ಹೊಸ ವರ್ಷಾಚರಣೆಗೆ ಬ್ರೇಕ್​​; ಎಂಜಿ ರಸ್ತೆ, ಬ್ರಿಗೇಡ್ ರಸ್ತೆ ಕ್ಲೋಸ್: ಹಾಗಾದ್ರೆ ಪರ್ಯಾಯ ಮಾರ್ಗ ಯಾವುದು?

ಈ ರಸ್ತೆ ಇಂದಿರಾನಗರ ಹಳೆ ಮದ್ರಾಸ್ ರಸ್ತೆ, ಕೆ.ಆರ್. ಪುರಂಗೆ ಓಡಾಡಲು ಮುಖ್ಯವಾಗಿ ಈ ರಸ್ತೆ ಬಳಕೆ ಆಗ್ತಿದೆ. ಆದರೆ ಹೊಸ ವರ್ಷ ಹಿನ್ನೆಲೆ ಈ ರಸ್ತೆ ಬಂದ್ ಇರಲಿದೆ. ಇದಕ್ಕೆ ಪರ್ಯಾಯವಾಗಿ ಅನಿಲ್ ಕುಂಬ್ಳೆ ವೃತ್ತದಿಂದ ಶಿವಾಜಿನಗರ ಕಡೆಗೆ ಬಂದು ಬಲ ತಿರುವು ಪಡೆದು, ಕಬ್ಬನ್ ರಸ್ತೆ ಮಾರ್ಗವಾಗಿ ಬಿಆರ್ ಜಂಕ್ಷನ್ ನಿಂದ ಟ್ರಿನಿಟಿ ಸರ್ಕಲ್ ಕಡೆಗೆ ಬದಲಿ ಮಾರ್ಗ ಕಲ್ಪಿಸಲಾಗಿದೆ.

ಎಂ.ಜಿ.ರಸ್ತೆ (ಕಳೆದ ವರ್ಷದ ಸಂಭ್ರಮಾಚರಣೆಯ ದೃಶ್ಯ)

ಎಂ.ಜಿ.ರಸ್ತೆ (ಕಳೆದ ವರ್ಷದ ಸಂಭ್ರಮಾಚರಣೆಯ ದೃಶ್ಯ)

 • Share this:
  ಬೆಂಗಳೂರು(ಡಿ.30): ಹೊಸ ವರ್ಷ ಅಂದ್ರೆ ಎಂಜಿ ರಸ್ತೆ, ಬ್ರಿಗೇಡ್ ರಸ್ತೆ, ಚರ್ಚ್ ಫುಲ್ಲಾಗಿ ಜನರಿಂದ ತುಂಬಿ ತುಳುಕುತ್ತಿರುತ್ತೆ. ಆದ್ರೆ ಈ ಬಾರಿಯ ಹೊಸ ವರ್ಷದ ಸೆಲೆಬ್ರೇಷನ್ New Year Celebration ಗೆ ಸರ್ಕಾರ ಹಾಗೂ ಪೊಲೀಸ್ ಇಲಾಖೆ ಬ್ರೇಕ್ ಹಾಕಿದೆ. 31ರ ಸಂಜೆ 6ಗಂಟೆಯಿಂದ ಜನವರಿ 1ರ ಬೆಳಗ್ಗಿನ ಜಾವ 6 ಗಂಟೆವರೆಗೆ 144 ಸೆಕ್ಷನ್ ಕೂಡ ಜಾರಿಯಲ್ಲಿ ಇರುತ್ತೆ. ಇದರ ಜೊತೆಗೆ ಎಂಜಿ ರೋಡ್, ಬ್ರಿಗೇಡ್ ರೋಡ್ ಸೇರಿದಂತೆ ಕೇಂದ್ರ ವಿಭಾಗದ ಹಲವು ಮಾರ್ಗಗಳನ್ನು ಬಂದ್ ಮಾಡಲಾಗಿದೆ.

  ಮುಖ್ಯವಾಗಿ ಸೆಂಟರ್ ಆಫ್ ಅಟ್ರ್ಯಾಕ್ಷನ್​ನಂತಿದ್ದ ಎಂಜಿ ರಸ್ತೆ, ಬ್ರಿಗೇಡ್ ರಸ್ತೆ, ಚರ್ಚ್ ಸ್ಟ್ರೀಟ್, ಲ್ಯಾವೆಲ್ಲೆ ರಸ್ತೆ‌ ಸಂಪೂರ್ಣ ಬಂದ್ ಆಗಲಿದೆ. ಇದಕ್ಕೆ ಪರ್ಯಾಯ ಮಾರ್ಗ ವ್ಯವಸ್ಥೆಯನ್ನು ಪೊಲೀಸ್ ಇಲಾಖೆ ಮಾಡಿದೆ. ಅನಿಲ್ ಕುಂಬ್ಳೆ ವೃತ್ತದಿಂದ ಎಂಜಿ ರೋಡ್ ಮೆಟ್ರೋ ಮುಖ್ಯ ರಸ್ತೆ ಸೇರಿದಂತೆ ಮೆಯೋ ಮಾಲ್ ಸಿಗ್ನಲ್​​ವರೆಗೆ ರೋಡ್ ಕ್ಲೋಸ್ ಆಗಿರಲಿದೆ.

  ಈ ರಸ್ತೆ ಇಂದಿರಾನಗರ ಹಳೆ ಮದ್ರಾಸ್ ರಸ್ತೆ, ಕೆ.ಆರ್. ಪುರಂಗೆ ಓಡಾಡಲು ಮುಖ್ಯವಾಗಿ ಈ ರಸ್ತೆ ಬಳಕೆ ಆಗ್ತಿದೆ. ಆದರೆ ಹೊಸ ವರ್ಷ ಹಿನ್ನೆಲೆ ಈ ರಸ್ತೆ ಬಂದ್ ಇರಲಿದೆ. ಇದಕ್ಕೆ ಪರ್ಯಾಯವಾಗಿ ಅನಿಲ್ ಕುಂಬ್ಳೆ ವೃತ್ತದಿಂದ ಶಿವಾಜಿನಗರ ಕಡೆಗೆ ಬಂದು ಬಲ ತಿರುವು ಪಡೆದು, ಕಬ್ಬನ್ ರಸ್ತೆ ಮಾರ್ಗವಾಗಿ ಬಿಆರ್ ಜಂಕ್ಷನ್ ನಿಂದ ಟ್ರಿನಿಟಿ ಸರ್ಕಲ್ ಕಡೆಗೆ ಬದಲಿ ಮಾರ್ಗ ಕಲ್ಪಿಸಲಾಗಿದೆ.

  ಇನ್ನು ಶಾಂತಿನಗರದಿಂದ ಬ್ರಿಗೇಡ್ ರೋಡ್ ಮಾರ್ಗವಾಗಿ ಇಂದಿರಾನಗರಕ್ಕೆ ಹೋಗುವ ಟ್ರಿನಿಟಿ ಸರ್ಕಲ್ ಸಂಪರ್ಕ ಮಾರ್ಗವೂ ಸಂಪೂರ್ಣ ಕ್ಲೋಸ್ ಇರಲಿದೆ. ಜೊತೆಗೆ ಸಂತ ಜೋಸೆಫ್ ಈವಿನಿಂಗ್ ಕಾಲೇಜು ಸಿಗ್ನಲ್ ನಿಂದ ಬ್ರಿಗೇಡ್ ರೋಡ್ ಎರಡನೇ ಸಿಗ್ನಲ್ ಬಳಿ ವರೆಗೂ ಕಂಪ್ಲೀಟ್ ಕ್ಲೋಸ್ ಆಗಲಿದೆ. ಬದಲಿಗೆ ಶಾಂತಿನಗರ ಫುಟ್ಬಾಲ್ ಸ್ಟೇಡಿಯಂ ಮುಖ್ಯ ರಸ್ತೆ  ಪರ್ಯಾಯ ಮಾರ್ಗ ಸಾರ್ವಜನಿಕರು ಬಳಸಿಕೊಳ್ಳಬೇಕಿದೆ.

  ಭಾರತದಲ್ಲಿ 20ಕ್ಕೇರಿದ ರೂಪಾಂತರಿ ಕೊರೋನಾ ಕೇಸ್; ಜನವರಿ 7ರವರೆಗೆ ಇಂಗ್ಲೆಂಡ್ ವಿಮಾನಗಳಿಗೆ ನಿಷೇಧ

  ಮತ್ತೊಂದು ಕಡೆಯಿಂದ, ಎಂಜಿ ರಸ್ತೆಯಿಂದ ಶಿವಾಜಿನಗರ ಬಸ್ ನಿಲ್ದಾಣಕ್ಕೆ ತಲುಪುವ ಮುಖ್ಯ ರಸ್ತೆ ಈಗಾಗಲೇ ನಮ್ಮ ಮೆಟ್ರೊ ಕಾಮಗಾರಿಯಿಂದ ಬದಲಿ ಮಾರ್ಗ ಕಲ್ಪಿಸಲಾಗಿದೆ. ಹೀಗಾಗಿ ಈ ಮಾರ್ಗ ಸಾರ್ವಜನಿಕರಿಗೆ ತೆರೆದಿರಲಿದೆ. ಇದರ ಜೊತೆಗೆ 144 ಸೆಕ್ಷನ್ ಮುಗಿಯುವವರೆಗೆ ಕೆಆರ್ ಸರ್ಕಲ್ ವೃತ್ತದಿಂದ ವಿಧಾನ ಸೌದ ಮುಖ್ಯ ರಸ್ತೆ ಹಾದು‌ ಇಂಡಿಯನ್ ಎಕ್ಸ್‌ಪ್ರೆಸ್ ಸಿಗ್ನಲ್ ಬಲ‌ ತಿರುವು ಪಡೆದು ಶಿವಾಜಿನಗರ ತಲುಪುವುದೇ ವಾಹನ ಸವಾರರಿಗೆ ಸುಗಮ.

  ಇವೆಲ್ಲದರ ಜೊತೆಗೆ ಪಬ್ ಹಾಗೂ ಬಾರ್ ಗಳು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಇರುವ ರೆಸಿಡೆನ್ಸಿ ರಸ್ತೆ ಹಾಗೂ ಲ್ಯಾವೆಲ್ಲೆ ರಸ್ತೆ ಕೂಡ ಕಂಪ್ಲೀಟ್ ಬಂದ್ ಆಗಲಿದೆ. ಆದರೆ ಈ ರಸ್ತೆಯ ಉದ್ದಕ್ಕೆ ಮನೆಗಳು, ಅಪಾರ್ಟ್ ಮೆಂಟ್ ಕೂಡ ಇರುವುದರಿಂದ ಇಲ್ಲಿನ ನಿವಾಸಿಗಳಿಗೆ ಮಾತ್ರ ಈ ರಸ್ತೆಗೆ ಎಂಟ್ರಿ ಇರಲಿದೆ. ಇನ್ನು ಈ ಎಲ್ಲಾ ರಸ್ತೆಗಳಿಗೆ ಬ್ಯಾರಿ‌ಕೇಡ್ ಹಾಕಲಿದ್ದಾರೆ ಪೊಲೀಸರು. ಜೊತೆಗೆ ಅಹಿತಕರ ಘಟನೆ ನಡೆಯದಂತೆ ತಡೆಯಲು ಅಲ್ಲಿಲ್ಲಿ ನಾಕಾಬಂಧಿ ಹಾಗೂ ಪೊಲೀಸ್ ಪ್ಯಾಟ್ರೋಲಿಂಗ್ ವ್ಯವಸ್ಥೆ ಇರಲಿದೆ.

  ಒಟ್ಟಿನಲ್ಲಿ ಎಂಜಿರಸ್ತೆ, ಬ್ರಿಗೇಡ್ ರಸ್ತೆ, ಚರ್ಚ್ ಸ್ಟ್ರೀಟ್ ರಸ್ತೆಗಳು ನಾಳೆ ಸಂಜೆ 6ಗಂಟೆಯಿಂದ ಜನವರಿ ಬೆಳಗ್ಗಿನ ಜಾವ 6ಗಂಟೆವರೆಗೆ ನಿಶ್ಯಬ್ಧವಾಗಲಿದೆ. 144 ಸೆಕ್ಷನ್ ಕೂಡ ಜಾರಿಯಲ್ಲಿರಲಿದೆ. ಉಲ್ಲಂಘಿಸಿದರೆ ಸೂಕ್ತ ಕ್ರಮ ಕೈಗೊಳ್ಳಲು ಬೆಂಗಳೂರು ಪೊಲೀಸ್ ಕಮಿಷನರ್ ಕಮಲ್ ಪಂಥ್ ಸೂಚಿಸಿದ್ದಾರೆ.

  ವರದಿ: ಆಶಿಕ್ ಮುಲ್ಕಿ
  Published by:Latha CG
  First published: