ಕುಮಾರಸ್ವಾಮಿಗೆ ರಮೇಶ್ ಜಾರಕಿಹೊಳಿಯೇ ಟಾರ್ಗೆಟ್; ಜೆಡಿಎಸ್ ಹೆಣೆದಿದೆ ಹೊಸ ತಂತ್ರ

ರಮೇಶ್​ ಜಾರಕಿಹೊಳಿ ಸ್ಪರ್ಧೆ ಮಾಡುತ್ತಿರುವ ಗೋಕಾಕ್​ ಕ್ಷೇತ್ರದಲ್ಲಿ ಕಾಂಗ್ರೆಸ್​ ಬಲವೇ ಇಲ್ಲ. ಆದಾಗ್ಯೂ ಬೇರೆ ಪಕ್ಷದ ಅಭ್ಯರ್ಥಿಯನ್ನು ಸೆಳೆದು, ತಮ್ಮ ಪಕ್ಷದಿಂದ ಕಣಕ್ಕಿಳಿಸುವ ಮೂಲಕ ರಮೇಶ್ ಜಾರಕಿಹೊಳಿ ಸೋಲಿಸಲು ಎಚ್​ಡಿಕೆ ಮುಂದಾಗಿದ್ದಾರೆ.

Rajesh Duggumane | news18-kannada
Updated:November 18, 2019, 2:58 PM IST
ಕುಮಾರಸ್ವಾಮಿಗೆ ರಮೇಶ್ ಜಾರಕಿಹೊಳಿಯೇ ಟಾರ್ಗೆಟ್; ಜೆಡಿಎಸ್ ಹೆಣೆದಿದೆ ಹೊಸ ತಂತ್ರ
ಎಚ್​ಡಿಕೆ-ರಮೇಶ್​
  • Share this:
ಬೆಂಗಳೂರು (ನ.18): ಕಾಂಗ್ರೆಸ್​-ಜೆಡಿಎಸ್​ ಮೈತ್ರಿ ಸರ್ಕಾರವನ್ನು ಬೀಳಿಸಲು ಕಾರಣವಾದ ಅನರ್ಹ ಶಾಸಕರಲ್ಲಿ ಬಹುತೇಕರು ಉಪಚುನಾವಣಾ ಕಣದಲ್ಲಿದ್ದಾರೆ. ಅನರ್ಹರನ್ನು ಸೋಲಿಸಲೇಬೇಕು ಎನ್ನುವ ಹಠಕ್ಕೆ ಬಿದ್ದಿರುವ ಮಾಜಿ ಮುಖ್ಯಮಂತ್ರಿಗಳಾದ ಎಚ್​ಡಿ ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯ ರಣತಂತ್ರ ರೂಪಿಸುತ್ತಿದ್ದಾರೆ. ಶಾಸಕರು ರೆಬೆಲ್​ ಆಗಲು ಮೂಲ ಕಾರಣ ಎಂದು ಹೇಳಲಾಗುತ್ತಿರುವ ರಮೇಶ್ ಜಾರಕಿಹೊಳಿಯನ್ನು ಸೋಲಿಸಲು ಈಗ ಎಚ್​ಡಿಕೆ ಹೊಸ ತಂತ್ರಗಾರಿಕೆ ರೂಪಿಸಿದ್ದಾರೆ.

ರಮೇಶ್​ ಜಾರಕಿಹೊಳಿ ಸ್ಪರ್ಧೆ ಮಾಡುತ್ತಿರುವ ಗೋಕಾಕ್​ ಕ್ಷೇತ್ರದಲ್ಲಿ ಜೆಡಿಎಸ್​​ ಬಲವೇ ಇಲ್ಲ. ಆದಾಗ್ಯೂ ಬೇರೆ ಪಕ್ಷದ ಅಭ್ಯರ್ಥಿಯನ್ನು ಸೆಳೆದು, ತಮ್ಮ ಪಕ್ಷದಿಂದ ಕಣಕ್ಕಿಳಿಸುವ ಮೂಲಕ ರಮೇಶ್ ಜಾರಕಿಹೊಳಿ ಸೋಲಿಸಲು ಎಚ್​ಡಿಕೆ ಮುಂದಾಗಿದ್ದಾರೆ.

ಜೆಡಿಎಸ್ ನಿಂದ ಅಶೋಕ್ ಪೂಜಾರಿ ಕಣಕ್ಕೆ ಇಳಿಯುತ್ತಿದ್ದಾರೆ. ಮೂಲತಃ ಬಿಜೆಪಿ ಆಗಿರುವ ಇವರು ಗೋಕಾಕ್​ ಕ್ಷೇತ್ರದ ಟಿಕೆಟ್​ ಆಕಾಂಕ್ಷಿ ಆಗಿದ್ದರು. ಬಿಜೆಪಿಯಲ್ಲಿ ಅನರ್ಹ ರಮೇಶ್​ ಜಾರಕಿಹೊಳಿಗೆ ಟಿಕೆಟ್​ ನೀಡಿದ ಹಿನ್ನೆಲೆಯಲ್ಲಿ, ಕಾಂಗ್ರೆಸ್​​ನಿಂದ ಟಿಕೆಟ್​ ಸಿಗಬಹುದು ಅಂದುಕೊಂಡಿದ್ದರು. ಆದರೆ, ಕಾಂಗ್ರೆಸ್​ ಲಖನ್​ ಜಾರಕಿಹೊಳಿಗೆ ಮಣೆ ಹಾಕಿತ್ತು. ಹೀಗಾಗಿ ಅಶೋಕ್​ರನ್ನು ಜೆಡಿಎಸ್​ನಿಂದ ಕಣಕ್ಕೆ ಇಳಿಸುತ್ತಿದ್ದಾರೆ ಕುಮಾರಸ್ವಾಮಿ.

ಇಂದು ಅಶೋಕ್ ಪೂಜಾರಿ‌ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ. ಅಶೋಕ್ ಪೂಜಾರಿ ನಾಮಪತ್ರ ಸಲ್ಲಿಕೆಯಲ್ಲಿ ಎಚ್​​ಡಿಕೆ ಪಾಲ್ಗೊಳ್ಳಲಿದ್ದಾರೆ. ಬಳಿಕ ಅಶೋಕ್​ ಪೂಜಾರಿ ಪರ ಅವರು ಮತಯಾಚನೆ ಮಾಡಲಿದ್ದಾರೆ.

ಇದನ್ನೂ ಓದಿ: ಕಾಂಗ್ರೆಸ್ ಶಾಸಕ ತನ್ವಿರ್ ಸೇಠ್ ಮೇಲೆ ಕೊಲೆ ಯತ್ನ; ಮದುವೆ ಕಾರ್ಯಕ್ರಮದಲ್ಲಿ ಚಾಕು ಇರಿತ, ಆಸ್ಪತ್ರೆಗೆ ದಾಖಲು

ಇಂದು ಕುಮಾರಸ್ವಾಮಿ ಪ್ರವಾಸ:

ಇಂದು ದಿನಪೂರ್ತಿ ಜೆಡಿಎಸ್ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆಯಲ್ಲಿ ಎಚ್​ಡಿ ಕುಮಾರಸ್ವಾಮಿ ಭಾಗಿಯಾಗಲಿದ್ದಾರೆ. ನಂತರ ಆ ಅಭ್ಯರ್ಥಿಗಳ ಪರ ಪ್ರಚಾರ ನಡೆಸಲಿದ್ದಾರೆ. ಅವರ ಕಾರ್ಯಕ್ರಮಗಳ ವಿವರ ಹೀಗಿದೆ. 

ಬೆಳಿಗ್ಗೆ 10.30ಕ್ಕೆ ಶಿವಾಜಿನಗರ ತನ್ವೀರ್ ಅಹಮದ್ ನಾಮಪತ್ರ ಸಲ್ಲಿಕೆಯಲ್ಲಿ ಭಾಗಿ
ಬೆಳಿಗ್ಗೆ 11.30 ಕ್ಕೆ ಯಶವಂತಪುರದ ಜವರಾಯೀಗೌಡ ನಾಮಪತ್ರ ಸಲ್ಲಿಕೆಯಲ್ಲಿ ಭಾಗಿ
ಮಧ್ಯಾಹ್ನ12.30ಕ್ಕೆ ಚಿಕ್ಕಬಳ್ಳಾಪುರದ ಜೆಡಿಎಸ್ ಅಭ್ಯರ್ಥಿ ಬಚ್ಚೇಗೌಡ ನಾಮಪತ್ರ ಸಲ್ಲಿಕೆಯಲ್ಲಿ ಭಾಗಿ
ಮಧ್ಯಾಹ್ನ 2.30ಕ್ಕೆ ಗೋಕಾಕ್ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಅಶೋಕ್ ಪೂಜಾರಿ ನಾಮಪತ್ರ ಸಲ್ಲಿಕೆಯಲ್ಲಿ ಎಚ್​​ಡಿಕೆ ಭಾಗಿ
ಸಂಜೆ‌ 4ಗಂಟೆಗೆ ಅಥಣಿ ಹಾಗೂ ಕಾಗವಾಡ ಕ್ಷೇತ್ರದ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆಯಲ್ಲಿ ಭಾಗಿ

(ವರದಿ: ಕೃಷ್ಣ ಜಿವಿ)

First published:November 18, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ