ಬಾಂಬ್​ ಪತ್ತೆ ಪ್ರಕರಣದ ಬಳಿಕವೂ ಎಚ್ಚೆತ್ತುಕೊಳ್ಳದ ಯಾದಗಿರಿ ಪೊಲೀಸರು; ರೈಲ್ವೆ ನಿಲ್ದಾಣದಲ್ಲಿ ಭದ್ರತಾ ಕೊರತೆ

ವಿವಿಧ ವಸ್ತುಗಳು, ಬ್ಯಾಗ್ ಗಳನ್ನು ತೆಗೆದುಕೊಂಡು ಬರುವರ ಮೇಲೆ ಕಣ್ಗಾವಲು ಇಡಲು ಮೆಟಲ್ ಡಿಟೆಕ್ಟರ್ ಇರಬೇಕು. ಆದರೆ, ಯಾದಗಿರಿ ರೈಲ್ವೆ ನಿಲ್ದಾಣದಲ್ಲಿ ಮೆಟಲ್ ಡಿಟೆಕ್ಟರ್ ಕೂಡ ಅಳವಡಿಸುವ ಕಾರ್ಯ ಮಾಡಿಲ್ಲ. ಇದರಿಂದ ಯಾವುದೇ ಬ್ಯಾಗ್, ಅಪಾಯದ ವಸ್ತುಗಳನ್ನು ತೆಗೆದುಕೊಂಡು ಸುಲಭವಾಗಿ ರೈಲಿನಲ್ಲಿ ಪ್ರಯಾಣಿಸುವ ಸಾಧ್ಯತೆಗಳಿರುತ್ತವೆ.

news18-kannada
Updated:January 22, 2020, 6:00 PM IST
ಬಾಂಬ್​ ಪತ್ತೆ ಪ್ರಕರಣದ ಬಳಿಕವೂ ಎಚ್ಚೆತ್ತುಕೊಳ್ಳದ ಯಾದಗಿರಿ ಪೊಲೀಸರು; ರೈಲ್ವೆ ನಿಲ್ದಾಣದಲ್ಲಿ ಭದ್ರತಾ ಕೊರತೆ
ಯಾದಗಿರಿ ರೈಲ್ವೆ ನಿಲ್ದಾಣ
  • Share this:
ಯಾದಗಿರಿ(ಜ.22): ಮಂಗಳೂರು ವಿಮಾನ ನಿಲ್ದಾಣದಲ್ಲಿ  ಬಾಂಬ್​ ಪತ್ತೆಯಾದ ಬಳಿಕ ಇಡೀ ರಾಜ್ಯವೇ ಬೆಚ್ಚಿ ಬಿದ್ದಿದೆ. ಎಲ್ಲೆಡೆ ಹೈ ಅಲರ್ಟ್​ ಘೋಷಣೆ ಮಾಡಿದ್ದು, ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚುವರಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಆದರೆ ಯಾದಗಿರಿಯಲ್ಲಿ ಮಾತ್ರ ಪೊಲೀಸ್​ ಇಲಾಖೆ ಇನ್ನೂ ಎಚ್ಚೆತ್ತುಕೊಂಡಿಲ್ಲ. 

ಯಾದಗಿರಿಯಲ್ಲಿ ಪೊಲೀಸ್ ಸಿಬ್ಬಂದಿಗಳಿಲ್ಲದೇ ಭದ್ರತೆ ಕೊರತೆ ಕಾಣುತ್ತಿದೆ. ಯಾದಗಿರಿ ರೈಲ್ವೆ ನಿಲ್ದಾಣದಲ್ಲಿ ಹೇಳೋರು ಕೇಳೋರು ಯಾರು ಇಲ್ಲದಂತಾಗಿದೆ.  ಯಾವಾಗಲಾದರೂ ನಿಲ್ದಾಣಕ್ಕೆ ಬರಬಹುದು ಹೋಗಬಹುದು. ಯಾವ ವಸ್ತು ತೆಗೆದುಕೊಂಡು ಬಂದರೂ ತಪಾಸಣೆ ನಡೆಸುವವರು ಇಲ್ಲ. ರೈಲ್ವೆ ನಿಲ್ದಾಣದಲ್ಲಿ ಪೊಲೀಸರು ಇಲ್ಲದಂತಾಗಿದೆ. ನಿತ್ಯವು ಯಾದಗಿರಿ ಜಿಲ್ಲೆಯಿಂದ ಸಾವಿರಾರು ಜನರು ಬೃಹತ್ ನಗರಗಳತ್ತ ಪ್ರಯಾಣ ಬೆಳೆಸುತ್ತಾರೆ. ಆದರೆ  ಪ್ರಯಾಣಿಕರಿಗೆ ಸುರಕ್ಷತೆಯೇ ಇಲ್ಲದಂತಾಗಿದೆ.

ಡಿಸಿಎಂ ಹುದ್ದೆಗೆ ಶ್ರೀರಾಮುಲು ಪಟ್ಟು: ಅಮಿತ್​​ ಶಾ ಮೂಲಕವೇ ಉಪ ಮುಖ್ಯಮಂತ್ರಿಯಾಗಲು ಯತ್ನ

ಯಾದಗಿರಿ ನಿಲ್ದಾಣಕ್ಕೆ ಪ್ರತ್ಯೇಕ ಠಾಣೆ ಇದ್ದು, ಅಗತ್ಯ ಸಿಬ್ಬಂದಿಗಳು ಇರಬೇಕು.  ಈ ನಿಲ್ದಾಣ ರಾಯಚೂರು ರೈಲ್ವೆ ನಿಲ್ದಾಣದ ವ್ಯಾಪ್ತಿಗೆ ಬರುತ್ತದೆ. ಯಾದಗಿರಿ ರೈಲ್ವೆ ನಿಲ್ದಾಣದಲ್ಲಿ ರೈಲ್ವೆ ಪೊಲೀಸ್ ವೇಸೈಡ್ ಠಾಣೆ ಮಾತ್ರ ಇದೆ. ಕೇವಲ ನಾಲ್ಕು ಜನ ಪೊಲೀಸರನ್ನು ಮಾತ್ರ ನಿಯೋಜನೆ ಮಾಡಲಾಗಿದೆ. ಆದರೆ, ಪ್ರತ್ಯೇಕ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪಿಎಸ್ ಐ ಸೇರಿದಂತೆ 12ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಗಳು ಕೆಲಸ ನಿರ್ವಹಿಸುತ್ತಾರೆ.

ಪ್ರತ್ಯೇಕ ಠಾಣೆ ಮಾಡದಿದ್ದರೆ ಸರಕಾರ ಉಪಠಾಣೆಯನ್ನಾದರೂ ಮಂಜೂರು ಮಾಡಿ ಅಗತ್ಯ ಸಿಬ್ಬಂದಿಗಳನ್ನು ನಿಯೋಜನೆ ಮಾಡಬೇಕಿತ್ತು. 5 ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಗಳು ಠಾಣೆಯಲ್ಲಿಯೇ ಇದ್ದು ರೈಲ್ವೆ ನಿಲ್ದಾಣದಲ್ಲಿ ಪ್ರಯಾಣಿಕರ ಮೇಲೆ ಹಾಗೂ ಯಾರಾದರೂ ದುಷ್ಕೃತ್ಯ ನಡೆಸಲು ಬಂದರೆ ಹದ್ದಿನ ಕಣ್ಣಿಡಬಹುದಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿ ಎಂ.ಕೂರ್ಮರಾವ್ ನ್ಯೂಸ್ 18 ಕನ್ನಡದ ಜೊತೆ ಮಾತನಾಡಿ, ಈ ಬಗ್ಗೆ ಪರಿಶೀಲನೆ ಮಾಡಿ ಮೇಲಾಧಿಕಾರಿಗಳ ಗಮನಕ್ಕೆ ತರಲಾಗುತ್ತದೆ ಎನ್ನುತ್ತಾರೆ.

ಬೆಲೀಜ್ ಪಾಸ್​ಪೋರ್ಟ್ ಪಡೆದು ಕೆರೆಬಿಯನ್​ನಲ್ಲಿ ಅಡಗಿ ಕುಳಿತಿದ್ದಾರೆಯೇ ಅತ್ಯಾಚಾರ ಆರೋಪಿ ದೇವಮಾನವ ನಿತ್ಯಾನಂದ

ವಿವಿಧ ವಸ್ತುಗಳು, ಬ್ಯಾಗ್ ಗಳನ್ನು ತೆಗೆದುಕೊಂಡು ಬರುವರ ಮೇಲೆ ಕಣ್ಗಾವಲು ಇಡಲು ಮೆಟಲ್ ಡಿಟೆಕ್ಟರ್ ಇರಬೇಕು. ಆದರೆ, ಯಾದಗಿರಿ ರೈಲ್ವೆ ನಿಲ್ದಾಣದಲ್ಲಿ ಮೆಟಲ್ ಡಿಟೆಕ್ಟರ್ ಕೂಡ ಅಳವಡಿಸುವ ಕಾರ್ಯ ಮಾಡಿಲ್ಲ. ಇದರಿಂದ ಯಾವುದೇ ಬ್ಯಾಗ್, ಅಪಾಯದ ವಸ್ತುಗಳನ್ನು ತೆಗೆದುಕೊಂಡು ಸುಲಭವಾಗಿ ರೈಲಿನಲ್ಲಿ ಪ್ರಯಾಣಿಸುವ ಸಾಧ್ಯತೆಗಳಿರುತ್ತವೆ. ಯಾದಗಿರಿ ರೈಲ್ವೆ ನಿಲ್ದಾಣದ ಮೂಲಕ ಸಾಕಷ್ಟು ರೈಲುಗಳು ಮುಂಬೈ, ಬೆಂಗಳೂರು, ಹೈದ್ರಾಬಾದ್ ಮೊದಲಾದ ಬೃಹತ್ ನಗರಗಳಿಗೆ ಸಂಚಾರ ಮಾಡುತ್ತವೆ. ಆದರೆ ಈ ನಿಲ್ದಾಣದಲ್ಲಿ ಅಗತ್ಯ ಸುರಕ್ಷತಾ ಕ್ರಮಕೈಗೊಂಡಿಲ್ಲ. ಇನ್ಮುಂದೆಯಾದರೂ ಸರಕಾರ ಯಾದಗಿರಿ ರೈಲ್ವೆ ನಿಲ್ದಾಣದಲ್ಲಿ ಹೆಚ್ಚಿನ ಸುರಕ್ಷತೆ ಕ್ರಮಕೈಗೊಳ್ಳುವ ಕೆಲಸ ಮಾಡಬೇಕಿದೆ. 

(ವರದಿ: ನಾಗಪ್ಪ ಮಾಲಿಪಾಟೀಲ)
First published:January 22, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ