North Karnataka: ಉತ್ತರ ಕರ್ನಾಟಕದಲ್ಲಿ ಭೂಕಂಪದ ಅನುಭವ; ಬೆಚ್ಚಿದ ಜನತೆ

ಕಲಬುರ್ಗಿಯ ಅಫಜಲಪುರ ಮತ್ತು ವಿಜಯಪುರ ಜಿಲ್ಲೆ ಆಲಮೇಲ್, ಇಂಡಿ ತಾಲೂಕಿನ ಕೆಲವೆಡೆ ಭೂಮಿ ಆಳದಿಂದ ಶಬ್ದ ಕೇಳಿದೆ. ಶಬ್ದ ಕೇಳಿ ಭಯಭೀತರಾದ ಜನರು ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ.

Rajesh Duggumane | news18-kannada
Updated:November 18, 2019, 1:30 PM IST
North Karnataka: ಉತ್ತರ ಕರ್ನಾಟಕದಲ್ಲಿ ಭೂಕಂಪದ ಅನುಭವ; ಬೆಚ್ಚಿದ ಜನತೆ
ಸಾಂದರಭಿಕ ಚಿತ್ರ
  • Share this:
ಕಲಬುರ್ಗಿ (ನ.18): ಉತ್ತರ ಕರ್ನಾಟಕದ ಜನತೆ ಇಂದು ಮಧ್ಯಾಹ್ನ ಎಂದಿನಂತೆ ತಮ್ಮ ಕೆಲಸದಲ್ಲಿ ಮಗ್ನರಾಗಿದ್ದರು. ಆದರೆ, ಇದ್ದಕ್ಕಿದ್ದಂತೆ ದೊಡ್ಡ ಶಬ್ದವೊಂದು ಭೂಮಿಯಾಳದಿಂದ ಎಲ್ಲರ ಕಿವಿಗೆ ಅಪ್ಪಳಿಸಿತ್ತು. ಭೂಮಿ ಕಂಪಿಸುತ್ತಿದೆ ಎಂದು ಭಾವಿಸಿ ಎಲ್ಲರೂ ಒಮ್ಮೆ ದಂಗಾಗಿಬಿಟ್ಟರು.

ಕಲಬುರ್ಗಿಯ ಅಫಜಲಪುರ ಮತ್ತು ವಿಜಯಪುರ ಜಿಲ್ಲೆ ಆಲಮೇಲ್, ಇಂಡಿ ತಾಲೂಕಿನ ಕೆಲವೆಡೆ ಭೂಮಿ ಆಳದಿಂದ ಶಬ್ದ ಕೇಳಿದೆ. ಶಬ್ದ ಕೇಳಿ ಭಯಭೀತರಾದ ಜನರು ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ. ಕೆಲವರು ಭೂಕಂಪವಾಯಿತು ಎಂದು ಭಾವಿಸಿದ್ದರು.

ಆದರೆ ಎಲ್ಲಿಯೂ ಭೂಮಿ ನಡುಗಿಲ್ಲ. ಆಲಮಟ್ಟಿ, ಕಲಬುರ್ಗಿ, ರಾಯಚೂರು, ಬೆಂಗಳೂರು ಭೂಕಂಪ ಮಾಪನ ಕೇಂದ್ರಗಳಲ್ಲಿ ಭೂಮಿ ಕಂಪಿಸಿದ ಬಗ್ಗೆ ಯಾವುದೇ ದಾಖಲೆ ಇಲ್ಲ.

ಈ ಬಗ್ಗೆ ಸ್ಪಷ್ಟನೆ ನೀಡಿರುವ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಸಹಾಯಕ ಸಂತೋಷ ಸ್ಪಷ್ಟನೆ ನೀಡಿದ್ದು, “ಭೂಮಿ ಕಂಪಿಸಿದ ಬಗ್ಗೆ ಎಲ್ಲಿಯೂ ಮಾಹಿತಿ ದಾಖಲಾಗಿಲ್ಲ. ಜನ ಆತಂಕ ಪಡುವ ಅಗತ್ಯವಿಲ್ಲ. ಶಬ್ದ ಯಾವ ಕಾರಣಕ್ಕೆ ಬಂತು ಎನ್ನುವುದನ್ನು ಪತ್ತೆ ಹಚ್ಚುತ್ತೇವೆ,” ಎಂದಿದ್ದಾರೆ.

ಕರ್ನಾಟಕದಲ್ಲಿ ಭೂಮಿ ಕಂಪಿಸಿದ ಉದಾಹರಣೆ ತುಂಬಾನೇ ಕಡಿಮೆ. ಅದರಲ್ಲೂ ಪ್ರಾಣಹಾನಿ ಉಂಟಾದ ಯಾವುದೇ ಉದಾಹರಣೆ ಇಲ್ಲ. ಹೀಗಾಗಿ, ಉತ್ತರ ಕರ್ನಾಟಕದ ಜನರು ಭಯಪಡಬೇಕಾದ ಅಗತ್ಯವಿಲ್ಲ.

(ವರದಿ: ಶಿವರಾಮ ಅಸುಂಡಿ)

First published: November 18, 2019, 1:22 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading