News18 India World Cup 2019

ಯಾರ ಅಂಕೆಗೂ ನಿಲುಕದ ತುಮಕೂರು; ದೇವೇಗೌಡ್ರು ಗೆದ್ರೆ ಸಚಿವ ಶ್ರೀನಿವಾಸ್ ಬಚಾವ್,​ ಬಿಜೆಪಿಯಿಂದ ವಿ.ಸೊಮಣ್ಣಗೆ ಕ್ಲಾಸ್

Tumkur Lok Sabha Election Exit Poll; ತುಮಕೂರು ಲೋಕಸಭಾ ಫಲಿತಾಂಶ ಅಂಕೆಗೆ ಸಿಗದೆ ನಿಗೂಢವಾಗಿದ್ದು, ಚುನಾವಣಾ ಜವಾಬ್ದಾರಿ ವಹಿಸಿಕೊಂಡವರ ಮೇಲೆ ತೂಗುಗತ್ತಿಯಂತೆ ನಿಂತಿದೆ. ಅಕಸ್ಮಾತ್ ಈ ಎರಡೂ ಪಕ್ಷದ ಯಾವ ಅಭ್ಯರ್ಥಿ ಸೋತರೂ ಚುನಾವಣೆ ಜವಾಬ್ದಾರಿ ವಹಿಸಿಕೊಂಡ ಅನೇಕ ಹಿರಿಯ ನಾಯಕರ ತಲೆದಂಡವಾಗಲಿದೆ ಎಂದು ಹೇಳಲಾಗುತ್ತಿದೆ.

MAshok Kumar | news18
Updated:May 20, 2019, 12:16 PM IST
ಯಾರ ಅಂಕೆಗೂ ನಿಲುಕದ ತುಮಕೂರು; ದೇವೇಗೌಡ್ರು ಗೆದ್ರೆ ಸಚಿವ ಶ್ರೀನಿವಾಸ್ ಬಚಾವ್,​ ಬಿಜೆಪಿಯಿಂದ ವಿ.ಸೊಮಣ್ಣಗೆ ಕ್ಲಾಸ್
ಎಚ್​.ಡಿ ದೇವೇಗೌಡ
MAshok Kumar | news18
Updated: May 20, 2019, 12:16 PM IST
ತುಮಕೂರು (ಮೇ.20); ಲೋಕಸಭೆಯ 7ನೇ ಹಂತದ ಚುನಾವಣೆ ಮುಗಿದ ಬೆನ್ನಿಗೆ ರಾಷ್ಟ್ರವ್ಯಾಪಿ ಹತ್ತಾರು ಸಮೀಕ್ಷೆಗಳು ಹೊರಬಿದ್ದಿವೆ. ಈ ಪೈಕಿ ಯಾವ ಸಮೀಕ್ಷೆಯೂ ತುಮಕೂರಿನ ಫಲಿತಾಂಶದ ಬಗ್ಗೆ ನಿಖರವಾಗಿ ಹೇಳುವಲ್ಲಿ ಸೋತಿವೆ. ಇದೇ ಕಾರಣಕ್ಕೆ ತುಮಕೂರು ಫಲಿತಾಂಶ ಮತ್ತಷ್ಟು ಮಹತ್ವ ಪಡೆದುಕೊಂಡಿದೆ.

ಮಾಜಿ ಪ್ರಧಾನಿ ಹೆಚ್​.ಡಿ. ದೇವೇಗೌಡ ಸ್ಪರ್ಧೆಯೊಂದಿಗೆ ತುಮಕೂರಿನ ಕಣ ರಂಗೇರಿತ್ತು. ಪ್ರತಿಸ್ಪರ್ಧಿಯಾಗಿ ಬಿಜೆಪಿಯಿಂದ ಬಸವರಾಜ್ ಸ್ಪರ್ಧಿಸಿದ್ದರು. ಮೈತ್ರಿ ಪಕ್ಷಗಳು ತುಮಕೂರು ಚುನಾವಣಾ ಜವಾಬ್ದಾರಿಯನ್ನು ಗುಬ್ಬಿ ಶಾಸಕ ಸಣ್ಣ ಕೈಗಾರಿಕಾ ಸಚಿವ ಶ್ರೀನಿವಾಸ್​ಗೆ ವಹಿಸಿದ್ದರೆ, ಬಿಜೆಪಿ ಚುನಾವಣೆಯ ಸಂಪೂರ್ಣ ಜವಾಬ್ದಾರಿಯನ್ನು ಮಾಜಿ ಸಚಿವ ವಿ. ಸೋಮಣ್ಣ ಅವರಿಗೆ ವಹಿಸಿತ್ತು.

ಇದೀಗ ತುಮಕೂರಿನ ಫಲಿತಾಂಶ ಅಂಕೆಗೆ ಸಿಗದೆ ನಿಗೂಢವಾಗಿದ್ದು, ಚುನಾವಣಾ ಜವಾಬ್ದಾರಿ ವಹಿಸಿಕೊಂಡವರ ಮೇಲೆ ತೂಗುಗತ್ತಿಯಂತೆ ನಿಂತಿದೆ ಎನ್ನಲಾಗುತ್ತಿದೆ.

ಈ ಚುನಾವಣೆಯಲ್ಲಿ ಅಕಸ್ಮಾತ್ ದೇವೇಗೌಡ ಸೋತರೆ ಇದು ಅವರ ರಾಜಕೀಯ ಜೀವನದಲ್ಲೇ ದೊಡ್ಡ ಮುಖಭಂಗವಾಗಲಿದೆ ಎಂದು ಬಣ್ಣಿಸಲಾಗುತ್ತಿದೆ. ಹೀಗಾಗಿ ತುಮಕೂರಿನಲ್ಲಿ ಜೆಡಿಎಸ್​ ಸೋತರೆ ಸಚಿವ ಶ್ರೀನಿವಾಸ್ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಲಿದ್ದಾರೆ ಎಂಬ ಲೆಕ್ಕಾಚಾರಗಳು ಈಗಲೇ ಗರಿಗೆದರಿವೆ.

ಇದನ್ನೂ ಓದಿ : Tumkur Lok Sabha Elections Exit Poll: ತುಮಕೂರಿನಲ್ಲಿ ದೇವೇಗೌಡರಿಗೆ ಪ್ರಯಾಸದ ಗೆಲುವಿನ ಸಾಧ್ಯತೆ!

ಇದಲ್ಲದೆ ಮಧುಗಿರಿ ಮಾಜಿ ಶಾಸಕ ಕೆ.ಎನ್. ರಾಜಣ್ಣ ಮೇಲೂ ಹೈಕಮಾಂಡ್​ ಶಿಸ್ತು ಕ್ರಮ ಜರುಗಿಸಲಿದೆ. ಗ್ರಾಮಾಂತರ ಶಾಸಕ ಗೌರಿಶಂಕರ್​ಗೆ ನೀಡಿರುವ ಎಂಎಸ್​ಐಎಲ್​ ನಿಗಮ ಸ್ಥಾನಕ್ಕೂ ಕುತ್ತು ಬರಲಿದೆ.
Loading...

ಇನ್ನೂ ಬಿಜೆಪಿಯಲ್ಲಿ ತುಮಕೂರು ಚುನಾವಣೆಯ ಸಂಪೂರ್ಣ ಜವಾಬ್ದಾರಿಯನ್ನು ಮಾಜಿ ಸಚಿವ ವಿ. ಸೋಮಣ್ಣ ಅವರಿಗೆ ವಹಿಸಲಾಗಿತ್ತು. ಹೀಗಾಗಿ ತುಮಕೂರಿನಲ್ಲಿ ಬಿಜೆಪಿ ಸೋತರೆ ವಿ. ಸೋಮಣ್ಣ ಅವರಿಗೂ ಹೈಕಮಾಂಡ್​ನಿಂದ ಕ್ಲಾಸ್​ ತೆಗೆದುಕೊಳ್ಳುವ ಸಾಧ್ಯತೆ ಇದೆ. ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷ ಸ್ಥಾನದಲ್ಲೂ ಬದಲಾವಣೆಯಾಗಲಿದೆ ಎಂಬ ಮಾಹಿತಿಗಳು ಹೊರಬೀಳುತ್ತಿವೆ. ಪ್ರ್ತಸುತ ಲೋಕಸಭಾ ಅಭ್ಯರ್ಥಿ ಬಸವರಾಜು ಅವರ ಮಗ ಶಾಸಕ ಜ್ಯೋತಿ ಗಣೇಶ್  ತುಮಕೂರು ಜಿಲ್ಲಾಧ್ಯಕ್ಷರಾಗಿದ್ದಾರೆ.

First published:May 20, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...