Nalin Kumar Kateel: ಯಡಿಯೂರಪ್ಪ ನಮ್ಮ ಸರ್ವಶ್ರೇಷ್ಠ ನಾಯಕ, ಅವರ ಪ್ರವಾಸ ತಡೆ ಹಿಡಿಯುವ ಸಾಮರ್ಥ್ಯ ಬಿಜೆಪಿಯಲ್ಲಿ ಯಾರಿಗೂ ಇಲ್ಲ: ನಳಿನ್ ಕುಮಾರ್ ಕಟೀಲ್

ಹಾನಗಲ್​ನಲ್ಲಿ ಶಿವರಾಜ್ ಸಜ್ಜನರ್ ಗೆದ್ದೆ ಗೆಲ್ತಾರೆ ಎಂದು ರಾಜ್ಯಾಧ್ಯಕ್ಷ ನಳೀನ್ ಗೆ ಸಿಎಂ ಅಭಯ ನೀಡಿದ್ದಾರೆ. ನಿನ್ನೆ ರಾತ್ರಿ ದಾವಣಗೆರೆಯಲ್ಲಿ ನಡೆದ ಮಾತುಕತೆ, ಸಿ ಆರ್ ಬಳ್ಳಾರಿ ಬಂಡಾಯದಿಂದ ಪಕ್ಷದಲ್ಲಿ ಉಂಟಾಗಿದ್ದ ಭಿನ್ನಮತ, ಅಭ್ಯರ್ಥಿ ಗೆಲುವಿಗೆ ಮಾಡಿರೋ ತಂತ್ರ ಗಳ ಬಗ್ಗೆ ರಾಜ್ಯಾಧ್ಯಕ್ಷರಿಗೆ ಸಿಎಂ ಬೊಮ್ಮಾಯಿ ವಿವರಣೆ ನೀಡಿದರು.

ನಳೀನ್​ ಕುಮಾರ್ ಕಟೀಲ್​

ನಳೀನ್​ ಕುಮಾರ್ ಕಟೀಲ್​

 • Share this:
  ಬೆಂಗಳೂರು: ರಾಜ್ಯದ ಎರಡು ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ (By Elections In Two Assembly Constituency) ಘೋಷಣೆ ಆಗಿದೆ. ಹಾನಗಲ್ ಹಾಗೂ ಸಿಂದಗಿಯಲ್ಲಿ (Hangal And Sindagi By Election) ನಮ್ಮ ಪಕ್ಷದ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆಯಾಗಿದೆ. ಚುನಾವಣಾ ದೃಷ್ಟಿಯಿಂದ ನಾನು ಮತ್ತು ಸಿಎಂ ಬೊಮ್ಮಾಯಿ (CM Basavaraja Bommai) ಅವರು ಚರ್ಚೆ ಮಾಡಿದ್ದೇವೆ. ಮುಂದಿನ ಪ್ರವಾಸಗಳು, ಕಾರ್ಯತಂತ್ರಗಳ ಬಗ್ಗೆ ಚರ್ಚೆ ಮಾಡಿದ್ದೇವೆ. ಎರಡು ಕ್ಷೇತ್ರಗಳಲ್ಲೂ ನಾವು ಗೆದ್ದೆ ಗೆಲ್ಲುತ್ತೇವೆ. ಎರಡು ಕ್ಷೇತ್ರಗಳಲ್ಲಿ ಗೆಲ್ಲಲು ಪೂರಕವಾಗಿ ಕಾರ್ಯತಂತ್ರ ಮಾಡಿದ್ದೇವೆ. ಈಗಾಗಲೇ ಎಲ್ಲ ಜಿಲ್ಲಾ ಪಂಚಾಯತಿಗಳಿಗೆ, ಮಂತ್ರಿಗಳಿಗೆ ಉಸ್ತುವಾರಿ ನೀಡಿದ್ದೀವಿ. ಶಕ್ತಿ ಕೇಂದ್ರಗಳ ಮಟ್ಟದಲ್ಲಿ ಒಬ್ಬೊಬ್ಬ ಶಾಸಕರ ನೇಮಕ ಮಾಡಲಾಗಿದೆ. ಗ್ರಾಮ ಪಂಚಾಯತಿ ಮಟ್ಟದಲ್ಲಿ ಪದಾಧಿಕಾರಿಗಳು ಇರ್ತಾರೆ. ವಿಧಾನಸಭಾ ‌ಕ್ಷೇತ್ರಗಳಿಗೆ ಪಾರ್ಟಿಯಿಂದ ಕಾರ್ಯದರ್ಶಿ ನೇಮಿಸಲಾಗಿದೆ. ನಮ್ಮ ರಾಜ್ಯದ ಪ್ರಮುಖರನ್ನ ಪ್ರವಾಸಕ್ಕೆ ಸೇರಿಸಲಾಗಿದೆ. ಉಸ್ತುವಾರಿಗಳನ್ನ ಯಾರನ್ನ ನೇಮಕ ಮಾಡಿ ಬಿಡಿ ಅಂತ ಹೇಳಲ್ಲ. ಉಸ್ತುವಾರಿ ನೇಮಕ ಮಾಡೋದು ಸಿಎಂ ಪೂರ್ಣ ಜವಾಬ್ದಾರಿ ಅವರು ತೀರ್ಮಾನ ತೆಗೆದುಕೊಳ್ತಾರೆ. ಅಕ್ಟೋಬರ್ 16 ರಿಂದ ಎಲ್ಲ ಸಚಿವರುಗಳು ಬೈ ಎಲೆಕ್ಷನ್ ಪ್ರಚಾರ ಮಾಡ್ತಾರೆ. ಎರಡು ಕ್ಷೇತ್ರಗಳಲ್ಲಿ ಯಾರಿಗೆ ಜವಾಬ್ದಾರಿ ನೀಡಲಾಗಿದೆ ಅವರು ಕ್ಷೇತ್ರದಲ್ಲೇ ಉಳಿಯುತ್ತಾರೆ‌. ನಮ್ಮ ಎಲ್ಲ ಸಂಸದರು, ಶಾಸಕರು ಅಲ್ಲೆ ಇರ್ತಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ (Nalin Kumar Kateel) ಅವರು ಹೇಳಿದರು.

  ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ (BS Yediyurappa Tour) ಎರಡು ಕಡೆ ಪ್ರವಾಸ ಮಾಡ್ತಾರೆ. ಚುನಾವಣಾ ಘೋಷಣೆ ಹಿನ್ನೆಲೆಯಲ್ಲಿ ಬಿಎಸ್​ವೈ  ಪ್ರವಾಸ ವಿಳಂಬ ಆಗಿದೆ ಅಷ್ಟೇ. ನವೆಂಬರ್ ಮೊದಲ ವಾರದಿಂದ ಬಿಎಸ್​ವೈ ರಾಜ್ಯ ಪ್ರವಾಸ ಆರಂಭಿಸುತ್ತಾರೆ. ಯಡಿಯೂರಪ್ಪ ಸರ್ವ ಸಮ್ಮತಿಯ ನಾಯಕ. ನಮ್ಮ ಸರ್ವ ಶ್ರೇಷ್ಠ ನಾಯಕ. ಅವರ ಪ್ರವಾಸ ತಡೆ ಹಿಡಿಯುವ ಸಾಮಾರ್ಥ್ಯ ಬಿಜೆಪಿಯಲ್ಲಿ ಯಾರಿಗೂ ಇಲ್ಲ. ಐಟಿ ದಾಳಿ ಡಿಕೆಶಿ ಮನೆ ಮೇಲೆ ಆದಾಗ ರಾಜಕಾರಣ ಆಗುತ್ತೆ. ಇವತ್ತು ಇನ್ನೊಂದು ಬಣ್ಣ ನೀಡ್ತಾರೆ. ಐಟಿ ತನ್ನದೇ ಕೆಲಸ ಮಾಡುತ್ತೆ. ಜವಾಬ್ದಾರಿಯುತ ಕೆಲಸ ಮಾಡುತ್ತೆ. ಅದರಲ್ಲಿ ರಾಜಕೀಯ ಇಲ್ಲ ಎಂದು ಕಟೀಲ್ ಹೇಳಿದರು.

  ಭಿನ್ನಮತ ಶಮನ ಮಾಡಿರುವ ಬಗ್ಗೆ ಕಟೀಲ್ ಗೆ ಮಾಹಿತಿ ನೀಡಿದ ಸಿಎಂ

  ಹಾನಗಲ್ ಕ್ಷೇತ್ರದಲ್ಲಿ ಅಭ್ಯರ್ಥಿ ಗೆಲುವಿಗೆ ಮಾಡಿರುವ ಕ್ರಮದ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಅವರು ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರಿಗೆ ಮಾಹಿತಿ ನೀಡಿದರು. ರಾಜ್ಯ ಬಿಜೆಪಿ ಕಚೇರಿಯಲ್ಲಿ ಭೇಟಿಯಾದ ಉಭಯ ನಾಯಕರು ಪ್ರತ್ಯೇಕ ಚರ್ಚೆ ನಡೆಸಿದರು. ಈ ವೇಳೆ ಹಾನಗಲ್ ಅಭ್ಯರ್ಥಿ ಗೆಲುವಿಗೆ ಮಾಡಿರುವ ತಂತ್ರಗಳ ಬಗ್ಗೆ ಮಾಹಿತಿ ಹಂಚಿಕೊಂಡರು. ಶಿವರಾಜ್ ಸಜ್ಜನರ್ ಗೆದ್ದೆ ಗೆಲ್ತಾರೆ ಎಂದು ರಾಜ್ಯಾಧ್ಯಕ್ಷ ನಳೀನ್ ಗೆ ಸಿಎಂ ಅಭಯ ನೀಡಿದ್ದಾರೆ. ನಿನ್ನೆ ರಾತ್ರಿ ದಾವಣಗೆರೆಯಲ್ಲಿ ನಡೆದ ಮಾತುಕತೆ, ಸಿ ಆರ್ ಬಳ್ಳಾರಿ ಬಂಡಾಯದಿಂದ ಪಕ್ಷದಲ್ಲಿ ಉಂಟಾಗಿದ್ದ ಭಿನ್ನಮತ, ಅಭ್ಯರ್ಥಿ ಗೆಲುವಿಗೆ ಮಾಡಿರೋ ತಂತ್ರ ಗಳ ಬಗ್ಗೆ ರಾಜ್ಯಾಧ್ಯಕ್ಷರಿಗೆ ಸಿಎಂ ಬೊಮ್ಮಾಯಿ ವಿವರಣೆ ನೀಡಿದರು.

  ಇದನ್ನು ಓದಿ: Explained: ಕೊರತೆ ಮೂಲಕ ಚರ್ಚೆಯಲ್ಲಿರುವ ಕಲ್ಲಿದ್ದಲು ಎಂದರೇನು? ಅಭಾವ ಸೃಷ್ಟಿಯಾಗಲು ಕಾರಣವೇನು?

  ಎರಡು ಕ್ಷೇತ್ರಗಳಿಗೆ ಉಪಚುನಾವಣೆ

  ಬಿಜೆಪಿ ಶಾಸಕ ಸಿ.ಎಂ.ಉದಾಸಿ ನಿಧನದಿಂದಾಗಿ ಹಾವೇರಿಯ ಹಾನಗಲ್ ಕ್ಷೇತ್ರ ತೆರವಾಗಿತ್ತು. ಇತ್ತ ಜೆಡಿಎಸ್ ಶಾಸಕ ಎಂ. ಸಿ. ಮನಗೂಳಿ (M C Managooli) ನಿಧನದಿಂದಾಗಿ ವಿಜಯಪುರದ ಸಿಂದಗಿ ವಿಧಾನಸಭಾ ಕ್ಷೇತ್ರ ತೆರವಾಗಿತ್ತು. ಈ ಎರಡು ಕ್ಷೇತ್ರಗಳಿಗೆ ಇದೇ ತಿಂಗಳ 30ರಂದು ಮತದಾನ ನಡೆಯಲಿದೆ. ನವೆಂಬರ್ 2ರಂದು ಮತ ಎಣಿಕೆ ನಡೆಯಲಿದೆ.
  Published by:HR Ramesh
  First published: