ಬಿಜೆಪಿ ಬಹುಮತಕ್ಕೆ ಕೊಕ್ಕೆ ಹಾಕಿದ್ದು ಕಾಂಗ್ರೆಸ್​ ಜೆಡಿಎಸ್​ ಅಲ್ಲ...!: ನಿಜವಾದ ಕಾರಣವೇನು ಗೊತ್ತಾ?


Updated:May 16, 2018, 5:35 PM IST
ಬಿಜೆಪಿ ಬಹುಮತಕ್ಕೆ ಕೊಕ್ಕೆ ಹಾಕಿದ್ದು ಕಾಂಗ್ರೆಸ್​ ಜೆಡಿಎಸ್​ ಅಲ್ಲ...!: ನಿಜವಾದ ಕಾರಣವೇನು ಗೊತ್ತಾ?

Updated: May 16, 2018, 5:35 PM IST
ನಾಸಿರ್ ಹುಸೈನ್, ನ್ಯೂಸ್ 18 ಕನ್ನಡ

ಬೆಂಗಳೂರು(ಮೇ.16): ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ವಿಜಯ ರಥ 104ಕ್ಕೆ ನಿಂತಿದೆ. ಬಿಜೆಪಿಯು ಕರ್ನಾಟಕದಲ್ಲಿ ಬಹುಮತ ಪಡೆಯಲು ಕೇವಲ 8 ಸ್ಥಾನಗಳ ಅಂತರದಿಂದ ಹಿಂದೆ ಬಿದ್ದಿದೆ. ಆದರೆ ಇವರ ಈ ವಿಜಯರಥದ ಹಾದಿಯಲ್ಲಿ ತೊಡಕಾಗಿದ್ದು ಕಾಂಗ್ರೆಸ್​ ಹಾಗೂ ಜೆಡಿಎಸ್​ನ ರಣತಂತ್ರವಲ್ಲ...! ಈ ಪಕ್ಷಗಳಲ್ಲದಿದ್ದರೆ ಬಿಜೆಪಿಗೆ ಮುಳುವಾಗಿದ್ದೇನು ಅಂತೀರಾ? ಇಲ್ಲಿದೆ ವಿವರ

ಬಿಜೆಪಿ ಹಾದಿಯ ಮುಳ್ಳಾಗಿದ್ದು ಕಾಂಗ್ರೆಸ್​ ಹಾಗೂ ಜೆಡಿಎಸ್​ ಅಲ್ಲ ಬದಲಾಗಿ ಮತದಾರನಿಗೆ ತಮ್ಮ ಅಸಮಾಧಾನ ಹೊರ ಹಾಕಲು ಸಿಕ್ಕಿದ ವಿಶೇಷ ಅಧಿಕಾರ ಅಂದರೆ ನೋಟಾ(ಮೇಲಿನ ಅಭ್ಯರ್ಥಿಗಳಲ್ಲಿ ಯಾರೂ ಅಲ್ಲ) ಎಂಬ ಆಯ್ಕೆ.

ಬಿಜೆಪಿ ಸೋತಿರುವ ಕ್ಷೇತ್ರಗಳನ್ನು ಗಮನಿಸಿದರೆ 5 ಕ್ಷೇತ್ರಗಳಲ್ಲಿ ಸೋತ ಅಭ್ಯರ್ಥಿಗಳ ಅಂತರಕ್ಕಿಂತ ಹೆಚ್ಚಿನ ಮತಗಳು ನೋಟಾ ಪಾಲಾಗಿವೆ. ಇನ್ನು ಮೂರು ಕ್ಷೇತ್ರಗಳಲ್ಲಿ ನೋಟಾ ಪಾಲಾದ ಮತ ಹಾಗೂ ಅಭ್ಯರ್ಥಿಗಳ ಸೋಲಿನ ಅಂತರದಲ್ಲಿ ಸಾಮಾನ್ಯ ವ್ಯತ್ಯಾಸವಿದೆ. ಈ 8 ಕ್ಷೇತ್ರಗಳಲ್ಲಿ ನೋಟಾ ಪಾಲಾದ ಮತಗಳ ಸಂಖ್ಯೆ ಸ್ವಲ್ಪವಾದರೂ ಬಿಜೆಪಿ ಪರವಾಗಿರುತ್ತಿದ್ದರೆ ಕರ್ನಾಟಕದ ಈಗಿನ ರಾಜಕೀಯ ಚಿತ್ರಣ ಬೇರೆಯದ್ದೇ ಆಗಿರುತ್ತಿತ್ತು.ಕರ್ನಾಟಕದಲ್ಲಿ ನೋಟಾಗೆ ಸಿಕ್ಕ ಒಟ್ಟು ಮತಗಳು 3.22 ಲಕ್ಷ. ಅಂದರೆ ಒಟ್ಟು ಮತಗಳಲ್ಲಿ ಶೇ. 0.9 ರಷ್ಟು ಮತಗಳು ನೋಟಾ ಪಾಲಾಗಿವೆ. ಈ ಮೂಲಕ ನೋಟಾ ಕರ್ನಾಟಕದಲ್ಲಿ ನಾಲ್ಕನೇ ದೊಡ್ಡ ಪಕ್ಷವಾಗುತ್ತಿತ್ತು ಅಂತ ಹೇಳಬಹುದು. ಯಾಕೆಂದರೆ ಬಿಎಸ್​ಪಿ, ಆಮ್​ ಆದ್ಮಿ ಹಾಗೂ ಸಿಪಿಎಂ ಸೇರಿದಂತೆ ಇತರ ಪಕ್ಷಗಳಿಗೆ ಕೇವಲ ಶೇ. 0.2 ರಿಂದ 0.3 ರಷ್ಟು ಮತಗಳು ಸಿಕ್ಕಿವೆ.

2013ರಲ್ಲಿ ಸುಪ್ರೀಂ ಕೋರ್ಟ್​ ಆದೇಶ ನೀಡಿದ ಬಳಿಕ ನೋಟಾ ಬಟನ್ ಇವಿಎಂ ಮತಯಂತ್ರದಲ್ಲಿ ಕೊನೆಯ ಆಯ್ಕೆಯಾಗಿ ಸೇರ್ಪಡೆ ಮಾಡಲಾಗಿತ್ತು. ಇದಾದ ಬಳಿಕ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಮೊದಲ ಬಾರಿ ನೋಟಾ ಬಳಕೆಯಾಗಿತ್ತು. ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳು ಯೋಗ್ಯರಲ್ಲ ಎಂದಾಗ ಮತದಾರರು ನೋಟಾವನ್ನು ನಾಯ್ಕೆ ಮಾಡಬಹುದು.
Loading...

ಸದ್ಯ ನೋಟಾಗೆ ಸಿಕ್ಕ ಮತಗಳ ಸಂಖ್ಯೆ ಎಲ್ಲಾ ಅಭ್ಯರ್ಥಿಗಳಿಗೆ ಸಿಕ್ಕ ಮತಗಳಿಗಿಂತ ಹೆಚ್ಚಿದ್ದರೂ, ಅತ್ಯಧಿಕ ಮತ ಪಡೆದ ಅಭ್ಯರ್ಥಿಯನ್ನು ಜಯಶಾಲಿ ಎಂದೇ ಘೋಷಿಸಲಾಗುತ್ತದೆ.
First published:May 16, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ