• Home
  • »
  • News
  • »
  • state
  • »
  • PFI Ban: ಪಿಎಫ್​ಐಗೆ ಹರಿದು ಬರುತ್ತಿದ್ದ ಹಣಕ್ಕೆ ಅಪ್ಪ, ಅಮ್ಮನೇ ಇರಲಿಲ್ಲ; 120 ಕೋಟಿಗೂ ಅಧಿಕ ಹಣ ಸಂದಾಯ?

PFI Ban: ಪಿಎಫ್​ಐಗೆ ಹರಿದು ಬರುತ್ತಿದ್ದ ಹಣಕ್ಕೆ ಅಪ್ಪ, ಅಮ್ಮನೇ ಇರಲಿಲ್ಲ; 120 ಕೋಟಿಗೂ ಅಧಿಕ ಹಣ ಸಂದಾಯ?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಐಸಿಸ್ ಮತ್ತು ಮತ್ತು ಕೆಲವು ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿನ ಸಂಘಟನೆಗಳು ಪಿಎಫ್‌ಐ ಬಳಸಿಕೊಂಡು ಭಾರತದಲ್ಲಿ ರಹಸ್ಯ ಕಾರ್ಯಚರಣೆ ನಡೆಸುತ್ತಿದ್ದವು ಎನ್ನಲಾಗಿದೆ. ಪಿಎಫ್‌ಐ ಸದಸ್ಯರನ್ನು ಐಸಿಸ್​ಗೆ ನೇಮಕ ಮಾಡಿಕೊಳ್ಳುತ್ತಿತ್ತು ಎಂದು ವರದಿಯಾಗಿದೆ.

  • Share this:

ಕೇಂದ್ರ ಸರ್ಕಾರ (Central Government) ಕೊನೆಗೂ ಪಿಎಫ್​ಐ (Popular Front Of India) ಸೇರಿದಂತೆ ಎಂಟು ಸಂಘಟನೆಗಳನ್ನು ಮುಂದಿನ ಐದು ವರ್ಷ ನಿಷೇಧಿಸಿ ಆದೇಶ ಹೊರಡಿಸಿದೆ. 2018ರಲ್ಲಿ ಜಾರಿ ನಿರ್ದೇಶನಾಲಯ (enforcement directorate) ನ್ಯಾಯಾಲಯಕ್ಕೆ ಪಿಎಫ್​ಐ ಸಂಘಟನೆಗೆ ಹರಿದು ಬರುತ್ತಿದ್ದ ಹಣದ ಕುರಿತು ಮಾಹಿತಿ ನೀಡಿತ್ತು. ಈ ವೇಳೆ ಪಿಎಫ್ಐ ಆರ್ಥಿಕವಾಗಿ ಹೇಗೆ ಪ್ರಬಲವಾಗಿದೆ ಎಂಬುದರ ಮಾಹಿತಿಯನ್ನು ತಿಳಿಸಿತ್ತು. ಪಿಎಫ್​ಐ ಸಂಘಟನೆಗೆ ಹರಿದು ಬರುತ್ತಿದ್ದ ವಿದೇಶಿ ಹಣಕ್ಕೆ (Money Source) ಯಾವುದೇ ಮೂಲ ಇರುತ್ತಿರಲಿಲ್ಲ. ಬೋಗಸ್​ ಖಾತೆಗಳ ಮೂಲಕ ಪಿಎಫ್​ಗೆ ಹಣ ಬರುತ್ತಿತ್ತು ಎಂದು ವರದಿಯಾಗಿದೆ. ನಗದು ಹಣ ಹೂಡಿಕೆಗೆ ಅನಾಮಧೇಯರ ಹೆಸರು ಬಳಕೆ ಮಾಡಲಾಗುತ್ತಿತ್ತು.


2018ರ PMLA ಪ್ರಕರಣ ಸಂಬಂಧ ಜಾರಿ ನಿರ್ದೇಶನ ತನಿಖೆ ನಡೆಸಿತ್ತು. ಪಿಎಫ್​ಐ ಖಾತೆಗೆ ಹಣ ವರ್ಗಾವಣೆ ಮಾಡಿದವರ ವಿಳಾಸ ದೆಹಲಿಯ ನಿವಾಸಿಗಳದ್ದು ಆಗಿತ್ತು. ಅದರಲ್ಲಿಯೂ ಒಂದೇ ಕಾಲೋನಿಯ ನಿವಾಸಿಗಳು ಎಂಬುದರ ಬಗ್ಗೆ ತಿಳಿದು ಬಂದಿದೆ. ಈ ಬಗ್ಗೆ ಪ್ರಶ್ನೆ ಮಾಡಿದಾಗ ನಿವಾಸಿಗಳು ತಾವು ಪಿಎಫ್ಐ​ಗೆ ಯಾವುದೇ ಹಣವನ್ನು ನೀಡಿಲ್ಲ ಎಂದು ತಿಳಿದು ಬಂದಿದೆ.


ದಾನ ನೀಡುವಷ್ಟು ಸಬಲರಲ್ಲ


ನಗದು ಹಣ ಜಮಾವಣೆ ವೇಳೆ ನಕಲಿ ಹೆಸರು ಮತ್ತು ದಾಖಲೆ ಬಳಕೆ ಮಾಡಿರೋದು ಬೆಳಕಿಗೆ ಬಂದಿತ್ತು ಎಂದು ವರದಿಯಾಗಿತ್ತು. ಇನ್ನೂ ಹಣ ನೀಡಿದ್ದಾರೆ ಎನ್ನಲಾದ ವ್ಯಕ್ತಿಗಳು ಅಷ್ಟು ದೊಡ್ಡ ಮೊತ್ತ ದಾನ ನೀಡುವಷ್ಟು ಆರ್ಥಿಕವಾಗಿ ಸಬಲರಾಗಿರೋದು ತನಿಖೆಯಲ್ಲಿ ತಿಳಿದು ಬಂದಿದೆ.


PFI ban for next five years mrq
ಪಿಎಫ್​ಐ


ಪಿಎಫ್​ಐ ಖಾತೆಗಳಿಗೆ ಅನಾಮಧೇಯರ ಹೆಸರಲ್ಲಿ ಅದು ನಗದು ರೂಪದಲ್ಲಿಯೇ ಹಣ ಸಂದಾಯ ಆಗುತ್ತಿತ್ತು. ಈ ಹಣವನ್ನು ಬೇರೆ ಬೇರೆ ಕೃತ್ಯಗಳಿಗೆ ಬಳಕೆ ಮಾಡುತ್ತಿರುವ ಬಗ್ಗೆ ವರದಿಯಾಗಿದೆ. 2020ರ ಫೆಬ್ರವರಿಯಲ್ಲಿ ನಡೆದ ದೆಹಲಿ ಗಲಭೆಗೆ ಇದೇ ಹಣ ಬಳಕೆ ಮಾಡಲಾಗಿತ್ತು.


ಇದನ್ನೂ ಓದಿ:  Ban On PFI: ಪಿಎಫ್​ಐ ಜೊತೆ ಈ ಎಂಟು ಅಂಗಸಂಸ್ಥೆಗಳನ್ನೂ ಬ್ಯಾನ್ ಮಾಡಿದ ಕೇಂದ್ರ


ಫಂಡಿಂಗ್ ಬಗ್ಗೆ  ಇಂಚಿಂಚೂ ಮಾಹಿತಿ


ಉಗ್ರ ಸಂಘಟನೆಯೊಂದನ್ನು ಸ್ಥಾಪಿಸಲು, ಮಾರಕಾಸ್ತ್ರ, ಸ್ಫೋಟಕ ಖರೀದಿ ಮತ್ತು ಸಂಗ್ರಹ ಮಾಡಿ ಸೂಕ್ಷ್ಮ ಪ್ರದೇಶದಲ್ಲಿ ದಾಳಿ ನಡೆಸಲು ಬಳಕೆ ಮಾಡಲಾಗಿತ್ತು ಎನ್ನಲಾಗಿದೆ. ಉತ್ತರ ಪ್ರದೇಶ ಮೊದಲಾದೆಡೆ ಪ್ರಮುಖ ವ್ಯಕ್ತಿಗಳ ಮೇಲೆ ದಾಳಿಗೆ ಸಂಚು ರೂಪಿಸಲಾಗಿತ್ತು. 2022 ಜುಲೈನಲ್ಲಿ ಪ್ರಧಾನ ಮಂತ್ರಿ ಪಾಟ್ನಾಗೆ ಬಂದ ವೇಳೆಯೂ ದಾಳಿಗೆ ಪ್ಲಾನ್ ಮಾಡಲಾಗಿತ್ತಂತೆ. ಇದಕ್ಕಾಗಿ ತರಬೇತಿ ಶಿಬಿರಗಳ ಆಯೋಜನೆ ಮಾಡಲಾಗುತ್ತಂತೆ. ಇಡಿ ತನಿಖೆ ವೇಳೆ ಫಂಡಿಂಗ್ ಬಗ್ಗೆ ಇಂಚಿಂಚೂ ಮಾಹಿತಿ ಕಲೆ ಹಾಕಿತ್ತು.


PFIಗೆ ಹಣ ಸೇರಿಸಲು ಮೆಗಾ ಪ್ಲ್ಯಾನ್?


ಪಿಎಫ್​ಐಗೆ ಹಣ ಹೊಂದಿಸಲು ಕೇರಳದ ಮುನ್ನಾರ್‌ನಲ್ಲಿ ವಿಲ್ಲಾ ಪ್ರಾಜೆಕ್ಟ್ ಕೈಗೆತ್ತಿಕೊಳ್ಳಲಾಗಿತ್ತು. ಸುಮಾರು 22 ಕೋಟಿ ಮೌಲ್ಯದ ವಿಲ್ಲಾ ವಿಸ್ತಾ ಪ್ರಾಜೆಕ್ಟ್ (MVVP)​​ ಕೈಗೊಳ್ಳಲಾಗಿತ್ತು. ವಿದೇಶ ಸೇರಿದಂತೆ ಬೇರೆ ಕಡೆಯಿಂದ ಸಂಗ್ರಹವಾಗಿದ್ದ ಹಣವನ್ನು ವಿಲ್ಲಾ ಪ್ರಾಜೆಕ್ಟ್‌ಗೆ ಹೂಡಿಕೆ ಮಾಡಲಾಗಿತ್ತು.


ಈಗಾಗಲೇ ಈ ಸಂಬಂಧ ಇಬ್ಬರು PFI ಮುಖಂಡರಾದ ಅಬ್ದುಲ್ ರಜಾಕ್, PFI ವಿಭಾಗೀಯ ಅಧ್ಯಕ್ಷ, ಮಲಪ್ಪುರಂ, ಅಶ್ರಫ್, ಕೇರಳ ರಾಜ್ಯ ಎಕ್ಸಿಕ್ಯೂಟೀವ್ ಕೌನ್ಸಿಲ್ ಸದಸ್ಯರನ್ನು ಬಂಧಿಸಲಾಗಿದೆ. ತನಿಖೆ ವೇಳೆ ವಿಲ್ಲಾ ವಿಸ್ತಾ ಪ್ರಾಜೆಕ್ಟ್​​ನಲ್ಲಿ ಹೂಡಿಕೆ ಮಾಡಿದ ಹಣಕ್ಕೆ ಯಾವುದೇ ದಾಖಲೆ ಇರಲಿಲ್ಲ ಎಂದು ವರದಿಯಾಗಿದೆ.


ಇದನ್ನೂ ಓದಿ:  BREAKING| PFI Ban:  ಐದು ವರ್ಷ ಪಿಎಫ್​ಐ ಬ್ಯಾನ್; ಕೇಂದ್ರ ಸರ್ಕಾರದಿಂದ ಬಹುದೊಡ್ಡ ನಿರ್ಧಾರ


ಪಿಎಫ್ಐ ನಿಷೇಧಕ್ಕೆ ಪ್ರಮುಖ ಕಾರಣಗಳೇನು?


*ಭಯೋತ್ಪಾದಕ ಚಟುವಟಿಕೆಗಳಿಗೆ ಹಣಕಾಸು ನೆರವು


*ಭಾರತದಲ್ಲಿ ದೇಣಿಗೆ ಸಂಗ್ರಹಿಸಿ ಅನಧಿಕೃತ ಮೂಲಗಳಿಂದ ಹಣ ಜಮೆ


*ವಿದೇಶಿಗಳಿಂದಲೂ ಆರ್ಥಿಕ ನೆರವು


*ಹಣವನ್ನು ಭಯೋತ್ಪಾದಕ ಚಟುವಟಿಕೆಗಳಿಗೆ ಬಳಕೆ


ನಿಷೇಧಿತ ಸಂಘಟನೆಗಳ ಜೊತೆ ಸಂಪರ್ಕ


PFIಯ ಕೆಲವು ಸಂಸ್ಥಾಪಕ ಸದಸ್ಯರು ಸ್ಟೂಡೆಂಟ್ಸ್ ಇಸ್ಲಾಮಿಕ್ ಮೂವ್‌ಮೆಂಟ್ ಆಫ್ ಇಂಡಿಯಾ (SIMI) ನಾಯಕರು ಮತ್ತು ಬಾಂಗ್ಲಾದೇಶ ಜಮಾತ್-ಉಲ್-ಮುಜಾಹಿದ್ದೀನ್ (JMB) ನೊಂದಿಗೆ ಸಂಪರ್ಕವನ್ನು ಹೊಂದಿದ್ದರು. ಇವೆರಡೂ ನಿಷೇಧಿತ ಸಂಘಟನೆಗಳಾಗಿವೆ


ಐಸಿಸ್ ಮತ್ತು ಮತ್ತು ಕೆಲವು ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿನ ಸಂಘಟನೆಗಳು ಪಿಎಫ್‌ಐ ಬಳಸಿಕೊಂಡು ಭಾರತದಲ್ಲಿ ರಹಸ್ಯ ಕಾರ್ಯಚರಣೆ ನಡೆಸುತ್ತಿದ್ದವು ಎನ್ನಲಾಗಿದೆ. ಪಿಎಫ್‌ಐ ಸದಸ್ಯರನ್ನು ಐಸಿಸ್​ಗೆ ನೇಮಕ ಮಾಡಿಕೊಳ್ಳುತ್ತಿತ್ತು ಎಂದು ವರದಿಯಾಗಿದೆ.

Published by:Mahmadrafik K
First published: