ಜನಪ್ರತಿನಿಧಿಗಳ ಜಗಳದಲ್ಲಿ ಕೆ.ಆರ್​.ಪೇಟೆ ಪುರಸಭೆ ಬಡವಾಯ್ತು!

news18
Updated:September 2, 2018, 5:21 PM IST
ಜನಪ್ರತಿನಿಧಿಗಳ ಜಗಳದಲ್ಲಿ ಕೆ.ಆರ್​.ಪೇಟೆ ಪುರಸಭೆ ಬಡವಾಯ್ತು!
news18
Updated: September 2, 2018, 5:21 PM IST
-ರಾಘವೇಂದ್ರ ಗಂಜಾಮ್, ನ್ಯೂಸ್ 18 ಕನ್ನಡ

ಮಂಡ್ಯ,(ಸೆ.02): 'ಗಂಡ-ಹೆಂಡತಿ ಜಗಳದಲ್ಲಿ ಕೂಸು ಬಡವಾಯಿತು' ಎಂಬ ಗಾದೆಯಂತೆ, ಜನಪ್ರತಿನಿಧಿಗಳ ಜಗಳದಿಂದಾಗಿ ಕೆ.ಆರ್.ಪೇಟೆ ಪುರಸಭೆ ಬಡವಾಗಿ ಅನಾಥವಾಗಿದೆ. ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ಪಟ್ಟಣದಲ್ಲಿ ಸಮಸ್ಯೆಗಳೇ ಹೊದ್ದು‌ ಮಲಗಿದೆ. ಕಳೆದೆರಡು ವರ್ಷಗಳಿಂದ ಇಲ್ಲಿನ ನಿವಾಸಿಗಳು ಪಡಬಾರದ ಪಾಡು ಪಡುತ್ತಿದ್ದಾರೆ. ಪಟ್ಟಣ ಪುರಸಭೆಯ ಜನಪ್ರತಿಧಿಗಳ ಒಳ ಜಗಳದಿಂದ ಪುರಸಭೆಯ ಖಾತೆ ಕಂದಾಯ, ಸೇರಿದಂತೆ ದೂರು ನೀಡಲು ಪುರಸಭೆಗೆ ಅಲೆದು ಅಲೆದು ಸುಸ್ತಾಗಿದ್ದಾರೆ. ಆಗಿದ್ದರೆ ಪಟ್ಟಣ ಪುರಸಭೆಯಲ್ಲಿ ಆಗಿರೋದಾದರೂ ಏನು ಅಂತೀರಾ?  ಈ ವರದಿ ಓದಿ.ಒಂದು ಕಡೆ ಧೂಳು ಹಿಡಿತಾ ಇರುವ ಕೊಠಡಿಗಳು,  ಕಚೇರಿಯಲ್ಲಿ ಸಾಲಾಗಿ ಜೋಡಿಸಿರುವ ಫೈಲುಗಳು, ಇನ್ನೊಂದು ಕಡೆ ಬಂದು ಹೋಗುತ್ತಿರುವ ಸಾರ್ವಜನಿಕರು. ಈ ಎಲ್ಲಾ ದೃಶ್ಯ ಕಂಡು ಬಂದಿದ್ದು ಮಂಡ್ಯ ಜಿಲ್ಲೆ ಕೆ.ಆರ್. ಪೇಟೆ ಪಟ್ಟಣದ ಕೆ.ಆರ್.ಪಟ್ಟಣದ ಪುರಸಭೆಯಲ್ಲಿ. ಅಂದ ಹಾಗೆ ಇಲ್ಲಿನ ಪುರಸಭೆಯಲ್ಲಿ ಎರಡು ವರ್ಷಗಳಿಂದ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಸೇರಿದಂತೆ ಸ್ಥಾಯಿ ಸಮಿತಿಯ ಅಧ್ಯಕ್ಷರಿಲ್ಲದ ಕಾರಣಕ್ಕೆ ಇಲ್ಲಿನ ಆಡಳಿತಕ್ಕೆ ಗರ ಬಡಿದಿದೆ. ಹೇಳುವವರು ಕೇಳುವವರು ಇಲ್ಲದೆ ಒಂದು ಕಡೆ ಪಟ್ಟಣ ಅನೈರ್ಮಲ್ಯದಿಂದ ಗಬ್ಬೆದು ನಾರುತ್ತಿದ್ದರೆ, ಮತ್ತೊಂದು ಕಡೆ ಸಾರ್ವಜನಿಕರು ತಮ್ಮ ಕೆಲಸ ಕಾರ್ಯಗಳಿಗೆ ಪುರಸಭೆಗೆ ಅಲೆದು ಅಲೆದು ಸುಸ್ತಾಗಿ, ಲಂಚದ ಕಚೇರಿಯಾಗಿ ಜಡ್ಡುಗಟ್ಟಿದ ಪುರಸಭೆಯ ವಿರುದ್ದ ತಮ್ಮ ಅಸಮಾಧಾನ ಹೊರ ಹಾಕುತ್ತಿದ್ದಾರೆ.ಇನ್ನು ಕೆ.ಆರ್.ಪೇಟೆ ಪಟ್ಟಣದ ಪುರಸಭೆಯಲ್ಲಿ ಮೀಸಲಾತಿ ಗೊಂದಲದ ಕಾರಣದಿಂದ ಈ ಸಮಸ್ಯೆ ಉದ್ಭವಿಸಿದೆ.  ಕಳೆದ ಸ್ಥಳೀಯ ಸಂಸ್ಥೆ ಚುನಾವಣೆ ವೇಳೆ ಕಾಂಗ್ರೆಸ್ ಪಕ್ಷ  ಅಧಿಕಾರ ಹಿಡಿದಿತ್ತಾದರೂ, ನಂತರ ಆದ ಮೀಸಲಾತಿ ಗೊಂದಲದಿಂದ ಇಲ್ಲಿನ‌ ಸದಸ್ಯರು ಮೀಸಲಾತಿ ವಿಷಯದಲ್ಲಿ ಕೋರ್ಟ್ ಮೆಟ್ಟಿಲೇರಿದ್ದಾರೆ. ಇದರಿಂದ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನಗಳು ಖಾಲಿ ಉಳಿದಿವೆ. ಆಡಳಿತಕ್ಕೆ ತೊಂದರೆಯಾಗದಂತೆ ಪಾಂಡವಪುರ ವಿಭಾಗದ ಎ.ಸಿ ಗೆ ಈ ಪುರಸಭೆಯ ಪ್ರಭಾರ ಆಡಳಿತಾಧಿಕಾರಿಯಾಗಿ ಅಧಿಕಾರ ನೀಡಿದ್ದಾರೆ. ಆದರೆ ಆ ಅಧಿಕಾರಿಯ ನಿರ್ಲಕ್ಷ್ಯದಿಂದ ಇಲ್ಲಿನ ಪುರಸಭೆಗೆ ಅಧಿಕಾರ ನಡೆಯುತ್ತಿಲ್ಲ. ಪಟ್ಟಣದ ಅಭಿವೃದ್ದಿ ಕಾರ್ಯಗಳು‌ ನೆನೆಗುದಿಗೆ ಬಿದ್ದಿದ್ದರೆ, ಸಾರ್ವಜನಿಕ ಕೆಲಸ ಕಾರ್ಯಗಳಂತೂ ಕೇಳುವವರು ಇಲ್ಲದಂತಾಗಿದೆ. ಸರ್ಕಾರ ಕೂಡಲೇ ಮಧ್ಯ ಪ್ರವೇಶ ಮಾಡಿ ಇತ್ತ ಗಮನ ಹರಿಸಲಿ ಅಂತಿದ್ದಾರೆ ಇಲ್ಲಿನ ಸದಸ್ಯರು.
Loading...ಒಟ್ಟಾರೆ ಜಿಲ್ಲೆಯ‌ 5 ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶದ ಹೊಸ್ತಿಲ್ಲಲ್ಲಿ‌ ಕೆ.ಆರ್.ಪೇಟೆ ಪಟ್ಟಣದ ಪುರಸಭೆ ಇನ್ನು ಅಧ್ಯಕ್ಷೆ ಉಪಾಧ್ಯಕ್ಷರೇ‌‌ ಇಲ್ಲದೆ ಅವರ ಅವಧಿ ಮುಗಿಯುವ ಲಕ್ಷಣಗಳು ಕಾಣಿಸುತ್ತಿವೆ. ಇನ್ನಾದರೂ ಸರ್ಕಾರ ಇತ್ತ ಗಮನ ಹರಿಸಿ ಈ ರೀತಿ ಸಮಸ್ಯೆ ಇರುವ ಪುರಸಭೆಗಳತ್ತ ಗಮನ ಹರಿಸಿ ಅಭಿವೃಧ್ಧಿ ಕಡೆ ಗಮನ ಹರಿಸಬೇಕಾಗಿದೆ.
First published:September 2, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...