• Home
  • »
  • News
  • »
  • state
  • »
  • Inam Dattatreya Peetha: ದತ್ತಪೀಠದ ಹೋಮ ಮಂಟಪದಲ್ಲಿ ಮಾಂಸಾಹಾರ ಅಡುಗೆ; ಹಿಂದೂ ಸಂಘಟನೆಗಳ ಆಕ್ರೋಶ

Inam Dattatreya Peetha: ದತ್ತಪೀಠದ ಹೋಮ ಮಂಟಪದಲ್ಲಿ ಮಾಂಸಾಹಾರ ಅಡುಗೆ; ಹಿಂದೂ ಸಂಘಟನೆಗಳ ಆಕ್ರೋಶ

ಹೋಮ ಮಂಟಪ

ಹೋಮ ಮಂಟಪ

ಹಿಂದೂ-ಮುಸ್ಲಿಮರ ಪವಿತ್ರ ಧಾರ್ಮಿಕ ಕ್ಷೇತ್ರವೆಂದೇ ಗುರುತಿಸಿಕೊಂಡಿರುವ ಚಿಕ್ಕಮಗಳೂರಿನ ಇನಾಂ ದತ್ತಾತ್ರೇಯ ಪೀಠದ ಪಾವಿತ್ರತೆ ಹಾಳಾಗುತ್ತಿದೆ ಎಂದು ಹಿಂದೂ ಸಂಘಟನೆಗಳು ಆಕ್ರೋಶಗೊಂಡಿವೆ.

  • Share this:

ಚಿಕ್ಕಮಗಳೂರು: ಕಳೆದ ಮೂರು ತಿಂಗಳ ಹಿಂದಷ್ಟೆ ಹಿಂದೂ-ಮುಸ್ಲಿಮರ ಧಾರ್ಮಿಕ ಭಾವೈಕ್ಯತೆಯ ಕೇಂದ್ರಬಿಂದುವಾಗಿರುವ ಕಾಫಿನಾಡ ಇನಾಂ ದತ್ತಾತ್ರೇಯ (Inam dattatreya peetha) ಬಾಬಾಬುಡನ್ ಗಿರಿ (Bababudan Hills) ದರ್ಗಾದಲ್ಲಿ ಮಾಂಸ ಬೇಯಿಸಿದ್ದು ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಆಗ, ಜಿಲ್ಲಾಡಳಿತ ಇನ್ಮುಂದೆ ಹಾಗಾಗಲ್ಲ ಎಂದು ಹೇಳಿ ಹಿಂದೂ ಸಂಘಟಕರನ್ನ (Hindu Activist) ತಣ್ಣಗಾಗಿಸಿತ್ತು. ಆದ್ರೆ ಈಗ ಮತ್ತೆ ಅದೇ ಜಾಗದಲ್ಲಿ ಮಾಂಸ ಬೇಯಿಸಿರೋದು ಜಿಲ್ಲಾಡಳಿತ ದಿವ್ಯ ನಿರ್ಲಕ್ಷ್ಯದ ಪರಮಾವಧಿ ಎಂದು ಹಿಂದೂ ಸಂಘಟನೆಗಳು ಕಿಡಿಕಾರಿವೆ. ಜಿಲ್ಲಾಡಳಿತ ನಮ್ಮ ಮೂಗಿಗೆ ತುಪ್ಪ ಸವರಿದ್ದು ಸಾಕು. ಇನ್ಮುಂದೆ ಹೀಗಾದರೆ, ನಮ್ಮ ಉತ್ತರ ಬೇರೆ ರೀತಿ ಇರುತ್ತೆಂದು ಜಿಲ್ಲಾಡಳಿತಕ್ಕೆ ನೇರ ಎಚ್ಚರಿಕೆ ನೀಡಿದ್ದಾರೆ.


ಹಿಂದೂ-ಮುಸ್ಲಿಮರ ಪವಿತ್ರ ಧಾರ್ಮಿಕ ಕ್ಷೇತ್ರವೆಂದೇ ಗುರುತಿಸಿಕೊಂಡಿರುವ ಚಿಕ್ಕಮಗಳೂರಿನ ಇನಾಂ ದತ್ತಾತ್ರೇಯ ಪೀಠದ ಪಾವಿತ್ರತೆ ಹಾಳಾಗುತ್ತಿದೆ ಎಂದು ಹಿಂದೂ ಸಂಘಟನೆಗಳು ಆಕ್ರೋಶಗೊಂಡಿವೆ.


ಮಾಂಸ ಬೇಯಿಸುವ ವಿಡಿಯೋ ವೈರಲ್


ಕಳೆದ ಮೂರು ತಿಂಗಳ ಹಿಂದಷ್ಟೆ ದತ್ತಪೀಠದಲ್ಲಿ ದತ್ತಜಯಂತಿ ವೇಳೆ ಹೋಮ-ಹವನ ನಡೆಯುವ ಶೆಡ್‍ನಲ್ಲಿ ಪ್ರವಾಸಿಗರು ಮಾಂಸ ಬೇಯಿಸಿದ್ದರು. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಹಿಂದೂ ಸಂಘಟನೆಗಳ ಕಣ್ಣು ಕೆಂಪಾಗಿತ್ತು. ಆಗ ಜಿಲ್ಲಾಡಳಿತ ಕೂಡ ಇನ್ಮುಂದೆ ಆ ರೀತಿಯಾಗದಂತೆ ಸೂಕ್ತ ಕ್ರಮಕೈಗೊಳ್ಳುತ್ತೇವೆಂದು ಭರವಸೆ ನೀಡಿತ್ತು.


non veg cooking in inam dattatreya peetha homa mantapa vctv mrq
ಹೋಮ ಮಂಟಪ


ಆದ್ರೀಗ, ದತ್ತಪೀಠದಲ್ಲಿ ಮತ್ತೆ ಮಾಂಸ ಬೇಯಿಸಿರುವ ವಿಡಿಯೋ ವೈರಲ್ ಆಗಿದ್ದು ಹಿಂದೂ ಬ್ರಿಗೇಡ್ ಕಾರ್ಯಕರ್ತರು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಸರ್ಕಾರ ಅಂದು ಕೊಟ್ಟ ಮಾತನ್ನ ಉಳಿಸಿಕೊಂಡಿಲ್ಲ. ಸರ್ಕಾರದ ನಿರ್ಲಕ್ಷ್ಯದಿಂದಲೇ ಪ್ರವಾಸಿಗರು ಪುಣ್ಯಕ್ಷೇತ್ರದಲ್ಲಿ ಎಲ್ಲೆಂದರಲ್ಲಿ ಮಾಂಸವನ್ನ ಕಡಿದು, ಬೇಯಿಸುತ್ತಿದ್ದಾರೆ. ಕೂಡಲೇ ದತ್ತಪೀಠದಲ್ಲಿ ಅಕ್ರಮ ಚಟುವಟಿಕೆಗೆ ಕಡಿವಾಣ ಹಾಕದಿದ್ದರೆ ಉಗ್ರ ಹೋರಾಟ ಮಾಡುವುದಾಗಿ ಹಿಂದು ಬ್ರಿಗೇಡ್ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ.


ದತ್ತಪೀಠ ಟೂರಿಸ್ಟ್ ಸ್ಪಾಟ್ ಅಲ್ಲ


ದತ್ತಪೀಠ ಟೂರಿಸ್ಟ್ ಸ್ಪಾಟ್ ಅಲ್ಲ. ಟೂರಿಸ್ಟ್ ಸ್ಪಾಟ್ ಬೇಕು ಅಂದ್ರೆ ಗಿರಿಶ್ರೇಣಿಯಲ್ಲಿ ಬೇರೆ ಸ್ಥಳಗಳು ಇವೆ. ಎರಡು ಕೋಮುಗಳು ಕೂಡ ದತ್ತಪೀಠವನ್ನ ಧಾರ್ಮಿಕ ಕ್ಷೇತ್ರ ಎಂದು ನಂಬಿವೆ. ಹೋಮ-ಹವನಕ್ಕೆ ಸರ್ಕಾರವೇ ತಾತ್ಕಾಲಿಕ ಶೆಡ್ ನಿರ್ಮಿಸಿಕೊಟ್ಟಿದೆ. ಅಲ್ಲಿ ಈ ರೀತಿ ಮಾಂಸ ಬೇಯಿಸಿದರೆ ಅದು ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ತರಲಿದೆ.


non veg cooking in inam dattatreya peetha homa mantapa vctv mrq
ಹೋಮ ಮಂಟಪ


ಎಲ್ಲಿಂದಲೋ ಬರುವ ಪ್ರವಾಸಿಗರು ಯಾವುದ್ಯಾವುದೋ ಮಾಂಸವನ್ನ ತಂದು ಅಡುಗೆ ಮಾಡಿ ಬಿಸಾಡಿ ಹೋಗುತ್ತಾರೆ. ಆದರೆ, ಅಲ್ಲೇ ಇರುವ ಪೊಲೀಸರು ಏನ್ ಮಾಡುತ್ತಾರೋ ಗೊತ್ತಿಲ್ಲ ಎಂದು ಪೊಲಿಸರ ವಿರುದ್ಧವೂ ಅಸಮಾಧಾನ ಹೊರಹಾಕಿದ್ದಾರೆ.


ಮುಸ್ಲಿಮರು ನಮಾಜ್ ಮಾಡುವ 200 ಮೀಟರ್ ದೂರದಲ್ಲಿ ಬಹುಸಂಖ್ಯಾತ ಹಿಂದೂಗಳು ತಿನ್ನುವ ಪದಾರ್ಥವನ್ನ ತಿನ್ನೋದಕೆ ಬಿಡುತ್ತಾರಾ ಅವರು ಎಂದು ಹಿಂದೂ ಬ್ರಿಗೇಡ್ ಪ್ರಶ್ನಿಸಿದೆ.


ಇದನ್ನೂ ಓದಿ:  Tippu Express: ಟಿಪ್ಪು ಎಕ್ಸ್‌ಪ್ರೆಸ್ ಮರು ನಾಮಕರಣ; ಯದುವೀರ್ ಒಡೆಯರ್ ಮೊದಲ ಪ್ರತಿಕ್ರಿಯೆ


ಉತ್ತರ ಕೊಡಲು ನಾವು ಸಿದ್ಧ


ಈಗ ಜಿಲ್ಲಾಡಳಿತ ಅಲ್ಲಿ ಬ್ಯಾರಿಕೇಡ್ ಹಾಕಿ, ಶೆಡ್‍ಗೆ ಕಂಬಗಳನ್ನ ಕಟ್ಟಿ ಬಂದೋಬಸ್ತ್ ಮಾಡಿದೆ. ಆದರೆ, ಇದು ಕಣ್ಣೋರೆಸುವ ತಂತ್ರ. ಇನ್ಮುಂದೆ ಹೀಗಾದರೆ ಉತ್ತರ ಕೊಡೋದಕ್ಕೆ ನಾವು ಸಿದ್ಧ ಎಂದು ಎಚ್ಚರಿಸಿದ್ದಾರೆ.


non veg cooking in inam dattatreya peetha homa mantapa vctv mrq
ಹೋಮ ಮಂಟಪ


ಕಳೆದ ನಾಲ್ಕೈದು ತಿಂಗಳ ಹಿಂದೆಯೂ ದತ್ತಪೀಠದಲ್ಲಿ ಬಿರಿಯಾನಿ ತಯಾರಿಸಿ ಸೇವಿಸಿದ್ದರು. ಆಗಲೂ ಹಿಂದೂ ಪರ ಸಂಘಟನೆ ಕಾರ್ಯಕರ್ತರು ಜಿಲ್ಲಾಡಳಿತಕ್ಕೆ ದೂರು ನೀಡಿದ್ದರು. ಆಗ ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿತ್ತು. ಇದೀಗ ದತ್ತಪೀಠಕ್ಕೆ ಬರುವ ಪ್ರವಾಸಿಗರು ದತ್ತ ಮಾಲಾಧಾರಣೆ ಹಾಗೂ ದತ್ತ ಜಯಂತಿಯ ವೇಳೆ ಹಿಂದೂ ಸಂಘಟನೆಗಳು ಹೋಮ-ಹವನ ನಡೆಸಲು ಸರ್ಕಾರವೇ ನಿರ್ಮಿಸಿರುವ ತಾತ್ಕಾಲಿಕ ಶೆಡ್ ನಲ್ಲಿ ಪುನಃ ಮಾಂಸವನ್ನ ಬೇಯಿಸಿದ್ದಾರೆ.


ಇದನ್ನೂ ಓದಿ:  Telugu Cinema Shooting: ಮೇಲುಕೋಟೆ ಶೂಟಿಂಗ್​ನಲ್ಲಿ ಅವಾಂತರ; ತೆಲುಗು ಚಿತ್ರತಂಡದ ವಿರುದ್ಧ ಸ್ಥಳೀಯರ ಆಕ್ರೋಶ


ನಾವೇ ಸೂಕ್ತ ಪಾಠ ಕಲಿಸುತ್ತೇವೆ


ಇದೇ ಕೊನೆಯಾಗಬೇಕು. ಇನ್ಮುಂದೆ ಇಂತಹ ಘಟನೆ ನಡೆಯದಂತೆ ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ನಾವೇ ಸೂಕ್ತ ತಕ್ಕ ಪಾಠ ಕಲಿಸುತ್ತೇವೆ ಎಂದು ಯುವ ಬ್ರಿಗೇಡ್ ಸಂಚಾಲಕ ಪ್ರವೀಣ್ ಖಾಂಡ್ಯ ಕಿಡಿ ನುಡಿಗಳನ್ನಾಡಿದ್ದಾರೆ.

Published by:Mahmadrafik K
First published: