Engineering: ಈ ವರ್ಷ ಕನ್ನಡದಲ್ಲಿ ಇಂಜಿನಿಯರಿಂಗ್ ಪಾಠ ಕೇಳೋಕೆ ಒಬ್ಬನೇ ಒಬ್ಬ ವಿದ್ಯಾರ್ಥಿಯೂ ಬಂದಿಲ್ಲ, ಛೆ!

ಕೌನ್ಸೆಲಿಂಗ್‌ನ ಆರಂಭಿಕ ಸುತ್ತಿನಲ್ಲಿ ಕೆಲ ವಿದ್ಯಾರ್ಥಿಗಳಿದ್ದರೂ, ಅವರಲ್ಲಿ ಒಬ್ಬರೂ ಕಾಲೇಜುಗಳಿಗೆ ಸೇರಿಕೊಂಡಿಲ್ಲ. ಈ ಸಂಬಂಧ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ, ಸಹ ಅಚ್ಚರಿ ವ್ಯಕ್ತಪಡಿಸಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಪಿಯು ಶಿಕ್ಷಣ ಮುಗಿದ ಬಳಿಕ ಎಂಜಿನಿಯರಿಂಗ್ (Engineering) ಬಹುತೇಕರ ಆಯ್ಕೆ. ಸಾಫ್ಟ್‌ವೇರ್‌ ಕಂಪನಿ, ಇನ್ನಿತರೆ ಕಂಪನಿಗಳಲ್ಲಿ( Companies) ಕೆಲಸ ಮಾಡಿ ಕೈ ತುಂಬ ಸಂಬಳ ಎಣಿಸುವ ಆಸೆಯಿಂದ ಹಲವರು ಎಂಜಿನಿಯರಿಂಗ್ ಅನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಇನ್ನು, ಗ್ರಾಮೀಣ ಪ್ರದೇಶದಿಂದ ( Rural Areas ) ಬಂದವರಿಗೆ ಹಾಗೂ ಕನ್ನಡ ಮಾಧ್ಯಮದಲ್ಲೇ ಓದಿದವರಿಗೆ ಎಂಜಿನಿಯರಿಂಗ್ ಮಾಡಲು ಸುಲಭವಾಗಲೆಂದು ಈ ವರ್ಷದಿಂದ ಕನ್ನಡ ಮಾಧ್ಯಮದಲ್ಲೇ ಎಂಜಿನಿಯರಿಂಗ್ ಕೋರ್ಸ್‌ ಅನ್ನು ರಾಜ್ಯ ಸರ್ಕಾರ (state government) ಆರಂಭಿಸಿದೆ. ಆದರೆ, ಪ್ರಥಮ ಬಾರಿಗೆ ಆರಂಭಿಸಿರುವ ಕನ್ನಡ ಮಾಧ್ಯಮದ (Kannada medium) ಎಂಜಿನಿಯರಿಂಗ್ ಕೋರ್ಸ್‌ಗೆ ರಾಜ್ಯದ ಒಬ್ಬ ವಿದ್ಯಾರ್ಥಿಯೂ (Single student) ಆಯ್ಕೆಯಾಗಿಲ್ಲ. ಈ ಸಂಬಂಧ ಕಾಲೇಜುಗಳಿಗೆ ವರದಿ ಸಲ್ಲಿಸಲು ಡಿಸೆಂಬರ್ 31 ಕೊನೆಯ ದಿನಾಂಕವಾಗಿತ್ತು. ಒಟ್ಟಾರೆ, ರಾಜ್ಯದ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಈ ಬಾರಿ 23,001 ಸೀಟುಗಳು ಖಾಲಿ ಇವೆ ಎಂದು ತಿಳಿದುಬಂದಿದೆ.

ಪ್ರಾದೇಶಿಕ ಭಾಷೆಯಲ್ಲಿ ಎಂಜಿನಿಯರಿಂಗ್
ರಾಷ್ಟ್ರೀಯ ಶಿಕ್ಷಣ ನೀತಿಯ ಭಾಗವಾಗಿ 2021-22ರ ಶೈಕ್ಷಣಿಕ ವರ್ಷದಿಂದ ಪ್ರಾದೇಶಿಕ ಭಾಷೆಯಲ್ಲಿ ಎಂಜಿನಿಯರಿಂಗ್ ಅನ್ನು ಪರಿಚಯಿಸಲಾಯಿತು. ರಾಜ್ಯದ ಮೂರು ಕಾಲೇಜುಗಳು ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಸೀಟುಗಳನ್ನು ಮೀಸಲಿಟ್ಟಿದ್ದವು. ಒಟ್ಟಾರೆ 72 ಸೀಟುಗಳನ್ನು ಈ ಬಾರಿ ಕನ್ನಡ ಮಾಧ್ಯಮದವರಿಗೆ ಮೀಸಲಿಡಲಾಗಿತ್ತು ಎನ್ನಲಾಗಿದೆ. ಕೌನ್ಸೆಲಿಂಗ್‌ನ ಆರಂಭಿಕ ಸುತ್ತಿನಲ್ಲಿ ಕೆಲ ವಿದ್ಯಾರ್ಥಿಗಳಿದ್ದರೂ, ಅವರಲ್ಲಿ ಒಬ್ಬರೂ ಕಾಲೇಜುಗಳಿಗೆ ಸೇರಿಕೊಂಡಿಲ್ಲ. ಈ ಸಂಬಂಧ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ, ಸಹ ಅಚ್ಚರಿ ವ್ಯಕ್ತಪಡಿಸಿದೆ.

ಇದನ್ನೂ ಓದಿ: 2022ರಲ್ಲಿ ಫ್ರೆಶರ್‌ಗಳಿಗೆ ವಿಪುಲ ಅವಕಾಶವನ್ನೊದಗಿಸುವ ಟಾಪ್ 10 ಉದ್ಯೋಗಗಳು ಹೀಗಿವೆ..

ಮುಂದಿನ ವರ್ಷ ಪರಿಚಯ
ಇದನ್ನು ನೀಡುವ ಕಾಲೇಜುಗಳು ಗ್ರಾಮೀಣ ಪ್ರದೇಶಗಳಲ್ಲಿವೆ. ಕೆಲವರು ಇದನ್ನು ಆಯ್ಕೆ ಮಾಡುವವರು ಇರುತ್ತಾರೆ ಎಂದು ನಾವು ಭಾವಿಸಿದ್ದೆವು. ಪೋಷಕರಿಗೆ ಕಾರ್ಯಕ್ರಮದ ಮೇಲೆ ವಿಶ್ವಾಸ ಇಲ್ಲದಿರಬಹುದು. ಅದನ್ನು ಬಲಪಡಿಸಿ ಮುಂದಿನ ವರ್ಷ ಹೆಚ್ಚಿನ ಕಾಲೇಜುಗಳಲ್ಲಿ ಪರಿಚಯಿಸುತ್ತೇವೆ’’ ಎಂದು ವಿಟಿಯು ಉಪಕುಲಪತಿ ಕರಿಸಿದ್ದಪ್ಪ ಕನ್ನಡ ಮಾಧ್ಯಮದಲ್ಲಿ ಎಂಜಿನಿಯರಿಂಗ್‌ ಕೋರ್ಸ್‌ ಬಗ್ಗೆ ಹೇಳಿದರು.

ಡೌನ್‌ಲೋಡ್ ಮಾಡಿಲ್ಲ
ಒಟ್ಟಾರೆ ಈ ವರ್ಷ 16,457 ಸೀಟುಗಳು ಖಾಲಿ ಇವೆ. ಸಿಇಟಿ ಮೂಲಕ 64,484 ಸೀಟುಗಳು ಲಭ್ಯವಿದ್ದರೆ, 48,027 ಸೀಟುಗಳನ್ನು ವಿದ್ಯಾರ್ಥಿಗಳು ತೆಗೆದುಕೊಂಡಿದ್ದಾರೆ. ಹೆಚ್ಚುವರಿಯಾಗಿ, 6,544 ವಿದ್ಯಾರ್ಥಿಗಳು ಪ್ರವೇಶ ಆದೇಶವನ್ನು ಡೌನ್‌ಲೋಡ್ ಮಾಡಿಲ್ಲ. ಹೀಗಾಗಿ ಒಟ್ಟು ಖಾಲಿ ಇರುವ ಸೀಟುಗಳ ಸಂಖ್ಯೆ 23,001 ಎಂದು ತಿಳಿದುಬಂದಿದೆ.

ಗ್ರಾಮೀಣ ಕಾಲೇಜು
“ಈ ವರ್ಷ, II PU ಯಿಂದ ಉತ್ತೀರ್ಣರಾದ ವಿದ್ಯಾರ್ಥಿಗಳ ಸಂಖ್ಯೆ ಮತ್ತು CET ನಲ್ಲಿ ಕಟ್ ಆಫ್‌ಗಳ ಕೊರತೆಯಿಂದಾಗಿ ಸಂಖ್ಯೆಗಳು ಕಳೆದ ವರ್ಷಕ್ಕಿಂತ ಉತ್ತಮವಾಗಿವೆ. ಅನೇಕ ಗ್ರಾಮೀಣ ಕಾಲೇಜುಗಳಿಗೆ ಈ ಬಾರಿ ಉತ್ತಮ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಸೇರಿಕೊಂಡಿದ್ದಾರೆ. ಸಿವಿಲ್ ಮತ್ತು ಮೆಕ್ಯಾನಿಕಲ್ ಇಂಜಿನಿಯರಿಂಗ್ ಅನ್ನು ತೆಗೆದುಕೊಳ್ಳುವವರು ಹೆಚ್ಚು ಮಂದಿ ಇಲ್ಲ’’ ಎಂದೂ ವಿಟಿಯುನ ವಿಸಿ ಹೇಳಿದರು.

ಇದನ್ನೂ ಓದಿ: Engineer’s Day 2021: ಓದಿದ್ದು ಇಂಜಿನಿಯರಿಂಗ್ ಆದ್ರು ಈ ನಟರಿಗೆ ಸಿನಿಮಾನೇ ಜೀವಾಳ!

ಈ ಮಧ್ಯೆ, ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್‌ಗಳಿಗೆ ಸೀಟು ಹಂಚಿಕೆ ಮಾಡುವ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆಯ ಕೌನ್ಸೆಲಿಂಗ್ ಇನ್ನೂ ಪ್ರಾರಂಭವಾಗಿಲ್ಲ, ಈ ಹಿನ್ನೆಲೆ ವೈದ್ಯಕೀಯ ಸೀಟುಗಳನ್ನು ಪಡೆದ ನಂತರ ಕೆಲ ವಿದ್ಯಾರ್ಥಿಗಳು ಎಂಜಿನಿಯರಿಂಗ್ ಸೀಟುಗಳನ್ನು ತೊರೆಯುವ ಅವಕಾಶಗಳಿವೆ ಎಂದು ಕೆಇಎ ಅಧಿಕಾರಿಗಳು ತಿಳಿಸಿದ್ದಾರೆ.

ಮೆಡಿಕಲ್ ರೋಬೋ 

ಎಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ಕೋವಿಡ್ ಚಿಕಿತ್ಸೆ ಮಾಡುವುದಕ್ಕೆ ಮೆಡಿಕಲ್ ರೋಬೋ ಕಂಡು ಹಿಡಿದು ವಿಶ್ವದ ಗಮನ ಸೆಳೆದಿದ್ದಾನೆ. ಈತ ಮೂಲತಃ ಹುಬ್ಬಳಿ ಜಿಲ್ಲೆಯವರಾದ ಸದ್ಯ ಕೊಡಗು ಜಿಲ್ಲೆ ಪೊನ್ನಂಪೇಟೆ ನ್ಯಾಯಾಲಯದಲ್ಲಿ ನೌಕರರಾಗಿರುವ ಅಮರೇಶ್ ಅವರ ಮಗ ಮಣಿಕಂಠ ಈ ಸಾಧನೆ ಮಾಡಿದ್ದು, ವಿರಾಜಪೇಟೆಯಲ್ಲಿ ಕಳೆದ 15 ವರ್ಷಗಳಿಂದ ವಾಸವಾಗಿರುವ ಅಮರೇಶ್ ಅವರ ಮಗ ಮಣಿಕಂಠ ಮಂಡ್ಯದ ಇಂಜಿನಿಯರಿಂಗ್ ಕಾಲೇಜಿನಲ್ಲಿ ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ ವಿಭಾಗದ ಐದನೇ ಸೆಮಿಸ್ಟರ್ ಪದವಿ ಕಲಿಯುತ್ತಿದ್ದು, ಲಾಕ್‍ಡೌನ್ ಸಂದರ್ಭದಲ್ಲಿ ಈ ಸಾಧನೆ ಮಾಡಿದ್ದಾನೆ.
Published by:vanithasanjevani vanithasanjevani
First published: