ್ರಯಾಣಿಕನಿಂದ ಟಿಕೆಟ್ ನೀಡಿ ಹಣ ಪಡೆಯಲಿಲ್ಲ ಎನ್ನುವ ಕಾರಣಕ್ಕೆ ನೋಟಿಸ್ ನೀಡಲಾಗಿದೆ..
ಕಂಡಕ್ಟರ್ ರಘು ಎಂಬುವವರು ಪ್ರಯಾಣಿಕನಿಂದ ಟಿಕೆಟ್ ಗೆ ಮಾತ್ರ ಹಣ ಪಡೆದು ಸುಮ್ಮನಿದ್ದಾನೆ. ಚೆಕ್ಕಿಂಗ್ ಸಿಬ್ಬಂದಿ ರಘುವನ್ನು ತರಾಟೆಗೆ ತೆಗೆದುಕೊಂಡು ನೊಟೀಸ್ ನೀಡಿದ್ದಾರೆ.
ಇದನ್ನೂ ಓದಿ: ರಾತ್ರಿ ವೇಳೆಯಲ್ಲಿ ನಾಯಿ ಬೊಗಳಿದರೆ ಏನು ಅರ್ಥ ಗೊತ್ತಾ?
ಸ್ಟೌವ್ಗೆ ಟಿಕೆಟ್ ನೀಡದ್ದಕ್ಕೆ ನೋಟಿಸ್!
ಇನ್ನೊಂದು ಪ್ರಕರಣದಲ್ಲಿ ರಾಯಚೂರು 2ನೇ ಘಟಕದ ಕಂಡಕ್ಟರ್ ಗೋರಕನಾಥ್ ಎಂಬುವವರು ಗ್ಯಾಸ್ ಸ್ಟೌವ್ ನೊಂದಿಗೆ ಬಸ್ ಹತ್ತಿದ್ದಾರೆ. ಅದಕ್ಕೆ ಕಂಡಕ್ಟರ್ ಟಿಕೆಟ್ ನೀಡಿಲ್ಲ. ಬಸ್ಸನ್ನೇರಿದ ತಪಾಸಣಾ ಸಿಬ್ಬಂದಿ ಗ್ಯಾಸ್ ಸ್ಟವ್ ಗೆ ಟಿಕೆಟ್ ಇಶ್ಯೂ ಮಾಡಿಲ್ಲ ಎಂದು ಶಿಸ್ತು ನೋಟಿಸ್ ನೀಡಿದ್ದಾರೆ. ಗ್ಯಾಸ್ ಸ್ಟವ್ ಅರ್ಧಕೆಜಿನೂ ತೂಕ ಇಲ್ಲ. ಇದಕ್ಕೆ ಟಿಕೆಟ್ ಕೊಡಲು ಅವಕಾಶ ಇಲ್ಲ ಎಂದು ಕಂಡಕ್ಟರ್ ಪರಿಪರಿಯಾಗಿ ಬೇಡಿಕೊಂಡರೂ ತಪಾಸಣಾ ಸಿಬ್ಬಂದಿ ಕಿವಿಮೇಲೆ ಹಾಕಿಕೊಳ್ಳದೇ ಹೊರಟು ಹೋಗಿದ್ದಾರೆ.
ಕೋಳಿಗೆ ಟಿಕೆಟ್ ಪಡೆಯದಿದ್ದಕ್ಕೆ ಪ್ರಯಾಣಿಕನಿಗೆ ದಂಡ
ಇನ್ನು ಈ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯ ಕೂಡುರಸ್ತೆಯಿಂದ ಮಂಗಳೂರಿಗೆ ಪ್ರಯಾಣ ಬೆಳೆಸಿದ್ದ ಪ್ರಯಾಣಿಕ ತನಗೆ ಮಾತ್ರ ಟಿಕೆಟ್ ಪಡೆದಿದ್ದ, ಆದ್ರೆ ತನ್ನ ಜೊತೆ ಕರೆದುಕೊಂಡು ಬಂದಿದ್ದ ಕೋಳಿಗಳಿಗೆ ಕಂಡಕ್ಟರ್ ಬಳಿ ಟಿಕೆಟ್ ಪಡೆದಿರಲಿಲ್ಲ. ಈ ವೇಳೆ ಬಸ್ ತಪಾಸಣೆಗೆ ಬಂದ ತನಿಖಾಧಿಕಾರಿಗಳು ಕೋಳಿಗಳಿಗೆ ಅರ್ಧ ಟಿಕೆಟ್ ಪಡೆಯದಕ್ಕೆ ಪ್ರಯಾಣಿಕನಿಗೆ ಭರ್ತಿ 500 ರೂ. ದಂಡ ಹಾಕಿದ್ದರು. ಒಂದೊಂದು ಕೋಳಿಗೆ ಮಂಗಳೂರಿನವರೆಗೂ ಬಸ್ಸಿನಲ್ಲಿ ಪ್ರಯಾಣಿಸಲು 78. ರೂ ಟಿಕೆಟ್ ಪಡೆಯಬೇಕಾಗಿತ್ತು. ಆದ್ರೆ ಈಗ 78ರ ಬದಲು 500 ರೂ. ಪ್ರಯಾಣಿಕ ದಂಡ ಕಟ್ಟಿದ್ದ.
ಇದಿಷ್ಟು ಮಾತ್ರವಲ್ಲದೆ ಅನೇಕ ಸಂದರ್ಭಗಳಲ್ಲಿ ಬಸ್ನಲ್ಲಿ ಕಂಡಕ್ಟರ್ ಗಳು ಪ್ರಯಾಣಿಕರು ತಮ್ಮ ಜೊತೆ ಕೋಳಿ ಹಾಗೂ ಇತರ ಪ್ರಾಣಿಗಳನ್ನು ಕರೆದುಕೊಂಡು ಹೋಗುವಾಗ ಅವುಗಳಿಗೂ ಸಹ ಟಿಕೆಟ್ ನೀಡುವ ಹಲವಾರು ಘಟನೆಗಳು ನಡೆದಿವೆ.
ಇದನ್ನೂ ಓದಿ: ಬೇಡರೆಡ್ಡಿಹಳ್ಳಿ ಗುಗ್ಗರಿ ಹಬ್ಬದ ಸಂಭ್ರಮ -ಬುಡಕಟ್ಟು ಸಂಸ್ಕೃತಿ ಅನಾವರಣ
ಟಿಕೆಟ್ ನಿಯಮ ಏನು ಹೇಳುತ್ತೆ..?
ಸಾಮಾನ್ಯವಾಗಿ ನಿರ್ದಿಷ್ಟ ಕೆಜಿ ಅಥವಾ ಪ್ರಮಾಣಕ್ಕಿಂತ ಹೆಚ್ಚು ವಸ್ತುಗಳು ಅಥವಾ ಜೀವಿಗಳನ್ನು ಬಸ್ನಲ್ಲಿ ಪ್ರಯಾಣಿಕರ ಜೊತೆಗೆ ಕರೆದುಕೊಳ್ಳುವುದಾದರೆ ಬಸ್ ಕಂಡಕ್ಟರ್ಗಳು ಅರ್ಧ ಟಿಕೆಟ್ ವಿಧಿಸುತ್ತಾರೆ.
ಪ್ರಯಾಣಿಕ 15ರಿಂದ 25 ಕೆಜಿ ಗಾತ್ರದವರೆಗಿನ ವಸ್ತುಗಳನ್ನು ಕೊಂಡೊಯ್ದರೆ ಅದಕ್ಕೆ ಪ್ರತ್ಯೇಕ ನೀಡುವುದು ಕಡ್ಡಾಯವಲ್ಲ. 15 ಕೆಜಿ ವರೆಗಿನ ವಸ್ತುಗಳಿಗೆ ಟಿಕೆಟ್ ನಿಂದ ವಿನಾಯಿತಿ ಇದೆ. 7 ಕೆಜಿ ಹಾಸಿಗೆ, 5 ಕೆಜಿ ಹಣ್ಣಿನ ಬುಟ್ಟಿ, 9 ಕೆಜಿ ತೂಕದ ಹಣ್ಣುಗಳು, 12 ಕೆಜಿ ಸೂಟ್ ಕೇಸ್ ಗಳನ್ನೊಳಗೊಂಡಂತೆ ಒಟ್ಟು 33 ಕೆಜಿ ಗಾತ್ರದ ವಸ್ತುಗಳನ್ನು ಕೊಂಡೊಯ್ಯಬಹುದು. ಹಾಗೆಯೇ 20 ಕೆಜಿ ಭಾರತ ತೂಕದ ಕೃಷಿ ಸಾಮಾಗ್ರಿಗಳನ್ನು ಕೊಂಡೊಯ್ಯಬಹುದು.ಇದಕ್ಕೆ ಯಾವುದೇ ರೀತಿಯ ಲಗೇಜ್ ದರ ವಿಧಿಸುವಂತಿಲ್ಲ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ