ರಾಯಚೂರು: ತುಂಗಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ ಸಿಬ್ಬಂದಿ ಕೊರತೆ

ಸಹಕಾರ ಸಂಘಗಳಿಂದ ರೈತರಲ್ಲಿ ಸಹಕಾರ ತತ್ವ ಅಳವಡಿಸಿಕೊಂಡು ಆರ್ಥಿಕತೆ ಹೆಚ್ಚಿಸುವ ಉದ್ದೇಶ ಇರುವ ಅಚ್ಚುಕಟ್ಟು ಪ್ರದೇಶ ಅಭಿವೃದ್ಧಿ ಮಂಡಳಿ ಇದೆ. ಆದರೆ ಅಚ್ಚುಕಟ್ಟು ಪ್ರದೇಶದಲ್ಲಿ ನಿರೀಕ್ಷಿತ ಕೆಲಸವಾಗದೆ ಇರುವುದರಿಂದ ಸುಮಾರು 34 ಟಿಎಂಸಿ ಹೂಳು ತುಂಬಿದೆ.

ತುಂಗಾಭದ್ರಾ ಅಣೆಕಟ್ಟು

ತುಂಗಾಭದ್ರಾ ಅಣೆಕಟ್ಟು

  • Share this:
ರಾಯಚೂರು(ಫೆ.21): ರೈತರ ಜೀವನಾಡಿಯಾಗಿರುವ ತುಂಗಭದ್ರಾ ಜಲಾಶಯದಲ್ಲಿ ಕಾಲುವೆಯ ವ್ಯಾಪ್ತಿಯಲ್ಲಿ ಸಮರ್ಪಕ ನೀರು ನಿರ್ವಹಣೆ, ಕಾಲುವೆ ವ್ಯಾಪ್ತಿಯಲ್ಲಿ ರೈತರ ಭೂಮಿಯ ಫಲವತ್ತತೆ ಕಾಪಾಡಿಕೊಳ್ಳುವುದು, ರೈತರ ಆರ್ಥಿಕತೆ ಹೆಚ್ಚಿಸುವ ಉದ್ದೇಶದಿಂದ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಮಂಡಳಿ ಇದೆ. ಈ ಮಂಡಳಿಯಲ್ಲಿ ಹಲವು ವರ್ಷಗಳಿಂದ ಸಿಬ್ಬಂದಿಯೇ ಇಲ್ಲ, ಈಗಿರುವ ಕೇವಲ ಶೇ 30 ರಷ್ಟು ಸಿಬ್ಬಂದಿ ಮಾತ್ರ.  ಕಡಿಮೆ ಸಿಬ್ಬಂದಿಯಿಂದಾಗಿ ಅಚ್ಚುಕಟ್ಟು ಪ್ರದೇಶದಲ್ಲಿ ಯಾವುದು ಸರಿ ಇಲ್ಲ.

ಮುನಿರಾಬಾದ್, ಹೊಸಪೇಟೆ ಮಧ್ಯೆದಲ್ಲಿರುವ ತುಂಗಭದ್ರಾ ಜಲಾಶಯದಲ್ಲಿ ಒಟ್ಟು 134 ಟಿಎಂಸಿ ನೀರು ಸಂಗ್ರಹ ಗುರಿ ಇದೆ. ಆದರೆ ಈಗ ಜಲಾಶಯದಲ್ಲಿ ಹೂಳು ತುಂಬಿರುವುದರಿಂದ 100.89 ಟಿಎಂಸಿ ನೀರು ಸಂಗ್ರಹವಾಗುತ್ತಿದೆ. ಹೂಳು ತಡೆಯುವ, ಜಲಾಶಯದ ಕೆಳಭಾಗದಲ್ಲಿ ಕಾಲುವೆಗಳಿಂದ ನೀರನ್ನು ಸಮರ್ಪಕವಾಗಿ ಹರಿಸುವ, ಭೂಮಿಯಲ್ಲಿ ನೀರು ಬಳಕೆಯ ಹಿತಮತವಾಗಿ ಬಳಸಿ ಭೂಮಿಯನ್ನು ಸವುಳು, ಜವಳಾಗುವುದನ್ನು ತಪ್ಪಿಸುವುದು. ಸಹಕಾರ ಸಂಘಗಳಿಂದ ರೈತರಲ್ಲಿ ಸಹಕಾರ ತತ್ವ ಅಳವಡಿಸಿಕೊಂಡು ಆರ್ಥಿಕತೆ ಹೆಚ್ಚಿಸುವ ಉದ್ದೇಶ ಇರುವ ಅಚ್ಚುಕಟ್ಟು ಪ್ರದೇಶ ಅಭಿವೃದ್ಧಿ ಮಂಡಳಿ ಇದೆ. ಆದರೆ ಅಚ್ಚುಕಟ್ಟು ಪ್ರದೇಶದಲ್ಲಿ ನಿರೀಕ್ಷಿತ ಕೆಲಸವಾಗದೆ ಇರುವುದರಿಂದ ಸುಮಾರು 34 ಟಿಎಂಸಿ ಹೂಳು ತುಂಬಿದೆ.

ತುಮಕೂರು: ಕನ್ನಡ ಬಾರದ ಉಪವಿಭಾಗಧಿಕಾರಿಯಿಂದ ಗ್ರಾಮ ವಾಸ್ತವ್ಯ ಸಂಪೂರ್ಣ ವಿಫಲ

ಇನ್ನೂ ಮೂರು ಜಿಲ್ಲೆ ವ್ಯಾಪ್ತಿಯಲ್ಲಿ ಶೇ 80 ರಷ್ಟು ಭೂಮಿ ಸವುಳಾಗಿದೆ. ಇಲ್ಲಿ ಪ್ರತಿ ಬೆಳೆಗೆ ಗೊಬ್ಬರ ಹಾಕಿದರೆ ಮಾತ್ರ ಬೆಳೆಯುವ ಸ್ಥಿತಿ ಇದೆ.  ಭೂಮಿ ಫಲತ್ತತೆ ಸಂಪೂರ್ಣವಾಗಿ ಹಾಳಾಗಿದ್ದರಿಂದ ಇಲ್ಲಿ ಭತ್ತ ಬಿಟ್ಟು ಬೇರೇನು ಬೆಳೆಯದಂಥ ಸ್ಥಿತಿ. ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಮಂಡಳಿಯಿಂದ ರಾಯಚೂರು ಕೊಪ್ಪಳ ಹಾಗು ಬಳ್ಳಾರಿ ಮತ್ತು ಸಿಂಗಟಾಲೂರು ಏತ ನೀರಾವರಿ ವ್ಯಾಪ್ತಿಯಲ್ಲಿ ಸರಕಾರದಿಂದ ಒಟ್ಟು 237 ಸಿಬ್ಬಂದಿ ಇರಬೇಕು ಆದರೆ ಈಗ ಕೆಲಸ ಮಾಡುತ್ತಿರುವುದು ಕೇವಲ 93 ಜನ ಮಾತ್ರ 144 ಸಿಬ್ಬಂದಿಗಳು ಖಾಲಿಯಾಗಿವೆ. ಇದು ಇಲಾಖೆಯಿಂದ ನೇಮಕವಾಗುವ ಹುದ್ದೆಗಳಾಗಿದ್ದರೆ, 25-30 ವರ್ಷದಿಂದ ಇಲ್ಲಿ ಗ್ಯಾಂಗ್ ಮನ್ ಗಳು ದಿನಗೂಲಿಗಳಾಗಿ, ಹೊರಗುತ್ತಿಗೆಯಲ್ಲಿ ಕೆಲಸ ಮಾಡುತ್ತಿದ್ದಾರೆ.

ಒಟ್ಟು 1450 ಗ್ಯಾಂಗ್ ಮನ್ ಗಳಿದ್ದಾರೆ. ಅವರನ್ನು ಖಾಯಂಗೊಳಿಸಬೇಕು. ಅವರಿಗೆ ನಿರಂತರ ಕೆಲಸ ನೀಡಿ ವೇತನ ನೀಡಬೇಕು. ಇದು ಆಗದ ಹಿನ್ನಲೆಯಲ್ಲಿ ಗ್ಯಾಂಗ್ ಮನ್ ಗಳು ಇಳಿವಯಸ್ಸಾಗುತ್ತಾ ಬಂದರೂ ಸೇವಾ ಭದ್ರತೆ ಇಲ್ಲ. 2 ವರ್ಷಗಳಿಂದ ವೇತನವಿಲ್ಲ, ಈ ಮಧ್ಯೆ ಕಾಲುವೆ ನೀರು ಹರಿಸುವ ಜವಾಬ್ದಾರಿಯನ್ನು ನೀರು ಬಳಕೆದಾರರ ಸಂಘಕ್ಕೆ ವಹಿಸಲಾಗಿದೆ, ಆದರೆ ಅಲ್ಲಿ ಕಾಡಾದಿಂದ ನೀಡುವ ಅನುದಾನ ಅತ್ಯಲ್ಪವಾಗಿದೆ, ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಯಲ್ಲಿ ಒಟ್ಟು 550 ನೀರು ಬಳಕೆದಾರರ ಸಹಕಾರ ಸಂಘಗಳಿವೆ. ಈ ಸಂಘಗಳಿಗೆ ವಾರ್ಷಿಕವಾಗಿ ಒಂದೊಂದು ಸಂಘಕ್ಕೆ 1 ಲಕ್ಷ ರೂಪಾಯಿ ಮಾತ್ರ ನೀಡುತ್ತಿದ್ದಾರೆ. ಇದು ಯಾವುದಕ್ಕೂ ಸಾಲುತ್ತಿಲ್ಲ.ಈ ಮಧ್ಯೆ ಕಾಲುವೆಗಳಲ್ಲಿ ನೀರು ಕಳ್ಳತನವಾಗುತ್ತಿದೆ, ಈ ಕಳ್ಳತನ ತಡೆಯಬೇಕು, ಬಹುತೇಕ ಕಡೆ ಕಾಲುವೆ ತೂಬೂಗಳು ದುರಸ್ತಿಯಲ್ಲಿವೆ ಇಲ್ಲಿ ನಿಗಿದಿಕ್ಕಿಂತ ಅಧಿಕ ನೀರು ಹರಿಯುತ್ತಿದೆ, ಇದರಿಂದಾಗಿ ನಾಲೆಯ ವ್ಯಾಪ್ತಿ ಕೊನೆಯ ಭಾಗಕ್ಕೆ ನೀರು ದೊರೆಯುತ್ತಿಲ್ಲ.

ಈ ಎಲ್ಲಾ ಸಮಸ್ಯೆಗಳು ತುಂಗಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಮಂಡಳಿಯ ಅಧ್ಯಕ್ಷ ತಿಪ್ಪೇರುದ್ರಸ್ವಾಮಿ ಯವರಿಗೆ ಏದುರಾಗಿವೆ, ಈ ಮಧ್ಯೆ ತಕ್ಷಣವೇ ಕೊರೆತೆ ಇರುವ ಸಿಬ್ಬಂದಿಗಳಲ್ಲಿ ಅಗತ್ಯ ಹಾಗು ಅವಶ್ಯಕತೆಗೆ ಅನುಗುಣವಾಗಿ ಭರ್ತಿ ಮಾಡಬೇಕು, ಕನಿಷ್ಠ ಶೇ 50ರಷ್ಟಾದರೂ ಭರ್ತಿ ಮಾಡಬೇಕು, ಇಲ್ಲಿವೇ ಗುತ್ತಿಗೆ ಆಧಾರದಲ್ಲಿಯಾದರೂ ಸಿಬ್ಬಂದಿ ನೇಮಿಸಬೇಕು, ನೀರು ಬಳಕೆದಾರ ಸಹಕಾರ ಸಂಘಗಳಿಗೆ ವಾರ್ಷಿಕ 5 ಲಕ್ಷ ರೂಪಾಯಿ ಅನುದಾನ ನೀಡಬೇಕೆಂದು ಮುಖ್ಯಮಂತ್ರಿ ಗಳಿಗೆ ಮನವಿ ಮಾಡಿಕೊಂಡಿದ್ದಾರೆ.

ಈ ಮನವಿಗೆ ಸಿಎಂ ಸ್ಪಂದಿಸಿದ್ದು ಬಜೆಟ್ ನಂತರ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ ಎಂದು ತಿಪ್ಪೇರುದ್ರಸ್ವಾಮಿ ತಿಳಸಿದ್ದಾರೆ.ಬೃಹತ್ ನೀರಾವರಿ ಯೋಜ‌ನೆಯಲ್ಲಿ ಸಿಬ್ಬಂದಿ ಕೊರತೆ ಹಲವಾರು ಸಮಸ್ಯೆಗಳನ್ನು ತಂದಿದೆ‌, ಅದಕ್ಕೆ ಈಗಿನ ಸರಕಾರವಾದರೂ ಬಗೆಹರಿಸುತ್ತೊ ಕಾದು ನೋಡಬೇಕು.
Published by:Latha CG
First published: