HOME » NEWS » State » NO VEHICLE PARKING PLACE IN MURDESHWARA SESR DKK

ಮುರುಡೇಶ್ವರದಲ್ಲಿಲ್ಲ ವಾಹನ ನಿಲುಗಡೆಗೆ ಜಾಗ: ಕಡಲತೀರದಲ್ಲೆ ಬೇಕಾಬಿಟ್ಟಿ ಪಾರ್ಕಿಂಗ್

ಕಡಲ ತೀರದಲ್ಲಿಯೇ ವಾಹನಗಳನ್ನು ಕೆಲವರು ನಿಲ್ಲಿಸಿ, ಇತರರಿಗೆ ಕಿರಿಕಿರಿ ಉಂಟು ಮಾಡುವುದರ ಜೊತೆಗೆ ಅಪಾಯಕ್ಕೂ ಆಹ್ವಾನ ನೀಡುತ್ತಿದ್ದಾರೆ

news18-kannada
Updated:January 7, 2021, 7:22 AM IST
ಮುರುಡೇಶ್ವರದಲ್ಲಿಲ್ಲ ವಾಹನ ನಿಲುಗಡೆಗೆ ಜಾಗ: ಕಡಲತೀರದಲ್ಲೆ ಬೇಕಾಬಿಟ್ಟಿ ಪಾರ್ಕಿಂಗ್
ಕಡಲತೀರದಲ್ಲೆ ಪಾರ್ಕಿಂಗ್
  • Share this:
ಕಾರವಾರ (ಜ. 6): ಉತ್ತರ ಕನ್ನಡ ಜಿಲ್ಲೆಯ ಪ್ರಸಿದ್ದ ಪ್ರವಾಸಿ ತಾಣ, ಧಾರ್ಮಿಕ ಕ್ಷೇತ್ರ ಮುರ್ಡೆಶ್ವರ. ಇಲ್ಲಿನ ಕಡಲತೀರದಲ್ಲಿ ಸೌಂದರ್ಯ ಸವಿಯಲು ಅನೇಕ ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಾರೆ. ಆದರೆ, ಇಲ್ಲಿನ ಪ್ರವಾಸಿಗರಿಗೆ  ವಾಹನ ನಿಲುಗಡೆಗೆ ಸೂಕ್ತ ವ್ಯವಸ್ಥೆ ಇಲ್ಲ. ಇದರಿಂದಾಗಿ ಪ್ರವಾಸಿಗರು ಕೂಡ ಮನಬಂದಂತೆ ಎಲ್ಲಿ ಬೇಕಾದರಲ್ಲಿ ವಾಹನಗಳನ್ನು ನಿಲ್ಲಿಸುತ್ತಾರೆ. ಅದರಲ್ಲಿಯೂ ನೇರವಾಗಿ ಕಡಲ ತೀರದಲ್ಲಿಯೇ ವಾಹನಗಳನ್ನು ಕೆಲವರು ನಿಲ್ಲಿಸಿ, ಇತರರಿಗೆ ಕಿರಿಕಿರಿ ಉಂಟು ಮಾಡುವುದರ ಜೊತೆಗೆ ಅಪಾಯಕ್ಕೂ ಆಹ್ವಾನ ನೀಡುತ್ತಿದ್ದಾರೆ.  ಸಮುದ್ರದ ಅಲೆಗಳ ಏರಿಳಿತದ ಬಗ್ಗೆ ಅರಿವು ಅರಿವಿಲ್ಲದೇ  ಕಡಲತೀರದಲ್ಲಿ ಅಲೆಗಳು ಅಪ್ಪಳಿಸುವ ಜಾಗದಲ್ಲೆ ವಾಹನ ನಿಲ್ಲುಸುತ್ತಿರುವುದು ಕಂಡು ಬಂದಿದೆ.  ಈ ಹಿಂದೆ ಅಲೆಯ ರಭಸಕ್ಕೆ ಪ್ರವಾಸಿಗರು ಕಾರು ಸಮುದ್ರ ಸೇರಿದ ಘಟನೆ ಕೂಡಾ ನಡೆದಿದೆ. ಇಂತ ಅವಘಡಗಳು ಕಣ್ಣಮುಂದೆ ಇದ್ದರೂ ಮಾತ್ರ  ಉತ್ತರ ಕನ್ನಡ ಜಿಲ್ಲಾಡಳಿತವಾಗಲಿ, ಮುರ್ಡೆಶ್ವರ ಸ್ಥಳೀಯ ಆಡಳಿತವಾಗಲಿ ವಾಹನ ನಿಲುಗಡೆಗೆ ಸೂಕ್ತ ಸ್ಥಳ ನಿಗದಿಸಿಲ್ಲ

 ಪ್ರವಾಸಿಗರಿಗೆ ಕಿರಿಕಿರಿ

ವಾಹನಗಳನ್ನು ಕಡಲತೀರದಲ್ಲಿ ಪಾರ್ಕಿಂಗ್​ ಮಾಡುವುದರಿಂದ ಪ್ರವಾಸಿಗರು ಇಲ್ಲಿನ ಬೀಚ್​ನಲ್ಲಿ ಮೋಜು ಮಸ್ತಿ ಮಾಡಲು ಕಷ್ಟವಾಗುತ್ತಿದೆ. ಪ್ರವಾಸಿಗರಿಗೆ  ಒಂದೆಡೆ ಇಲ್ಲಿ ಮುಕ್ತವಾಗಿ ಓಡಾಲು ಕಿರಿಕಿರಯಾಗುತ್ತಿದೆ. ಎಲ್ಲಿ ಬೇಕಾದರಲ್ಲಿ ಪಾರ್ಕಿಂಗ್ ಮಾಡುವುದರಿಂದ ಅನೇಕರರಿಗೆ ಇರಿಸು ಮುರಿಸಾಗುತ್ತಿದ್ದು, ಈ ಅವ್ಯವಸ್ಥೆ ಬಗ್ಗೆ ಯಾರಿಗೆ ಹೇಳ ಬೇಕು ಎನ್ನುವುದೇ ದೊಡ್ಡ ಗೊಂದಲವಾಗಿದೆ.  ಈ ಕುರಿತು ಮಾತನಾಡಿದ ಪ್ರವಾಸಿಗರು ಇಂತಹ ದೊಡ್ಡ ಪ್ರವಾಸಿ ತಾಣದಲ್ಲಿ ವಾಹನ ಪಾರ್ಕಿಗ್ ಗೆ ಜಾಗ ಇಲ್ಲದಿರುವುದು ದುರಂತ ಎಂದು ಖೇದ ವ್ಯಕ್ತಪಡಿಸಿದರು.

ಪ್ರವಾಸಿಗರಿಗೆ ಇಲ್ಲಿ ಸರಿಯಾದ ಮಾಹಿತಿ ನೀಡಲು ಕೂಡಾ ಯಾವುದೇ ಆಡಳಿತ ಸಿಬ್ಬಂದಿ ಇಲ್ಲ. ಪೋಲಿಸ್​​ ಇಲಾಖೆಯ ಸಿಬ್ಬಂದಿ ಇಲ್ಲಿ ಕರ್ತವ್ಯದಲ್ಲಿದ್ದರೂ ಕೂಡ ಎಲ್ಲಿಬೇಕಾದಲ್ಲಿ ವಾಹನ ನಿಲುಗಡೆ ಮಾಡಿದವರಿಗೆ ಯಾವುದೇ ಎಚ್ಚರಿಕೆ ನೀಡುವುದಿಲ್ಲ. ಕಡಲತೀರದ ಮರಳಿನಲ್ಲಿ ವಾಹನ ಸಿಲುಕಿಕೊ.ಡಿತು ಎಂದರೆ ಹರಸಾಹಸ ಪಟ್ಟು ವಾಹನ ತೆಗಿಯಬೇಕಾದ ಸ್ಥಿತಿ ಇಲ್ಲಿ ನಿರ್ಮಾಣವಾಗುತ್ತದೆ.  ಇವೆಲ್ಲ ಗೊತ್ತಿದ್ದರೂ ಕೂಡಾ ಬರುವ ಪ್ರವಾಸಿಗರ ವರ್ತನೆ ಮುಂದುವರೆದಿದೆ.
Published by: Seema R
First published: January 7, 2021, 7:22 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories