• Home
  • »
  • News
  • »
  • state
  • »
  • Karnataka CM: BSY ಮಾತ್ರವಲ್ಲ, ರಾಜ್ಯದ ಬಹುತೇಕ ಮುಖ್ಯಮಂತ್ರಿಗಳು ತಮ್ಮ ಅಧಿಕಾರಾವಧಿ ಪೂರ್ಣಗೊಳಿಸಿಲ್ಲ!

Karnataka CM: BSY ಮಾತ್ರವಲ್ಲ, ರಾಜ್ಯದ ಬಹುತೇಕ ಮುಖ್ಯಮಂತ್ರಿಗಳು ತಮ್ಮ ಅಧಿಕಾರಾವಧಿ ಪೂರ್ಣಗೊಳಿಸಿಲ್ಲ!

ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳು

ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳು

BSY-Bommai: ನಮ್ಮ ರಾಜ್ಯದ ಬಹುಪಾಲು ಮುಖ್ಯಮಂತ್ರಿಗಳು ಅಧಿಕಾರವನ್ನೇನೋ ಪಡೆದಿದ್ದಾರೆ, ಆದರೆ ಪೂರ್ಣಾವಧಿ ಮುಗಿಸಿರುವವರು ಮಾತ್ರ ಬೆರಳೆಣಿಕೆಯಷ್ಟು ಜನ ಮಾತ್ರ. ನಿರ್ಗಮಿತ ಸಿಎಂ ಬಿ ಎಸ್ ಯಡ್ಯೂರಪ್ಪ ಕೂಡಾ ನಾಲ್ಕು ಬಾರಿ ಮುಖ್ಯಮಂತ್ರಿ ಗಾದಿ ಏರಿದ್ದರು, ಆದ್ರೆ ಒಮ್ಮೆ ಕೂಡಾ 5 ವರ್ಷದ ಅವಧಿ ಪೂರ್ಣಗೊಳಿಸಿಲ್ಲ. ಇನ್ನು ಯಾರ್ಯಾರು ಎಷ್ಟು ಅವಧಿ ಆಡಳಿತ ನಡೆಸಿದ್ದಾರೆ?

ಮುಂದೆ ಓದಿ ...
  • Share this:

Karnataka CM: ಬಿಎಸ್‌ವೈ ಎಂದು ಕರೆಯಲ್ಪಡುವ ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಕರ್ನಾಟಕದ ಮುಖ್ಯಮಂತ್ರಿಯಾಗಿ ನಾಲ್ಕು ಬಾರಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ರಾಜ್ಯದ ಇತಿಹಾಸದಲ್ಲಿ ಯಾವುದೇ ರಾಜಕಾರಣಿಗಿಂತ ಯಡಿಯೂರಪ್ಪ ಹೆಚ್ಚು ಬಾರಿ ಸಿಎಂ ಆಗಿದ್ದಾರೆ. ಆದರೂ, ಅವರು ತಮ್ಮ ಅವಧಿಯನ್ನು ಒಂದು ಬಾರಿಯೂ ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ. ಈ ಮೂಲಕ ರಾಜ್ಯದ ಅಧಿಕಾರದ ಚುಕ್ಕಾಣಿ ಹಿಡಿದ ಬಿಎಸ್‌ವೈ ಪಾಲಿಗೆ ಅತ್ಯಂತ ದುರದೃಷ್ಟಕರವಾಗಿದೆ. 1973 ರಲ್ಲಿ ಮೈಸೂರು ರಾಜ್ಯ ಎಂದು ಈ ಹಿಂದೆ ಗುರುತಿಸಿಕೊಂಡ ಕರ್ನಾಟಕದಲ್ಲಿ 15 ಜನರನ್ನು ರಾಜ್ಯದ ಉನ್ನತ ಕ್ಯಾಬಿನೆಟ್ ಸ್ಥಾನಕ್ಕೆ ಆಯ್ಕೆ ಮಾಡಲಾಗಿದೆ ಅಂದರೆ ಮುಖ್ಯಮಂತ್ರಿಯಾಗಿದ್ದಾರೆ. ಆದರೆ, ಈ ಪೈಕಿ ಕೇವಲ ಮೂವರು - ಡಿ ದೇವರಾಜ್ ಅರಸ್‌ (1972-1977), ಎಸ್.ಎಂ.ಕೃಷ್ಣ (1999-2004), ಮತ್ತು ಸಿದ್ದರಾಮಯ್ಯ (2013-2018) ಮಾತ್ರ ತಮ್ಮ ಅಧಿಕಾರಾವಧಿಯನ್ನು ಪೂರ್ಣಗೊಳಿಸಿದ್ದಾರೆ ಅಥವಾ ತಮ್ಮ ಅಧಿಕಾರಾವಧಿಯ ಅಂತಿಮ ದಿನಗಳಲ್ಲಿ ತಮ್ಮ ಸರ್ಕಾರಗಳನ್ನು ವಿಸರ್ಜಿಸಿದ್ದಾರೆ. ಮತ್ತು ಇವರೆಲ್ಲರೂ ಕಾಂಗ್ರೆಸ್‌ ಪಕ್ಷದಲ್ಲಿದ್ದಾಗ ಸಿಎಂ ಆಗಿದ್ದವರು.


1980ರ ಜನವರಿ 7 ರ ವೇಳೆಗಾಗಲೇ ದೇವರಾಜ್‌ ಅರಸ್‌ ಇಂದಿರಾಗಾಂಧಿಯವರ ಕಾಂಗ್ರೆಸ್‌ ತೊರೆದು ಕಾಂಗ್ರೆಸ್‌ನ ತಮ್ಮದೇ ಬಣವನ್ನು ಪ್ರಾರಂಭಿಸಿದ್ದರು. ಆದರೆ, ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್‌ (ಐ)ಗೆ ವಿಜಯದ ನಂತರ ಪಕ್ಷದ ಬಹುತೇಕ ಶಾಸಕರು ಹಾಗೂ ನಾಯಕರು ಇಂದಿರಾ ಗಾಂಧಿಯವರ ಕಾಂಗ್ರೆಸ್‌ ಸೇರಿದ ಕಾರಣ ಅರಸ್‌ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಈ ಹಿನ್ನೆಲೆ ಎರಡನೇ ಬಾರಿ ಸಿಎಂ ಆಗಿದ್ದ ವೇಳೆ ತಮ್ಮ ಅಧಿಕಾರಾವಧಿಯನ್ನು ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ. ನಂತರ, ಆರ್ ಗುಂಡೂ ರಾವ್ ಸಿಎಂ ಆಗಿ ನೇಮಕವಾದರು. ಅವರು ನಂತರ ಕರ್ನಾಟಕದ ಆರನೇ ಅಸೆಂಬ್ಲಿಯ ಅಂತ್ಯದವರೆಗೆ ಅಂದರೆ ಜನವರಿ 1983ರವರೆಗೆ ಸಿಎಂ ಸ್ಥಾನದಲ್ಲಿ ಮುಂದುವರೆದರು.


ಇದನ್ನೂ ಓದಿ: Basavaraj Bommai: ನೂತನ ಸಿಎಂ ಬಸವರಾಜ ಬೊಮ್ಮಾಯಿ; ತಂದೆ-ಮಗ ಇಬ್ಬರಿಗೂ ಅದೃಷ್ಟ ಒಲಿದ ರೀತಿ ಒಂದೇ!


ಇನ್ನು, ಕರ್ನಾಟಕದ ಮೊದಲ ಕಾಂಗ್ರೆಸೇತರ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದ ರಾಮಕೃಷ್ಣ ಹೆಗಡೆ, 1983 ರಲ್ಲಿ ಜನತಾ ಪಕ್ಷದ ಟಿಕೆಟ್‌ನಡಿ ಜಯಗಳಿಸಿದ ಒಂದು ವರ್ಷದ ನಂತರ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದರು. 1984 ರ ಲೋಕಸಭಾ ಚುನಾವಣೆಯಲ್ಲಿ ತಮ್ಮ ಪಕ್ಷದ ಕಳಪೆ ಪ್ರದರ್ಶನವನ್ನು ಉಲ್ಲೇಖಿಸಿ ರಾಜೀನಾಮೆ ನೀಡಿದ ನಂತರ ತಮ್ಮ ಸರ್ಕಾರಕ್ಕೆ ಹೊಸ ಜನಾದೇಶವನ್ನು ಕೋರಿದ್ದರು ಹೆಗ್ಡೆ. ಆದರೂ, 1985 ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಮತ್ತೆ ವಿಜಯಶಾಲಿಯಾಗಿದ್ದರೂ, ಭ್ರಷ್ಟಾಚಾರದ ಆರೋಪ ಕೇಳಿಬಂದ ನಂತರ 1988ರಲ್ಲಿ ಮತ್ತೆ ರಾಜೀನಾಮೆ ನೀಡಿದರು.

ಬಳಿಕ ಜನತಾ ಪಕ್ಷದ ಎಸ್ ಆರ್ ಬೊಮ್ಮಾಯಿ ಸಿಎಂ ಆಗಿ ನೇಮಕವಾದರು. ಆದರೆ, ಸದನದಲ್ಲಿ ವಿಶ್ವಾಸಮತ ಯಾಚನೆಯಲ್ಲಿ ಸೋಲನುಭವಿಸಿದ ನಂತರ ಅಂದರೆ ಸಿಎಂ ಆಗಿ 281 ದಿನಗಳಾಗಿದ್ದಾಗಲೇ ರಾಜ್ಯಪಾಲರು ಬೊಮ್ಮಾಯಿ ಸರ್ಕಾರವನ್ನು ವಜಾಗೊಳಿಸಿದರು.


ಇದನ್ನೂ ಓದಿ: Basavaraj Bommai: ರಾಜ್ಯಕ್ಕೆ ಇಬ್ಬರು ಮುಖ್ಯಮಂತ್ರಿಗಳನ್ನು ಕೊಟ್ಟ ಧಾರವಾಡದ ಕಮಡೊಳ್ಳಿ, ಊರೆಲ್ಲೆಲ್ಲಾ ಹಬ್ಬದ ಸಂಭ್ರಮ

ನಂತರ, ಕರ್ನಾಟಕದ 9ನೇ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬಂದಿತು ಮತ್ತು ಸರ್ಕಾರವನ್ನು ಮುನ್ನಡೆಸಲು ವೀರೇಂದ್ರ ಪಾಟೀಲ್ ಅವರನ್ನು ಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡಲಾಯಿತು. ಆದರೆ, 1990ರಲ್ಲಿ ರಾಜ್ಯದಲ್ಲಿ ನಡೆದ ಕೋಮು ಹಿಂಸಾಚಾರದ ನಂತರ ಅಂದಿನ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ ಅಧ್ಯಕ್ಷ ರಾಜೀವ್ ಗಾಂಧಿ ವಜಾಗೊಳಿಸಿದ್ದರಿಂದ ಅವರಿಗೆ ಒಂದು ವರ್ಷವೂ ಅಧಿಕಾರದಲ್ಲಿ ಪೂರ್ಣಗೊಳ್ಳಲು ಸಾಧ್ಯವಾಗಲಿಲ್ಲ.


ಅವರ ತಕ್ಷಣದ ಬದಲಿ ಸಿಎಂ ಆಗಿ ಎಸ್‌. ಬಂಗಾರಪ್ಪರನ್ನು ಆಯ್ಕೆ ಮಾಡಲಾಯಿತು. ರಾಜ್ಯದ 12ನೇ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ 2 ವರ್ಷ ಮತ್ತು 33 ದಿನಗಳ ನಂತರ (ಆರೋಗ್ಯ ಸಮಸ್ಯೆಗಳನ್ನು ಉಲ್ಲೇಖಿಸಿ) ರಾಜೀನಾಮೆ ನೀಡುವಂತೆ ರಾಜೀವ್‌ ಗಾಂಧಿ ಕೇಳಿದ್ದರು.

ತರುವಾಯ, ಎಂ ವೀರಪ್ಪ ಮೊಯಿಲಿ 2 ವರ್ಷ ಮತ್ತು 22 ದಿನಗಳ ಅವಧಿಗೆ ಸಿಎಂ ಆಗಿದ್ದರು. ಈ ವೇಳೆಗೆ 9ನೇ ವಿಧಾನಸಭೆಯ ಅಧಿಕಾರಾವಧಿ ಕೊನೆಗೊಂಡಿತು. 1994 ರ ನಂತರದ ರಾಜ್ಯ ಚುನಾವಣೆಯಲ್ಲಿ ಜನತಾದಳವು ರಾಜ್ಯದ ಏಕೈಕ ಅತಿದೊಡ್ಡ ಪಕ್ಷವಾಯಿತು ಮತ್ತು ಎಚ್‌.ಡಿ. ದೇವೇಗೌಡ ಸಿಎಂ ಆಗಿ ಅಧಿಕಾರ ವಹಿಸಿಕೊಂಡರು. ಆದರೆ, ಒಂದೂವರೆ ವರ್ಷಗಳ ನಂತರ, ಪ್ರಧಾನಿ ಹುದ್ದೆಗೆ ಆಯ್ಕೆಯಾದ ಕಾರಣ ದೇವೇಗೌಡ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಕರ್ನಾಟಕ ಮೂಲದ ಏಕೈಕ ವ್ಯಕ್ತಿ ಪ್ರಧಾನಿಯಾಗಿದ್ದು ಅಂದರೆ ದೇವೇಗೌಡರೇ.


1999ರ ವಿಧಾನಸಭಾ ಚುನಾವಣೆಯವರೆಗೆ ಉಳಿದ ಮೂರು ವರ್ಷ ಮತ್ತು 129 ದಿನಗಳಿಗೆ ರಾಜ್ಯದ ಸಿಎಂ ಆಗಿ ಪೂರ್ಣಗೊಳಿಸಲು ಜೆ. ಎಚ್‌. ಪಟೇಲ್ ಅವರನ್ನು ಆಯ್ಕೆ ಮಾಡಲಾಯಿತು. ಬಳಿಕ ನಂತರದ ಚುನಾವಣೆ ಅಂದರೆ 2004 ರವರೆಗೆ ಎಸ್.ಎಂ. ಕೃಷ್ಣ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಅಧಿಕಾರ ಪೂರ್ಣಗೊಳಿಸಿದರು. ಆದರೆ, 2004ರ ಚುನಾವಣೆಯ ನಂತರ ಕಾಂಗ್ರೆಸ್ ನಾಯಕ ಧರಮ್ ಸಿಂಗ್ ಕಾಂಗ್ರೆಸ್-ಜೆಡಿ (ಎಸ್) ಒಕ್ಕೂಟದ ಸಿಎಂ ಆಗಿ ಆಯ್ಕೆಯಾದರು. ಬಳಿಕ ಫೆಬ್ರವರಿ 3, 2006 ರಂದು ಎಚ್. ಡಿ. ಕುಮಾರಸ್ವಾಮಿ ಬಿಜೆಪಿಯೊಂದಿಗೆ ಸರ್ಕಾರ ರಚಿಸಿದ ಕಾರಣ ಅವರು ಅಧಿಕಾಆರ ಕಳೆದುಕೊಂಡರು.


ಇದನ್ನೂ ಓದಿ: Rain Damage: ಸದಾ ಬರಗಾಲದಿಂದ ತತ್ತರಿಸುತ್ತಿದ್ದ ಕೊಪ್ಪಳದಲ್ಲೀಗ ಮಳೆಯೂ ಶಾಪ

ಇನ್ನು, ಜೆಡಿಎಸ್ - ಬಿಜೆಪಿ ಸಮ್ಮಿಶ್ರ ಸರ್ಕಾರದಲ್ಲಿ ಕುಮಾರಸ್ವಾಮಿ ಮತ್ತು ಯಡಿಯೂರಪ್ಪ ನಡುವೆ ಸಿಎಂ ಪದವಿಯನ್ನು 20 ತಿಂಗಳುಗಳ ಕಾಲ ಹಂಚಿಕೊಳ್ಳಬೇಕೆಂದು ನಿರ್ಧರಿಸಲಾಯಿತು. ಆದರೆ ಅವರ ಅರ್ಧದಷ್ಟು ಅವಧಿ ಮುಗಿದ ನಂತರ, ಕುಮಾರಸ್ವಾಮಿ ಬಿಎಸ್‌ವೈಗೆ ಅಧಿಕಾರ ಹಸ್ತಾಂತರಿಸಲ್ಲ ಎಂದು ಹೇಳಿದ ಕಾರಣ ಬಿಜೆಪಿ ಬೆಂಬಲ ಹಿಂತೆಗೆದುಕೊಂಡು ಸರ್ಕಾರ ವಿಸರ್ಜನೆಗೆ ಕಾರಣವಾಯಿತು. ಮತ್ತು ನಂತರ ರಾಷ್ಟ್ರಪತಿ ಆಡಳಿತ ಜಾರಿಗೆ ಬಂದಿತು.


ಬಳಿಕ ಜೆಡಿಎಸ್‌ - ಬಿಜೆಪಿ ತಮ್ಮ ಭಿನ್ನಾಬಿಪ್ರಾಯಗಳನ್ನು ಸರಿಪಡಿಸಿಕೊಂಡ ನಂತರ ಮತ್ತೆ ಮೈತ್ರಿ ಏರ್ಪಟ್ಟ ಬಳಿಕ ಯಡಿಯೂರಪ್ಪ ನವೆಂಬರ್ 12, 2007 ರಂದು ಮೊದಲ ಬಾರಿಗೆ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದರು. ಆದರೆ, ಸಚಿವ ಸ್ಥಾನದ ವಿಚಾರದಲ್ಲಿ ಜೆಡಿಎಸ್‌ ಪಕ್ಷವನ್ನು ಕಡೆಗಣಿಸಲಾಗಿದೆ ಎಂಬ ಕಾರಣ ನೀಡಿ ಮತ್ತೆ ಬೆಂಬಲ ಹಿಂತೆಗೆದುಕೊಂಡ ಕಾರಣ ಒಂದು ವಾರದೊಳಗೆ ಬಿಎಸ್‌ವೈ ರಾಜೀನಾಮೆ ನೀಡಬೇಕಾಗಿ ಬಂತು. ಬಳಿಕ 2008 ರ ಮೇ ಅಂತ್ಯದಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಏಕೈಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರಿಂದ ಯಡಿಯೂರಪ್ಪ ಮತ್ತೊಮ್ಮೆ ಸಿಎಂ ಆದರು.


ಈ ವೇಳೆ ಬಿಎಸ್‌ವೈ ತಮ್ಮ ದೀರ್ಘಾವಧಿಯ ಮೂರು ವರ್ಷ ಮತ್ತು 66 ದಿನಗಳ ಕಾಲ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದರು. ನಂತರ ಲೋಕಾಯುಕ್ತ ಪ್ರಕರಣ ದಾಖಲಾದ ಬಳಿಕ ಪಕ್ಷದ ಕೇಂದ್ರ ಸಮಿತಿಯಿಂದ ಒತ್ತಡ ಹೇರಿದ ಕಾರಣ ರಾಜೀನಾಮೆ ನೀಡಬೇಕಾಗಿ ಬಂತು ಮತ್ತು ಶಿಕ್ಷೆಗೂ ಒಳಗಾದರು.


ಇದನ್ನೂ ಓದಿ: ಕೊಟ್ಟ ಸಾಲ ವಾಪಸ್ ಕೇಳಿದ್ದೇ ತಪ್ಪಾಯ್ತು, ಮದುಮಗನನ್ನೇ ಕೊಂದ ಸಹೋದರ, ಇಂಥವರೂ ಇರ್ತಾರಾ!


ಆಗಸ್ಟ್ 5, 2011ರಂದು ಡಿ ವಿ ಸದಾನಂದ ಗೌಡ ಸಿಎಂ ಆಗಲು ದಾರಿಮಾಡಿಕೊಟ್ಟಿತು ಆದರೆ ಒಂದು ವರ್ಷದೊಳಗೆ ಪಕ್ಷದ ಆಂತರಿಕ ಘರ್ಷಣೆಯ ಕಾರಣ ಅವರೂ ರಾಜೀನಾಮೆ ನೀಡಬೇಕಾಯಿತು. ನಂತರ ಜಗದೀಶ್ ಶೆಟ್ಟರ್ 13 ನೇ ವಿಧಾನಸಭೆಗೆ ನಿಗದಿಪಡಿಸಿದ ಅಧಿಕಾರಾವಧಿಯ ಉಳಿದ 304 ದಿನಗಳನ್ನು ಪೂರ್ಣಗೊಳಿಸಲು ಅಧಿಕಾರ ವಹಿಸಿಕೊಂಡರು.


105 ಸದಸ್ಯರನ್ನು ಹೊಂದಿರುವ ಏಕೈಕ ದೊಡ್ಡ ಪಕ್ಷವಾಗಿ ಬಿಜೆಪಿ ಹೊರಹೊಮ್ಮಿದ ನಂತರ ಯಡಿಯೂರಪ್ಪರನ್ನು 2018 ರ ಮೇ ತಿಂಗಳಲ್ಲಿ ಸರ್ಕಾರ ರಚಿಸಲು ಮತ್ತೆ ರಾಜ್ಯಪಾಲರು ಆಹ್ವಾನಿಸಿದರು. ಮತ್ತೆ ಸಿಎಂ ಸಹ ಆದರು. ಆದರೆ, ಕಾಂಗ್ರೆಸ್ - ಜೆಡಿಎಸ್ ಒಕ್ಕೂಟ 116 ಸದಸ್ಯರನ್ನು ಒಟ್ಟುಗೂಡಿಸಿದ ಕಾರಣ 224 ಸದಸ್ಯರ ಮನೆಯಲ್ಲಿ ಯಡಿಯೂರಪ್ಪ ಬಹುಮತ ಸಾಬೀತುಪಡಿಸಲು ಸಾಧ್ಯವಾಗದ ಕಾರಣ ಸರ್ಕಾರ ಕೇವಲ ಎರಡು ದಿನಗಳ ಕಾಲ ನಡೆಯಿತು.


ಬಳಿಕ ಕಾಂಗ್ರೆಸ್ ಬೆಂಬಲದೊಂದಿಗೆ ಕುಮಾರಸ್ವಾಮಿ ಮೇ 23, 2018 ರಂದು ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದರು. ಆದರೆ, ಕಾಂಗ್ರೆಸ್‌ - ಜೆಡಿಎಸ್‌ನ 17 ಶಾಸಕರು ಬೆಂಬಲ ವಾಪಸ್‌ ಪಡೆದು, ನಂತರ ಒಂದು ತಿಂಗಳು ಕಾಲ ರಾಜಕೀಯ ಬಿಕ್ಕಟ್ಟು ಉಂಟಾಯಿತು. ನಂತರ, ಜುಲೈ 2019 ರಲ್ಲಿ ಮೈತ್ರಿ ಸರ್ಕಾರ ಕುಸಿಯಿತು. ಬಿಎಸ್‌ವೈ ನೇತೃತ್ವದ ಬಿಜೆಪಿ 2019 ರ ಜುಲೈ 23 ರಂದು ನಡೆದ ವಿಶ್ವಾಸ ಮತದಲ್ಲಿ ಜಯಗಳಿಸಿದ ನಂತರ ಸರ್ಕಾರವು ಎರಡು ವರ್ಷಗಳ ಆಡಳಿತವನ್ನು ಪೂರ್ಣಗೊಳಿಸಿದ ದಿನದವರೆಗೂ ಮತ್ತೆ ಬಿಎಸ್‌ವೈ ಸಿಎಂ ಆಗಿ ಅಧಿಕಾರ ವಹಿಸಿಕೊಂಡರು. ಜುಲೈ 26, 2021 ರಂದು ರಾಜೀನಾಮೆ ನೀಡಿದರು.

ರಾಜ್ಯದಲ್ಲಿ ಬಿಜೆಪಿ ಕಟ್ಟಿದ ಪ್ರಮುಖ ನಾಯಕರಲ್ಲಿ ಒಬ್ಬರು ಯಡಿಯೂರಪ್ಪ ಎಂದು ಪರಿಗಣಿಸಲಾಗಿದ್ದರೂ, ಅವರು ಸಾಕಷ್ಟು ಬಾರಿ ಹಿನ್ನೆಡೆ ಅನುಭವಿಸಿದ್ದಾರೆ. ಜುಲೈ 26, 2019 ರಂದು ನಾಲ್ಕನೇ ಬಾರಿಗೆ ಪ್ರಮಾಣವಚನ ಸ್ವೀಕರಿಸುವ ಮೊದಲು ಬಿಎಸ್‌ವೈ ತನ್ನ ಇಂಗ್ಲೀಷ್‌ ಹೆಸರಿನ ಸ್ಪೆಲ್ಲಿಂಗ್ ಅನ್ನು ಮತ್ತೆ 2007 ಹಾಗೂ ಅದಕ್ಕೂ ಮುನ್ನ ಬಳಸುತ್ತಿದ್ದ ಹಳೆಯ ಸ್ಪೆಲ್ಲಿಂಗ್‌ಗೆ ಬದಲಾಯಿಸಿಕೊಂಡಿದ್ದರು. 2007 - 2019 ರ ನಡುವೆ ಇಂಗ್ಲೀಷ್‌ನ ‘i’ ಅಕ್ಷರವನ್ನು ಬಳಸುತ್ತಿದ್ದರು. ನಂತರ ಹೆಚ್ಚುವರಿ ‘d’ಬಳಸಿದರು. ಆದರೆ, ಇದರಿಂದಲೂ ಈ ಬಾರಿ ಹಿರಿಯ ರಾಜಕಾರಣಿಗೆ ಹೆಚ್ಚೇನೂ ಅನುಕೂಲವಾಗಲಿಲ್ಲ, ಅಂದರೆ ಅಧಿಕಾರ ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ.
ಈ ಮೊದಲು, ಮೈಸೂರು ಎಂದು ಕರೆಯಲ್ಪಡುವ ಹಂತದಲ್ಲಿ ಸಹ ಸಿಎಂಗಳು ಐದು ವರ್ಷಗಳ ಅವಧಿಯನ್ನು ಪೂರ್ಣಗೊಳಿಸಲು ವಿಫಲರಾಗಿದ್ದರು. ಕೆ ಚೆಂಗಲರಾಯ ರೆಡ್ಡಿ (ಅಕ್ಟೋಬರ್ 25, 1947 ರಿಂದ ಮಾರ್ಚ್ 30, 1952), ಕೆಂಗಾಲ್ ಹನುಮಂತಯ್ಯ (ಆಗಸ್ಟ್ 19, 1956 ರವರೆಗೆ ನಾಲ್ಕು ವರ್ಷ ಮತ್ತು 142 ದಿನಗಳು), ಕಡಿದಾಳ್‌ ಮಂಜಪ್ಪ (ಅಕ್ಟೋಬರ್ 31, 1956 ರವರೆಗೆ 72 ದಿನಗಳು), ಎಸ್ ನಿಜಲಿಂಗಪ್ಪ (ನವೆಂಬರ್ 1, 1956 - ಮೇ 16, 1958 ಮತ್ತು ಜೂನ್ 21, 1962 ರಿಂದ ಮೇ 28, 1968), ಬಿ.ಡಿ. ಜತ್ತಿ (ಮೇ 16, 1958 - ಮಾರ್ಚ್ 9, 1962), ಎಸ್‌. ಆರ್‌. ಕಂಠಿ (ಮಾರ್ಚ್ 14, 1962 - ಜೂನ್ 20, 1962) ಮತ್ತು ವೀರೇಂದ್ರ ಪಾಟೀಲ್ (ಮೇ 29, 1968 - ಮಾರ್ಚ್ 18, 1971) ಕರ್ನಾಟಕ ಎಂಬ ಹೆಸರು ಬರುವ ಮುನ್ನ ಮುಖ್ಯಮಂತ್ರಿಗಳಾಗಿದ್ದರು.

Published by:Soumya KN
First published: