• ಹೋಂ
 • »
 • ನ್ಯೂಸ್
 • »
 • ರಾಜ್ಯ
 • »
 • BS Yeddyurappa: ಮಹದಾಯಿ ಯೋಜನೆಗೆ ಯಾವುದೇ ಸಮಸ್ಯೆ ಆಗಲ್ಲ, ಗೋವಾ ಸಿಎಂ ಸ್ವಾರ್ಥಕ್ಕಾಗಿ ಮಾತನಾಡುತ್ತಿದ್ದಾರೆ; ಯಡಿಯೂರಪ್ಪ

BS Yeddyurappa: ಮಹದಾಯಿ ಯೋಜನೆಗೆ ಯಾವುದೇ ಸಮಸ್ಯೆ ಆಗಲ್ಲ, ಗೋವಾ ಸಿಎಂ ಸ್ವಾರ್ಥಕ್ಕಾಗಿ ಮಾತನಾಡುತ್ತಿದ್ದಾರೆ; ಯಡಿಯೂರಪ್ಪ

ಸಿಎಂ ಬಿಎಸ್ ಯಡಿಯೂರಪ್ಪ.

ಸಿಎಂ ಬಿಎಸ್ ಯಡಿಯೂರಪ್ಪ.

ಕರ್ನಾಟಕದ ಮಹತ್ವಾಕಾಂಕ್ಷೆಯ ಮಹದಾಯಿ ವಿಚಾರದಲ್ಲಿ ಯಾವುದೇ ಸಮಸ್ಯೆ ಆಗಲ್ಲ. ಗೋವಾ ಸಿಎಂ ಅವರ ರಾಜಕೀಯ ಸ್ವಾರ್ಥಕ್ಕಾಗಿ ಇಂತಹ ಅಸಂಬದ್ಧ ಹೇಳಿಕೆ ನೀಡಿದ್ದಾರೆ. ನ್ಯಾಯಾಲಯದಲ್ಲೂ ನಮಗೆ ಅನುಕೂಲಕರವಾದ ಸ್ಥಿತಿಯೇ ಇದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಸಿದ್ದಾರೆ.

 • Share this:

  ಬೆಂಗಳೂರು (ಜನವರಿ 31); "ಉತ್ತರ ಕರ್ನಾಟಕದ ಹಲವು ಭಾಗಗಳಿಗೆ ಕುಡಿಯುವ ನೀರನ್ನು ಪೂರೈಸುವ ಕರ್ನಾಟಕದ ಮಹತ್ವಾಕಾಂಕ್ಷೆಯ ಯೋಜನೆಯಾದ ಮಹದಾಯಿ ಯೋಜನೆಗೆ ಯಾವುದೇ ಸಮಸ್ಯೆ ಎದುರಾಗುವುದಿಲ್ಲ. ಗೋವಾ ಮುಖ್ಯಮಂತ್ರಿಯಾದ ಪ್ರಮೋದ್​ ಸಾವಂತ್​ ತಮ್ಮ ರಾಜಕೀಯ ಸ್ವಾರ್ಥಕ್ಕಾಗಿ ಅಂತಹ ಹೇಳಿಕೆ ನೀಡಿದ್ದಾರೆ. ಈ ಕುರಿತು ಕನ್ನಡಿಗರು ತಲೆ ಕೆಡಿಸಿಕೊಳ್ಳುವ ಅಗತ್ಯ ಇಲ್ಲ" ಎಂದು ಮುಖ್ಯಮಂತ್ರಿ ಬಿ.ಎಸ್.​ ಯಡಿಯೂರಪ್ಪ ಆಶ್ವಾಸನೆ ನೀಡಿದ್ದಾರೆ. ನಿನ್ನೆ ಗೋವಾ ಸದನದಲ್ಲಿ ಮಾತನಾಡಿದ್ದ ಅಲ್ಲಿನ ಸಿಎಂ ಪ್ರಮೋದ್ ಸಾವಂತ್​, "ಮಹದಾಯಿ ಗೋವಾದ ಜೀವ ನದಿ. ಆದರೆ, ಕರ್ನಾಟಕದ ಮಹದಾಯಿ ಯೋಜನೆಯಿಂದ ಇಲ್ಲಿನ ಪ್ರಕೃತಿ ಹಾನಿಗೊಳಗಾಗಲಿದೆ. ಹೀಗಾಗಿ ಮಹದಾಯಿ ವಿಚಾರದಲ್ಲಿ ರಾಜೀ ಮಾಡಿಕೊಳ್ಳುವುದಿಲ್ಲ, ಪಕ್ಷಭೇದಗಳಿಗೆ ಆಸ್ಪದ ಇಲ್ಲ" ಎಂದು ಕರ್ನಾಟಕದ ವಿರುದ್ಧ ಮಾತನಾಡಿದ್ದರು.


  ಪ್ರಮೋದ್ ಸಾವಂತ್ ಅವರ ಈ ಹೇಳಿಕೆ ಸಾಮಾನ್ಯವಾಗಿ ಉತ್ತರ ಕರ್ನಾಟಕದ ಜನರ ಆತಂಕಕ್ಕೆ ಕಾರಣವಾಗಿತ್ತು. ಅಲ್ಲದೆ, ಗೋವಾ ಸಿಎಂ ಮಾತಿಗೆ ಮುಖ್ಯಮಂತ್ರಿ ಯಡಿಯೂರಪ್ಪ ತಕ್ಕ ಉತ್ತರ ನೀಡಬೇಕು ಎಂಬ ಒತ್ತಾಯಗಳು ಕೇಳಿ ಬಂದಿತ್ತು. ಹೀಗಾಗಿ ಇಂದು ನೆಲಮಂಗಲದಲ್ಲಿ ಈ ಕುರಿತು ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿರುವ ಯಡಿಯೂರಪ್ಪ,


  "ಕರ್ನಾಟಕದ ಮಹತ್ವಾಕಾಂಕ್ಷೆಯ ಮಹದಾಯಿ ವಿಚಾರದಲ್ಲಿ ಯಾವುದೇ ಸಮಸ್ಯೆ ಆಗಲ್ಲ. ಗೋವಾ ಸಿಎಂ ಅವರ ರಾಜಕೀಯ ಸ್ವಾರ್ಥಕ್ಕಾಗಿ ಇಂತಹ ಅಸಂಬದ್ಧ ಹೇಳಿಕೆ ನೀಡಿದ್ದಾರೆ. ನ್ಯಾಯಾಲಯದಲ್ಲೂ ನಮಗೆ ಅನುಕೂಲಕರವಾದ ಸ್ಥಿತಿಯೇ ಇದೆ. ಮಹದಾಯಿ ನೀರು ನಮಗೆ ಸಿಗಲೇಬೇಕು. ಈ‌ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದು, ಶೀಘ್ರದಲ್ಲೇ ಮಹದಾಯಿ ಸಮಸ್ಯೆಯನ್ನು ನಾವು ಬಗೆಹರಿಸುತ್ತೇವೆ. ಕೇಂದ್ರದ ನಾಯಕರಿಗೂ ಮಹದಾಯಿ ವಿಚಾರ ಮನವರಿಕೆ ಮಾಡಿಕೊಡ್ತೇವೆ" ಎಂದು ಆಶ್ವಾಸನೆ ನೀಡಿದ್ದಾರೆ.


  ಇದನ್ನೂ ಓದಿ: Mann ki Baat: ಗಣರಾಜ್ಯೋತ್ಸವ ದಿನ ತ್ರಿವರ್ಣ ಧ್ವಜಕ್ಕೆ ಅವಮಾನ; ವರ್ಷದ ಮೊದಲ ಮನ್​ ಕೀ ಬಾತ್​ನಲ್ಲಿ ಪ್ರಧಾನಿ ಮೋದಿ ಅಸಮಾಧಾನ


  ಇದೇ ಸಂದರ್ಭದಲ್ಲಿ ನಾಳೆಯಿಂದ ಆರಂಭವಾಗಲಿರುವ ರಾಜ್ಯ ಅಧಿವೇಶನದಲ್ಲಿ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಸರ್ಕಾರದ ವೈಫಲ್ಯವನ್ನು ಸದನದಲ್ಲಿ ಬೊಟ್ಟು ಮಾಡಿ ತೋರಿಸುವುದಾಗಿ ತಿಳಿಸಿದ್ದಾರೆ. ಸಿದ್ದರಾಮಯ್ಯ ಅವರ ಈ ಹೇಳಿಕೆಗೂ ಉತ್ತರ ನೀಡಿರುವ ಮುಖ್ಯಮಂತ್ರಿ ಯಡಿಯೂರಪ್ಪ,


  "ವಿರೋಧ ಪಕ್ಷದವರಾಗಿ ಸಿದ್ದರಾಮಯ್ಯ ಅವರ ಕೆಲಸ ಮಾಡ್ತಾರೆ.  ನಾಳೆ ಬಿಎಸಿ ಸಭೆ ಇದೆ. ಹೀಗಾಗಿ ನಾಳಿನ ಸಭೆಯಲ್ಲಿ ಈ ಬಗ್ಗೆ ಚರ್ಚಿಸಲಿ. ವಿಪಕ್ಷದವರು ಏನೇ ಟೀಕೆ ಟಿಪ್ಪಣಿ ಮಾಡಿದರೂ ನಾವು ಅದನ್ನು ಸ್ವಾಗತಿಸುತ್ತೇವೆ. ನಮ್ಮಿಂದ ತಪ್ಪುಗಳಾಗಿದ್ರೆ ಸರಿಪಡಿಸಿಕೊಳ್ತೇವೆ. ನಮ್ಮಿಂದ ತಪ್ಪಾಗಿಲ್ಲ ಅಂದ್ರೆ ವಿಪಕ್ಷದವ್ರು ತಪ್ಪು ಗ್ರಹಿಕೆ ಮಾಡಿಕೊಂಡಿದ್ದೀರಿ ಅಂತ ಅವ್ರಿಗೆ ತಿಳಿಹೇಳುತ್ತೇವೆ" ಎಂದು ತಿಳಿಸಿದ್ದಾರೆ.

  Published by:MAshok Kumar
  First published:

  ಸುದ್ದಿ 18ಕನ್ನಡ ಟ್ರೆಂಡಿಂಗ್

  ಮತ್ತಷ್ಟು ಓದು