Operation Lotus ಮಾಡುವ ಸಂದರ್ಭ ಬರಲ್ಲ: ಬಹುಮತದ ಸರ್ಕಾರ ರಚನೆ ಎಂದ ಕರಂದ್ಲಾಜೆ

ಶೋಭಾ ಕರಂದ್ಲಾಜೆ, ಕೇಂದ್ರ ಸಚಿವೆ

ಶೋಭಾ ಕರಂದ್ಲಾಜೆ, ಕೇಂದ್ರ ಸಚಿವೆ

Shobha Karandlaje: ಬೂತ್​​ನಲ್ಲಿ ಕಾರ್ಯಕರ್ತರ ಕೊಟ್ಟ ಮಾಹಿತಿ ನೋಡಿದ್ರೆ, ನಾವು ಗೆಲ್ಲುವ ವಿಶ್ವಾಸ ಇದೆ. ನಮ್ಮ ಕಾರ್ಯಕರ್ತರು 120 ರಿಂದ 125 ಸೀಟು ಗೆಲ್ಲುವ ವರದಿ ಕೊಟ್ಟಿದ್ದಾರೆ.

  • Share this:

ಬೆಂಗಳೂರು: ಇಂದು ಖಾಸಗಿ ಹೋಟೆಲ್​ನಲ್ಲಿ ಸುದ್ದಿಗೋಷ್ಠಿ ನಡೆಸಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ (Union Minister Shobha Karandlaje), ಚುನಾವಣೋತ್ತರ ಸಮೀಕ್ಷೆಗಳ (Election Exit Poll) ಬಗ್ಗೆ ಬೇಸರ ಹೊರ ಹಾಕಿದರು. ಮೇ 13ರಂದು ರಾಜ್ಯದ ಜನತೆ ಈ ಸಮೀಕ್ಷೆಗಳನ್ನು ಸುಳ್ಳು ಮಾಡಲಿದ್ದಾರೆ ಎಂದು ಭವಿಷ್ಯ ನುಡಿದರು. ಜನರು ಉತ್ಸಾಹದಿಂದ ಮಾಡಿದ ಮತದಾನ, ಬೂತ್​​ನಲ್ಲಿ ಕಾರ್ಯಕರ್ತರ ಕೊಟ್ಟ ಮಾಹಿತಿ ನೋಡಿದ್ರೆ, ನಾವು ಗೆಲ್ಲುವ ವಿಶ್ವಾಸ ಇದೆ. ನಮ್ಮ ಕಾರ್ಯಕರ್ತರು 120 ರಿಂದ 125 ಸೀಟು ಗೆಲ್ಲುವ ವರದಿ ಕೊಟ್ಟಿದ್ದಾರೆ. ಚುನಾವಣೋತ್ತರ ಸಮೀಕ್ಷೆಯಲ್ಲಿ ಬೆಂಗಳೂರಲ್ಲಿ ಕಡಿಮೆ ಬಂದಿದೆ. ಆದರೆ ಫಲಿತಾಂಶದಿಂದ ಬೆಂಗಳೂರಲ್ಲಿ ಹೆಚ್ಚು ಸೀಟು ಗಳಿಸುವ ವಿಶ್ವಾಸ ಇದೆ ಎಂದು ಹೇಳಿದರು.


ಆಪರೇಷನ್ ಕಮಲ ಮಾಡುವ ಸಂದರ್ಭ ಬರಲ್ಲ


ಬಹುಮತದ ಸರ್ಕಾರ ರಚನೆ ಮಾಡ್ತೀವಿ ಎಂದು ಹೇಳಿದ್ದೇವೆ. ನಮ್ಮ ಮತ್ತು ಯಡಿಯೂರಪ್ಪರ ಅವರ ವರದಿ ಯಾವತ್ತಿಗೂ ಸುಳ್ಳು ಆಗಿಲ್ಲ. ಯಡಿಯೂರಪ್ಪರ ಮಾತಿನಂತೆ 120-125 ಸೀಟು ಗೆದ್ದೇ ಗೆಲ್ತೀವಿ‌. ಆಪರೇಷನ್ ಕಮಲ ಮಾಡುವ ಸಂದರ್ಭ ಖಂಡಿತ ಬರಲ್ಲ. ಅಭಿವೃದ್ಧಿಗಾಗಿ ಜನರು ಈ ಬಾರಿ ಬಹುಮತದ ಸರ್ಕಾರ ಕೊಡ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸುತ್ತಾರೆ.




ಸೋಮಣ್ಣ ಒಳ್ಳೆಯ ಕೆಲಸ ಮಾಡಿದ್ದಾರೆ


ಮಾಜಿ ಸಿಎಂ ಸಿದ್ದರಾಮಯ್ಯ ಸೋಲುವ ಬಗ್ಗೆ ನನಗೆ ಗೊತ್ತಿಲ್ಲ. ಅದನ್ನು ವರುಣಾ ಕ್ಷೇತ್ರದ ಜನರು ಹೇಳಬೇಕು. ಆದರೆ ವರುಣಾದಲ್ಲಿ ಸೋಮಣ್ಣ ಅತ್ಯಂತ ಚೆನ್ನಾಗಿ ಕೆಲಸ ಮಾಡಿದ್ದಾರೆ. ಸಿದ್ದರಾಮಯ್ಯ ಅವರನ್ನು ಕಟ್ಟಿ ಹಾಕುವ ಕೆಲಸವನ್ನು ಸೋಮಣ್ಣ ಸಮರ್ಥವಾಗಿ ಮಾಡಿದ್ದಾರೆ.




ಇದನ್ನೂ ಓದಿ:  Siddaramaiah: ಕಾರ್ಯಕರ್ತರು, ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ ಮಾಜಿ ಸಿಎಂ


ಮೋದಿಯವರಿಗೆ ಜನರು ಆಕರ್ಷಣೆ ಆಗಿದ್ದಾರೆ. ಅದಕ್ಕಾಗಿ ಇಷ್ಟೊಂದು ಮತ ಗಳಿಸುವ ನಿರೀಕ್ಷೆ ಮಾಡಿದ್ದೇವೆ. ಮೋದಿಯವರ ಶಕ್ತಿಯಿಂದ ಗೆಲ್ಲುತ್ತೇವೆ ಎಂದು ಹೇಳಿದರು.

First published: