• Home
 • »
 • News
 • »
 • state
 • »
 • ಬಿಜೆಪಿ ಸರ್ಕಾರದಲ್ಲಿ ಯಾವುದೂ ಸರಿ ಇಲ್ಲ: ಮಾಜಿ ಸಿಎಂ ಸಿದ್ದರಾಮಯ್ಯ ವ್ಯಂಗ್ಯ

ಬಿಜೆಪಿ ಸರ್ಕಾರದಲ್ಲಿ ಯಾವುದೂ ಸರಿ ಇಲ್ಲ: ಮಾಜಿ ಸಿಎಂ ಸಿದ್ದರಾಮಯ್ಯ ವ್ಯಂಗ್ಯ

ಸಿದ್ದರಾಮಯ್ಯ

ಸಿದ್ದರಾಮಯ್ಯ

ರಾಜೀವ್ ಗಾಂಧಿ ಇದ್ದಾಗ ಖೇಲ್ ರತ್ನ ಪ್ರಶಸ್ತಿ ಆರಂಭಿಸಿದ್ದರು, ಕೇಂದ್ರ ಬಿಜೆಪಿ ಸರ್ಕಾರ ದುರುದ್ದೇಶದಿಂದ ಹೆಸರು ಬದಲಾವಣೆ ಮಾಡುತ್ತಿದೆ. ಧ್ಯಾನ್ ಚಂದ್ ಹೆಸರಲ್ಲಿ ಇನ್ನೂ ದೊಡ್ಡ ಪ್ರಶಸ್ತಿ ನೀಡಿ, ಆದರೆ ರಾಜೀವ್ ಗಾಂಧಿ ಹೆಸರು ಬದಲಾವಣೆ ಬೇಡ ಎಂದು ಅಸಮಾಧಾನ ಹೊರ ಹಾಕಿದರು.

 • Share this:

  ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ ಗೌರವಾರ್ಥ ಶ್ರದ್ಧಾಂಜಲಿ ಕಾರ್ಯಕ್ರಮ ಭಾನುವಾರದಂದು ಬೆಂಗಳೂರಿನ ಗಾಂಧಿ ಭವನದಲ್ಲಿ ನಡೆಯಿತು, ಈ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಸೇರಿದಂತೆ,  ಹಿರಿಯ ಕಾಂಗ್ರೆಸ್, ಜೆಡಿಎಸ್ ಮುಖಂಡರು, ಹೋರಾಟಗಾರರು ಭಾಗಿಯಾಗಿದ್ದರು.


  ದಿವಂಗತ ದೊರೆಸ್ವಾಮಿ ಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದ ಮಾಜಿ ಸಿಎಂ  ಸಿದ್ದರಾಮಯ್ಯ ಅವರು ಮಾತನಾಡಿ,  ದೊರೆಸ್ವಾಮಿ ಅವರು ಎಂದಿಗೂ ಸ್ವಾರ್ಥಕ್ಕಾಗಿ ಹೋರಾಟ ಮಾಡಿಲ್ಲ, ಜನರು ಅನ್ಯಾಯಕ್ಕೆ ಒಳಗಾದಗ ಧ್ವನಿಯಾಗಿ ನಿಂತವರು. ಅವರು ಚುನಾವಣೆಗೆ ನಿಂತು ರಾಜಕಾರಣ ಮಾಡದ ವ್ಯಕ್ತಿತ್ವ ಅವರದು, ಜನರ ಮನಸ್ಸಿನಲ್ಲಿ ಉಳಿದ ಮಹಾನ್ ವ್ಯಕ್ತಿ ದೊರೆಸ್ವಾಮಿ. ನಾವೆಲ್ಲ ಅಧಿಕಾರದಲ್ಲಿ ಇದ್ದವರು, ಮತ್ತೆ ಮುಂದೆ ಅಧಿಕಾರ ಬೇಕೆನ್ನುವವರು. ಆದರೆ ದೊರೆಸ್ವಾಮಿ ತ್ಯಾಗ ಜೀವಿ ಸ್ವಾವಲಂಬನಾ ಜೀವಿ, ನಾನು ಅಧಿಕಾರದಲ್ಲಿ ಇದ್ದಾಗ , ಅವರು ಸ್ವಾರ್ಥಕ್ಕಾಗಿ ಯಾವತ್ತು ಬಂದಿಲ್ಲ ಜನರ ಸಮಸ್ಯೆ ಇದ್ದಾಗ ಮಾತ್ರ ಬಂದು ಮಾತನಾಡುತ್ತಿದ್ದರು, ಮಾಜಿ ನಕ್ಸಲರಿಗೆ ಸುಂದರ ಬದುಕು ಕಟ್ಟಿಕೊಳ್ಳುವಲ್ಲಿ ಮಹತ್ವದ ಪಾತ್ರವಹಿಸಿದ್ದು ದೊರೆಸ್ವಾಮಿ ಅವರು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.


  ಪ್ರಸ್ತುತ ಬಿಜೆಪಿ ಸರ್ಕಾರದ ಬಗ್ಗೆ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ ಅವರು, ಸರ್ಕಾರದಲ್ಲಿ ಯಾವುದೂ ಚೆನ್ನಾಗಿಲ್ಲ, ಮಂತ್ರಿಗಳ ಮಧ್ಯೆ ಹೊಂದಾಣಿಕೆ ಇಲ್ಲ, ಬಿಜೆಪಿ ಸರ್ಕಾರ ಚೆನ್ನಾಗಿ ಆಡಳಿತ ನೀಡುತ್ತಿಲ್ಲ. ದುಂದು ವೆಚ್ಚಕ್ಕೆ ಕಡಿವಾಣ ಹಾಕಬೇಕು ಎನ್ನುತ್ತಾರೆ,  ಯಡಿಯೂರಪ್ಪಗೆ ಸಂಪುಟ ದರ್ಜೆ ಸೌಲಭ್ಯ ನೀಡುತ್ತಾರೆ. ಆದರೆ ಯಡಿಯೂರಪ್ಪ ಅವರು ಸೌಲಭ್ಯ ತಿರಸ್ಕರಿಸಿದ್ದು ಒಳ್ಳೆಯದೇ ಆಯ್ತು. ನಾನೇ ಅವರಿಗೆ ಈ ಸೌಲಭ್ಯ ಪಡೆಯಬೇಡಿ ಎಂದು ಹೇಳೋಣ ಎಂದುಕೊಂಡಿದ್ದೆ, ಅವರೇ ಬೇಡ ಎಂದು ಒಳ್ಳೆ ಕೆಲಸ ಮಾಡಿದ್ದಾರೆ.


  ರಾಜೀವ್ ಗಾಂಧಿ ಇದ್ದಾಗ ಖೇಲ್ ರತ್ನ ಪ್ರಶಸ್ತಿ ಆರಂಭಿಸಿದ್ದರು, ಕೇಂದ್ರ ಬಿಜೆಪಿ ಸರ್ಕಾರ ದುರುದ್ದೇಶದಿಂದ ಹೆಸರು ಬದಲಾವಣೆ ಮಾಡುತ್ತಿದೆ. ಧ್ಯಾನ್ ಚಂದ್ ಹೆಸರಲ್ಲಿ ಇನ್ನೂ ದೊಡ್ಡ ಪ್ರಶಸ್ತಿ ನೀಡಿ, ಆದರೆ ರಾಜೀವ್ ಗಾಂಧಿ ಹೆಸರು ಬದಲಾವಣೆ ಬೇಡ ಎಂದು ಅಸಮಾಧಾನ ಹೊರ ಹಾಕಿದರು.


  ತುಮಕೂರಿನಲ್ಲಿ ಮೋದಿ ಕ್ರೀಡಾಂಗಣ ಇದೆ, ದೆಹಲಿಯಲ್ಲಿ ಅರುಣ್​ ಜೇಟ್ಲಿ ಹೆಸರಿನಲ್ಲಿ‌ ಕ್ರೀಡಾಂಗಣ ಇದೆ. ಬೆಂಗಳೂರಿನಲ್ಲಿ ದೀನ್ ದಯಾಳ್ ಉಪಾಧ್ಯಾಯ ಹೆಸರಲ್ಲಿ ಮೇಲ್ಸೇತುವೆ ಇದೆ, ವಾಜಪೇಯಿ ಹೆಸರಲ್ಲಿ ಅನೇಕ ಯೋಜನೆಗಳನ್ನು ಜಾರಿಗೆ ತರಲಾಗಿದೆ.


  ಇದನ್ನೂ ಓದಿ: ಕ್ಯಾಬಿನೆಟ್ ಕಾರ್ಯದರ್ಶಿ ರಾಜೀವ್ ಗೌಬಾ; ಒಂದು ವರ್ಷ ಅವಧಿ ವಿಸ್ತರಣೆ ಮಾಡಿದ ಕೇಂದ್ರ ಸರ್ಕಾರ


  ಅವುಗಳನ್ನ ಕಾಂಗ್ರೆಸ್​ ಪಕ್ಷದವರು ಬದಲಾವಣೆ ಮಾಡಿಲ್ಲ, ನಮಗೆ ಎಂದಿಗೂ ದ್ವೇಷ ರಾಜಕಾರಣದ ಮೇಲೆ ನಂಬಿಕೆ ಇಲ್ಲ, ಆದರೆ ಬಿಜೆಪಿ ದ್ವೇಷದ ರಾಜಕಾರಣ ಮಾಡುತ್ತಿದೆ ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.


  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.

  Published by:HR Ramesh
  First published: