• Home
  • »
  • News
  • »
  • state
  • »
  • Coffee: ಮೊದಲ ಬಾರಿಗೆ ಉತ್ತರ ಕರ್ನಾಟಕದಲ್ಲಿ ಕಾಫಿ ಬೆಳೆದ ರೈತ- ಕ್ವಾಲಿಟಿ ಓಕೆ ಆದ್ರೆ ಬದಲಾವಣೆಯ ಪರ್ವ ಶುರು

Coffee: ಮೊದಲ ಬಾರಿಗೆ ಉತ್ತರ ಕರ್ನಾಟಕದಲ್ಲಿ ಕಾಫಿ ಬೆಳೆದ ರೈತ- ಕ್ವಾಲಿಟಿ ಓಕೆ ಆದ್ರೆ ಬದಲಾವಣೆಯ ಪರ್ವ ಶುರು

ಕಾಫಿ ಬೆಳೆ

ಕಾಫಿ ಬೆಳೆ

ವಿಜಯನಗರ ಜಿಲ್ಲೆಯ ಹೂವಿನಹಡಗಲಿಯ ರೈತ ಗಡ್ಡಿ ಗುಡ್ಡಪ್ಪ ಎಂಟು ಎಕರೆ ಜಮೀನಿನಲ್ಲಿ ಯಶಸ್ವಿಯಾಗಿ ಕಾಫಿ ಕೃಷಿ ಮಾಡಿದ್ದಾರೆ. ಅವರೇ ಈ ಕಾಫಿ ಬೆಳೆದು ಉತ್ತರ ಕರ್ನಾಟಕದ ಬದಲಾವಣೆಯ ಪರ್ವಕ್ಕೆ ನಾಂದಿ ಹಾಡಿದ್ದಾರೆ.

  • Trending Desk
  • 3-MIN READ
  • Last Updated :
  • Share this:

ಕಾಫಿ(Coffee) ಅಂದ್ರೆ ಯಾವ ಸ್ಥಳ ನಿಮಗೆಲ್ಲಾ ನೆನಪಾಗುತ್ತೆ ಹೇಳಿ. ಸಾಮಾನ್ಯವಾಗಿ ಹೇಳೋದಾದ್ರೆ, ಚಿಕ್ಕಮಗಳೂರು(Chikmagaluru), ಕೊಡಗು(Kodagu) ಮತ್ತು ಸಕಲೇಶಪುರ(Sakaleshpur), ಹೌದು ತಾನೇ. ಈ ಪ್ರದೇಶಗಳು ಕಾಫಿ ಬೆಳೆಯೋದಕ್ಕೆ ಎತ್ತಿದ ಕೈ ಮತ್ತು ಅಲ್ಲಿನ ಕಾಫಿ ಬಹಳ ಗುಣಮಟ್ಟದಿಂದ ಕೂಡಿರುತ್ತೆ.


 ಈ ಕಾಫಿ ಬೆಳೆಯನ್ನು ಈಗ ಉತ್ತರ ಕರ್ನಾಟಕದ ಪ್ರದೇಶಗಳಲ್ಲಿ ಬೆಳೆಯಲಾಗುತ್ತಿದೆ. ಅಲ್ಲಿನ ರೈತರು ಕಾಫಿ ಬೆಳೆಯಲು ಪ್ರಯತ್ನ ಪಡುತ್ತಿದ್ದಾರೆ. ಅಲ್ಲಿನ ಕಾಫಿ ಬೆಳೆಯನ್ನು ತಜ್ಞರು ಪರೀಕ್ಷೆ ಮಾಡುತ್ತಿದ್ದಾರೆ. ಗುಣಮಟ್ಟದಲ್ಲಿ ಕಾಫಿ ಓಕೆ ಆದ್ರೆ, ಮುಂದೆ ಉತ್ತರ ಕರ್ನಾಟಕದಲ್ಲಿಯೂ ಸಹ ಕಾಫಿ ಬೆಳೆಯಬಹುದು. ಅದು ಈ ಪ್ರದೇಶಕ್ಕೆ ಉತ್ತಮ ಬದಲಾವಣೆಯ ಪರ್ವವಾಗಲಿದೆ.


ಬದಲಾವಣೆಯ ಪರ್ವಕ್ಕೆ ನಾಂದಿ ಹಾಡಿದ ರೈತ


ವಿಜಯನಗರ ಜಿಲ್ಲೆಯ ಹೂವಿನಹಡಗಲಿಯ ರೈತ ಗಡ್ಡಿ ಗುಡ್ಡಪ್ಪ ಎಂಟು ಎಕರೆ ಜಮೀನಿನಲ್ಲಿ ಯಶಸ್ವಿಯಾಗಿ ಕಾಫಿ ಕೃಷಿ ಮಾಡಿದ್ದಾರೆ. ಅವರೇ ಈ ಕಾಫಿ ಬೆಳೆದು ಉತ್ತರ ಕರ್ನಾಟಕದ ಬದಲಾವಣೆಯ ಪರ್ವಕ್ಕೆ ನಾಂದಿ ಹಾಡಿದ್ದಾರೆ.


"ನಾನು ನಾಲ್ಕು ವರ್ಷಗಳ ಹಿಂದೆ ಚಿಕ್ಕಮಗಳೂರು ಮತ್ತು ಶಿವಮೊಗ್ಗದಿಂದ ಗಿಡಗಳನ್ನು ಖರೀದಿಸಿದೆ ಮತ್ತು ಈ ವರ್ಷ ನನ್ನ ಎಂಟು ಎಕರೆ ತೋಟದಿಂದ 1,600 ಕೆಜಿ ಕಾಫಿ ಬೆಳೆ ಇಳುವರಿಯನ್ನು ಪಡೆದುಕೊಂಡಿದ್ದೇನೆ" ಎಂದು ಗುಡ್ಡಪ್ಪ ಸುದ್ದಿ ಮಾಧ್ಯಮ ದಿ ಹಿಂದೂಗೆ ತಿಳಿಸಿದರು.


ಅವರ ಪ್ರಕಾರ ಹೇಳುವುದಾದ್ರೆ, ಇವರು ಬೆಳೆದಿದ್ದ ಕಾಫಿ ಜಿಲ್ಲೆಯಲ್ಲೇ ಪ್ರಥಮ, ಉತ್ತರ ಕರ್ನಾಟಕ ಭಾಗದಲ್ಲೂ ಪ್ರಥಮ. ಅವರ ಜಿಲ್ಲೆಯ ಅನೇಕ ರೈತರು ಪ್ರತಿದಿನ ಅವರ ತೋಟಕ್ಕೆ ಭೇಟಿ ನೀಡಿ ಕಾಫಿ ಬೀಜಗಳ ಬಗ್ಗೆ ತಿಳಿದುಕೊಳ್ಳುತ್ತಿದ್ದಾರೆ ಮತ್ತು ಕಾಫಿ ಬೆಳೆಯನ್ನು ವೀಕ್ಷಿಸುತ್ತಿದ್ದಾರೆ.


ಅರೇಬಿಕಾ - ಚಂದ್ರಗಿರಿ ತಳಿಯ ಕಾಫಿ ಬೆಳೆ


"ನಾನು ಬೆಳೆದ ಬೆಳೆಗಳಲ್ಲಿ ಕಾಫಿ ಬೆಳೆ ನನಗೆ ತುಂಬಾ ಹೊಸತು ಮತ್ತು ಅದರ ಫಲಿತಾಂಶದ ಬಗ್ಗೆ ನನಗೆ ತಿಳಿದಿರಲಿಲ್ಲ. ಚಿಕ್ಕಮಗಳೂರಿಗೆ ಭೇಟಿ ನೀಡಿ ಕಾಫಿ ಬೆಳೆಯುವುದನ್ನು ಕಲಿತೆ. ಅಲ್ಲಿನ ಕಾಫಿ ಎಸ್ಟೇಟ್‌ಗಳಲ್ಲಿ ಕೆಲಸ ಮಾಡುತ್ತಿದ್ದ ನನ್ನ ಏರಿಯಾದ ಅನೇಕರು ಈ ಬಗ್ಗೆ ಸಾಕಷ್ಟು ಮಾಹಿತಿಯನ್ನು ನನ್ನ ಜೊತೆ ಹಂಚಿಕೊಂಡರು. ನಾನು ಶಿವಮೊಗ್ಗ ನರ್ಸರಿಯಿಂದ ಅರೇಬಿಕಾ-ಚಂದ್ರಗಿರಿ ತಳಿಯ ಕಾಫಿ ಖರೀದಿಸಿ ಅದನ್ನು ಬೆಳೆಯಲು ಪ್ರಾರಂಭಿಸಿದೆ, ” ಎನ್ನುತ್ತಾರೆ ಗುಡ್ಡಪ್ಪ.


ಇದನ್ನೂ ಓದಿ: Coconut: ತೆಂಗು ಬೆಳೆಗೆ ಕರ್ನಾಟಕಕ್ಕೆ ದೇಶದಲ್ಲಿ ಎರಡನೇ ಸ್ಥಾನ! ಈ ಬೆಳೆಯಲ್ಲಿ ಲಾಭ ಎಷ್ಟಿದೆ ನೋಡಿ


ಆರಂಭದಲ್ಲಿ ಗುಡ್ಡಪ್ಪ ತಮ್ಮ ಜಮೀನಿನಲ್ಲಿ ಅಡಿಕೆ ಬೆಳೆಯುತ್ತಿದ್ದರು. ನಂತರ ಅವರು ಅಡಿಕೆ ತೋಟದ ಮಧ್ಯದಲ್ಲಿ ಕಾಫಿ ಬೆಳೆಯಲು ಪ್ರಾರಂಭಿಸಿದರು, ಸಾಂಪ್ರದಾಯಿಕವಾಗಿ, ಎಲ್ಲಾ ಕಾಫಿ ಬೆಳೆಗಳು ನೆರಳಿನಲ್ಲಿ ಚೆನ್ನಾಗಿ ಬೆಳೆಯುತ್ತವೆ. ಕಾಳುಮೆಣಸನ್ನು ಅಂತರ ಬೆಳೆಯಾಗಿ ಬೆಳೆಯುವ ಇವರು ಕಾಫಿ ಗಿಡಗಳಿಗೆ ನೆರಳಾಗಿ ಅಡಿಕೆ ಮತ್ತು ಇತರ ಕೆಲವು ಮರಗಳನ್ನು ಬಳಸುತ್ತಿದ್ದಾರೆ.
“ಈ ಪ್ರದೇಶದಲ್ಲಿ ಕಾಫಿ ಕೃಷಿ ಮಾಡಿದ ಮೊದಲ ವ್ಯಕ್ತಿ ನಾನು. ಈ ವರ್ಷ ರಾಯಚೂರು ಜಿಲ್ಲೆಯ ಲಿಂಗಸೂಗೂರು ಮತ್ತು ಬಾಗಲಕೋಟೆ ಜಿಲ್ಲೆಯ ಕೆಲವು ರೈತರು ಕಾಫಿ ಬೆಳೆಯಲು ಪ್ರಾರಂಭಿಸಿದ್ದಾರೆ,'' ಎಂದು ಹೇಳಿದರು.


ಪರೀಕ್ಷೆ ನಡೆಸುತ್ತಿರುವ ಕಾಫಿ ಬೋರ್ಡ್


ಕಾಫಿ ಮಂಡಳಿ ಅಧಿಕಾರಿಗಳು ಇತ್ತೀಚೆಗೆ ಹೂವಿನ ಹಡಗಲಿಗೆ ಭೇಟಿ ನೀಡಿ ಗುಣಮಟ್ಟ ಪರೀಕ್ಷೆಗಾಗಿ ಕಾಫಿಯ ಮಾದರಿಗಳನ್ನು ಸಂಗ್ರಹಿಸಿದ್ದರು.


ಕಾಫಿ ಮಂಡಳಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಕಾರ್ಯದರ್ಶಿ ಜಗದೀಶ ‘ದಿ ಹಿಂದೂ’ಗೆ ಪ್ರತಿಕ್ರಿಯಿಸಿ, “ ಹೂವಿನ ಹಡಗಲಿಯಲ್ಲಿ ಕಾಫಿ ಬೆಳೆಯಲಾಗುತ್ತಿದೆ ಎಂಬ ಮಾಹಿತಿ ಬಂದಿದ್ದರಿಂದ ನಮ್ಮ ಅಧಿಕಾರಿಗಳು ಆ ಗ್ರಾಮಕ್ಕೆ ಭೇಟಿ ನೀಡಿ ಕಾಫಿ ಬೆಳೆಯ ಮಾದರಿಗಳನ್ನು ತೆಗೆದುಕೊಂಡಿದ್ದಾರೆ. ಕಾಫಿ ಇಳುವರಿ ಮತ್ತು ಗುಣಮಟ್ಟದ ಸರಿಯಾದ ವಿಶ್ಲೇಷಣೆಯ ನಂತರವೇ ನಾವು ಏನಾದರೂ ಹೇಳಲು ಸಾಧ್ಯವಾಗುತ್ತದೆ. ಇದರ ಕುರಿತು ಪರೀಕ್ಷೆಯು ನಡೆಯುತ್ತಿದೆ ಮತ್ತು ಬೆಳೆಯ ಬಗ್ಗೆ ವೈಜ್ಞಾನಿಕ ವಿಶ್ಲೇಷಣೆ ನೀಡಲು ಸಹ ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ” ಎಂದು ಹೇಳಿದರು.


ಜಗದೀಶ ಅವರು ಮತ್ತೆ ಮಾತನಾಡಿ, “ಕಾಫಿ ಗಿಡಗಳನ್ನು ಎಲ್ಲಿ ಬೇಕಾದರೂ ಬೆಳೆಸಬಹುದು. ಅದರ ಜೊತೆಗೆ ಕಾಫಿಯನ್ನು ಮಾರಾಟ ಮಾಡಲು ಮತ್ತು ಕುಡಿಯಲು ಗುಣಮಟ್ಟವನ್ನು ಸರಿಯಾದ ಗುಣಮಟ್ಟಕ್ಕೆ ಪೂರೈಸಬೇಕು” ಎಂದರು.


ಇದನ್ನೂ ಓದಿ: Farming: ಕಾರ್ಪೊರೇಟ್‌ ಕೆಲ್ಸಕ್ಕೆ ಗುಡ್ ಬೈ, ಕೃಷಿ ಕೆಲ್ಸಕ್ಕೆ ಜೈ ಜೈ! ಸಾವಯವ ಬೇಸಾಯದಲ್ಲೇ ಸಕ್ಸಸ್ ಕಂಡ ದಂಪತಿ


"ಭೌತಿಕ ವೀಕ್ಷಣೆಯ ಆಧಾರದ ಮೇಲೆ ನಾವು ಏನನ್ನೂ ಶಿಫಾರಸು ಮಾಡಲು ಬಯಸುವುದಿಲ್ಲ. ನಾವು ಕಾಫಿ ಬೀಜಗಳ ವ್ಯಾಪಕ ಪರೀಕ್ಷೆಯ ಮೂಲಕ ಹೋಗಲು ಬಯಸುತ್ತೇವೆ. ಜವಾಬ್ದಾರಿಯುತ ಸಂಸ್ಥೆಯಾಗಿ, ದೀರ್ಘಾವಧಿಯ ಸುಸ್ಥಿರತೆ ಸೇರಿದಂತೆ ಎಲ್ಲವನ್ನೂ ನಾವು ಪರಿಶೀಲಿಸಬೇಕಿದೆ. ಅದನ್ನೆ ನಾವು ಮಾಡುತ್ತಿದ್ದೇವೆ" ಎನ್ನುತ್ತಾರೆ ಜಗದೀಶ.

Published by:Latha CG
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು