HOME » NEWS » State » NO WATER AVAILABLE IN MANY VILLAGES OF BELLARY DISTRICT EVEN TUNGA BADHRA DAM IS FULL OF WATER AND NEARER LG

ತುಂಗಭದ್ರಾ ಡ್ಯಾಂ ಪಕ್ಕದಲ್ಲೇ ಇದ್ದರೂ ಈ ಗ್ರಾಮದಲ್ಲಿ ಹನಿ ನೀರಿಗೂ ಪರದಾಟ

ಹೊಸಪೇಟೆ ತಾಲೂಕು ಬೈಲುವದ್ದಿಗೇರಿ ಗ್ರಾಮಪಂಚಾಯತಿ ವ್ಯಾಪ್ತಿಯಲ್ಲಿ ಬರುವ ನಾಲ್ಕು ಗ್ರಾಮಗಳಿಗೂ ಈ ಕೆರೆಯೇ ಪ್ರಮುಖ ಆಧಾರವಾಗಿದೆ. ಕೇವಲ ಜನರಿಗೆ ಮಾತ್ರವಲ್ಲ ಜಾನುವಾರುಗಳಿಗೆ, ಪಕ್ಕದಲ್ಲಿಯೇ ಇರುವ ದರೋಜಿ ಕರಡಿಧಾಮಕ್ಕೂ ಇದೇ ಪ್ರಮುಖ ನೀರಿನ ಸೆಲೆ. ಆದರೆ ಬೈಲುವದ್ದಿಗೇರಿ ಗ್ರಾಮದ ಕೆರೆ ನೀರಿಲ್ಲದೆ ಬರಿದಾಗಿದೆ.

news18-kannada
Updated:January 21, 2020, 4:23 PM IST
ತುಂಗಭದ್ರಾ ಡ್ಯಾಂ ಪಕ್ಕದಲ್ಲೇ ಇದ್ದರೂ ಈ ಗ್ರಾಮದಲ್ಲಿ ಹನಿ ನೀರಿಗೂ ಪರದಾಟ
ಬರಗಾಲದ ಪರಿಸ್ಥಿತಿ ನಿರ್ಮಾಣ
  • Share this:
ಬಳ್ಳಾರಿ,(ಜ.21): ಆ ಗ್ರಾಮಸ್ಥರು ತುಂಗಭದ್ರಾ ಜಲಾಶಯ ಪಕ್ಕದಲ್ಲಿಯೇ ಇದ್ದರೂ ನೀರಿಗಾಗಿ ಸಂಕಷ್ಟ ಪಡುತ್ತಿದ್ದಾರೆ‌. ಆ ಗ್ರಾಮದಲ್ಲಿ ಕೆರೆಯಿದ್ದರೂ ಒಂದು ಹನಿ ನೀರಿಲ್ಲ. ಆ ಗ್ರಾಮದ ಮುಂದೆ ಬೃಹತ್ ಜಿಂದಾಲ್ ಕೈಗಾರಿಕೆಗೆ ನೀರಿನ ಪೈಪ್ ಲೈನ್ ಹಾದು ಹೋದರೂ ಅಲ್ಲಿಯ ಜನರಿಗೆ ನೀರಿಗಾಗಿ ಪರದಾಟ ತಪ್ಪಿಲ್ಲ‌. ಇದಕ್ಕೆ ರೊಚ್ಚಿಗೆದ್ದ ಗ್ರಾಮಸ್ಥರು ಏನು ಮಾಡಿದ್ರು? ಏನು ಮಾಡಬೇಕೆಂದಿದ್ದಾರೆ ಗೊತ್ತಾ?

ಕಿಲೋಮೀಟರ್ ಗಟ್ಟಲೆ ಸಾಲಾಗಿ ನಿಂತ ಲಾರಿಗಳು‌. ರಾ.ಹೆ. ರಸ್ತೆಯಲ್ಲಿ ಖಾಲಿ ಕೊಡಗಳು ಹಿಡಿದು ಕುಳಿತ ಮಹಿಳೆಯರು. 'ಬೇಕೆ ಬೇಕು ನೀರು ಬೇಕು' ಎಂದು ಘೋಷಣೆ ಕೂಗುತ್ತಿರುವ ಗ್ರಾಮಸ್ಥರು. ಇಂತಹ ದೃಶ್ಯ ಕಂಡಿಬಂದಿದ್ದು ರಾಷ್ಟ್ರೀಯ ಹೆದ್ದಾರಿ 63 ರಸ್ತೆಯ ಹೊಸಪೇಟೆ ತಾಲೂಕು ಬೈಲುವದ್ದಿಗೇರಿ ಗ್ರಾಮದಲ್ಲಿ. ತುಂಗಭದ್ರ ಜಲಾಶಯದ ಸಮೀಪದಲ್ಲಿಯೇ ಇದ್ದರೂ ಹನಿ ಹನಿ ನೀರಿಗೆ ಬೈಲುವದ್ದಿಗೇರಿ ಗ್ರಾಮಸ್ಥರು ದಿನನಿತ್ಯ ಪರದಾಡುತ್ತಿದ್ದಾರೆ. ತಮ್ಮೂರಿನಲ್ಲಿರುವ 36 ಎಕರೆ ಕೆರೆಯೂ ಬತ್ತಿ ಹೋಗಿದೆ. ಅಂರ್ತಜಲವೂ ಕಡಿಮೆಯಾಗಿ ಇರುವ ಬೋರ್ ನೀರಿಗೆ ಹಗಲು ರಾತ್ರಿ ಹೆಂಗಳೆಯರು ಪರದಾಟ ಹೇಳತೀರದು.

2018ರಲ್ಲಿ ಬೆಂಗಳೂರಲ್ಲಿ ಬಂಧಿತನಾಗಿದ್ದ ವ್ಯಕ್ತಿಯೇ ಮಂಗಳೂರಿನಲ್ಲಿ ಬಾಂಬ್ ಇಟ್ಟನಾ? ಚುರುಕುಗೊಂಡ ಪೊಲೀಸ್ ತನಿಖೆ

ಕುಡಿಯವ ನೀರಿಗೆ ಮಾತ್ರವಲ್ಲ ದಿನಬಳಕೆ ನೀರಿಗೂ ಈ ಊರಿನ ಗ್ರಾಮಸ್ಥರು ಕೆಂಗಟ್ಟು ಹೋಗಿದ್ದಾರೆ. ಮೇಲಾಗಿ ಈ ಗ್ರಾಮದಿಂದಲೇ ಜಿಂದಾಲ್ ಕೈಗಾರಿಕೆಗೆ ತುಂಗಭದ್ರ ಜಲಾಶಯದಿಂದ ನೀರಿನ ಪೈಪ್ ಲೈನ್ ಹೋಗಿದೆ. ಆದರೆ ಅದರ ಬಳಕೆಗೆ ಅವಕಾಶವಿಲ್ಲ. ಸಾರ್ವಜನಿಕ ಹಿತದೃಷ್ಟಿಯಿಂದ ಪೈಪ್ ಲೈನ್ ಮೂಲಕ ಗ್ರಾಮದ ಕೆರೆಗೆ ನೀರು ಬಿಡಿ.  ಇಲ್ಲವೇ  ಈ ನೀರಿನ ಪೈಪ್ ಲೈನ್ ಒಡೆದು ನೀರು ತೆಗೆದುಕೊಳ್ಳುವ ಪರಿಸ್ಥಿತಿ ನಿರ್ಮಾಣ ಮಾಡಬೇಡಿ ಎಂದು ಹೋರಾಟಕ್ಕಿಳಿದ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.

ಹೊಸಪೇಟೆ ತಾಲೂಕು ಬೈಲುವದ್ದಿಗೇರಿ ಗ್ರಾಮಪಂಚಾಯತಿ ವ್ಯಾಪ್ತಿಯಲ್ಲಿ ಬರುವ ನಾಲ್ಕು ಗ್ರಾಮಗಳಿಗೂ ಈ ಕೆರೆಯೇ ಪ್ರಮುಖ ಆಧಾರವಾಗಿದೆ. ಕೇವಲ ಜನರಿಗೆ ಮಾತ್ರವಲ್ಲ ಜಾನುವಾರುಗಳಿಗೆ, ಪಕ್ಕದಲ್ಲಿಯೇ ಇರುವ ದರೋಜಿ ಕರಡಿಧಾಮಕ್ಕೂ ಇದೇ ಪ್ರಮುಖ ನೀರಿನ ಸೆಲೆ. ಆದರೆ ಬೈಲುವದ್ದಿಗೇರಿ ಗ್ರಾಮದ ಕೆರೆ ನೀರಿಲ್ಲದೆ ಬರಿದಾಗಿದೆ. ಗ್ರಾಮದ ಮುಂದೆ ಹಾದುಹೋಗಿರುವ ಜಿಂದಾಲ್ ಪೈಪ್ ಲೈನ್ ಮೂಲಕ ವರುಷಕ್ಕೆ ಎರಡು ಬಾರಿ ಕೆರೆ ನೀರು ತುಂಬಿಸುವಂತೆ ಈಗಾಗಲೇ ಹಲವು ಬಾರಿ ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ. ಟಿ ಬಿ ಬೋರ್ಡ್ ಸಹ ಜಿಂದಾಲ್ ಗೆ ಈ ಸಂಬಂಧ ಪತ್ರ ಬರೆದಿದೆ. ಇದಕ್ಕೆ ಜಿಂದಾಲ್ ಯಾವುದೇ ಪ್ರತಿಕ್ರಿಯೆ ನೀಡದ ಕಾರಣ ಇಂದು ರಾ.ಹೆ.63 ರಸ್ತೆ ತಡೆದು ಗ್ರಾಮಸ್ಥರು ಪ್ರತಿಭಟನೆ ಮಾಡಿದರು.

‘ನೀವು ಎಷ್ಟೇ ಪ್ರತಿಭಟಿಸಿದರೂ ಪೌರತ್ವ ಕಾಯ್ದೆ ಹಿಂಪಡೆಯುವ ಪ್ರಶ್ನೆಯೇ ಇಲ್ಲ‘: ಕೇಂದ್ರ ಗೃಹ ಸಚಿವ ಅಮಿತ್​​ ಶಾ

ಸ್ಥಳಕ್ಕೆ ಜಿಂದಾಲ್ ಕಂಪನಿ ಅಧಿಕಾರಿಗಳು, ಹೊಸಪೇಟೆ ಉಪ ತಹಶೀಲ್ದಾರ್ ಭೇಟಿ ನೀಡಿದರು. ಈ ವೇಳೆ ಗ್ರಾಮಸ್ಥರ ನೀರಿನ ಹಕ್ಕೊತ್ತಾಯಕ್ಕೆ, ಆದಷ್ಟು ಬೇಗನೇ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಭೆ ನಡೆಸುತ್ತಾರೆ ಎಂದು ಹೊಸಪೇಟೆ ಪ್ರಭಾರಿ ತಹಶೀಲ್ದಾರ್ ತಿಳಿಸಿದರು. ಟಿ ಬಿ ಡ್ಯಾಂ ನೀರನ್ನು ಜಿಂದಾಲ್ ಕಂಪನಿ ಪೈಪ್ ಲೈನ್ ಮೂಲಕ ಬೈಲುವದ್ದಿಗೇರಿ ಗ್ರಾಮಕ್ಕೆ ಬೇಕಾದಷ್ಟು ನೀರು ಹರಿಸುವಂತೆ ಒತ್ತಾಯಿಸುತ್ತಿದ್ದಾರೆ. ಆದರೆ ಜಿಂದಾಲ್ ನೀರು ಕೊಡುವುದು ಬಿಟ್ಟು ಬೇರೆ ಗ್ರಾಮಾಭಿವೃದ್ದಿ ಮಾಡಲು ಆಸಕ್ತಿ ವಹಿಸುತ್ತಿದೆ.ಒಂದು ಗ್ರಾಮಕ್ಕೆ ನೀರು ಬಿಟ್ಟರೆ ಬೇರೆಲ್ಲ ಗ್ರಾಮಗಳು ನೀರಿಗೆ ಬೇಡಿಕೆ ಇಡುತ್ತವೆ ಎಂಬ ಭಯ ಅವರಲ್ಲಿದೆ. ಇತ್ತೀಚಿಗಷ್ಟೆ ಘೋಷಣೆಯಾಗಿರುವ 243 ಕೋಟಿ ಏತ ನೀರಾವರಿ ಯೋಜನೆ ಅನುಷ್ಟಾನವಾದ್ರೆ ಶಾಶ್ವತ ಪರಿಹಾರವಾಗುತ್ತದೆ. ಆದರೆ ಅದ್ಯಾವಾಗ ಆಗುತ್ತೋ? ಅಲ್ಲಿಯವರೆಗೆ ಜಿಂದಾಲ್ ಪೈಪ್ ಲೈನ್ ಮೂಲಕ ನೀರು ಕೊಡಿ ಇಲ್ಲವೇ ಮುಂದಿನ ಪರಿಣಾಮ ಎದುರಿಸಿ ಎಂದು ಗ್ರಾಮಸ್ಥರು ನೀರಿಗಾಗಿ ಹೋರಾಟ ತೀವ್ರಗೊಳಿಸಿದ್ದಾರೆ.
Youtube Video
First published: January 21, 2020, 3:51 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories