Covid19 Restrictions: ಮಾರ್ಚ್ 31 ರಿಂದ ಕೋವಿಡ್ 19 ನಿರ್ಬಂಧ ನಿಯಮಗಳು ಇರೋದಿಲ್ಲ, ಮಾಸ್ಕ್ ಹಾಕೋದು ಮಾತ್ರ ಕಡ್ಡಾಯ

ಕೊವಿಡ್ 19 ನಿರ್ಬಂಧ ನಿಯಮಗಳಿಗೆ ವಿಪತ್ತು ನಿರ್ವಹಣಾ ಕಾಯ್ದೆಅನ್ವಯಿಸುವ ಅಗತ್ಯವಿಲ್ಲ ಎಂದು  ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ನಿರ್ಧರಿಸಿದೆ. ಆದರೆ ಮಾಸ್ಕ್​ವೊಂದನ್ನು ಕಡ್ಡಾಯವಾಗಿ ಧರಿಸಬೇಕು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ದೇಶದಾದ್ಯಂತ ಕೊರೊನಾ (Corona) ಪ್ರಕರಣ ಸಂಖ್ಯೆ ಬಹುತೇಕ ಇಳಿಕೆಯಾಗಿದೆ. ಹೀಗಾಗಿ ಜನರು ಸಹ ನಿರಾಳರಾಗಿ ಓಡಾಡಿಕೊಂಡು ಇದ್ದಾರೆ. ಕೊವಿಡ್​ 19 ನಿಯಂತ್ರಣಕ್ಕಾಗಿ (Covid19 Restriction) ಕೇಂದ್ರ ಸರ್ಕಾರದಿಂದ ಹೇರಲಾಗಿದ್ದ ಎಲ್ಲ ನಿರ್ಬಂಧಗಳನ್ನೂ ತೆಗೆದುಹಾಕಲು ಕೇಂದ್ರ ಸರ್ಕಾರ ಮುಂದಾಗಿದೆ. ಮಾರ್ಚ್​ 31 ರಿಂದ ಕೊವಿಡ್​ ಹರಡದಂತೆ ಹೇರಲಾಗಿದ್ದ ಎಲ್ಲಾ ನಿರ್ಬಂಧಗಳನ್ನು ತೆಗೆದುಹಾಕುವುದಾಗಿ ಗೃಹ ಸಚಿವಾಲಯ (Home Ministry) ತಿಳಿಸಿದೆ. ಅಷ್ಟೇ ಅಲ್ಲ, ಕೊವಿಡ್ 19 ಸುರಕ್ಷತಾ ಕ್ರಮಗಳಿಗೆ ಸಂಬಂಧಪಟ್ಟಂತೆ ವಿಪತ್ತು ನಿರ್ವಹಣಾ ಕಾಯ್ದೆಯೂ ಅನ್ವಯಿಸುವುದಿಲ್ಲ (ಕೊವಿಡ್​ 19 ನಿರ್ಬಂಧ ಉಲ್ಲಂಘಿಸಿದರೆ ವಿಪತ್ತು ನಿರ್ವಹಣಾ ಕಾಯ್ದೆಯಡಿ ಪ್ರಕರಣ ದಾಖಲಾಗುವುದಿಲ್ಲ) ಎಂದು ಸ್ಪಷ್ಟಪಡಿಸಿದೆ. ಆದರೆ ಮಾಸ್ಕ್​ ಮಾತ್ರ ಕಡ್ಡಾಯವಾಗಿದೆ.  ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ (Mask)​ ಧರಿಸಿಕೊಳ್ಳೋದು ಕಡ್ಡಾಯ ಎಂದೂ ಕೇಂದ್ರ ಗೃಹ ಇಲಾಖೆ ಸ್ಪಷ್ಟಪಡಿಸಿದೆ.

ಭಾರದಲ್ಲಿ ಕೊರೊನಾ ಕೇಸ್​ ಇಳಿಕೆ

ಭಾರತದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಇಳಿಕೆಯಾಗಿದೆ. ಜನರು ಕೂಡ ಕೊರೊನಾ ಮಹಾಮಾರಿ ಭಯದಿಂದ ಹೊರಬಂದಿದ್ದಾರೆ. ಜತೆಗೆ ಕೊವಿಡ್​ 19 ಲಸಿಕೆ ಅಭಿಯಾನವೂ ಅಚ್ಚುಕಟ್ಟಾಗಿ ನಡೆಯುತ್ತಿದೆ. ಮೂರನೇ ಅಲೆಗೆ ಕಾರಣವಾಗಿದ್ದ ಒಮಿಕ್ರಾನ್​ ಸೋಂಕಿನ ಪ್ರಸರಣ ತಗ್ಗಿದೆ. ಹಾಗಿದ್ದಾಗ್ಯೂ ಚೀನಾ, ದಕ್ಷಿಣ ಕೊರಿಯಾ, ಯುಕೆ, ಸಿಂಗಾಪುರ, ಫ್ರಾನ್ಸ್​, ಜರ್ಮನಿಗಳಲ್ಲಿ ಮತ್ತೆ ಹೊಸದಾಗಿ ಕೊವಿಡ್ 19 ಪ್ರಸರಣ ಉತ್ತುಂಗಕ್ಕೇರಿದ್ದು, ಲಾಕ್​ಡೌನ್​​ನಂಥ ನಿರ್ಬಂಧಗಳನ್ನು ಹೇರಲಾಗುತ್ತಿದೆ.  ಆದರೂ ಕೂಡ ಕೇಂದ್ರ ಸರ್ಕಾರ ಎಲ್ಲ ರೀತಿಯ ಕೊವಿಡ್ 19 ನಿರ್ಬಂಧ ಮಾರ್ಗಸೂಚಿಗಳನ್ನು ಮಾರ್ಚ್​ 31ರಿಂದ ತೆಗೆದುಹಾಕುವುದಾಗಿ ಘೋಷಿಸಿದೆ.

ಕೊವಿಡ್ 19 ನಿರ್ಬಂಧಕ್ಕೆ ಬಿತ್ತು ಬ್ರೇಕ್​

ನಿರ್ಬಂಧ ತೆಗೆದುಹಾಕುವ ಬಗ್ಗೆ ಕೇಂದ್ರ ಗೃಹ ಇಲಾಖೆ ಕಾರ್ಯದರ್ಶಿ ಅಜಯ್ ಭಲ್ಲಾ ಸಹಿ ಇರುವ ಪ್ರಕಟಣೆ ಬಿಡುಗಡೆ ಮಾಡಿದ್ದು, ಕೊವಿಡ್ 19 ನಿರ್ಬಂಧ ನಿಯಮಗಳಿಗೆ ವಿಪತ್ತು ನಿರ್ವಹಣಾ ಕಾಯ್ದೆಅನ್ವಯಿಸುವ ಅಗತ್ಯವಿಲ್ಲ ಎಂದು  ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ನಿರ್ಧರಿಸಿದೆ. ಆದರೆ ಮಾಸ್ಕ್​ವೊಂದನ್ನು ಕಡ್ಡಾಯವಾಗಿ ಧರಿಸಬೇಕು.

ಇದನ್ನೂ ಓದಿ: Coronavirus: 2021ರ ನಂತರ ಚೀನಾದಲ್ಲಿ ಮೊದಲ ಕೊರೋನಾ ಸಾವು, ಜಾಗತಿಕವಾಗಿ ವೈರಸ್ ದಿಢೀರ್ ಏರಿಕೆ

ಇನ್ನು ಕೈಗಳನ್ನು ಸ್ವಚ್ಛಗೊಳಿಸಿಕೊಳ್ಳುವುದು, ಲಸಿಕೆ ಹಾಕಿಸಿಕೊಳ್ಳುವುದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿ ಎಂದು ಹೇಳಲಾಗಿದೆ.  ಎಲ್ಲ ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳೂ ಈ  ಪ್ರಕಟಣೆಯನ್ನು ಪರಿಗಣಿಸಬೇಕು. ಈ ಹಿಂದೆ ಕೊವಿಡ್​ 19 ನಿಯಂತ್ರಣಕ್ಕಾಗಿ ವಿಪತ್ತು ನಿರ್ವಹಣಾ ಕಾಯ್ದೆ 2005ರಡಿ ವಿಧಿಸಲಾಗಿದ್ದ ಮಾರ್ಗಸೂಚಿಗಳನ್ನು ರದ್ದು ಮಾಡಬಹುದು ಎಂದೂ ಉಲ್ಲೇಖಿಸಲಾಗಿದೆ.

ಆಗಸ್ಟ್​ನಲ್ಲಿ ಕೊರೊನಾ 4ನೇ ಅಲೆ ಫಿಕ್ಸ್  ಸುಧಾಕರ್​ ಹೇಳಿಕೆ

ಬೆಂಗಳೂರು : ಕೊರೊನಾ (Corona) ಮಹಾಮಾರಿ ಹೋಗೇಬಿಡ್ತು ಅನ್ನೋ ಹಾಗೇ ಜನರೆಲ್ಲಾ ನಿರಾಳರಾಗಿದ್ದಾರೆ. ಎಷ್ಟೋ ಜನ ಮಾಸ್ಕ್ (Mask)​ ಹಾಕಿಕೊಳ್ಳದೆ ಓಡಾಡುತ್ತಾರೆ. ಆಗಸ್ಟ್​ ಕೋವಿಡ್ ನಾಲ್ಕನೇ ಅಲೆ ಆಗಸ್ಟ್  ವೇಳೆಗೆ ಕಾಣಿಸಿಕೊಳ್ಳುವ ಮುನ್ಸೂಚನೆ (Forecast) ಇದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಸುಧಾಕರ್ (Dr. Sudhakar) ತಿಳಿಸಿದ್ದಾರೆ.

ವಿಧಾನ ಪರಿಷತ್​ನ ಶೂನ್ಯ ವೇಳೆಯಲ್ಲಿ ಬಿಜೆಪಿ ಸದಸ್ಯ ಶಶೀಲ್ ನಮೋಶಿ (Shashil Namoshi) ಅವರ ಪ್ರಸ್ತಾಪಕ್ಕೆ ಉತ್ತರ ನೀಡಿದ ಸಚಿವರು, ಕೊರೊನಾದ ರೂಪಾಂತರ ಉಪತಳಿ ಬಿ.ಎ.2 ಮೊದಲು ಫಿಲಿಫೈನ್ಸ್​ನಲ್ಲಿ ಕಾಣಿಸಿಕೊಂಡಿತ್ತು. ನಂತರ 40 ದೇಶಗಳಲ್ಲಿ ಕಾಣಿಸಿಕೊಂಡಿದೆ. ಈ ಮೊದಲು ಮೂರನೆ ಅಲೆ ಕಾಣಿಸಿಕೊಳ್ಳುವ ಮುನ್ಸೂಚನೆ ನೀಡಿದ ಸಂಸ್ಥೆಯೇ ನಾಲ್ಕನೆ ಅಲೆಯ ಮುನ್ಸೂಚನೆಯನ್ನು ನೀಡಿದೆ ಎಂದಿದ್ದಾರೆ.

ಕೊರೊನಾ 4ನೇ ಅಲೆ ಫಿಕ್ಸ್

 ಬಹುತೇಕ ಆಗಸ್ಟ್  ನಲ್ಲಿ ಕೋವಿಡ್ ನಾಲ್ಕನೆ ಅಲೆ ಬರುವ ಮುನ್ಸೂಚನೆಯನ್ನ ಕೆಲ ಸಂಸ್ಥೆಗಳು ನೀಡಿದೆ ಎಂದು ಹೇಳಿದರು. ನಮ್ಮಲ್ಲಿ ಲಸಿಕಾ ಅಭಿಯಾನ ಉತ್ತಮವಾಗಿದೆ. ಹಾಗಾಗಿ ನಾಲ್ಕನೆ ಅಲೆ ಎದುರಾದರೂ ಸಾರ್ವಜನಿಕರು ಹೆದರುವ ಅಗತ್ಯ ಇಲ್ಲ. ರಾಜ್ಯದಲ್ಲಿ 1.25 ಕೋಟಿ ಡೋಸ್ ಲಸಿಕೆ ನೀಡಿದೆ. ಬೂಸ್ಟರ್ ಲಸಿಕೆಯನ್ನು ನೀಡಲಾಗುತ್ತಿದೆ. 12 ವರ್ಷ ಮೇಲ್ಪಟ್ಟ ಮಕ್ಕಳಿಗೂ ಲಸಿಕೆ ಕೊಡಿಸಲು ಮಕ್ಕಳ ಪೋಷಕರ ಮನವೋಲಿಸಲಾಗುವುದು ಎಂದು ಹೇಳಿದರು.

ಇದನ್ನೂ ಓದಿ: Coronavirus: ಇಸ್ರೇಲ್‌ನಲ್ಲಿ ಪತ್ತೆಯಾಗಿದೆಯಂತೆ ಕೋವಿಡ್‌ನ ಹೊಸ ರೂಪಾಂತರಿ! ಲಕ್ಷಣಗಳು ಹೇಗಿವೆ ಗೊತ್ತಾ?

ಮುನ್ನೆಚ್ಚರಿಕೆ ಕ್ರಮ ಅತ್ಯಗತ್ಯ

ಲಸಿಕಾಕರಣ ಕೋವಿಡ್ಅನ್ನು ತಡೆಯುತ್ತದೆ. ಆದರೂ ಕೋವಿಡ್ ತಡೆಯುವ ಮುನ್ನೆಚರಿಕೆ ಕ್ರಮಗಳನ್ನು ಅನುಸರಿಸುವುದು ಅಗತ್ಯ ಇದೆ. ಒಳಾಂಗಣದಲ್ಲಿ ಮಾಸ್ಕ ಕಡ್ಡಾಯ ಮಾಡುವ ಚಿಂತನೆಯನ್ನು ಸರ್ಕಾರ ನಡೆಸಿದೆ. ಶೀಘ್ರವೇ ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಸಭೆ ಈ ಬಗ್ಗೆ ನಡೆಸಿ ನಿರ್ಧರಿಸಲಾಗುವುದು ಎಂದು ಹೇಳಿದರು.
Published by:Pavana HS
First published: