ಬೆಂಗಳೂರು; ಶಂಕಿತ ಉಗ್ರ ಸೈಯದ್ ಸಮಿಯುದ್ದೀನ್ ಸಿಸಿಬಿ ಬಂಧನ ಹಾಗೂ
ನಾರಿ ಫೌಂಡೇಷನ್ಗೆ ಹಣಕಾಸು ಸಹಾಯದ ವಿಷಯವಾಗಿ ಅನುಮಾನ ಬಂದ ಹಿನ್ನೆಲೆಯಲ್ಲಿ ಬಂಧಿತ ಸೈಯದ್ ಸಮಿಯುದ್ದೀನ್ ಹೆಂಡತಿ ಹಾಗೂ ನಾರಿ ಫೌಂಡೇಷನ್ ಅಧ್ಯಕ್ಷೆ ಫಾತಿಮಾ ಫೌಜಮ್ ಅವರನ್ನು ಸಿಸಿಬಿ ಪೊಲೀಸರು ವಿಚಾರಣೆ ನಡೆಸಿದ್ದಾರೆ. ವಿಚಾರಣೆ ಬಳಿಕ ಮಾತನಾಡಿದ ಮಾತನಾಡಿದ ಫಾತಿಮಾ ಫೌಜಮ್ ಅವರು, ಸಮಿವುದ್ದೀನ್ಗೂ ನಾರಿ ಫೌಂಡೇಷನ್ಗೂ ಯಾವುದೇ ಸಂಬಂಧವಿಲ್ಲ. ಸಮೀವುದ್ದೀನ್ ನನ್ನ ಪತಿ. ಎರಡು ವರ್ಷದ ಹಿಂದೆ ಮದುವೆಯಾಗಿತ್ತು. ಒಂದು ವರ್ಷದಿಂದ ನನ್ನ ಪತಿ ಕ್ಯಾಟರಿಂಗ್ ವ್ಯಾಪಾರ ಮಾಡ್ತಾ ಇದ್ರು. ಅವರು ಮೂಲತಃ ಬೆಂಗಳೂರಿನವರು. ಕಳೆದ ಒಂದು ವರ್ಷದಲ್ಲಿ ನಾರಿ ಫೌಂಡೇಷನ್ ಜತೆ ಎರಡು ಮೂರು ಹೆಲ್ತ್ ಕ್ಯಾಂಪ್ನಲ್ಲಿ ಭಾಗಿಯಾಗಿದ್ದರು. ನನ್ನ ಪತಿಯನ್ನು ವಶಕ್ಕೆ ಪಡೆದಿದ್ದು ನನಗೆ ಗೊತ್ತೇ ಇರಲಿಲ್ಲ. ಸಮೀವುದ್ದೀನ್ ನಾಪತ್ತೆಯಾಗಿದ್ದಾರೆ ಅಂತ ಕಮಿಷನರ್ ಕಚೇರಿಯಲ್ಲಿ ದೂರು ನೀಡಿದ್ದೀವಿ. ಬಳಿಕ ಸಿಸಿಬಿಯಿಂದ ವಿಚಾರಣೆಗೆ ಕರೆ ಬಂತು ಎಂದು ಸ್ಪಷ್ಟನೆ ನೀಡಿದರು.
ಇದನ್ನೂ ಓದಿ; ಡಿಜೆ ಹಳ್ಳಿ ಗಲಭೆ ಪ್ರಕರಣ; ಪ್ರಮುಖ ಆರೋಪಿ ಅರುಣ್ ರಾಜ್ ಬಂಧನ ಪ್ರಕ್ರಿಯೆ ಪೂರ್ಣಗೊಳಿಸಿದ ಪೊಲೀಸರು
2016ರಲ್ಲಿ ಆರಂಭವಾದ ನಾರಿ ಫೌಂಡೆಷನ್ ಆರೋಗ್ಯ, ಶಿಕ್ಷಣ ಕೆಲಸ ಮಾಡುತ್ತಿದೆ. ಮಹಿಳೆಯರ ಸಬಲೀಕರಣ, ಮಕ್ಕಳ ದೌರ್ಜನ್ಯ ಕುರಿತಂತೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ. ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಜಾಗೃತಿ ಕಾರ್ಯಕ್ರಮ ಮಾಡುತ್ತಾ ಇದ್ದೇವೆ. ಇದುವರೆಗೂ 7 ಕ್ಯಾಂಪೈನ್ಗಳನ್ನು ಮಾಡಿದ್ದೇವೆ. ನಾರಿ ಫೌಂಡೇಷನ್ಗೆ ಯಾವುದೇ ಮೂಲಗಳಿಂದ ಹಣ ಬಂದಿಲ್ಲ. ಮಾರ್ಚ್ 31 ಅಂತ್ಯಕ್ಕೆ ನಾರಿ ಫೌಂಡೇಷನ್ ಅಕೌಂಟ್ನಲ್ಲಿ ಕೇವಲ 18953 ರೂ. ಹಣ ಇದೆ. ಹೀಗಿರಬೇಕಾದರೆ ಕೋಟಿ ಕೋಟಿ ಹಣ ಬಂತು ಅಂತ ಹೇಳ್ತಾ ಇದ್ದಾರೆ. ಅದು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ