ಹಳೇಬೀಡು ಐತಿಹಾಸಿಕ ದೇವಾಲಯಕ್ಕಿಲ್ಲ ಭದ್ರತೆ; ಶುಲ್ಕ ಪಾವತಿಸಲು ಯೋಚಿಸುತ್ತಿರುವ ಪುರತಾತ್ವ ಇಲಾಖೆ

ಹಳೇಬೀಡು ದೇವಾಲಯವೊಂದರಿಂದಲೇ ಬರೋಬ್ಬರಿ 4.28 ಕೋಟಿ ಹಣವನ್ನು ಪುರಾತತ್ವ ಇಲಾಖೆ ಬಾಕಿ ಉಳಿಸಿಕೊಂಡಿದೆ

ಹಳೇಬೀಡು ದೇವಾಲಯವೊಂದರಿಂದಲೇ ಬರೋಬ್ಬರಿ 4.28 ಕೋಟಿ ಹಣವನ್ನು ಪುರಾತತ್ವ ಇಲಾಖೆ ಬಾಕಿ ಉಳಿಸಿಕೊಂಡಿದೆ

ಹಳೇಬೀಡು ದೇವಾಲಯವೊಂದರಿಂದಲೇ ಬರೋಬ್ಬರಿ 4.28 ಕೋಟಿ ಹಣವನ್ನು ಪುರಾತತ್ವ ಇಲಾಖೆ ಬಾಕಿ ಉಳಿಸಿಕೊಂಡಿದೆ

 • Share this:
  ಹಾಸನ (ಆ. 11) : ಹಾಸನ ಜಿಲ್ಲೆ ಶಿಲ್ಪಕಲೆಗಳ ತವರೂರು. ಬೇಲೂರು, ಹಳೇಬೀಡು, ಶ್ರವಣಬೆಳಗೊಳ ಸೇರಿದಂತೆ ಹೊಯ್ಸಳರ ಕಾಲದಲ್ಲಿ ನಿರ್ಮಾಣಗೊಂಡಿರುವ ಈ ಐತಿ ಹಾಸಿಕ ದೇವಾಲಯಕ್ಕೆ ಸದ್ಯಕ್ಕೆ ಯಾವುದೇ ಸುರಕ್ಷೆ ಇಲ್ಲ. ಅಚ್ಚರಿ ಆದರೂ ಹೌದು. ಶಿಲ್ಪಕಲೆಯ ಸೊಬಗು ಸವಿಯಲು  ದೇಶ ವಿದೇಶಗಳಿಂದ ನೂರಾರು ಪ್ರವಾಸಿಗರು ಭೇಟಿ ನೀಡುತ್ತಾರೆ. ಅಂತಹ ವಿಶ್ವ ವಿಖ್ಯಾತ ಹಳೇಬೀಡಿನಲ್ಲಿರುವ ವಿಶ್ವವಿಖ್ಯಾತ ಹೊಯ್ಸಳೇಶ್ವರ ದೇವಾಲಯಕ್ಕೆ ಇದೀಗ ಪೊಲೀಸರು ರಕ್ಷಣೆ ಕೊಡುವುದಿಲ್ಲ ಎಂದು ತಿಳಿಸಿದ್ದಾರೆ. ಇದಕ್ಕೆ ಕಾರಣ ಶುಲ್ಕ ಪಾವತಿಯಾಗದಿರುವುದು

  ಹಳೇಬಿಡಿನ ಹೊಯ್ಸಳೇಶ್ವರ ದೇವಾಯಲಕ್ಕೆ  ಉಗ್ರರ ಬೆದರಿಕೆ ಹಾಗೂ ಇತರೆ ಕಾರಣಗಳಿಂದ ಪೊಲೀಸ್ ಭದ್ರತೆ ಒದಗಿಸಲಾಗಿತ್ತು ಗೊರೂರಿನ ಹೇಮಾವತಿ ಜಲಾಶಯ ಯೋಜನಾ ಇಲಾಖೆ ಹಾಗೂ ಇತರೆ ಅಧಿಕಾರಿಗಳು ಅಧಿಕಾರಿಗಳ ಮನವಿ ಮೇರೆಗೆ ಪೊಲೀಸ್ ಭದ್ರತೆ ಒದಗಿಸಲಾಗಿದೆ. ಆದರೆ ಇದುವರೆಗೂ ಪೊಲೀಸ್ ಇಲಾಖೆಗೆ ಪಾವತಿಸಬೇಕಾದ ಕೋಟಿ ಕೋಟಿ ರೂ ಶುಲ್ಕವನ್ನು ಬಾಕಿ ಉಳಿಸಿಕೊಂಡಿದೆ. ಬಾಕಿಯಿರುವ  ಶುಲ್ಕವನ್ನು ನೀಡುವಂತೆ ಪೊಲೀಸ್ ಇಲಾಖೆ ಹಲವು ಬಾರಿ ಪತ್ರ ಬರೆದಿದ್ದರು ಯಾವುದೇ ಪ್ರಯೋಜನವಾಗಿಲ್ಲ. ಅಲ್ಲದೇ, ತಮಗೆ ಯಾವುದೇ ಭದ್ರತೆ ಬೇಡ ಎಂದು ಉತ್ತರಿಸಿ ಅಚ್ಚರಿ ಉಂಟು ಮಾಡಿದ್ದಾರೆ ಎನ್ನಲಾಗಿದೆ

  ಪೊಲೀಸ್​ ಇಲಾಖೆಗೆ ಭಾರತೀಯ ಪುರಾತತ್ವ ಇಲಾಖೆ ಮಾಸಿಕ ಅಥವಾ ವಾರ್ಷಿಕವಾಗಿ ಇಂತಿಷ್ಟು ಪಾವತಿಸಬೇಕಿದೆ. ಆದರೆ ಈ ಹಣ ಸಂದಾಯವಾಗಿಲ್ಲ.  ಹಳೇಬೀಡು ದೇವಾಲಯವೊಂದರಲ್ಲಿಯೇ ಬರೋಬ್ಬರಿ 4.28 ಕೋಟಿ ಹಣವನ್ನು ಬಾಕಿ ಉಳಿಸಿಕೊಂಡಿದೆ. ಬಾಕಿ ಹಣ ನೀಡುವಂತೆ ಹಲವು ಪತ್ರ ಬರೆಯಲಾಗಿತ್ತು. ಇನ್ನು ಈ ಸಂಬಂಧ ಕಳೆದ ವರ್ಷ ಉತ್ತರ ನೀಡಿರುವ ಪುರಾತತ್ವ ಇಲಾಖೆ  ನಮಗೆ ಭದ್ರತೆ ಬೇಡ ಎಂದಿದ್ದಾರೆ. ಇದರಿಂದಾಗಿ ಸದ್ಯ ದೇವಾಲಯಕ್ಕೆ ಒದಗಿಸಲಾಗಿದ್ದ ನಾಲ್ವರು ಪೊಲೀಸ್​ ಸಿಬ್ಬಂದಿಯನ್ನು ನಿಯೋಜಿಸುವುದು ಬೇಡ ಎನ್ನಲಾಗಿದೆ. ಆದರೆ, ಈ ಏನಾದರೂ ಅನಾಹುತ ಆದರೆ ಎಂಬ ಅಳಕು ಮಾತ್ರ ಪೊಲೀಸ್​ ಇಲಾಖೆಯನ್ನು ಕಾಡುತ್ತಿದೆ. 

  ಇದನ್ನು ಓದಿ: ಗದಗದಲ್ಲಿ ಮನೆ ಮಾಡಿದ ರೊಟ್ಟಿ ಪಂಚಮಿ ಹಬ್ಬದ ಸಡಗರ..!

  ಈ ಹಿನ್ನಲೆ ಭದ್ರತೆ ನಿಯೋಜನೆ ಮಾಡಿದ್ದ ಪೊಲೀಸ್ ಭದ್ರತೆಯನ್ನು ಹಿಂಪಡೆಯಲಾಗಿದ್ದು, ಠಾಣಾ ಭದ್ರತೆಯನ್ನು ಮುಂದುವರಿಸಲಾಗಿದೆ. ಪ್ರಮುಖವಾಗಿ ಗೊರೂರಿನ ಹೇಮಾವತಿ ಜಲಾಶಯ, ಭದ್ರತೆ ನೀಡುವಂತೆ ಮನವಿ ಮಾಡಲಾಗಿತ್ತು. ಈ ವೇಳೇ ಭದ್ರತೆಗೆ ತಗಲುವ ಶುಲ್ಕ ಪಾವಿತಿಸುವುದಾಗಿಯೋಜನಾ ಇಲಾಖೆ ಒಪ್ಪಿಗೆ ನೀಡಿತ್ತು. ಅದರಲ್ಲಿ 2.30 ಕೋಟಿ ಶುಲ್ಕ ಬಾಕಿ ಉಳಿಸಿಕೊಂಡಿತ್ತು.  ಇದರಲ್ಲಿ ಸುಮಾರು ಒಂದು ಕೋಟಿ ಹಣ ಪಾವತಿ ಮಾಡಿದ್ದು, ಉಳಿದ 1.30 ಕೋಟಿಗೂ ಅಧಿಕ ಹಣ ಭರಿಸಬೇಕಿದೆ.

  ಇತ್ತ ಕೋಟಿ ಕೋಟಿ ಶುಲ್ಕ ಬಾಕಿಯಿರುವುದು ಪೊಲೀಸ್ ಇಲಾಖೆ ಆಡಿಟಿಂಗ್‌  ಸಮಸ್ಯೆಯಾಗಿದೆ. ಅತ್ತ ಮೇಲಧಿಕಾರಿಗಳು ಶುಲ್ಕ ವಸೂಲಿ ಮಾಡಿ ಎಂದು ಜಿಲ್ಲಾ ಮಟ್ಟದ ಅಧಿಕಾರಿಗಳ ಮೇಲೆ ಒತ್ತಡ ಹಾಕುತ್ತಿದ್ದರೆ, ಇತ್ತ ಸಂಬಂಧಪಟ್ಟ ದೇವಾಲಯ ಹಾಗೂ ಡ್ಯಾಂನ ಉಸ್ತುವಾರಿ ನೋಡಿಕೊಳ್ಳುತ್ತಿರುವವರು ಶುಲ್ಕ ಪಾವತಿಸದೆ ಬೇಜಬ್ದಾರಿ ತೋರುತ್ತಿದ್ದು, ಇದರಿಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಅಕ್ಷರಶಃ ಇಕ್ಕಟ್ಟಿಗೆ ಸಿಲುಕಿದ್ದಾರೆ. ಇನ್ನಾದರೂ ಸಂಬಂಧಪಟ್ಟ ಸಚಿವರು ಇಲಾಖಾ ಅಧಿಕಾರಿಗಳು ಇತ್ತ ಗಮನಹರಿಸಿ ಪೊಲೀಸ್ ಇಲಾಖೆಗೆ ಪಾವತಿಸಬೇಕಿರುವ ಹಣವನ್ನು ನೀಡಿ ದೇವಾಲಯಕ್ಕೆ  ಭದ್ರತೆ ಒದಗಿಸಬೇಕಿದೆ.

  (ವರದಿ: ಶಶಿಧರ್​ ಬಿ .ಸಿ)

  ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
  Published by:Seema R
  First published: