ಜೆಡಿಎಸ್‌ ಪಕ್ಷವನ್ನು ಯಾರೂ ಬಿಟ್ಟು ಹೋಗುತ್ತಿಲ್ಲ ; ಮಾಜಿ ಸಚಿವ ಸಾರಾ ಮಹೇಶ್

ಇಡೀ ಪ್ರಕರಣವನ್ನು ವಿರೋಧ ಪಕ್ಷದ ಕೆಲವರು ರಾಜಕೀಯವಾಗಿ ಬಳಸಿಕೊಳ್ಳುತ್ತಿದ್ದಾರೆ. ನಾನು ಶಾಸಕ ಆಗುವುದಕ್ಕಿಂತಲೂ‌ ಮುಂಚಿನಿಂದ ಸಾಲಿಗ್ರಾಮದಲ್ಲಿ ಇಂತಾ ಘಟನೆಗಳು ನಡೆದಿವೆ. ಹಿಂದೆ ಗೋಲಿಬಾರ್ ಸಹ ಆಗಿದೆ. ನನ್ನನ್ನು ಶಾಸಕ ಮಾಡಿದ ಮೇಲೆ ಸ್ವಲ್ಪ ಹತೋಟಿಗೆ ಬಂದಿದೆ.

news18-kannada
Updated:December 17, 2019, 2:57 PM IST
ಜೆಡಿಎಸ್‌ ಪಕ್ಷವನ್ನು ಯಾರೂ ಬಿಟ್ಟು ಹೋಗುತ್ತಿಲ್ಲ ; ಮಾಜಿ ಸಚಿವ ಸಾರಾ ಮಹೇಶ್
ಮಾಜಿ ಸಚಿವ ಸಾರಾ ಮಹೇಶ್
  • Share this:
ಮೈಸೂರು(ಡಿ.17) : ಸದ್ಯ ಜೆಡಿಎಸ್‌ ಪಕ್ಷವನ್ನು ಯಾರೂ ಬಿಟ್ಟು ಹೋಗುತ್ತಿಲ್ಲ. ಎಲ್ಲರೊಂದಿಗೆ ನಿತ್ಯ ಮಾತನಾಡುತ್ತಲೇ ಇದ್ದೇವೆ. ಹಲವರು ನಿನ್ನೆ ಕೂಡ ಕುಮಾರಸ್ವಾಮಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ. ನಮ್ಮ ಪಕ್ಷವನ್ನ ಯಾರು ಬಿಡುವುದಿಲ್ಲ ಎಂದು  ಸಚಿವ ಸಾರಾ ಮಹೇಶ್ ಹೇಳಿದ್ದಾರೆ. 

ಚುನಾವಣೆಯಲ್ಲಿ ಸೋತ ನೋವಿನಲ್ಲಿದ್ದಾರೆ. ಈ ಸಂದರ್ಭದಲ್ಲಿ ಅದೆಲ್ಲ ಬೇಡ ಮುಂದೆ ನೋಡೋಣ ಬಿಡಿ, ಎಂದು ಅವರು, ಚುನಾವಣೆ ನಂತರ ವಿಶ್ವನಾಥ್​​ ವಿರುದ್ಧ ದಾಖಲೆ ಬಿಡುಗಡೆ ಮಾಡುತ್ತೇನೆ ಎಂದು ಸಾರಾ ಮಹೇಶ ಹೇಳಿದ್ದರು ಎನ್ನಲಾಗಿದೆ.

ಸಾ.ರಾ. ಇದ್ದವರೆಲ್ಲ ನನ್ನ ಸಹೋದರರು ಆಗಲ್ಲ

ಗುಂಪು ಘರ್ಷಣೆ ಪ್ರಕರಣ ಸಂಬಂಧ ಇನ್ನೂ ಯಾವುದೇ ಶಾಂತಿ ಸಭೆ ನಡೆದಿಲ್ಲ. ಹೆಸರ ಹಿಂದೆ ಸಾ.ರಾ. ಇದ್ದವರೆಲ್ಲ ನನ್ನ ಸಹೋದರರು ಆಗಲ್ಲ. ಸಾಲಿಗ್ರಾಮದಲ್ಲಿ ಯಾರ ತಂದೆ ರಾಮೇಗೌಡ ಆಗಿರುತ್ತಾರೋ ಅವರ ಹೆಸರ ಹಿಂದೆ‌ ಸಾ.ರಾ ಅಂತ ಇರುತ್ತೆ. ಪ್ರಕರಣದಲ್ಲಿ ನನ್ನ ಒಬ್ಬನೇ ಸಹೋದರ ಸಿಲುಕಿರೋದು. ಒಬ್ಬ ಸಹೋದರ ಜಿಪಂ‌ ಸದಸ್ಯ ಆಗಿದ್ದಾನೆ. ಈಗ ಪ್ರಕರಣದಲ್ಲಿ ಸಿಲುಕಿರುವ ಸಹೋದರ ಯಾರು ಅಂತಲೇ ಗೊತ್ತಿರಲಿಲ್ಲ. ಪ್ರಕರಣದ ನಂತರ ಎಲ್ಲರಿಗೂ ಆತನ‌ ಬಗ್ಗೆ ಗೊತ್ತಾಗುವಂತೆ ಆಗಿದೆ ಎಂದರು.

ಇದನ್ನೂ ಓದಿ : ಅಲ್ಪ ಸಂಖ್ಯಾತರ ಕಡೆಗಣನೆಯಿಂದ ಕಾಂಗ್ರೆಸ್​ ಮತಗಳು ಬಿಜೆಪಿಗೆ: ಸಿಎಂ ಇಬ್ರಾಹಿಂ

ಇಡೀ ಪ್ರಕರಣವನ್ನು ವಿರೋಧ ಪಕ್ಷದ ಕೆಲವರು ರಾಜಕೀಯವಾಗಿ ಬಳಸಿಕೊಳ್ಳುತ್ತಿದ್ದಾರೆ. ನಾನು ಶಾಸಕ ಆಗುವುದಕ್ಕಿಂತಲೂ‌ ಮುಂಚಿನಿಂದ ಸಾಲಿಗ್ರಾಮದಲ್ಲಿ ಇಂತಾ ಘಟನೆಗಳು ನಡೆದಿವೆ. ಹಿಂದೆ ಗೋಲಿಬಾರ್ ಸಹ ಆಗಿದೆ. ನನ್ನನ್ನು ಶಾಸಕ ಮಾಡಿದ ಮೇಲೆ ಸ್ವಲ್ಪ ಹತೋಟಿಗೆ ಬಂದಿದೆ. ಎರಡೂ ಕಡೆಯವರು ಹಲವು ಮಂದಿ ತಲೆ ಮರೆಸಿಕೊಂಡಿದ್ದಾರೆ. ಅವರೆಲ್ಲ ಸಿಕ್ಕ ನಂತರ ಒಂದು ಕಡೆ ಕುಳಿತು ಸಭೆ ಮಾಡಿ ತೀರ್ಮಾನ ಮಾಡುತ್ತೇವೆ ಎಂದು ಹೇಳಿದರು.
First published: December 17, 2019, 2:52 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading