ಸ್ಪರ್ಧೆಯಲ್ಲಿ ಗೆದ್ದ ಹಣದಿಂದ ಪ್ರವಾಹ ಸಂತ್ರಸ್ತರ ಹಸುಗೂಸುಗಳಿಗೆ ತೊಟ್ಟಿಲು ಖರೀದಿಸಿದ ವಿಜಯಪುರದ ಬಾಲಕಿ!

Karnataka Flood: ಪ್ರವಾಹಕ್ಕೊಳಗಾದ ಸಂತ್ರಸ್ತರ ಹಸುಗೂಸುಗಳ ಸ್ಥಿತಿಗೆ ಮರುಗಿರುವ ವಿಜಯಪುರ ವಿದ್ಯಾರ್ಥಿನಿಯೊಬ್ಬಳು ಸಹಾಯಹಸ್ತ ಚಾಚುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರಳಾಗಿದ್ದಾಳೆ. ಬ್ಯಾಡ್ಮಿಂಟನ್ ಚಾಂಪಿಯನ್​ನಲ್ಲಿ ಗೆದ್ದ ಬಹುಮಾನದ ಹಣದಿಂದ ಪ್ರವಾಹ ಸಂತ್ರಸ್ತರಿಗೆ ತೊಟ್ಟಿಲು ಕೊಡಿಸುವ ಮೂಲಕ ಬಾಲಕಿ ಸಾನ್ವಿ ಪಾಟೀಲ್ ಮಾನವೀಯತೆ ಮೆರೆದಿದ್ದಾಳೆ.

Sushma Chakre | news18
Updated:August 14, 2019, 8:15 AM IST
ಸ್ಪರ್ಧೆಯಲ್ಲಿ ಗೆದ್ದ ಹಣದಿಂದ ಪ್ರವಾಹ ಸಂತ್ರಸ್ತರ ಹಸುಗೂಸುಗಳಿಗೆ ತೊಟ್ಟಿಲು ಖರೀದಿಸಿದ ವಿಜಯಪುರದ ಬಾಲಕಿ!
ಪ್ರಶಸ್ತಿ ಗೆದ್ದ ಸಾನ್ವಿ ಪಾಟೀಲ್
  • News18
  • Last Updated: August 14, 2019, 8:15 AM IST
  • Share this:
ವಿಜಯಪುರ (ಆ. 14): ರಾಜ್ಯದಲ್ಲಿ ಉತ್ತರ ಕರ್ನಾಟಕ, ದಕ್ಷಿಣ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಉತ್ತ ಕನ್ನಡ, ಹಾಸನದ ಜನರು ಪ್ರವಾಹದಿಂದ ಕಂಗೆಟ್ಟಿದ್ದಾರೆ. 2 ವಾರಗಳ ಕಾಲ ಸುರಿದ ಮಳೆ ಅನೇಕ ಜನರ ಜೀವವನ್ನು, ಇನ್ನು ಕೆಲವರ ಜೀವನವನ್ನು ಕೊಚ್ಚಿಕೊಂಡು ಹೋಗಿದೆ. ಸಂತ್ರಸ್ತರಿಗೆ ರಾಜ್ಯದ ಮೂಲೆ-ಮೂಲೆಯ ಜನರು ತಮ್ಮ ಕೈಲಾದ ಮಟ್ಟಿಗೆ ಸಹಾಯ ಮಾಡುತ್ತಿದ್ದಾರೆ. ಪರಿಹಾರ ಕೇಂದ್ರಗಳಲ್ಲಿರುವ ಸಂತ್ರಸ್ತರಿಗೆ ಸರಿಯಾದ ಆಹಾರ, ಮೂಲಸೌಕರ್ಯಗಳಿಲ್ಲದೆ ಪರದಾಡುತ್ತಿದ್ದಾರೆ. ವೃದ್ಧರು, ಗರ್ಭಿಣಿಯರು, ಬಾಣಂತಿಯರು, ಅನಾರೋಗ್ಯದಿಂದ ಬಳಲುತ್ತಿರುವವರು ಹೀಗೆ ಎಲ್ಲರೂ ಒಂದೇ ಸೂರಿನಡಿ ಆಶ್ರಯ ಪಡೆಯುತ್ತಿದ್ದಾರೆ.

ಪ್ರವಾಹಕ್ಕೊಳಗಾದ ಸಂತ್ರಸ್ತರ ಹಸುಗೂಸುಗಳ ಸ್ಥಿತಿಗೆ ಮರುಗಿರುವ ವಿಜಯಪುರ ವಿದ್ಯಾರ್ಥಿನಿಯೊಬ್ಬಳು ಸಹಾಯಹಸ್ತ ಚಾಚುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರಳಾಗಿದ್ದಾಳೆ. ಬ್ಯಾಡ್ಮಿಂಟನ್ ಚಾಂಪಿಯನ್​ನಲ್ಲಿ ಗೆದ್ದ ಬಹುಮಾನದ ಹಣದಿಂದ ಪ್ರವಾಹ ಸಂತ್ರಸ್ತರಿಗೆ ತೊಟ್ಟಿಲು ಕೊಡಿಸುವ ಮೂಲಕ ಬಾಲಕಿ ಸಾನ್ವಿ ಪಾಟೀಲ್ ಮಾನವೀಯತೆ ಮೆರೆದಿದ್ದಾಳೆ.

ಇಂದು ಕರ್ನಾಟಕ ಸೇರಿ ದೇಶಾದ್ಯಂತ ಭಾರೀ ಮಳೆ ಸಾಧ್ಯತೆ: ಹವಾಮಾನ ಇಲಾಖೆ ಮಾಹಿತಿ

ಕಾಂಗ್ರೆಸ್​ನ ವಿಧಾನ ಪರಿಷತ್​ ಸದಸ್ಯ ಸುನೀಲ್ ಗೌಡ ಬಿ.  ಪಾಟೀಲ ಅವರ ಪುತ್ರಿ ಸಾನ್ವಿ ಪಾಟೀಲ್ ಬಿ. ಎಂ. ಪಾಟೀಲ್ ಪಬ್ಲಿಕ್ ಸ್ಕೂಲ್​ನಲ್ಲಿ 9ನೇ ತರಗತಿ ಓದುತ್ತಿದ್ದಾಳೆ.  ಭಾನುವಾರ ಬಾಗಲಕೋಟೆಯಲ್ಲಿ ನಡೆದ ಬ್ಯಾಡ್ಮಿಂಟನ್‍ನಲ್ಲಿ ಪ್ರಥಮ ಸ್ಥಾನ ಗಳಿಸಿದ್ದ ಸಾನ್ವಿ ಎಸ್. ಪಾಟೀಲ ತನಗೆ ಬಂದ ಬಹುಮಾನದ ಹಣ ರೂ. 5 ಸಾವಿರವನ್ನು ನೆರೆ ಸಂತ್ರಸ್ತರ ಹಸುಗೂಸುಗಳಿಗೆ ತೊಟ್ಟಿಲು ಕೊಡಿಸಲು ವಿನಿಯೋಗಿಸಿದ್ದಾಳೆ. ಆ ತೊಟ್ಟಿಲುಗಳನ್ನು ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಪ್ರವಾಹ ಸಂತ್ರಸ್ತರ ಕೇಂದ್ರಗಳಲ್ಲಿರುವ ಬಾಣಂತಿಯರಿಗೆ ವಿತರಿಸಿದ್ದಾಳೆ.ಕರ್ನಾಟಕದಲ್ಲಿಇದುವರೆಗೂ ಪ್ರವಾಹದಿಂದ ಸುಮಾರು 50 ಜನರು ಪ್ರಾಣ ಕಳೆದುಕೊಂಡಿದ್ದಾರೆ. 2738 ಗ್ರಾಮಗಳು ಪ್ರವಾಹಪೀಡಿತವಾಗಿವೆ. ಸುಮಾರು 7 ಲಕ್ಷ  ಜನರನ್ನು ರಕ್ಷಣಾ ಸಿಬ್ಬಂದಿ ರಕ್ಷಿಸಿ ಸುರಕ್ಷಿತ ಸ್ಥಳಗಳಿಗೆ ತಲುಪಿಸಿದ್ದಾರೆ. 1224 ಪುನರ್ವಸತಿ ಕೇಂದ್ರಗಳನ್ನು ತೆರೆಯಲಾಗಿದೆ. 40ಕ್ಕೂ ಹೆಚ್ಚು ಮನೆಗಳು ಕೊಚ್ಚಿಕೊಂಡು ಹೋಗಿವೆ. 60 ವರ್ಷಗಳಲ್ಲೇ ಅತಿ ಭೀಕರ ಪ್ರವಾಹ ಉಂಟಾಗಿದೆ ಎಂದು ಹೇಳಲಾಗುತ್ತಿದೆ. ನಿನ್ನೆಯಿಂದ ಮಳೆಯ ಅಬ್ಬರ ಕೊಂಚ ಕಡಿಮೆಯಾಗಿದ್ದು, ಪ್ರವಾಹವೂ ಇಳಿಮುಖವಾಗಿದೆ. ಆದರೆ, ಮನೆ, ಜಮೀನುಗಳಿಲ್ಲದೆ ಜನರು ಆಶ್ರಯಕ್ಕಾಗಿ ಮೊರೆಹೋಗಿದ್ದಾರೆ.

(ವರದಿ: ಮಹೇಶ ವಿ. ಶಟಗಾರ)
First published:August 14, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ