NOTA : ನಾಲ್ಕು ಕ್ಷೇತ್ರಗಳಲ್ಲಿ ಜೆಡಿಎಸ್​ ಗಿಂತ ನೋಟಾಕ್ಕೆ ಚಲಾವಣೆಯಾದ ಮತಗಳೇ ಅಧಿಕ ಎಲ್ಲಿ ಗೊತ್ತಾ ?

15 ಕ್ಷೇತ್ರಗಳಲ್ಲಿ  ಮೂರು ಕ್ಷೇತ್ರಗಳಲ್ಲಿ ಜೆಡಿಎಸ್  ಪಕ್ಷ ಉಳಿಸಿಕೊಳ್ಳಬೇಕಾಗಿತ್ತು.  ಆದರೆ ತಮ್ಮದೇ ಭದ್ರಕೋಟೆಯಾಗಿದ್ದ ಮಹಾಲಕ್ಷ್ಮೀ ಲೇಔಟ್, ಹುಣಸೂರು ಹಾಗೂ ಕೆ ಆರ್​ ಪೇಟೆ, ಹಾಗೂ ಯಶವಂತಪುರ ಕ್ಷೇತ್ರಗಳಲ್ಲಿ ಸೋಲಿಗೆ ಶರಣಾಗಿದ್ದಾರೆ

G Hareeshkumar | news18-kannada
Updated:December 10, 2019, 9:15 AM IST
NOTA : ನಾಲ್ಕು ಕ್ಷೇತ್ರಗಳಲ್ಲಿ ಜೆಡಿಎಸ್​ ಗಿಂತ ನೋಟಾಕ್ಕೆ ಚಲಾವಣೆಯಾದ ಮತಗಳೇ ಅಧಿಕ ಎಲ್ಲಿ ಗೊತ್ತಾ ?
ಸಾಂದರ್ಭಿಕ ಚಿತ್ರ
  • Share this:
ಬೆಂಗಳೂರು(ಡಿ.09): ರಾಜ್ಯ ವಿಧಾನಸಭೆಯ ಉಪ ಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದು, ನಿರೀಕ್ಷೆಯಂತೆ ಬಿಜೆಪಿಯ 12 ಅಭ್ಯರ್ಥಿಗಳು ಗೆದ್ದಿದ್ದಾರೆ. ಮತಗಳ ಲೆಕ್ಕಾಚಾರ ಗಮನಿಸಿದ್ರೆ  ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ಜೆಡಿಎಸ್ ಅಭ್ಯರ್ಥಿ ಪಡೆದ ಮತಗಳಿಂತ ನೋಟಾಕ್ಕೆ ಬಿದ್ದ ಮತಗಳೇ ಅಧಿಕವಾಗಿವೆ.

15 ವಿಧಾನಸಭಾ ಕ್ಷೇತ್ರಗಳಲ್ಲಿ ಜೆಡಿಎಸ್ ಒಂದು ಸ್ಥಾನವನ್ನು ಗೆಲ್ಲಲು ಸಾಧ್ಯವಾಗಿಲ್ಲ. ಅತಿಯಾದ ಆತ್ಮವಿಶ್ವಾಸವೇ ಜೆಡಿಎಸ್​​ಗೆ ಮುಳುವಾಯ್ತು ಅನ್ನೋ ಚರ್ಚೆ ಶುರುವಾಗಿದೆ.

ಯಲ್ಲಾಪುರ, ರಾಣೆಬೆನ್ನೂರು, ಕೆ ಆರ್​ ಪುರ,  ಹಿರೇಕೆರೂರು ವಿಧಾನಸಭಾ ಕ್ಷೇತ್ರಗಳಲ್ಲಿ  ಮೂರನೇ ಸ್ಥಾನಕ್ಕೆ ನೋಟಾ ಮತಗಳು ಬಿದ್ದಿವೆ.

15 ವಿಧಾನಸಭಾ ಕ್ಷೇತ್ರಗಳಲ್ಲಿ  ನೋಟಾಕ್ಕೆ ಬಿದ್ದ ಮತಗಳು

ಯಲ್ಲಾಪುರ - 1,444, ರಾಣೇಬೆನ್ನೂರು - 1608,  ಕೆ ಆರ್​ ಪುರ - 5184, ಕಾಗವಾಡ - 1238, ಅಥಣಿ - 1532, ಗೋಕಾಕ್​​​ - 1153, ಹಿರೇಕೆರೂರು - 789, ವಿಜಯನಗರ -1821, ಚಿಕ್ಕಬಳ್ಳಾಪುರ- 973, ಯಶವಂತಪುರ - 2812, ಮಹಾಲಕ್ಷ್ಮೀ ಲೇಔಟ್ -2034, ಶಿವಾಜಿನಗರ - 986,ಹೊಸಕೋಟೆ - 757, ಕೆ ಆರ್ ಪೇಟೆ - 748, ಹುಣಸೂರು - 994

ಜೆಡಿಎಸ್ ಅಭ್ಯರ್ಥಿಗಳು ಪಡೆದ ಮತಗಳು

ಕಾಗವಾಡ - 2448, ಗೋಕಾಕ್​​​ 27948, ಯಲ್ಲಾಪುರ - 1235, ಹಿರೇಕೆರೂರು ಜೆಡಿಎಸ್ ಬೆಂಬಲಿತ ಅಭ್ಯರ್ಥಿ - 275, ರಾಣೇಬೆನ್ನೂರು - 979, ವಿಜಯನಗರ- 3885, ಚಿಕ್ಕಬಳ್ಳಾಪುರ - 35869, ಕೆ ಆರ್​ ಪುರ -2048, ಯಶವಂತಪುರ - 117023, ಮಹಾಲಕ್ಷ್ಮೀ ಲೇಔಟ್ - 23516, ಶಿವಾಜಿನಗರ - 1098, ಕೆ ಆರ್​ ಪೇಟೆ - 56363, ಹುಣಸೂರು - 32895 ಮತಗಳನ್ನು ಪಡೆದಿದ್ದಾರೆ.ಇದನ್ನೂ ಓದಿ :  ವಿಜಯದ ನಗೆ ಬೀರಿದ ಆನಂದ್ ಸಿಂಗ್; ಬಿಜೆಪಿ ಬಂಡಾಯ ಅಭ್ಯರ್ಥಿಗೆ ಸಿಕ್ಕ ಮತಗಳು ಎಷ್ಟು ಗೊತ್ತಾ?

15 ಕ್ಷೇತ್ರಗಳಲ್ಲಿ  ಮೂರು ಕ್ಷೇತ್ರಗಳಲ್ಲಿ ಜೆಡಿಎಸ್  ಪಕ್ಷ ಉಳಿಸಿಕೊಳ್ಳಬೇಕಾಗಿತ್ತು.  ಆದರೆ ತಮ್ಮದೇ ಭದ್ರಕೋಟೆಯಾಗಿದ್ದ ಮಹಾಲಕ್ಷ್ಮೀ ಲೇಔಟ್, ಹುಣಸೂರು ಹಾಗೂ ಕೆ ಆರ್​ ಪೇಟೆ, ಹಾಗೂ ಯಶವಂತಪುರ ಕ್ಷೇತ್ರಗಳಲ್ಲಿ ಸೋಲಿಗೆ ಶರಣಾಗಿದ್ದಾರೆ. ಈ ಕ್ಷೇತ್ರಗಳನ್ನು ಮತ್ತೊಮ್ಮೆ ತಮ್ಮ ವಶಕ್ಕೆ ಪಡೆದುಕೊಳ್ಳುವ ತಂತ್ರಗಳನ್ನು ರೂಪಿಸಿದರೂ ಅದು ಫಲಿಸಲಿಲ್ಲ. ಮೈತ್ರಿ ಸರ್ಕಾರ ಉರುಳಿಸಿದ್ದ ಅನರ್ಹರ ವಿರುದ್ದ ಸೇಡು ತೀರಿಸಿಕೊಳ್ಳಲು ಜೆಡಿಎಸ್ ನಾಯಕರು ತಂತ್ರವನ್ನು ಹಣೆದಿದ್ದರು.

 
First published: December 9, 2019, 9:38 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading