ಸಾಮಾಜಿಕ ಜಾಲತಾಣ, ಸ್ಮಾರ್ಟ್​ ಫೋನ್​ನಿಂದ ಯೋಧರನ್ನು ದೂರವಿಡಲು ಸಾಧ್ಯವಿಲ್ಲ; ಸೇನಾಧಿಕಾರಿ ಬಿಪಿನ್​ ರಾವತ್​

news18
Updated:September 4, 2018, 3:37 PM IST
ಸಾಮಾಜಿಕ ಜಾಲತಾಣ, ಸ್ಮಾರ್ಟ್​ ಫೋನ್​ನಿಂದ ಯೋಧರನ್ನು ದೂರವಿಡಲು ಸಾಧ್ಯವಿಲ್ಲ; ಸೇನಾಧಿಕಾರಿ ಬಿಪಿನ್​ ರಾವತ್​
news18
Updated: September 4, 2018, 3:37 PM IST
ನ್ಯೂಸ್​ 18 ಕನ್ನಡ

ನವದೆಹಲಿ (ಸೆ.4): ಸ್ಮಾರ್ಟ್​ ಫೋನ್​ , ಸಾಮಾಜಿಕ ಜಾಲತಾಣಗಳನ್ನು ಬಳಸದಂತೆ ಯೋಧರಿಗೆ ಕಟ್ಟುಪಾಡು ವಿಧಿಸಲು ಸಾಧ್ಯವಿಲ್ಲ. ಆದರೆ ಬಳಸುವಾಗ ಎಚ್ಚರಿಕೆ ವಹಿಸುವುದು ಅಗತ್ಯ ಎಂದು ಸೇನಾ ಮುಖ್ಯಸ್ಥ ಬಿಪಿನ್​ ರಾವತ್​ ತಿಳಿಸಿದ್ದಾರೆ.

ಸಾಮಾಕಜಿಕ ಜಾಲತಾಣದಿಂದ ಸೇನಾಧಿಕಾರಿಗಳನ್ನು ದೂರವಿರಿಸುವ ಬಗ್ಗೆ ಸರ್ಕಾರದ ಚಿಂತನೆ ಕುರಿತು ಅವರು ಪ್ರತಿಕ್ರಿಯೆ ನೀಡಿದ್ದಾರೆ.

ನಾವು ಸಾಮಾಜಿಕ ಜಾಲತಾಣದಿಂದ ಯೋಧರನ್ನು ದೂರವಿರಿಸುವ ಬಗ್ಗೆ ನಮಗೆ ಸಲಹೆ ಬಂದಿದೆ. ನಮ್ಮ ಸೈನಿಕರಿಗೆ ಇದರಿಂದ ದೂರವಿರುವಂತೆ ಸಲಹೆ ನೀಡಲಾಗಿದೆ. ಆದರೆ ನಮ್ಮ ಯೋಧರು ಸ್ಮಾರ್ಟ್​ ಪೋನ್​ ಮೋಡಿಗೆ ಒಳಗಾಗದಂತೆ ತಡೆಯಲು ಸಾಧ್ಯವೇ?  ಸ್ಮಾರ್ಟ್​ಫೋನ್​ ಬಳಕೆ ತಡೆಯಿಡಿಯಲು ಸಾಧ್ಯವಾಗದಿದ್ದರೆ, ಅವರಿಗೆ ಆ ಸೌಲಭ್ಯವನ್ನು ನೀಡುವುದೇ ಒಳಿತು ಎಂದು ಅವರು ತಿಳಿಸಿದ್ದಾರೆ ಎಂದು ಎಎನ್​ಐ ವರದಿ ಮಾಡಿದೆ.

ಯೋಧರು ಸಾಮಾಜಿಕ ಜಾಲತಾಣವನ್ನು ಬಳಸುತ್ತಾರೆ. ಸಾಮಾಜಿಕ ಜಾಲತಾಣವನ್ನು ನಮ್ಮ ಅನುಕೂಲಕ್ಕೆ ತಕ್ಕಂತೆ ಬಳಕೆ ಮಾಡಬೇಕು. ನಮ್ಮ ಕೃತಕ ಬುದ್ಧಿಮತ್ತೆಯನ್ನು ಸಮರ್ಥವಾಗಿ ಬಳಸಿಕೊಳ್ಳಬೇಕಾದ ಅಗತ್ಯವಿದೆ. ಕೃತಕ ಬುದ್ಧಿಮತ್ತೆಯ ಪ್ರಯೋಜನವನ್ನು ಹತೋಟಿಯಲ್ಲಿಕೊಳ್ಳಬೇಕಾದರೆ, ಅದು ಸಾಮಾಜಿಕ ಮಾಧ್ಯಮಗಳ ಮೂಲಕ ಮಾಡಬೇಕು ಎಂದರು.

ಸೇನೆಯಲ್ಲಿ ಹಿರಿಯ ಅಧಿಕಾರಿ ಕಾರ್ಯವೈಖರಿ ಸೇರಿದಂತೆ ಹಲವು ಸಮಸ್ಯೆಗಳ ಕುರಿತು ಕೆಲವು ಯೋಧರು  ಟೀಕಿಸಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವನ್ನು ಹಾಕಿದ್ದರು. ಇದರಿಂದಾಗಿ ಯೋಧರಿಗೆ ಸಾಮಾಜಿಕ ಮಾಧ್ಯಮ ನೀತಿ ಜಾರಿಗೆ ತರಬೇಕು ಎಂಬ ಕೂಗು ಕೇಳಿ ಬಂದಿತ್ತು.

 
First published:September 4, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ