Puttur: ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರೆಯಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ನೋ ಎಂಟ್ರಿ

ಇದೀಗ  ಜಿಲ್ಲೆಯ ಪ್ರಮುಖ ಹಾಗೂ ಅತೀ ದೊಡ್ಡ ಜಾತ್ರೆ ಎಂದೇ ಹೆಸರುವಾಸಿಯಾಗಿರುವ ಪುತ್ತೂರಿನ ಮಹಾಲಿಂಗೇಶ್ವರ ದೇವಸ್ಥಾನದ ಬಾರಿಯಾಗಿದ್ದು, ಸುಮಾರು 10 ದಿನಗಳ ಕಾಲ ನಡೆಯಲಿರುವ ಈ ಜಾತ್ರೆಯಲ್ಲಿ ವ್ಯಾಪಾರಕ್ಕಾಗಿ ಊರ ಹಾಗೂ ಪರವೂರಿನ ವ್ಯಾಪಾರಿಗಳು ಇಲ್ಲಿ ಬಂದು ಸೇರುತ್ತಾರೆ.

ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನ

ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನ

  • Share this:
ರಾಜ್ಯದಲ್ಲಿ ಹಿಜಾಬ್ ಬಳಿಕ ನಡೆದ ಬೆಳವಣಿಗೆಯ ಬಳಿಕ ದಕ್ಷಿಣಕನ್ನಡ (Dakshina Kannada) ಜಿಲ್ಲೆಯ ಹಲವು ದೇವಸ್ಥಾನಗಳ (Temple) ಜಾತ್ರೋತ್ಸವದಲ್ಲಿ ಹಿಂದೂ ಧರ್ಮದವರನ್ನು ಹೊರತುಪಡಿಸಿ ಅನ್ಯಧರ್ಮೀಯರಿಗೆ ವ್ಯಾಪಾರಕ್ಕೆ ಅವಕಾಶವನ್ನು ನಿಶೇಧಿಸಲಾಗುತ್ತಿದೆ. ಈಗಾಗಲೇ ಜಿಲ್ಲೆಯ ಹಲವು ಪ್ರಮುಖ ದೇವಸ್ಥಾನಗಳ ಜಾತ್ರೋತ್ಸವದಲ್ಲಿ ಈ ನಿಶೇಧ ಜಾರಿಯಾಗಿದ್ದು, ಜಿಲ್ಲೆಯ ಅತ್ಯಂತ ದೊಡ್ಡ ಜಾತ್ರೆ ಎಂದೇ ಹೆಸರುವಾಸಿಯಾಗಿರುವ ಪುತ್ತೂರು ಮಹಾಲಿಂಗೇಶ್ವರ (Puttur Mahalingeshwara) ದೇವಸ್ಥಾನದ ಜಾತ್ರೆಯಲ್ಲಿ ಈ ಬಾರಿ ಅನ್ಯಮತೀಯರಿಗೆ ಕಟ್ಟುನಿಟ್ಟಿನ ನಿಶೇಧ ಹೇರಲಾಗಿದೆ. ಜಾತ್ರೋತ್ಸವದ ಪ್ರಯುಕ್ತ ವ್ಯಾಪಾರಕ್ಕಾಗಿ ಜಾತ್ರೆ ಗದ್ದೆಯ ಏಲಂ ಪ್ರಕ್ರಿಯೆಯೂ ನಡೆದಿದ್ದು, ಯಾವುದೇ ಕಾರಣಕ್ಕೂ ಅನ್ಯಮತೀಯರಿಗೆ ಸಂಪೂರ್ಣ ನಿಶೇಧ ಹೇರಲಾಗಿದೆ.

ರಾಜ್ಯದಲ್ಲಿ ನಡೆದ ಹಿಜಾಬ್ ಪ್ರಕರಣ, ಬಳಿಕ ಹೈಕೋರ್ಟ್ ತೀರ್ಪು ಹೀಗೆ ಹಲವು ರೀತಿಯ ವಿದ್ಯಾಮಾನಗಳು ನಡೆದಿದ್ದು, ಈ ವಿದ್ಯಾಮಾನಗಳು ಸಮಾಜದಲ್ಲಿ ಹಲವು ರೀತಿಯ ಬದಲಾವಣೆಗೂ ಕಾರಣೀಭೂತವಾಗಿದೆ. ಹಿಜಾಬ್ ವಿರುದ್ಧವಾಗಿ ತೀರ್ಪು ನೀಡಿದ ರಾಜ್ಯ ಹೈಕೋರ್ಟ್ ತೀರ್ಪನ್ನು ವಿರೋಧಿಸಿ ಮುಸ್ಲಿಂ ಸಂಘಟನೆಗಳು ಕರೆ ನೀಡಿದ ಕರ್ನಾಟಕ ಬಂದ್ ಗೆ ಎಲ್ಲಾ ಮುಸ್ಲಿಂ ವ್ಯಾಪಾರಿಗಳು ಬೆಂಬಲ ಸೂಚಿಸಿದ್ದರು.

ಅಲ್ಲದೆ ಒಂದು ದಿನ ತಮ್ಮ ವ್ಯಾಪಾರ-ವಹಿವಾಟುಗಳನ್ನು ಬಂದ್ ಮಾಡುವ ಮೂಲಕ ಹಿಜಾಬ್ ಪರವಾಗಿ ತಮ್ಮ ಸಹಾನುಭೂತಿ ವ್ಯಕ್ತಪಡಿಸಿದ್ದರು. ಈ ಬಂದ್ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಹಲವು ಚರ್ಚೆಗೂ ಕಾರಣವಾಗಿದ್ದು, ಬಂದ್ ಕರೆಯ ಬಳಿಕ ಮುಸ್ಲಿಂ ವ್ಯಾಪಾರಿಗಳನ್ನು ವಿರೋಧಿಸುವ ಪ್ರಕ್ರಿಯೆಗಳು ಆರಂಭಗೊಂಡಿದ್ದವು.

ಅನ್ಯಧರ್ಮೀಯರ ಪಾಲ್ಗೊಳ್ಳುವಿಕೆಗೆ ವಿರೋಧ

ಪ್ರಮುಖವಾಗಿ ಜಿಲ್ಲೆಯ ಹಲವು ದೇವಸ್ಥಾನಗಳಲ್ಲಿ ನಡೆಯುವ ಜಾತ್ರೋತ್ಸವದಲ್ಲಿ ಹಿಂದೂ ಧರ್ಮದವರನ್ನು ಹೊರತುಪಡಿಸಿ ಅನ್ಯಧರ್ಮೀಯರ ಪಾಲ್ಗೊಳ್ಳುವಿಕೆಗೆ ವಿರೋಧ ವ್ಯಕ್ತವಾಗಿತ್ತು. ಅಲ್ಲದೆ ಜಾತ್ರೋತ್ಸವ ಸಂದರ್ಭದಲ್ಲಿ ದೇವಸ್ಥಾನಕ್ಕೆ ಸಂಬಂಧಪಟ್ಟ ಜಾಗದಲ್ಲಿ ಅನ್ಯಮತೀಯರಿಗೆ ವ್ಯಾಪಾರಕ್ಕೆ ಅವಕಾಶವನ್ನೂ ನಿರಾಕರಿಸಲಾಗಿತ್ತು.

ಜಿಲ್ಲೆಯ ಪ್ರಮುಖ ಹಾಗೂ ಅತೀ ದೊಡ್ಡ ಜಾತ್ರೆ

ಇದೀಗ  ಜಿಲ್ಲೆಯ ಪ್ರಮುಖ ಹಾಗೂ ಅತೀ ದೊಡ್ಡ ಜಾತ್ರೆ ಎಂದೇ ಹೆಸರುವಾಸಿಯಾಗಿರುವ ಪುತ್ತೂರಿನ ಮಹಾಲಿಂಗೇಶ್ವರ ದೇವಸ್ಥಾನದ ಬಾರಿಯಾಗಿದ್ದು, ಸುಮಾರು 10 ದಿನಗಳ ಕಾಲ ನಡೆಯಲಿರುವ ಈ ಜಾತ್ರೆಯಲ್ಲಿ ವ್ಯಾಪಾರಕ್ಕಾಗಿ ಊರ ಹಾಗೂ ಪರವೂರಿನ ವ್ಯಾಪಾರಿಗಳು ಇಲ್ಲಿ ಬಂದು ಸೇರುತ್ತಾರೆ.

ಸ್ಥಳದ ಏಲಂ ಪ್ರಕ್ರಿಯಲ್ಲಿ ಕೇವಲ ಹಿಂದೂ ವ್ಯಾಪಾರಿಗಳಿಗೆ ಮಾತ್ರ ಅವಕಾಶ

ಕಳೆದ ನಾಲ್ಕೈದು ವರ್ಷಗಳಿಂದ ಈ ಜಾತ್ರೋತ್ಸವದಲ್ಲಿ ಹಿಂದೂಯೇತರರಿಗೆ ವ್ಯಾಪಾರಕ್ಕೆ ಅವಕಾಶವನ್ನು ನಿರಾಕರಿಸಲಾಗಿತ್ತಾದರೂ, ಕಟ್ಟುನಿಟ್ಟಿನ ನಿಯಮ ಜಾರಿಯಲ್ಲಿಲ್ಲದ ಕಾರಣ ಅನ್ಯಮತೀಯರೂ ವ್ಯಾಪಾರ ನಡೆಸಿ ಹೋಗುತ್ತಿದ್ದರು. ಆದರೆ ಈ ಬಾರಿ ದೇವಸ್ಥಾನದ ವತಿಯಿಂದಲೇ ಕಟ್ಟು ನಿಟ್ಟಿನ ನಿಯಮಗಳನ್ನು ಜಾರಿಗೆ ತರಲಾಗಿದ್ದು, ವ್ಯಾಪಾರಕ್ಕಾಗಿ ಸ್ಥಳದ ಏಲಂ ಪ್ರಕ್ರಿಯಲ್ಲಿ ಕೇವಲ ಹಿಂದೂ ವ್ಯಾಪಾರಿಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.

ಇದನ್ನೂ ಓದಿ: Bengaluru: ಇನ್ಮುಂದೆ ಮಾಸ್ಕ್ ಹಾಕದಿದ್ರೂ ದಂಡ ವಿಧಿಸಲ್ವಾ? ಕೋವಿಡ್ 19 ನಿಯಮಗಳಿಗೆ ಬೀಳುತ್ತಾ ಬ್ರೇಕ್!?

ಎಪ್ರಿಲ್ 10 ರಿಂದ ಎಪ್ರಿಲ್ 19 ರ ವರೆಗೆ ಜಾತ್ರೆ

ಧಾರ್ಮಿಕ ಧತ್ತಿ ಇಲಾಖೆಯ ವ್ಯಾಪ್ತಿಗೆ ಬರುವ ಈ ದೇವಸ್ಥಾನದಲ್ಲಿ ಈ ಬಾರಿ ಎಪ್ರಿಲ್ 10 ರಿಂದ ಎಪ್ರಿಲ್ 19 ರ ವರೆಗೆ ಜಾತ್ರೆ ನಡೆಯಲಿದ್ದು,  ವ್ಯಾಪಾರಿಗಳಿಗೆ ದೇವಸ್ಥಾನದ ವತಿಯಿಂದಲೇ ಗುರುತಿನ ಚೀಟಿ ನೀಡುವ ವ್ಯವಸ್ಥೆಯನ್ನು ಮಾಡಲಾಗಿದೆ. ಏಲಂನಲ್ಲಿ ಅಂಗಡಿಗಳನ್ನು ಪಡೆದವರು ಹಾಗೂ ಅವರ ಪರವಾಗಿ ಅಂಗಡಿಗಳಲ್ಲಿ ನಿಲ್ಲುವವರು ತಮ್ಮ ಆಧಾರ್ ಕಾರ್ಡ್ ಹಾಗೂ ಫೋಟೋಗಳನ್ನು ಜಾತ್ರೋತ್ಸವಕ್ಕೆ ಮುಂಚಿತವಾಗಿಯೇ ದೇವಸ್ಥಾನದ ಕಛೇರಿಗೆ ನೀಡಬೇಕಾಗಿದ್ದು, ಜಾತ್ರೆಯ ಸಂದರ್ಭದಲ್ಲಿ ಅಂಗಡಿದಾರರಿಗೆ ಗುರುತಿನ ಚೀಟಿಯನ್ನು ವಿತರಿಸಲು ಕ್ರಮ ಕೈಗೊಳ್ಳಲಾಗಿದೆ.

ಕಳೆದ ಕೆಲವು ವರ್ಷಗಳಿಂದ ಅನ್ಯಮತೀಯರಿಗೆ ವ್ಯಾಪಾರ ಅವಕಾಶವಿಲ್ಲ

ಕಳೆದ ನಾಲ್ಕೈದು ವರ್ಷಗಳಿಂದ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರೋತ್ಸವದಲ್ಲಿ ಅನ್ಯಮತೀಯರಿಗೆ ವ್ಯಾಪಾರಕ್ಕೆ ಅವಕಾಶವನ್ನು ನಿರಾಕರಿಸಲಾಗಿತ್ತು. ಆದರೆ ಜಾತ್ರೋತ್ಸವದ ಪ್ರಯುಕ್ತ ನಡೆಯುವ ದೇವರ ರಥೋತ್ಸವದ ಸಂದರ್ಭದಲ್ಲಿ ಸಿಡಿಮದ್ದು ಪ್ರದರ್ಶನಕ್ಕೆ ಮುಸ್ಲಿಂ ಪಂಗಡದವರನ್ನೇ ಆಯ್ಕೆ ಮಾಡಲಾಗುತ್ತಿತ್ತು.

ಇದನ್ನೂ ಓದಿ: Kodagu: ಕೊಡವರಿಗೆ ಟಿಪ್ಪು ಮೇಲೆ ಏಕೆ ಸಿಟ್ಟು; ದೇವಟುಪರಂಬುವಿನ ಘಟನೆ ಏನು?

ಆದರೆ ಈ ಬಾರಿ ಈ ವ್ಯವಸ್ಥೆಯನ್ನೂ ಬದಲಿಸಲಾಗಿದ್ದು, ಸಿಡಿಮದ್ದು ಪ್ರದರ್ಶನ ವ್ಯವಸ್ಥೆಯನ್ನೂ ಹಿಂದೂಗಳಿಂದಲೇ ನಿರ್ವಹಿಸಲು ತೀರ್ಮಾನಿಸಲಾಗಿದೆ. ದೇವಸ್ಥಾನದ ನಿಯಮಗಳನ್ನು ಮೀರಿ ವ್ಯಾಪಾರ ನಡೆಸಿದ್ದೇ ಆದಲ್ಲಿ ಅಂತವರ ವಿರುದ್ಧ ಕ್ರಮಕ್ಕೂ ಚಿಂತನೆ ನಡೆಸಲಾಗಿದೆ.

ಒಟ್ಟಾರೆ ಹಿಜಾಬ್ ಬಳಿಕ ಸಮಾಜದಲ್ಲಿ ಒಂದು ರೀತಿಯಲ್ಲಿ ವ್ಯಾಪಾರಿ ವಿಭಜನೆ ಆರಂಭಗೊಂಡಿದ್ದು, ಈ ವ್ಯವಸ್ಥೆ ಯಾವ ಹಂತಕ್ಕೆ ತಲುಪಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.
Published by:Divya D
First published: