ವಿಶೇಷ ಅನುದಾನ ಮಾತ್ರವಲ್ಲ. ಜಿಎಸ್‌ಟಿ ಪರಿಹಾರ ಕೂಡ ನೀಡಿಲ್ಲ; ಕೇಂದ್ರದ ವಿರುದ್ಧ ಸಿದ್ದರಾಮಯ್ಯ ಕೆಂಡಾಮಂಡಲ!

ಕೇಂದ್ರದ ಅಬಕಾರಿ ಸುಂಕ ಹೆಚ್ಚಿಸಲಾಗಿದೆ. ಡಿಸೆಲ್‌ಗೆ 3.45 ರೂನಿಂದ 31.84ರೂಗೆ ಹೆಚ್ಚಳ ಮಾಡಲಾಗಿದೆ. ಪೆಟ್ರೋಲ್ ಗೆ 9.21ರೂಗಳಿಂದ 32.98ರೂಗೆ ಟ್ಯಾಕ್ಸ್ ಹೆಚ್ಚಿಸಲಾಗಿದೆ ಎಂದು ಸಿದ್ದರಾಮಯ್ಯ ಅವರು ಖಾರವಾಗಿಯೇ ಟ್ವಿಟ್ ಮಾಡಿದ್ದಾರೆ.

ಸಿದ್ದರಾಮಯ್ಯ

ಸಿದ್ದರಾಮಯ್ಯ

 • Share this:
  ಬೆಂಗಳೂರು: ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಕೇಂದ್ರ ಸರ್ಕಾರ ಜನಸಾಮಾನ್ಯರ ಕೆಂಗಣ್ಣಿಗೆ ಗುರಿಯಾಗಿದೆ. ಈ ಬಗ್ಗೆ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸುದ್ದಿಗೋಷ್ಠಿ ನಡೆಸಿ ಬೆಲೆ ಏರಿಕೆಗೆ ಕಾರಣಗಳನ್ನು ವಿವರಿಸಿದ್ದರು. ಈ ವಿಷಯವಾಗಿ  ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಟ್ವೀಟ್ ಮಾಡಿ, ಹಣಕಾಸು ಸಚಿವರಿಗೆ ತಿರುಗೇಟು ನೀಡಿದ್ದಾರೆ.

  ಸುಳ್ಳುಗಳನ್ನೇ ಪುನಃ ಹೇಳಿ ಜನರ ದಿಕ್ಕು ತಪ್ಪಿಸುವ ಕೆಲಸವನ್ನು ನಿರ್ಮಲಾ ಸೀತಾರಾಮನ್ ಅವರು ಮಾಡಿದ್ದಾರೆ. 5,495 ಕೋಟಿ ವಿಶೇಷ ಅನುದಾನವನ್ನು ರಾಜ್ಯಕ್ಕೆ ನೀಡಿಲ್ಲ. ತಪ್ಪು ಮುಚ್ಚಿಕೊಳ್ಳಲು ನೀಡಿರುವ ಹೇಳಿಕೆ ನ್ಯಾಯಸಮ್ಮತವಲ್ಲ. 15ನೇ ಹಣಕಾಸು ಆಯೋಗ 5,495 ವಿಶೇಷ ಅನುದಾನ ನೀಡಲು ಶಿಫಾರಸು ಮಾಡಿತ್ತು. ರಾಜ್ಯ ಸರ್ಕಾರ 20-21ರ ಪರಿಷ್ಕೃತ ಅಂದಾಜುಗಳಲ್ಲಿ, 19,485 ಕೋಟಿ ಆದಾಯದ ಕೊರತೆ ತೋರಿಸಿದೆ. ನಂತರ ಹೇಗೆಯಡಿಯೂರಪ್ಪ ಆದಾಯದ ಹೆಚ್ಚುವರಿವನ್ನು ಮಾತ್ರ ತೋರಿಸಿದರು? ಆದಾಯ ಕೊರತೆಯ ಬಗ್ಗೆ ನಿರ್ಮಲಾ ಸೀತಾರಾಮನ್ ಪರಿಶೀಲಿಸಲಿ. ಇದೂ ಕೂಡ ರಾಜ್ಯಕ್ಕೆ ವಿಶೇಷ ಅನುದಾನ ನೀಡಬೇಕು ಎನ್ನುವುದಕ್ಕೆ ಕಾರಣ ಎಂದು ಆಗ್ರಹಿಸಿದರು.

  ವಿಶೇಷ ಅನುದಾನ ಮಾತ್ರವಲ್ಲ. ಜಿಎಸ್‌ಟಿ ಪರಿಹಾರ ಕೂಡ ನೀಡಿಲ್ಲ. ಅದರ ಬದಲಾಗಿ ಸಾಲ ತೆಗೆದುಕೊಳ್ಳಲು ಸಲಹೆ ನೀಡಿದ್ದಾರೆ. ಇಷ್ಟಾದರೂ ಬಿಜೆಪಿ ಸಂಸದರು ಪ್ರತಿಭಟನೆ ಮಾಡಿಲ್ಲ. ರಾಜ್ಯದ ಸಂಪತ್ತು ಕಸಿದುಕೊಳ್ಳಲಾಗುತ್ತಿದೆ. ರಾಜ್ಯದ ಬಿಜೆಪಿ ನಾಯಕರು ಕೈಕಟ್ಟಿ ಕುಳಿತಿದ್ದಾರೆ. ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಬೇಕಿತ್ತು. ತೈಲ ಬೆಲೆ ಏರಿಕೆ ಬಗ್ಗೆಯೂ ಸುಳ್ಳು ಹೇಳಿದ್ದಾರೆ. ಕೇಂದ್ರದ ಅಬಕಾರಿ ಸುಂಕ ಹೆಚ್ಚಿಸಲಾಗಿದೆ. ಡಿಸೆಲ್‌ಗೆ 3.45 ರೂನಿಂದ 31.84ರೂಗೆ ಹೆಚ್ಚಳ ಮಾಡಲಾಗಿದೆ. ಪೆಟ್ರೋಲ್ ಗೆ 9.21ರೂಗಳಿಂದ 32.98ರೂಗೆ ಟ್ಯಾಕ್ಸ್ ಹೆಚ್ಚಿಸಲಾಗಿದೆ ಎಂದು ಸಿದ್ದರಾಮಯ್ಯ ಅವರು ಖಾರವಾಗಿಯೇ ಟ್ವಿಟ್ ಮಾಡಿದ್ದಾರೆ.

  .@nsitharaman has blamed State tax for increased oil prices.  ರಾಜ್ಯಕ್ಕೆ ಬರಬೇಕಾದ ಜಿಎಸ್​ಟಿ ಹಂಚಿಕೆ ವಿಚಾರವಾಗಿ ಮಾಜಿ ಸಿಎಂ ಕುಮಾರಸ್ವಾಮಿ ಅವರು ಕೂಡ ಟ್ವೀಟ್ ಮಾಡಿ, ಕೇಂದ್ರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೇಂದ್ರ ಸರ್ಕಾರ ರಾಜ್ಯಕ್ಕೆ ನೀಡಬೇಕಿರುವ ಸುಮಾರು 9 ಸಾವಿರ ಕೋಟಿ ಜಿಎಸ್​ಟಿ ಹಣ ಕೊಟ್ಟಿಲ್ಲ ಎಂದು ಆರೋಪಿಸಿದ್ದಾರೆ.

  ಇದನ್ನು ಓದಿ: ಜಿಎಸ್​ಟಿ ಜಾರಿಯಾಗಿ 4 ವರ್ಷ; ರಾಜ್ಯಗಳ ನೋವಿನ ಮೇಲೆ ಕೇಂದ್ರದ ಸಂಭ್ರಮ; ಎಚ್​ಡಿಕೆ ಅಸಮಾಧಾನ

  ಅಗತ್ಯ ವಸ್ತುಗಳ ಬೆಲೆ ಏರಿಕೆ ಬಗ್ಗೆ ಸುದ್ದಿಗೋಷ್ಠಿ ನಡೆಸಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​​ ಬೆಲೆ ಏರಿಕೆಗೆ ಕಾರಣಗಳು ನೀಡಿದರು. ಆಹಾರ ಧಾನ್ಯ, ಅಡುಗೆ ಎಣ್ಣೆ ಆಮದು ಮಾಡಿಕೊಳ್ಳಲಾಗುತ್ತಿದೆ, ಹೀಗಾಗಿ ಬೆಲೆ‌ ಹೆಚ್ಚಳವಾಗಿದೆ. ಜನ ಸಾಮಾನ್ಯರ ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ಸರ್ಕಾರ ಕಾರಣವಲ್ಲ. ರಾಷ್ಟ್ರದ ಬಡ ಜನರಿಗೆ ಸರ್ಕಾರ ಸಹಾಯ ಹಸ್ತ ಚಾಚಿದೆ. ಲಾಕ್ ಡೌನ್ ಸಂದರ್ಭದಲ್ಲೂ ಉಚಿತ ಆಹಾರ ಪದಾರ್ಥಗಳನ್ನು ವಿತರಿಸಲಾಗಿತ್ತು ಎಂದು ವಿವರಿಸಿದರು.

  ಕೇಂದ್ರವು ಒಂದು ಕಡೆ ಆರ್ಥಿಕ ನೆರವು ಘೋಷಣೆ ಮಾಡಿ ದರ ಹೆಚ್ಚಳದಿಂದ ವಾಪಸ್ ಪಡೆಯುತ್ತಿರುವ ಆರೋಪ ಸುಳ್ಳು. ಒಂದು ಕಡೆ ಕೊಟ್ಟು ಇನ್ನೊಂದು ಕಡೆ ಕಿತ್ಕೊಳ್ಳೋ ಥರ ಮಾಡುತ್ತಿಲ್ಲ. ಅಗತ್ಯ ವಸ್ತುಗಳ ದರ ಹೆಚ್ಚಳ ಅನುವಾರ್ಯ. ಅಡುಗೆ ಎಣ್ಣೆ ದರ ಏರಿಕೆಗೆ ಕಾರಣ ಇದೆ. ಅಡುಗೆ ಎಣ್ಣೆ ಆಮದು ಮಾಡಿಕೊಳ್ಳುತ್ತಿದ್ದೇವೆ. ಪೆಟ್ರೋಲ್, ಡೀಸೆಲ್ ಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲದ ದರ ಹೆಚ್ಚಾಗಿರೋದು ಕಾರಣ. ಲಾಕ್​​ಡೌನ್​ ಸಂದರ್ಭದಲ್ಲಿ ಬಡವರಿಗೆ, ಮಧ್ಯಮ ವರ್ಗದವರಿಗೆ ಉಚಿತ ಎಲ್ಪಿಜಿ ಸಿಲಿಂಡರ್ ಗಳನ್ನು ಕೊಟ್ಟಿದ್ದೇವೆ. ಲಾಕ್​ಡೌನ್​ ವೇಳೆ ಬಡ ವರ್ಗಕ್ಕೆ ಸಾಕಷ್ಟು ರೀತಿಯಲ್ಲಿ ಕೇಂದ್ರ ಆರ್ಥಿಕ ನೆರವು ನೀಡಿದೆ ಎಂದು ಸಮರ್ಥಿಸಿಕೊಂಡರು.
  Published by:HR Ramesh
  First published: