ಬಂಡೆ ಚೂರಾಗಿದೆ, ಆ ಬಂಡೆ ಕಲ್ಲುಕಲ್ಲಾಗಿಯೇ ಜೀವನ ಸಾಗಿಸಲಿ; ಡಿಕೆಶಿಗೆ ನೊಣವಿನಕೆರೆ ಸ್ವಾಮೀಜಿ ಆಶೀರ್ವಚನ

ಶ್ರೀಮಠದ ಆಶೀರ್ವಾದದಿಂದ ಡಿಕೆಶಿ ಧೈರ್ಯದಿಂದ ಹೊರ ಬಂದಿದ್ದಾರೆ. ಬಂಡೆ ಚೂರಾಗಿದೆ ಆ ಬಂಡೆ ಕಲ್ಲು ಕಲ್ಲಾಗೆ ಜೀವನ ಸಾಗಿಸಲಿ ಎಂಬ ಶ್ರೀಮಠದ ಆಶೀರ್ವಾದ ಅವರ ಮೇಲಿದೆ.

Latha CG | news18-kannada
Updated:October 27, 2019, 12:16 PM IST
ಬಂಡೆ ಚೂರಾಗಿದೆ, ಆ ಬಂಡೆ ಕಲ್ಲುಕಲ್ಲಾಗಿಯೇ ಜೀವನ ಸಾಗಿಸಲಿ; ಡಿಕೆಶಿಗೆ ನೊಣವಿನಕೆರೆ ಸ್ವಾಮೀಜಿ ಆಶೀರ್ವಚನ
ಡಿಕೆ ಶಿವಕುಮಾರ್
  • Share this:
ತುಮಕೂರು(ಅ.27): ಬಂಡೆ ಚೂರಾಗಿದೆ ಆ ಬಂಡೆ ಕಲ್ಲುಕಲ್ಲಾಗಿಯೇ ಮುಂದುವರೆಯಿಲಿ. ಶ್ರೀಮಠದ ಭಕ್ತನಾಗಿ, ಮಗನಾಗಿ , ಆಶಿರ್ವಾದ ಪಡೆದಿರುವ ಡಿಕೆ ಶಿವಕುಮಾರ್ ಅವರು ಕಾನೂನಿನ ವ್ಯವಸ್ಥೆಯಲ್ಲಿ ಕೆಲವು ಸವಾಲುಗಳನ್ನು ಎದುರಿಸಿದ್ದಾರೆ ಎಂದು ನೊಣವಿನಕೆರೆ ಕಾಡಸಿದ್ದೇಶ್ವರ ಮಠಾಧ್ಯಕ್ಷ ಶಿವಯೋಗಿಶ್ವರ ಗುರುಗಳು ಹೇಳಿದ್ದಾರೆ.

ನ್ಯೂಸ್ 18 ಕನ್ನಡದ ಜೊತೆ ಮಾತನಾಡಿದ ಅವರು, ಡಿಕೆಶಿವಕುಮಾರ್​ ಅವರಿಗೆ ಒಳಿತಾಗುತ್ತದೆ ಎಂದರು. ಇಂದು ಡಿಕೆಶಿ ಮಠಕ್ಕೆ ಬರುತ್ತಿದ್ದಾರೆ. ಮಹಾಮಂಗಳಾರತಿ, ಅಷ್ಟೋತ್ರ ಪೂಜೆ ನಡೆಯಲಿದೆ‌. ಶ್ರೀಮಠದ ಆಶಿರ್ವಾದ ಅವರ ಮೇಲಿದೆ ಎಂದರು.

ನನ್ನನ್ನು ಕೆಳಗಿಳಿಸಿ ಬಿಜೆಪಿಯವರು ಅಧಿಕಾರಕ್ಕೆ ಬಂದಿದ್ದಾರೆ; ಆದರೆ ನಾನು ಅವರಂತೆ ಮಾಡಲ್ಲ; ಕುಮಾರಸ್ವಾಮಿ

ಶ್ರೀಮಠದ ಕರ್ತೃವಿನ ಕೃಪಾಶಿರ್ವಾದ ಅವರ ಮೇಲಿದೆ. ಬಾರದು, ತಪ್ಪದು, ಬಪ್ಪದು ಇದೆಲ್ಲಾ ಪ್ರಾರಬ್ಧ ದೋಷದಲ್ಲಿರುವಂಥದ್ದು. ಜಗತ್ತಿನಲ್ಲಿ ಎಲ್ಲರಿಗೂ ಆಸೆ, ಆಮಿಷ ಇದ್ದೇ ಇರುತ್ತದೆ. ನೆಲ, ಜಲ, ಆಕಾಶ, ಅನ್ನ ಎಲ್ಲವೂ ಮುಖ್ಯ ಎಂದು ಹೇಳಿದರು.

ನೊಣವಿನಕೆರೆ ಕಾಡಸಿದ್ದೇಶ್ವರ ಮಠದ ಶಿವಯೋಗೀಶ್ವರ ಗುರುಗಳು


ಆಶೋತ್ರದಲ್ಲಿ ಒಂದು ಹೆಜ್ಜೆ ಮುಂದೆ ನಡೆದು ಆಶೋತ್ರದಲ್ಲಿ ಅದನ್ನೆಲ್ಲಾ ಪಡೆದಿರುವುದು. ಕಾನೂನು ಚೌಕಟ್ಟಿನಲ್ಲಿ ಅದೆಲ್ಲ ತಪ್ಪು ಅಂತಾ ಮನವರಿಕೆಯಾದಾಗ ಅದನ್ನು ಎದುರಿಸುವಂತದ್ದೇ ಅವನ ಧರ್ಮ ಎಂದರು.

ಶ್ರೀಮಠದ ಆಶೀರ್ವಾದದಿಂದ ಡಿಕೆಶಿ ಧೈರ್ಯದಿಂದ ಹೊರ ಬಂದಿದ್ದಾರೆ. ಬಂಡೆ ಚೂರಾಗಿದೆ ಆ ಬಂಡೆ ಕಲ್ಲು ಕಲ್ಲಾಗೆ ಜೀವನ ಸಾಗಿಸಲಿ ಎಂಬ ಶ್ರೀಮಠದ ಆಶೀರ್ವಾದ ಅವರ ಮೇಲಿದೆ. ಇವತ್ತು ವಿಶೇಷ ಕಾರ್ತಿಕ ಅಮಾವಾಸ್ಯೆ ಪ್ರಾರಂಭವಾಗಲಿದೆ.ಪ್ರತಿ ತಿಂಗಳ ಅಮಾವಾಸ್ಯೆಯಂತೆ ನಮ್ಮಲ್ಲಿ ಸಂಕಲ್ಪ ಕಾರ್ಯಕ್ರಮ ಇದೆ. ಗಜರಾಜನಿಂದ ಗಂಗಾಸ್ನಾನ, ಮಹಾಮಂಗಳಾರತಿ, ಆಶೀರ್ವಾದ ದಯಪಾಲಿಸಲಿ. ಅವರ ಕುಟುಂಬ ಸಮೇತವಾಗಿ ಬರುವ ಸಾಧ್ಯತೆ ಉಂಟು ಎಂದು ಹೇಳಿದರು.(ವರದಿ: ವಿಠಲ್ ಕುಮಾರ್)

‘ಅತ್ಯಂತ ಮಹತ್ತರವಾದ ಘಟನೆ ನಡೆದಿದೆ‘: ಹೀಗೆ ಟ್ರಂಪ್​​ ಟ್ವೀಟ್​​ ಮಾಡಿದ್ದರ ಹಿಂದಿನ ರಹಸ್ಯವೇನು?

First published:October 27, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ