HOME » NEWS » State » NOTICE FOR KSRTC EMPLOYEES WHO INVOLVE IN STRIKE IN KODAGU RSK SESR

ಕರ್ತವ್ಯಕ್ಕೆ ಹಾಜರಾಗದ ನೌಕರರ ಕುಟುಂಬದವರು ಕ್ವಾಟ್ರಸ್ ಖಾಲಿ ಮಾಡುವಂತೆ ನೊಟೀಸ್

ತುರ್ತು ಸಂದರ್ಭಗಳಲ್ಲಿ ಕರ್ತವ್ಯ ನಿರ್ವಹಿಸುವವರಿಗಾಗಿ ಈ ಕ್ವಾಟ್ರಸ್ ಗಳನ್ನು ಮಾಡಲಾಗಿದೆ. ಹಾಜರಾಗಿ, ಇಲ್ಲದಿದ್ದರೆ ಸೂಕ್ತ ಕ್ರಮ ವಹಿಸಲಾಗುವುದು ಎಂದು ಎಚ್ಚರಿಕೆಯ ನೊಟೀಸ್ ಅನ್ನು ಎಲ್ಲಾ ಹನ್ನೊಂದು ಕುಟುಂಬಗಳಿಗೂ ನೀಡಲಾಗಿದೆ

news18-kannada
Updated:April 10, 2021, 9:08 PM IST
ಕರ್ತವ್ಯಕ್ಕೆ ಹಾಜರಾಗದ ನೌಕರರ ಕುಟುಂಬದವರು ಕ್ವಾಟ್ರಸ್ ಖಾಲಿ ಮಾಡುವಂತೆ ನೊಟೀಸ್
ಕ್ವಾಟ್ರಸ್ ಖಾಲಿ ಮಾಡುವಂತೆ ನೊಟೀಸ್
  • Share this:
ಕೊಡಗು (ಏ. 10) : ಆರನೆ ವೇತನ ಆಯೋಗ ಜಾರಿ ಮಾಡುವಂತೆ ಮುಷ್ಕರ ನಡೆಸುತ್ತಿರುವ ರಾಜ್ಯ ಸಾರಿಗೆ ನೌಕರರಿಗೆ ಆರ್‍ಎಸ್‍ಎಸ್ ಕಾರ್ಯಕರ್ತರಿಂದ ಬೆದರಿಕೆ ಇದೆ ಎಂದು ಪ್ರತಿಭಟನಾ ನಿರತ ನೌಕರರು ಆಕ್ರೋಶ ಹೊರಹಾಕಿದ್ದಾರೆ. ಈ ಕುರಿತು ಆಕ್ರೋಶ ವ್ಯಕ್ತಪಡಿಸಿರುವ ಪುತ್ತೂರು ವಿಭಾಗದ ಮಡಿಕೇರಿ ಘಟಕದ ಚಾಲಕ ಕಂ ನಿರ್ವಾಹಕ ಮನು ನಾನೂ ಕೂಡ ಪಕ್ಕ ಹಿಂದೂ ಕಾರ್ಯಕರ್ತ. ಜೊತೆಗೆ ಆರ್ ಎಸ್‍ಎಸ್ ಕಾರ್ಯಕರ್ತನಾಗಿದ್ದೆ. ಆದರೆ ಪ್ರತಿಭಟನೆ ಕೈಬಿಟ್ಟು ಬಸ್ಸುಗಳನ್ನು ಚಲಾಯಿಸುವಂತೆ ನನಗೆ ಆರ್ ಎಸ್ ಎಸ್ ಕಾರ್ಯಕರ್ತರಿಂದ ಬೆದರಿಕೆ ಕರೆಗಳು ಬಂದಿವೆ ಎಂದು ಚಾಲಕ ಜಯರಾಮ್ ರೈ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮತ್ತೊಂದೆಡೆ ಪುತ್ತೂರು ವಿಭಾಗದ ಅಧಿಕಾರಿಗಳು ಮಡಿಕೇರಿಯಲ್ಲಿ ಪ್ರತಿಭಟನೆ ನೇತೃತ್ವ ವಹಿಸುತ್ತಿದ್ದ ಮುಖಂಡರನ್ನು ರಾಮನಗರ ಡಿಪೋಗೆ ವರ್ಗಾವಣೆ ಮಾಡಿ ಆದೇಶ ಮಾಡಿದ್ದಾರೆ. ನಾವು ಇಂತಹ ಬೆದರಿಕೆಗೆಲ್ಲಾ ಯಾವುದೇ ಕಾರಣಕ್ಕೂ ಹೆದರುವುದಿಲ್ಲ. ಯಡಿಯೂರಪ್ಪ, ಲಕ್ಷ್ಮಣ ಸವದಿ ಅವರ ಸರ್ಕಾರ ಹಠಕ್ಕೆ ಬಿದ್ದು ಕೆಲಸ ಮಾಡುತ್ತಿದೆ. ಇದೊಂದು ಹಠ ಮಾರಿ ಸರ್ಕಾರವಾಗಿದ್ದು, ಬಿಜೆಪಿಗೆ ಇನ್ಮುಂದೆ ನಾನು ಓಟು ಹಾಕುವುದಿಲ್ಲ. ಮುಂದೆ ಜನರೇ ಇವರಿಗೆ ಬುದ್ಧಿ ಕಲಿಸಲಿದ್ದಾರೆ ಎಂದು ನಿರ್ವಾಹಕ ಮನು ಅವರು ಎಚ್ಚರಿಕೆ ನೀಡಿದ್ದಾರೆ.

ಮತ್ತೊಂದೆಡೆ ಮಡಿಕೇರಿ ಘಟಕದ ಕೆಎಸ್‍ಆರ್ ಟಿಸಿ ನೌಕರರ ಕ್ವಾಟ್ರಸ್ ಗಳಲ್ಲಿ ವಾಸವಿದ್ದ ಹನ್ನೊಂದು ಕುಟುಂಬಗಳ ಕೆಎಸ್‍ಆರ್ ಟಿಸಿ ನೌಕರರು ಕರ್ತವ್ಯಕ್ಕೆ ಹಾಜರಾಗಬೇಕು. ತುರ್ತು ಸಂದರ್ಭಗಳಲ್ಲಿ ಕರ್ತವ್ಯ ನಿರ್ವಹಿಸುವವರಿಗಾಗಿ ಈ ಕ್ವಾಟ್ರಸ್ ಗಳನ್ನು ಮಾಡಲಾಗಿದೆ. ಹಾಜರಾಗಿ, ಇಲ್ಲದಿದ್ದರೆ ಸೂಕ್ತ ಕ್ರಮ ವಹಿಸಲಾಗುವುದು ಎಂದು ಎಚ್ಚರಿಕೆಯ ನೊಟೀಸ್ ಅನ್ನು ಎಲ್ಲಾ ಹನ್ನೊಂದು ಕುಟುಂಬಗಳಿಗೂ ನೀಡಲಾಗಿದೆ. ಆ ಮೂಲಕ ಕ್ವಾಟ್ರಸ್ ಖಾಲಿ ಮಾಡಿಸುವ ಬೆದರಿಕೆಯನ್ನು ಕೆಎಸ್‍ಆರ್ ಟಿಸಿ ಅಧಿಕಾರಿಗಳು ಮುಷ್ಕರ ನಿರತ ನೌಕರರಿಗೆ ಹಾಕಿದ್ದಾರೆ.


ಕುಟುಂಬಗಳಿಗೆ ನೊಟೀಸ್ ನೀಡಿರುವ ಅಧಿಕಾರಿಗಳ ಕ್ರಮಕ್ಕೆ ಮಹಿಳೆಯರು, ಮಕ್ಕಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಮಗೆ ಅವರೇನು ಉಚಿತವಾಗಿ ಕ್ವಾಟ್ರಸ್ ಗಳನ್ನು ಕೊಟ್ಟಿಲ್ಲ. ಬದಲಾಗಿ ಎಚ್‍ಆರ್ ಎ ಕಟ್ ಮಾಡಿಕೊಂಡು ನಮಗೆ ಕ್ವಾಟ್ರಸ್ ನೀಡಿದ್ದಾರೆ. ಆದರೆ ಇವರು ನೊಟೀಸ್ ನೀಡಿರುವುದು ಉಚಿತವಾಗಿ ಕೊಟ್ಟಿದ್ದಾರೆ ಎನ್ನುವಂತೆ ನಡೆದುಕೊಳ್ಳುತ್ತಿದ್ದಾರೆ. ಖಾಸಗಿಯಾಗಿ ಒಂದು ಮನೆಯಲ್ಲಿ ಬಾಡಿಗೆ ಇದ್ದರೂ ಒಂದು ತಿಂಗಳ ಮುಂಚಿತವಾಗಿ ಮಾಹಿತಿ ನೀಡಿ ಬಳಿಕ ಮನೆ ಖಾಲಿ ಮಾಡಿಸುತ್ತಾರೆ. ಆದರೆ ಇವರು ಕನಿಷ್ಠ ಮಾನವೀಯತೆ ಇಲ್ಲದವರಂತೆ ಸರ್ಕಾರ ನಡೆದುಕೊಳ್ಳುತ್ತಿದೆ. ಇದ್ದಕ್ಕಿದ್ದಂತೆ ಮನೆ ಖಾಲಿ ಮಾಡಿ ಎಂದರೆ ಮಕ್ಕಳು ಮರಿಗಳನ್ನು ಕಟ್ಟಿಕೊಂಡು ಎಲ್ಲಿಗೆ ಹೋಗಬೇಕು. ಕಳೆದ 20 ವರ್ಷಗಳಿಂದ ಸಂಸ್ಥೆಗಾಗಿ ನಮ್ಮ ಮನೆಯವರು ದುಡಿದಿದ್ದಾರೆ. ಆದರೆ ಇಂದಿಗೂ ಅವರಿಗೆ ಕೇವಲ 10 ಸಾವಿರ ಸಂಬಳ ಸಿಗುತ್ತಿದೆ. ಕಳೆದ ಒಂದು ವರ್ಷದಿಂದ ಕೋವಿಡ್ ನಿಂದಾಗಿ ಓಟಿಯೂ ಸಿಗುತ್ತಿಲ್ಲ. ಹೀಗಾದರೆ, ನಮ್ಮ ಬದುಕು ನಡೆಸೋದು ಹೇಗೆ ಎನ್ನೋದು ನೌಕರರ ಕುಟುಂಬದವರಾದ ರೇಣುಕಾ ಅವರು ಪ್ರಶ್ನೆಸಿದಾರೆ.
Published by: Seema R
First published: April 10, 2021, 9:08 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories