ಇಂದಿನಿಂದ ದಿನದ 24 ಗಂಟೆಯೂ ಸಂಚರಿಸಲಿವೆ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್ಗಳು
ಕೋವಿಡ್-19 ಮಾರ್ಗದರ್ಶಿ ಸೂಚನೆಗಳ ಪ್ರಕಾರ ಎಲ್ಲಾ ಸುರಕ್ಷತಾ ಕ್ರಮಗಳನ್ನು ಅನುಸರಿಸುವುದು ಮುಂದುವರೆಯುತ್ತದೆ. ಮಾಸ್ಕ್ ಧರಿಸದ ಪ್ರಯಾಣಿಕರಿಗೆ ಬಸ್ ನಿಲ್ದಾಣ ಮತ್ತು ಬಸ್ಸಿನಲ್ಲಿ ಪ್ರವೇಶಿಸಲು ಅನುಮತಿಸುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
news18-kannada Updated:August 1, 2020, 8:46 AM IST

ಸಾಂದರ್ಭಿಕ ಚಿತ್ರ
- News18 Kannada
- Last Updated: August 1, 2020, 8:46 AM IST
ಹುಬ್ಬಳ್ಳಿ (ಆ.1): ಕೊರೊನಾ ವೈರಸ್ ಸೋಂಕು ಹರಡುವಿಕೆ ನಿಯಂತ್ರಿಸುವ ನಿಟ್ಟಿನಲ್ಲಿ ರಾಜ್ಯದಾದ್ಯಂತ ಜಾರಿಯಲ್ಲಿದ್ದ ಭಾಗಶಃ ಲಾಕ್ಡೌನ್ ಹಾಗೂ ರವಿವಾರದ ಸಂಪೂರ್ಣ ಲಾಕ್ ಡೌನ್ ತೆರವುಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ. ಈ ಹಿನ್ನೆಲೆಯಲ್ಲಿ ವಾಕರಸಾ ಸಂಸ್ಥೆಯ ಹುಬ್ಬಳ್ಳಿ ವಿಭಾಗದ ವ್ಯಾಪ್ತಿಯ ಎಲ್ಲ ಘಟಕಗಳಿಂದ ಹಾಗೂ ಬಸ್ ನಿಲ್ದಾಣಗಳಿಂದ ದಿನದ 24 ಗಂಟೆಯೂ ಬಸ್ಸುಗಳು ಸಂಚರಿಸಲಿವೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ತಿಳಿಸಿದ್ದಾರೆ.
ಶುಕ್ರವಾರದ ವರೆಗೆ ಲಾಕ್ ಡೌನ್ ನಿರ್ಬಂಧಗಳ ಪ್ರಕಾರ ಬೆಳಿಗ್ಗೆ 5 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ಮಾತ್ರ ಸಾರಿಗೆ ಬಸ್ಸುಗಳ ಸಂಚಾರಕ್ಕೆ ಅವಕಾಶ ನೀಡಲಾಗಿತ್ತು. ನಿಲ್ದಾಣಗಳಿಂದ 8 ಗಂಟೆಗೆ ಕೊನೆಯ ಬಸ್ ಹೊರಡುತ್ತಿತ್ತು. ಇದೀಗ ಲಾಕ್ ಡೌನ್ ತೆರವುಗೊಳಿಸಿದ್ದರಿಂದಾಗಿ ದಿನದ 24 ಗಂಟೆಯೂ ಬಸ್ಸುಗಳು ಸಂಚರಿಸಲಿವೆ. ಕೋವಿಡ್-19 ಮಾರ್ಗದರ್ಶಿ ಸೂಚನೆಗಳ ಪ್ರಕಾರ ಎಲ್ಲಾ ಸುರಕ್ಷತಾ ಕ್ರಮಗಳನ್ನು ಅನುಸರಿಸುವುದು ಮುಂದುವರೆಯುತ್ತದೆ. ಮಾಸ್ಕ್ ಧರಿಸದ ಪ್ರಯಾಣಿಕರಿಗೆ ಬಸ್ ನಿಲ್ದಾಣ ಮತ್ತು ಬಸ್ಸಿನಲ್ಲಿ ಪ್ರವೇಶಿಸಲು ಅನುಮತಿಸುವುದಿಲ್ಲ. ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ವೇಗದೂತ ಬಸ್ಸುಗಳಲ್ಲಿ 30, ರಾಜಹಂಸ ಹಾಗೂ ಸ್ಲೀಪರ್ ಬಸ್ಸುಗಳಲ್ಲಿ 20 ಮತ್ತು ವೋಲ್ವೋ ಬಸ್ಸುಗಳಲ್ಲಿ 30 ಪ್ರಯಾಣಿಕರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ಮಾಹಿತಿ ನೀಡಿದ್ದಾರೆ.
ಸೇವಾ ನಿವೃತ್ತಿಯಂದು 400 ಮಾಸ್ಕ್ ವಿತರಣೆ:
ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಹುಬ್ಬಳ್ಳಿ ವಿಭಾಗದಲ್ಲಿ ಶುಕ್ರವಾರ ಸಾರಿಗೆ ನಿಯಂತ್ರಕ ಸಿ.ಎಂ.ಯಳಲಿ ಯವರನ್ನು ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ಹಾಗೂ ವಿಭಾಗೀಯ ಸಂಚಾರ ಅಧಿಕಾರಿ ಅಶೋಕ ಪಾಟೀಲ ಸೇವಾ ನಿವೃತ್ತಿ ಹೊಂದಿದ್ದರು. ಈ ವೇಳೆ 400 ಮಾಸ್ಕ್ ಗಳನ್ನು ಹಾಗೂ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವಂತಹ ವಿವಿಧ ಬಗೆಯ 400 ಔಷಧೀಯ ಸಸಿಗಳನ್ನು ವಿತರಿದ್ದರು. ವಿನೂತನ ರೀತಿಯಲ್ಲಿ ಕೊರೊನಾ ವೈರಸ್ ಸೋಂಕು ತಡೆಗಟ್ಟುವ ಬಗ್ಗೆ ಜಾಗೃತಿ ಮೂಡಿಸಿದ ಸಾರಿಗೆ ನಿಯಂತ್ರಕ ಸಿ.ಎಂ.ಯಳಲಿ ಯವರನ್ನು ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ಹಾಗೂ ವಿಭಾಗೀಯ ಸಂಚಾರ ಅಧಿಕಾರಿ ಅಶೋಕ ಪಾಟೀಲ ಗೌರವಿಸಿ ಅಭಿನಂದಿಸಿದ್ದಾರೆ.

ಚನ್ನಬಸಪ್ಪ ಮಹಾದೇವಪ್ಪ ಯಳಲಿಯವರು 1982 ರಲ್ಲಿ ಸಾರಿಗೆ ಸಂಸ್ಥೆಗೆ ನಿರ್ವಾಹಕರಾಗಿ ಸೇರಿ 2008ರಲ್ಲಿ ಪದೋನ್ನತಿ ಹೊಂದಿ ಸಾರಿಗೆ ನಿಯಂತ್ರಕರಾಗಿ ಸೇವೆ ಸಲ್ಲಿಸಿ ಜುಲೈ 31ರಂದು ವಯೋನಿವೃತ್ತಿ ಹೊಂದಿದ್ದಾರೆ. ಕೋವಿಡ್-19 ಲಾಕ್ ಡೌನ್ ಹಿನ್ನೆಲೆಯಲ್ಲಿ ಅವರಿಗೆ ಹುಬ್ಬಳ್ಳಿ ಹೊಸ ಬಸ್ ನಿಲ್ದಾಣದಲ್ಲಿ ಸರಳ ಬೀಳ್ಕೊಡುಗೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಿಬ್ಬಂದಿಗಳಿಗೆ ಯಳಲಿ ಹಾಗೂ ಅವರ ಪುತ್ರ ರುದ್ರಪ್ಪ ಸೇರಿಕೊಂಡು ಮರು ಬಳಸಬಹುದಾದ 400 ಮಾಸ್ಕ್ ಗಳನ್ನು ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಂತಹ ಒಂದೆಲಗ( ಬ್ರಾಹ್ಮಿ), ದೊಡ್ಡಪತ್ರೆ, ರಾಮ ತುಳಸಿ, ಕೃಷ್ಣ ತುಳಸಿ, ಶಂಕರ ಪುಷ್ಟಿ, ಲೋಳೆಸರ, ಗರುಡ ಪಾತಾಳ, ಕಹಿಬೇವು ಹಾಗೂ ಇನ್ನಿತರ ವಿವಿಧ ಬಗೆಯ 400 ಔಷಧೀಯ ಸಸಿಗಳನ್ನು ವಿತರಿಸಿದರು.
ಕೊರೋನಾ ಭೀತಿಯ ಹಿನ್ನೆಲೆಯಲ್ಲಿ ಸಾರ್ವಜನಿಕರು ಮನೆಯಿಂದ ಹೊರಬರಲು ಹಿಂಜರಿಯುತ್ತಿರುವ ಸಂದರ್ಭದಲ್ಲಿ ಯಾವುದೇ ರಜೆಯನ್ನು ತೆಗೆದುಕೊಳ್ಳದೆ ನಿವೃತ್ತಿಯ ಅಂತಿಮ ದಿನದವರೆಗೂ ಜನನಿಬಿಡ ಪ್ರದೇಶವಾದ ಬಸ್ ನಿಲ್ದಾಣದಲ್ಲಿ ನಿರಂತರವಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ನಿವೃತ್ತಿಯ ದಿನದಂದು ಇಷ್ಟೊಂದು ಪ್ರಮಾಣದಲ್ಲಿ ಮಾಸ್ಕ್ ಗಳನ್ನು ಮತ್ತು ಔಷಧೀಯ ಸಸ್ಯಗಳನ್ನು ವಿತರಿಸುವ ಮೂಲಕ ಕೊರೊನಾ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಇತರರಿಗೆ ಮಾದರಿಯಾಗಿದ್ದಾರೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ಶ್ಲಾಘಿಸಿದ್ದಾರೆ. ನಿಲ್ದಾಣದ ಧಿಕಾರಿಗಳಾದ ಕೋಟೂರ, ಪಿ ಎಸ್ ಶೆಟ್ಟರ, ಸಾರಿಗೆ ನಿಯಂತ್ರಕರುಗಳು, ಸಿಬ್ಬಂದಿ, ಯಳಲಿ ಯವರ ಸಂಬಂಧಿಕರು, ಗ್ರಾಮಸ್ಥರು ಇದ್ದರು.
ಶುಕ್ರವಾರದ ವರೆಗೆ ಲಾಕ್ ಡೌನ್ ನಿರ್ಬಂಧಗಳ ಪ್ರಕಾರ ಬೆಳಿಗ್ಗೆ 5 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ಮಾತ್ರ ಸಾರಿಗೆ ಬಸ್ಸುಗಳ ಸಂಚಾರಕ್ಕೆ ಅವಕಾಶ ನೀಡಲಾಗಿತ್ತು. ನಿಲ್ದಾಣಗಳಿಂದ 8 ಗಂಟೆಗೆ ಕೊನೆಯ ಬಸ್ ಹೊರಡುತ್ತಿತ್ತು. ಇದೀಗ ಲಾಕ್ ಡೌನ್ ತೆರವುಗೊಳಿಸಿದ್ದರಿಂದಾಗಿ ದಿನದ 24 ಗಂಟೆಯೂ ಬಸ್ಸುಗಳು ಸಂಚರಿಸಲಿವೆ.