ಸೋತವರಿಗೆ ಸಚಿವ ಸ್ಥಾನ ಇಲ್ಲ ಎಂದು ಪರೋಕ್ಷವಾಗಿ ಹೇಳಿದ ಡಿಸಿಎಂ ಅಶ್ವತ್ಥ ನಾರಾಯಣ

ಎಲ್ಲರ ಜೊತೆ ಚರ್ಚಿಸಿ ಯಾರನೆಲ್ಲಾ ಮಂತ್ರಿ ಮಾಡಬೇಕು ಎಂಬುದನ್ನು ಸಿಎಂ ತೀರ್ಮಾನ ಮಾಡುತ್ತಾರೆ. ಸೂಕ್ತ ದಿನಾಂಕವನ್ನೂ ಅವರೇ ನಿರ್ಧರಿಸುತ್ತಾರೆ. ಸಂಪುಟ ರಚನೆ ಮಾಡಲು ಮುಖ್ಯಮಂತ್ರಿಗೆ ಅನುಮತಿ ಸಿಕ್ಕಿದೆ. ಒಂದೆಡೆ ದೆಹಲಿ ಚುನಾವಣೆ ಇದೆ. ಅಧಿವೇಶನ ಇದೆ. ಎಲ್ಲವನ್ನೂ ನೋಡಿ ಸೂಕ್ತ ದಿನಾಂಕ ನಿಗದಿ ಮಾಡುತ್ತಾರೆ ಎಂದು ಹೇಳಿದರು.

ಡಿಸಿಎಂ ಅಶ್ವತ್ಥ್ ನಾರಾಯಣ.

ಡಿಸಿಎಂ ಅಶ್ವತ್ಥ್ ನಾರಾಯಣ.

 • Share this:
  ಬೆಂಗಳೂರು: ಚುನಾವಣೆಯಲ್ಲಿ ಆಯ್ಕೆ ಆಗಿಲ್ಲ ಅಂದರೆ ಮಂತ್ರಿ ಸ್ಥಾನ ಇಲ್ಲ ಅಂತ ಸುಪ್ರೀಂಕೋರ್ಟ್ ತೀರ್ಪು ಹೇಳಿದೆ ಎಂದು ಡಿಸಿಎಂ ಅಶ್ವತ್ಥ ನಾರಾಯಣ ಹೇಳುವ ಮೂಲಕ ಸೋತವರಿಗೆ ಸಚಿವ ಸ್ಥಾನ ಇಲ್ಲ ಎಂದು ಪರೋಕ್ಷವಾಗಿ ಹೇಳಿದ್ದಾರೆ.  

  ಕೆ ಕೆ ಗೆಸ್ಟ್ ಹೌಸ್​ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿಎಂ ಅಶ್ವತ್ಥ ನಾರಾಯಣ,  ಸಿಎಂ ಈಗಾಗಲೇ ದೆಹಲಿಗೆ ಹೋಗಿದ್ದಾರೆ. ಹೊಸ ಅಧ್ಯಕ್ಷರಿಗೆ ಶುಭಾಶಯ ಕೋರಿದ ಬಳಿಕ ಸಂಪುಟ ವಿಸ್ತರಣೆ ಬಗ್ಗೆ ಚರ್ಚೆ ಮಾಡಿ ಬರುತ್ತಾರೆ. ಎಲ್ಲರ ಜೊತೆ ಚರ್ಚಿಸಿ ಯಾರನೆಲ್ಲಾ ಮಂತ್ರಿ ಮಾಡಬೇಕು ಎಂಬುದನ್ನು ಸಿಎಂ ತೀರ್ಮಾನ ಮಾಡುತ್ತಾರೆ. ಸೂಕ್ತ ದಿನಾಂಕವನ್ನೂ ಅವರೇ ನಿರ್ಧರಿಸುತ್ತಾರೆ. ಸಂಪುಟ ರಚನೆ ಮಾಡಲು ಮುಖ್ಯಮಂತ್ರಿಗೆ ಅನುಮತಿ ಸಿಕ್ಕಿದೆ. ಒಂದೆಡೆ ದೆಹಲಿ ಚುನಾವಣೆ ಇದೆ. ಅಧಿವೇಶನ ಇದೆ. ಎಲ್ಲವನ್ನೂ ನೋಡಿ ಸೂಕ್ತ ದಿನಾಂಕ ನಿಗದಿ ಮಾಡುತ್ತಾರೆ ಎಂದು ಹೇಳಿದರು.

  ಸಾರ್ವಜನಿಕ ಸಾರಿಗೆ ಅಭಿವೃದ್ಧಿಗೆ ಸಿಎಂ ಕೂಡ ಮಹತ್ವ ನೀಡಿದ್ದಾರೆ. ಮೆಟ್ರೋ ಹೆಚ್ಚಿಸುವುದು, ಬಸ್ ಸಂಖ್ಯೆ ಹೆಚ್ಚಿಸುವ ಮೂಲಕ ಸುರಕ್ಷಿತ ಮತ್ತು ಅತ್ಯುತ್ತಮ ಪ್ರಯಾಣಕ್ಕೆ ಆದ್ಯತೆ ನೀಡಲಾಗಿದೆ. ಎಸ್​ಟಿಆರ್​ಆರ್​ ರಸ್ತೆ ಕೈಗೆತ್ತಿಕೊಳ್ಳುತ್ತಿದ್ದೇವೆ. ಸಂಚಾರ ನಿರ್ವಾಹಣೆ, ಮತ್ತು ನಗರ ಯೋಜನೆ ಎರಡು ಜೊತೆ ಜೊತೆಗೆ ಆಗ್ಬೇಕು. ಎರಡನ್ನು ಪ್ರತ್ಯೇಕವಾಗಿ ಮಾಡಿದರೆ ಆಗಲ್ಲ. ಫೆರಿಪೆರಲ್ ರೋಡ್, ರಿಂಗ್ ರೋಡ್ ಬಗ್ಗೆ ಗಮನ ಹರಿಸಿದ್ದೇವೆ ಎಂದು ಡಿಸಿಎಂ ತಿಳಿಸಿದರು.

  ಇದನ್ನು ಓದಿ: ಜೆಡಿಯು ಉಚ್ಛಾಟಿತ ನಾಯಕ ಪ್ರಶಾಂತ್​ ಕಿಶೋರ್ ಜೆಡಿಎಸ್​ ತೆಕ್ಕೆಗೆ?; ಚುನಾವಣಾ ತಂತ್ರಜ್ಞನನ್ನು ಸೆಳೆಯಲು ಮುಂದಾದ ತೆನೆ!
  First published: