ಕೊಪ್ಪಳದಲ್ಲಿ ಬರಗಾಲ; ಮೇವು ಅರಿಸಿ ಬಂದವು ನೂರಾರು ಜಾನುವಾರು!

news18
Updated:September 2, 2018, 9:03 PM IST
ಕೊಪ್ಪಳದಲ್ಲಿ ಬರಗಾಲ; ಮೇವು ಅರಿಸಿ ಬಂದವು ನೂರಾರು ಜಾನುವಾರು!
news18
Updated: September 2, 2018, 9:03 PM IST
- ಶರಣು ಹಂಪಿ, ನ್ಯೂಸ್ 18 ಕನ್ನಡ

ಬಳ್ಳಾರಿ (ಸೆ.02) :  ತುಂಗಭದ್ರ ಜಲಾಶಯ ಭರ್ತಿಯಾಗಿ ತುಂಬಿ ಹರಿಯುತ್ತಿದೆ. ಆದರೆ ಕೊಪ್ಪಳ ಜಿಲ್ಲೆಯಲ್ಲಿ ಮಳೆಯಾಗದೆ ರೈತರು ಕಂಗಾಲಾಗಿದ್ದಾರೆ. ಬಿತ್ತಿದ ಬೆಳೆ ಒಣಗಿ ರೈತರು ಮಾತುಬಾರದ ಮೂಕಪ್ರಾಣಿಗಳ ಮೇವು ಅರಿಸಿ ಹಂಪಿಗೆ ಕಡೆ ಆಗಮಿಸುತ್ತಿದ್ದಾರೆ.

ತುಂಗಭದ್ರ ಜಲಾಶಯ ತುಂಬಿ ನದಿ ಹಾಗೂ ಕಾಲುವೆಗಳ ಮೂಲಕ ನೀರು ಹರಿದರೂ ಕೊಪ್ಪಳ ಜಿಲ್ಲೆಯಲ್ಲಿ ನೀರಿಗೆ ತತ್ವಾರವಿದೆ. ಸಮರ್ಪಕ ಮಳೆ ಬಾರದ ಹಿನ್ನೆಲೆ ರೈತರು ಬೆಳೆಯೂ ಬೆಳೆಯದೆ ತಾವು ಸಾಕಿದ ಜಾನುವಾರುಗಳಿಗೆ ಮೇವು ಸಿಗದೆ ಪರದಾಡುತ್ತಿದ್ದಾರೆ. ಈ ಕಾರಣಕ್ಕೆ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಕನಕಗಿರಿಯಿಂದ ನೆರೆಯ ಬಳ್ಳಾರಿ ಜಿಲ್ಲೆಗೆ ಮೇವು ಅರಿಸಿ ತಮ್ಮ ಐನೂರಕ್ಕೂ ಹೆಚ್ಚು ಜಾನುವಾರುಗಳ ಒಡೆದುಕೊಂಡು ಆಗಮಿಸಿದ್ದಾರೆ.

ಕಳೆದೊಂದು ವಾರದ ಹಿಂದೆ ಕನಕಗಿರಿ ಬಿಟ್ಟು ಕಂಪ್ಲಿ ಮಾರ್ಗವಾಗಿ ರಾಮಸಾಗರ, ಬುಕ್ಕಸಾಗರ ಇದೀಗ ಹಂಪಿ ಪ್ರದೇಶದಲ್ಲಿ ಬೆಳೆದ ಕುರುಚಲು ಗುಡ್ಡ ಹಾಗೂ ಹುಲ್ಲುಗಾವಲು ಪ್ರದೇಶದಲ್ಲಿ ಹಸಿದ ಜಾನುವಾರುಗಳಿಗೆ ಮೇವುಣಿಸುತ್ತಿದ್ದಾರೆ. ಕನಕಗಿರಿಯ ಭೀಮೇಶ್, ಮಂಜುನಾಥ ಕುಟುಂಬ ತಮ್ಮ ಊರಿನ ಇತರೆ ಸದಸ್ಯರ ಜಾನುವಾರುಗಳನ್ನು ಸಾಕಲು ಆಗದೆ ಕೊಟ್ಟ ದನ, ಕರು ಹಾಗೂ ಆಕಳುಗಳು ಸೇರಿದಂತೆ 500ಕ್ಕೂ ಹೆಚ್ಚು ಜಾನುವಾರುಗಳನ್ನು ಮೇಯಿಸಲು ಹಂಪಿ ಪ್ರದೇಶದ ಕಡೆ ಆಗಮಿಸಿದ್ದಾರೆ.

ಹಂಪಿ ಸುರಕ್ಷಿತ ಸ್ಮಾರಕ ಪ್ರದೇಶ ಬಿಟ್ಟು ಹೊರಗಿನ ಪ್ರದೇಶದಲ್ಲಿ ಬೆಳೆದ ಹುಲ್ಲನ್ನು ಮೇಯುತ್ತಿದ್ದ ದೃಶ್ಯ ಕಂಡುಬಂದಿತು. ‘ಕನಕಗಿರಿಯಲ್ಲಿ ಜಾನುವಾರುಗಳಿಗೆ ಮೇವು ಹುಡುಕುವುದು ಕಷ್ಟವಾಯಿತು. 'ಅಲ್ಲೆಲ್ಲೆ ಮಳೆಯಿಲ್ಲದೆ ಬರಗಾಲ ಶುರುವಾಗಿದೆ. ಇದಕ್ಕಾಗಿ ನಾವು ಹಂಪಿಗೆ ಇದೇ ಮೊದಲ ಬಾರಿಗೆ ದನಕರುಗಳನ್ನು ಕರೆದುಕೊಂಡು ಮೇಯಿಸಲು ಬಂದಿದ್ದೇವೆ’ ಎನ್ನುತ್ತಾರೆ ರೈತ ಭೀಮೇಶ್
First published:September 2, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ