ಉಪ‌ ಚುನಾವಣೆಯಲ್ಲಿ ಗೆದ್ದ ಯಾರೂ ಮಂತ್ರಿ ಸ್ಥಾನಕ್ಕೆ‌ಬೇಡಿಕೆ ಇಟ್ಟಿಲ್ಲ ; ಸಚಿವ ಮಾಧುಸ್ವಾಮಿ

ನೆರೆ ಪರಿಹಾರಕ್ಕೆ ಕೇಂದ್ರ ಸರ್ಕಾರ ತನ್ನ ನಿಯಮಗಳಡಿ ಸೂಕ್ತ ಪರಿಹಾರ ಕೊಟ್ಟಿದೆ, ಅವರು ಕೊಟ್ಟ ಪರಿಹಾರಕ್ಕಿಂತ ಹೆಚ್ಚಿನ ಪರಿಹಾರ ಕೊಟ್ಟಿದ್ದೇವೆ. ಕೇಂದ್ರದಿಂದ ಯಾವುದೇ ಮಲತಾಯಿ ಧೋರಣೆ ಮಾಡಿಲ್ಲ

news18-kannada
Updated:December 13, 2019, 3:05 PM IST
ಉಪ‌ ಚುನಾವಣೆಯಲ್ಲಿ ಗೆದ್ದ ಯಾರೂ ಮಂತ್ರಿ ಸ್ಥಾನಕ್ಕೆ‌ಬೇಡಿಕೆ ಇಟ್ಟಿಲ್ಲ ; ಸಚಿವ ಮಾಧುಸ್ವಾಮಿ
ಸಚಿವ ಮಾಧುಸ್ವಾಮಿ
  • Share this:
ಹಾಸನ(ಡಿ.13) : ಉಪ‌ ಚುನಾವಣೆಯಲ್ಲಿ ಗೆದ್ದ ಯಾರೂ ಮಂತ್ರಿ ಸ್ಥಾನಕ್ಕೆ‌ಬೇಡಿಕೆ ಇಟ್ಟಿಲ್ಲ, ಐದಾರು ದಿನ ಕಳೆದು ಮುಖ್ಯಮಂತ್ರಿ ಯಡಿಯೂರಪ್ಪ ನವರು ದೆಹಲಿಗೆ ಹೋಗಿ ಹೈಕಮಾಂಡ್​​ ಒಪ್ಪಿಗೆ ತಂದ ಬಳಿಕ ಸಂಪುಟ ವಿಸ್ತರಣೆ ನಡೆಯಲಿದೆ ಎಂದು ಕಾನೂನು ಸಚಿವ ಜೆ ಸಿ ಮಾಧುಸ್ವಾಮಿ ಹೇಳಿದ್ದಾರೆ

ಹಾಸನ ಜಿಲ್ಲೆ ಅರಕಲಗೂಡು ತಾಲ್ಲೂಕಿನ ಮುಸವತ್ತೂರಿನಲ್ಲಿ ಮಾತನಾಡಿದ ಅವರು,  ಕೇಂದ್ರ ಗೃಹ ಸಚಿವರು ದೆಹಲಿಗೆ ಬಂದ ಬಳಿಕ ರಾಜ್ಯ ಸಚಿವ ಸಂಪುಟ ವಿಸ್ತರಣೆ ನಡೆಯಲಿದೆ. ಸಂಪುಟದಲ್ಲಿ ಯಾರಿಗೆ ಸಚಿವ ಸ್ಥಾನ ನೀಡಬೇಕೆಂಬುದು ಸಿಎಂ ಹಾಗೂ ಹೈಕಮಾಂಡ್​ಗೆ ನಿರ್ಧರಿಸುತ್ತದೆ ಎಂದರು.

ಉಪ ಚುನಾವಣೆಯಲ್ಲಿ ಹಣದ ಹೊಳೆ ಹರಿಸಿ ಬಿಜೆಪಿ ಗೆಲುವು ಎಂಬ ರೇವಣ್ಣ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಯಾವ ಚುನಾವಣೆಯಲ್ಲಿ ಹಣದ ಹೊಳೆ ಹರಿದಿಲ್ಲ ಎಂದು ಹೇಳಲಿ, ಚುನಾವಣೆಯಲ್ಲಿ ಅವರು ಗೆದ್ದರೂ ಒಪ್ಕೊಬೇಕು, ನಾವು ಗೆದ್ದರು ಒಪ್ಕೊಬೇಕು. ಎಲ್ಲಾ ಚುನಾವಣೆಯಲ್ಲಿ ಹಣದ ಹೊಳೆ ಹರಿದಿದೆ ಅದರ ಮಾತು ಈಗೇಕೆ ಎಂದು ಮಾಧುಸ್ಚಾಮಿ ತಿರುಗೇಟು ನೀಡಿದರು.

ಇದನ್ನೂಓದಿ : ಉಪಚುನಾವಣೆಯಲ್ಲಿ ಕೊಟ್ಟ ಕೆಲಸ ನಿಭಾಯಿಸಿದ್ದ ಶ್ರೀರಾಮುಲು ಈಗ ಯಡಿಯೂರಪ್ಪರಿಂದ ದೂರ ದೂರ

ನೆರೆ ಪರಿಹಾರಕ್ಕೆ ಕೇಂದ್ರ ಸರ್ಕಾರ ತನ್ನ ನಿಯಮಗಳಡಿ ಸೂಕ್ತ ಪರಿಹಾರ ಕೊಟ್ಟಿದೆ, ಅವರು ಕೊಟ್ಟ ಪರಿಹಾರಕ್ಕಿಂತ ಹೆಚ್ಚಿನ ಪರಿಹಾರ ಕೊಟ್ಟಿದ್ದೇವೆ. ಕೇಂದ್ರದಿಂದ ಯಾವುದೇ ಮಲತಾಯಿ ಧೋರಣೆ ಮಾಡಿಲ್ಲ, ಅವರು ಸರಿಯಾಗೇ ಪರಿಹಾರ ಕೊಟ್ಟಿದ್ದಾರೆ ಎಂದರು.

ಇನ್ನು ಹದಿನೈದು ದಿನದಲ್ಲಿ ನಗರ ಸ್ಥಳೀಯ ಸಂಸ್ಥೆಗಳಿಗೆ ಮೀಸಲಾತಿ ಪ್ರಕಟವಾಗಲಿದ್ದು, ಎಲ್ಲಾ ಕಾನೂನು ತೊಡಕುಗಳು ಮುಗಿದಿದ್ದು ಶೀಘ್ರವೇ ಅದ್ಯಕ್ಷ ಉಪಾಧ್ಯಕ್ಷ ಮೀಸಲಾತಿ ಪ್ರಕಟವಾಗಲಿದೆ ಎಂದು ತಿಳಿಸಿದರು.
First published:December 13, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ